/newsfirstlive-kannada/media/post_attachments/wp-content/uploads/2024/10/2-Rs-Yearly-Income.jpg)
ಭಾರತದಲ್ಲಿ ಬಡತನ ಅನ್ನೋದು ಒಂದು ಪ್ರಮುಖ ಸಮಸ್ಯೆಯಾಗಿದೆ. ಮಧ್ಯಪ್ರದೇಶದ ಸಾಗರದಲ್ಲೊಂದು ಇದೇ ಬಡತನಕ್ಕೆ ಸಂಬಂಧಿಸಿದ ಶಾಕಿಂಗ್ ಘಟನೆಯೊಂದು ನಡೆದಿದೆ. ತಹಸೀಲ್ದಾರ್ ನೀಡಿದ ಆದಾಯ ಪ್ರಮಾಣ ಪತ್ರವೊಂದರಲ್ಲಿ ಕುಟುಂಬದ ಆದಾಯ ವರ್ಷಕ್ಕೆ ಎರಡು ರೂಪಾಯಿಯೆಂದು ಹೇಳಲಾಗಿದೆ . ಈ ಒಂದು ಆದಾಯ ಪ್ರಮಾಣ ಪತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಚಾರವಾಗಿ ಆಶ್ವರ್ಯ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕುಟುಂಬ ವರ್ಷಕ್ಕೆ ಕೇವಲ 2 ರೂಪಾಯಿಯಿಂದ ಕುಟುಂಬವನ್ನು ಹೇಗೆ ನಿರ್ವಹಣೆ ಮಾಡುತ್ತಿದೆ ಎಂಬ ಪ್ರಶ್ನೆಗಳು ಸದ್ಯ ನೆಟ್ಟಿಗರು ಕೇಳುತ್ತಿದ್ದಾರೆ. ಆದ್ರೆ ಆಗಿದ್ದೇ ಬೇರೆ.
ಇದನ್ನೂ ಓದಿ: 56 ವರ್ಷಗಳ ಹಿಂದೆ ಪತನವಾಗಿದ್ದ ಭಾರತೀಯ ವಿಮಾನ; 102 ಸೈನಿಕರಲ್ಲಿ ನಾಲ್ವರ ಶವ ಈಗ ಪತ್ತೆ!
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಒಂದು ಆದಾಯ ಪ್ರಮಾಣ ಪತ್ರ ಮಧ್ಯಪ್ರದೇಶದ ಘೋಗ್ರಾ ಗ್ರಾಮದ ಬಲರಾಮ್ ಛಂದರ್ ಅವರದ್ದು. ಇದು ಜನವರಿ 2024ರಲ್ಲಿಯೇ ನೀಡಲಾದ ಇನ್ಕಮ್ ಸರ್ಟಿಫಿಕೇಟ್. ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ಸುದ್ದಿ ವೈರಲ್ ಆದ ಬಳಿಕ ಅಸಲಿ ಕಹಾನಿ ಆಚೆ ಬಂದಿದೆ. ಹಲವು ಮಾಧ್ಯಮಗಳು ವರದಿ ಮಾಡಿದ ಪ್ರಕಾರ ಬಲರಾಮ್ ಛಂದರ್ ಅವರ ಕುಟುಂಬದಲ್ಲಿ ಒಟ್ಟು 5 ಜನರು ಇದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಕಡು ಬಡತನದಿಂದಾಗಿ ಇಡೀ ಕುಟುಂಬವೇ ಕೂಲಿ ಕೆಲಸಕ್ಕೆ ಹೋಗುತ್ತದೆ. ಅವರ ಮನೆಯಲ್ಲಿ ಅತ್ಯಂತ ಕಿರಿಯ ಅಂದ್ರೆ ಅದು ಬಲರಾಮ್ ಛೆಂದರ್. ಅವರು 12ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅವರು ಈ ಹಿಂದೆ ಸ್ಕಾಲರ್​ಶಿಪ್ ಪಡೆಯುವ ಸಲುವಾಗಿ ತಹಸೀಲ್ದಾರ್ ಕಚೇರಿಗೆ ಆದಾಯ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಅವರಿಗೆ ಬರಬೇಕಾದ ಸ್ಕಾಲರ್​ಶಿಪ್ ಬರಲಿಲ್ಲ. ಅದರ ಬಗ್ಗೆ ಬಲರಾಮ್ ತಮ್ಮ ಶಿಕ್ಷಕರನ್ನು ಕೇಳಿ ನೋಡಿದಾಗ ಪ್ರಮಾಣ ಪತ್ರದಲ್ಲಿ ಆದಾಯ ಸರಿಯಾಗಿ ಉಲ್ಲೇಖಿಸಿಲ್ಲ ಎಂಬ ಉತ್ತರ ಬಂದಿದೆ.
/newsfirstlive-kannada/media/post_attachments/wp-content/uploads/2024/10/2-Rs-Yearly-Income-1.jpg)
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಲರಾಮ್, ಆದಾಯ ಪ್ರಮಾಣ ಪತ್ರದಲ್ಲಿ 40 ಸಾವಿರ ರೂಪಾಯಿ ಎಂದು ಉಲ್ಲೇಖವಾಗಬೇಕಿತ್ತು ಅದರ ಬದಲಾಗಿ 2 ರೂಪಾಯಿ ಎಂದು ನಮೂದಿಸಲಾಗಿದೆ. ಇದು ನನಗೆ ಸ್ಕಾಲರ್​ಶೀಪ್ ಬರದೇ ಇದ್ದಾಗ ಗೊತ್ತಾಯ್ತು. ಶಾಕ್ ಆದ ನಾನು ಅದನ್ನು ತಹಸೀಲ್ದಾರ್ ಕಚೇರಿಗೆ ಹೋಗಿ ತೋರಿಸಿದೆ. 40 ಸಾವಿರ ರೂಪಾಯಿ ವರ್ಷದ ಆದಾಯ ಎಂದು ನಮೂದಾಗಬೇಕಿದ್ದ ಜಾಗದಲ್ಲಿ 2 ರೂಪಾಯಿ ಎಂದು ನಮೂದಾಗಿದೆ. ಇದನ್ನು ಸರಿ ಮಾಡಿ ಕೊಡುವುದಾಗಿ ಅವರು ಹೇಳಿದ್ದಾರೆ ಎಂದು ಬಲರಾಮ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us