newsfirstkannada.com

ರಾಜ್ಯದ ಕೆಲವೆಡೆ ಎಡೆಬಿಡದೆ ಸುರಿದ ವರುಣಾ.. ಒಂದಾ.. ಎರಡಾ.. ರಾಶಿ ರಾಶಿ ಅವಾಂತರ ಸೃಷ್ಟಿಸಿದ ಮೇಘರಾಜ

Share :

11-07-2023

    ಘಟಪ್ರಭಾ ನದಿಯಲ್ಲಿ ಕೊಚ್ಚಿಹೋದ ಇಬ್ಬರು ಸಂಬಂಧಿಗಳು

    ಮಹಾ ಮಳೆಯಿಂದ ಉಕ್ಕಿ ಭೋರ್ಗರೆಯುತ್ತಿದೆ ಅಬ್ಬಿ ಫಾಲ್ಸ್

    ಶಿವಮೊಗ್ಗ ಜಲಾಶಯದಲ್ಲಿ ನೀರಿನ ಹೊರ ಹರಿವು ಹೆಚ್ಚಳ

ಮುಂಗಾರು ಮಳೆ ಕಳೆದೆರಡು ವಾರಗಳಿಂದ ರಾಜ್ಯದಲ್ಲಿ ಜೋರಾಗೇ ಬೀಳ್ತಿದೆ. ಅದರಲ್ಲೂ ಕರಾವಳಿ ಪ್ರದೇಶಗಳ ಮೇಲೆ ತುಸು ಹೆಚ್ಚೇ ಕೃಪೆ ತೋರಿದೆ. ಇದು ಅಲ್ಲಿನ ಜಲಪಾತಗಳಿಗೆ, ನದಿಗಳಿಗೆ ಜೀವ ಕಳೆ ನೀಡಿದೆ. ಆದ್ರೆ ರಾಜ್ಯದ ವಿವಿಧೆಡೆ ಅಷ್ಟಾಗಿ ವರುಣ ಅಬ್ಬರಿಸದ ಕಾರಣ ಡ್ಯಾಮ್​ಗಳು ಭರ್ತಿಯಾಗಿಲ್ಲ.

ರಾಜ್ಯದಲ್ಲಿ ಮತ್ತೆ ಹಲವೆಡೆ ಮಳೆರಾಯನ ಅಬ್ಬರ ಜೋರಾಗಿದೆ. ಅದರಲ್ಲೂ ಕರಾವಳಿ ಪ್ರದೇಶದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಸದ್ಯ ಮಳೆರಾಯ ಕೊಂಚ ಬಿಡುವು ಪಡೆದಿದ್ರೂ ಎಡೆಬಿಡದೇ ಸುರಿದ ಪರಿಣಾಮ ಅವಾಂತರಗಳ ರಾಶಿ ಕಮ್ಮಿಯಾಗ್ತಿಲ್ಲ.

ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು ಸಂಬಂಧಿಕರು

ಇನ್ನು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆಯ ಅಬ್ಬರ ಹಿನ್ನೆಲೆ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಪರಿಣಾಮ ಘಟಪ್ರಭಾ ನದಿಯಲ್ಲಿ ಇಬ್ಬರು ಸಂಬಂಧಿಗಳು ಕೊಚ್ಚಿಕೊಂಡು ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಬಳಿ ಈ ಘಟನೆ ನಡೆದಿದೆ. ಅವರಾದಿ ಬ್ರಿಡ್ಜ್ ಮೇಲೆ ನಿಯಂತ್ರಣ ತಪ್ಪಿ ಘಟಪ್ರಭಾ ನದಿಗೆ ಬೈಕ್ ಬಿದ್ದು ಈ ದುರಂತ ಸಂಭವಿಸಿದೆ. ಸದ್ಯ ಬ್ರಿಡ್ಜ್ ಬಳಿ ಬೈಕ್ ಪತ್ತೆಯಾಗಿದ್ದು ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಉಕ್ಕಿ ಭೋರ್ಗರೆಯುತ್ತಿದೆ ಉಡುಪಿಯ ಅರ್ಬಿ ಪಾಲ್ಸ್

ಉಡುಪಿಯಲ್ಲಿ ಸುರಿದ ಮಹಾ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿವೆ. ಇದರ ಜೊತೆಗೆ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಉಡುಪಿಯ ಸಿಟಿ ಫಾಲ್ಸ್ ಅಂತಾನೆ‌ ಫೇಮಸ್ ಆಗಿರುವ ಮಣಿಪಾಲದ ಅರ್ಬಿ ಪಾಲ್ಸ್ ಉಕ್ಕಿ ಹರಿಯುತ್ತಿದೆ. ಸದ್ಯ ಅರ್ಬಿ ಫಾಲ್ಸ್ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿ ಪ್ರಕೃತಿಯ ವೈಭೋಗವನ್ನು ಕಣ್ತುಂಬಿಕೊಳ್ತಿದ್ದಾರೆ.

ತುಂಬಿ ಹರಿದ ಗದಗನ ಹಮ್ಮಿಗಿ ಬ್ಯಾರೇಜ್

ಶಿವಮೊಗ್ಗ ಜಲಾಶಯದಲ್ಲಿ ನೀರಿನ ಹೊರಹರಿವು ಹೆಚ್ಚಳವಾದ ಹಿನ್ನೆಲೆ ಗದಗನ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಹಮ್ಮಿಗಿ ಬ್ಯಾರೇಜ್ ಮೈದುಂಬಿ ಹರಿಯುತ್ತಿದ್ದು ಪರಿಣಾಮ ನೀರನ್ನು ಹೊರಬಿಡಲಾಗ್ತಿದೆ. ಡ್ಯಾಂನ 26 ಗೇಟ್​ಗಳಲ್ಲಿ 6 ಗೇಟ್​ಗಳನ್ನ ಓಪನ್ ಮಾಡಲಾಗಿದೆ.

ಇನ್ನು ರಾಜ್ಯದಲ್ಲಿ ಮಳೆಯಾದ್ರೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹಿಂದಿಗಿಂತ ಕಮ್ಮಿ ಇದೆ. ಕಳೆದ 40 ವರ್ಷದಲ್ಲಿ ಇಷ್ಟು ಪ್ರಮಾಣದ ಮಳೆಯಾಗದಿದ್ರೂ ಇದುವರೆಗೆ ಯಾವ ಜಲಾಶಯ ಕೂಡ ಭರ್ತಿ ಆಗಿಲ್ಲ. ಇನ್ನು ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ಅಂತ ನೋಡೋದಾದ್ರೆ.

ಡ್ಯಾಮ್​ಗಳ ನೀರಿನ ಪ್ರಮಾಣ

ಕೆಆರ್​ಎಸ್​-49.45 ಟಿಎಂಸಿ
ಸಾಮರ್ಥ್ಯ, 13.83 ಟಿಎಂಸಿ ಸಂಗ್ರಹ
11,029 ಕ್ಯೂಸೆಕ್ ಒಳ ಹರಿವು
374 ಕ್ಯೂಸೆಕ್ ಹೊರ ಹರಿವು

ಕಬಿನಿ-19.52 ಟಿಎಂಸಿ ಸಾಮರ್ಥ್ಯ,
10.69 ಟಿಎಂಸಿ ಸಂಗ್ರಹ
8901 ಕ್ಯೂಸೆಕ್ ಒಳ ಹರಿವು,
800 ಕ್ಯೂಸೆಕ್ ಹೊರ ಹರಿವು

ಹಾರಂಗಿ-8.50 ಟಿಎಂಸಿ ಸಾಮರ್ಥ್ಯ,
4.00 ಟಿಎಂಸಿ ಸಂಗ್ರಹ
2293 ಕ್ಯೂಸೆಕ್ ಒಳ ಹರಿವು,
50 ಕ್ಯೂಸೆಕ್ ಹೊರ ಹರಿವು
ಹೇಮಾವತಿ-37.10 ಟಿಎಂಸಿ ಸಾಮರ್ಥ್ಯ,
15.35 ಟಿಎಂಸಿ ಸಂಗ್ರಹ
2517 ಕ್ಯೂಸೆಕ್ ಒಳ ಹರಿವು,
200 ಕ್ಯೂಸೆಕ್ ಹೊರ ಹರಿವು

ಕಾವೇರಿ ಜಲಾನಯನ 114.57 TMC,
43.86 TMC ಸಂಗ್ರಹ
24,490 ಕ್ಯೂಸೆಕ್ ಒಳ ಹರಿವು,
1,174 ಕ್ಯೂಸೆಕ್ ಹೊರ ಹರಿವು

ಒಟ್ಟಾರೆ ರಾಜ್ಯದಲ್ಲಿ ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಸದ್ಯ ಕೊಂಚ ಬ್ರೇಕ್​ ಪಡೆದಿದ್ದು ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾನೆ. ಅದೇ ರಾಜ್ಯದ ಬೇರೆ ಕಡೆ ಸಾಧಾರಣವಾಗಿ ಮಳೆಯಾಗ್ತಿದೆ. ಇಷ್ಟಾದ್ರೂ ಜಲಾಶಯಗಳು ಭರ್ತಿ ಆಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಕೆಲವೆಡೆ ಎಡೆಬಿಡದೆ ಸುರಿದ ವರುಣಾ.. ಒಂದಾ.. ಎರಡಾ.. ರಾಶಿ ರಾಶಿ ಅವಾಂತರ ಸೃಷ್ಟಿಸಿದ ಮೇಘರಾಜ

https://newsfirstlive.com/wp-content/uploads/2023/06/RAIN.jpg

Load More