newsfirstkannada.com

SC, ST, ಹಿಂದುಳಿದ ವರ್ಗಗಳ ಮೀಸಲಾತಿ ಶೇ.65ಕ್ಕೆ ಹೆಚ್ಚಳ; ಬಿಹಾರ ಅಸೆಂಬ್ಲಿಯಲ್ಲಿ ಐತಿಹಾಸಿಕ ನಿರ್ಧಾರ

Share :

09-11-2023

    ಜಾತಿಗಣತಿ ವರದಿಯನ್ನ ಮಂಡನೆ ಮಾಡಿದ್ದ ಸಿಎಂ ನಿತೀಶ್ ಕುಮಾರ್

    ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಶೇ.50ರಷ್ಟು ಮೀಸಲಾತಿ ನೀಡಲು

    ಶೇ.10 ರಷ್ಟು ಆರ್ಥಿಕತೆಯಲ್ಲಿ ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲು

ಪಾಟ್ನಾ: ಬಿಹಾರ ವಿಧಾನಸಭಾ ಅಧಿವೇಶನದಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇಕಡಾ 50 ರಿಂದ ಶೇ.65ಕ್ಕೆ ಹೆಚ್ಚಿಸಲಾಗಿದೆ. ಎರಡು ದಿನದ ಹಿಂದಷ್ಟೇ ಸಿಎಂ ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಜಾತಿಗಣತಿ ವರದಿಯನ್ನ ಮಂಡನೆ ಮಾಡಿದ್ದರು. ಇದಾದ ಬಳಿಕ ಅಸೆಂಬ್ಲಿಯಲ್ಲಿ ಮಹತ್ವದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ಆದರೂ ದೇಶದ ಕೆಲ ರಾಜ್ಯಗಳು ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಿವೆ. ಹೀಗಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಅದೇ ಹಾದಿಯನ್ನು ಹಿಡಿದಿದ್ದಾರೆ. ಶೇ.50ರಷ್ಟು ಜಾತಿ ಆಧರಿತ ಮೀಸಲಾತಿ ನೀಡಿದ್ರೆ, ಶೇ.10 ರಷ್ಟು EWS ಅಂದ್ರೆ ಆರ್ಥಿಕತೆಯಲ್ಲಿ ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿ ನೀಡಲಾಗುತ್ತಿದೆ.

ಬಿಹಾರದ ವಿಧಾನಸಭೆಯಲ್ಲಿ ಜಾತಿ ಜನಗಣತಿ ವರದಿ ಮಂಡನೆ ಮಾಡಿದ್ದ ನಿತೀಶ್ ಕುಮಾರ್ ಅವರು ಶೇಕಡಾ 75ರವರೆಗೂ ಮೀಸಲಾತಿ ನೀಡುವ ಪ್ರಸ್ತಾಪ ಮಾಡಿದ್ದರು. ಸಿಎಂ ನಿತೀಶ್ ಕುಮಾರ್ ಅವರು ಮಂಡಿಸಿದ ಈ ಮಸೂದೆ ಸದ್ಯ ವಿಧಾನಸಭೆಯಲ್ಲಿ ಅಂಗೀಕಾರ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SC, ST, ಹಿಂದುಳಿದ ವರ್ಗಗಳ ಮೀಸಲಾತಿ ಶೇ.65ಕ್ಕೆ ಹೆಚ್ಚಳ; ಬಿಹಾರ ಅಸೆಂಬ್ಲಿಯಲ್ಲಿ ಐತಿಹಾಸಿಕ ನಿರ್ಧಾರ

https://newsfirstlive.com/wp-content/uploads/2023/11/Cm-nitish-Kumar.jpg

Load More