newsfirstkannada.com

ರಾಜ್ಯದ ಜನತೆಗೆ ಪೆಟ್ರೋಲ್‌, ಡಿಸೇಲ್​​ ಏರಿಕೆ ಶಾಕ್‌; ಯಾಕೆ ಈ ನಿರ್ಧಾರ? ಸರ್ಕಾರಕ್ಕೆ ಎಷ್ಟು ಕೋಟಿ ಆದಾಯ?

Share :

Published June 15, 2024 at 10:20pm

  ನವೆಂಬರ್ 4, 2021ರ ಬಳಿಕ ಇದೇ ಮೊದಲ ಬಾರಿಗೆ ದರ ಏರಿಕೆ

  ಸರ್ಕಾರ ಆರ್ಥಿಕ ಸಂಕಷ್ಟದಿಂದ ಪಾರಾಗಲು ಜನಸಾಮಾನ್ಯರಿಗೆ ಬರೆ?

  ಮೋದಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದ ಕಾಂಗ್ರೆಸ್ಸಿಗರು

ಬೆಂಗಳೂರು: ರಾಜ್ಯದ ಜನತೆಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಶಾಕ್‌ ಎದುರಾಗಿದೆ. ಪಂಚ ಗ್ಯಾರಂಟಿ ಕೊಟ್ಟ ಸಿದ್ದರಾಮಯ್ಯ ಸರ್ಕಾರ, ದುಬಾರಿ ದುನಿಯಾದ ಹೊಸ ಗ್ಯಾರಂಟಿ ನೀಡಿದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಜನತೆಗೆ ಸರ್ಕಾರ ಕೊಟ್ಟ ಶಾಕ್​ಗೆ ಜೇಬು ಕತ್ತರಿಸಿ ಬೀಳುವಂತಿದೆ. ಅಂದಹಾಗೆ ರಾಜ್ಯದ ಜನತೆಯ ಹೊಟ್ಟೆ ಪಾಡಿನ ಮೇಲೆ ಪೆಟ್ರೋಲ್​​​ ಬಾಂಬ್​​​ ಹಾಕಿದೆ.

ರಾಜ್ಯದ ಜನತೆಗೆ ಪೆಟ್ರೋಲ್‌, ಡಿಸೇಲ್​​ ಏರಿಕೆ ಶಾಕ್‌!
ತೈಲದ ಮೇಲೆ ಶೇ.4ರಷ್ಟು ತೆರಿಗೆ ಹೆಚ್ಚಿಸಿದ ಸರ್ಕಾರ!
ನಟ ದರ್ಶನ್​ ಸುದ್ದಿ ಗದ್ದಲದ ನಡುವೆ ಸರ್ಕಾರ, ಸದ್ದಿಲ್ಲದೇ ಪೆಟ್ರೋಲ್​​ ಕಿಡಿ ಹಾರಿಸಿದೆ. ಪೆಟ್ರೋಲ್, ಡಿಸೇಲ್ ದರದ ಮೇಲೆ ತೆರಿಗೆ ಹೆಚ್ಚಳ ಮಾಡಲಾಗಿದ್ದು, ಪ್ರತಿ ಲೀಟರ್​ಗೆ 3 ರೂಪಾಯಿಗೆ ಏರಿಕೆ ಆಗುವಂತೆ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ತೆರಿಗೆ ಹೆಚ್ಚಿಸಿದ್ದು ಹೊಸ ದರ ಇವತ್ತೇ ಜಾರಿ ಆಗಿದೆ.

ಗ್ಯಾರಂಟಿ ಶಾಕ್​​.. ತೈಲ ಬರೆ!

 • ಪೆಟ್ರೋಲ್‌ ಮೇಲೆ ಶೇ. 25.92 ರಿಂದ ಶೇ. 29.84ಕ್ಕೆ ತೆರಿಗೆ ಹೆಚ್ಚಳ
 • ಡಿಸೇಲ್‌ ಮೇಲೆ ಶೇ. 14.34 ರಿಂದ ಶೇ. 18.44ಕ್ಕೆ ತೆರಿಗೆಯ ಏರಿಕೆ
 • ಕರ್ನಾಟಕ ಮಾರಾಟ ತೆರಿಗೆ ಸುಮಾರು ಶೇಕಡಾ 4 ರಷ್ಟು ಏರಿಕೆ
 • ಲೀಟರ್‌ಗೆ ಪೆಟ್ರೋಲ್​​​, ಡಿಸೇಲ್​ 3ರೂ.ಗಿಂತ ಹೆಚ್ಚು ದರದ ಶಾಕ್​​
 • ದರ ಏರಿಕೆಯಿಂದ ಬೆಂಗಳೂರಲ್ಲಿ ​ಶತಕದ ಗಡಿ ದಾಟಿದ ಪೆಟ್ರೋಲ್
 • ಬೆಂಗಳೂರಲ್ಲಿ 99.84 ರೂ. ದರವಿದ್ದ ಪೆಟ್ರೋಲ್​​​ 102.87 ರೂ.ಗೆ
 • ಡೀಸೆಲ್‌ಗೆ 85.93 ರೂಪಾಯಿಯಿಂದ ದರ 88.95 ರೂ.ಗೆ ಏರಿಕೆ

ಹಣಕಾಸು ಇಲಾಖೆ ಅಧಿಸೂಚನೆ ಪ್ರಕಾರ, ಪೆಟ್ರೋಲ್‌ ಮೇಲಿನ ಕರ್ನಾಟಕ ಮಾರಾಟ ತೆರಿಗೆಯನ್ನ ಸರ್ಕಾರ ಶೇ. 25.92ರಿಂದ ಶೇ. 29.84ಕ್ಕೆ ಹೆಚ್ಚಿಸಿದೆ. ಇದೇ ರೀತಿ ಡೀಸೆಲ್‌ ತೆರಿಗೆಯನ್ನ ಶೇ. 14.34 ರಿಂದ ಶೇ. 18.44ಕ್ಕೆ ಏರಿಕೆ ಮಾಡಿದೆ. ಈ ಮೂಲಕ ಕರ್ನಾಟಕ ಮಾರಾಟ ತೆರಿಗೆ ಸುಮಾರು ಶೇಕಡಾ 4ರಷ್ಟು ಏರಿಕೆ ಆಗಿದೆ. ಇದರಿಂದ ಪೆಟ್ರೋಲ್​​​, ಡಿಸೇಲ್​ನಲ್ಲಿ ಲೀಟರ್‌ಗೆ 3 ರೂಪಾಯಿಗಿಂತ ಹೆಚ್ಚು ದರ ತೆರಬೇಕಾಗಿದೆ. ಈ ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್​​​ ದರ ಶತಕದ ಗಡಿದಾಟಿದ್ದು, 102.87 ರೂಪಾಯಿಗೆ ತಲುಪಲಿದೆ. ಇನ್ನು, ಡಿಸೇಲ್​​​ನಲ್ಲಿ 85.93 ರೂಪಾಯಿಯಿಂದ ದರ 88.95 ರೂಪಾಯಿಗೆ ಮುಟ್ಟಲಿದೆ.

ಸರ್ಕಾರಕ್ಕೆ ಆದಾಯ ಎಷ್ಟು ಕೋಟಿ?
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 2,500 ಕೋಟಿಯಿಂದ 3 ಸಾವಿರ ಕೋಟಿ ರೂಪಾಯಿ ಆದಾಯ ಹರಿದು ಬರುವ ನಿರೀಕ್ಷೆ ಇದೆ. ಆದಾಯದ ಗುರಿ ತಲುಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಈ ವೇಳೆ ಆದಾಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯ ಸೂಚಿಸಿದ್ದರು.

ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಂಪನ್ಮೂಲ ಕ್ರೋಢೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಒದಗಿಸಲು ಡೀಸೆಲ್‌ ಹಾಗೂ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಇಲಾಖೆಗೆ ವಾರ್ಷಿಕ 1 ಲಕ್ಷ 10 ಸಾವಿರ ಕೋಟಿ ಆದಾಯ ಸಂಗ್ರಹದ ಟಾಸ್ಕ್ ನೀಡಿರುವ ಸರ್ಕಾರ, ಡೀಸೆಲ್‌, ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯಿಂದ ವಾರ್ಷಿಕ 2.5 ಸಾವಿರದಿಂದ 3 ಸಾವಿರ ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ.

ಸರ್ಕಾರದ ವಿರುದ್ಧ ಆಕ್ರೋಶದ ಕಿಡಿ!
ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಪರಿಣಾಮ ಬೀರಲಿದೆ. ಹೀಗೆ ಬೆಲೆ ಮತ್ತೊಮ್ಮೆ ಗಗನಮುಖಿ ಆಗಲಿದೆ. ನವೆಂಬರ್ 4, 2021ರ ಬಳಿಕ ಇದೇ ಮೊದಲ ಬಾರಿಗೆ ತೈಲ ತಳಮಳ ಎಬ್ಬಿಸಲಿದೆ. ಸರ್ಕಾರದ ಈ ಶಾಕಿಂಗ್ ನಿರ್ಧಾರವನ್ನು ಜನಸಾಮನ್ಯರು, ವಿರೋಧ ಪಕ್ಷ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ತೀರ್ಮಾನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಜನತೆಗೆ ಪೆಟ್ರೋಲ್‌, ಡಿಸೇಲ್​​ ಏರಿಕೆ ಶಾಕ್‌; ಯಾಕೆ ಈ ನಿರ್ಧಾರ? ಸರ್ಕಾರಕ್ಕೆ ಎಷ್ಟು ಕೋಟಿ ಆದಾಯ?

https://newsfirstlive.com/wp-content/uploads/2024/06/Siddaramaih-Petrol-Price-Hike.jpg

Load More