newsfirstkannada.com

×

ತವರಲ್ಲಿ ಎಂದಿಗೂ ಟೀಮ್ ಇಂಡಿಯಾ ಕಿಂಗ್​.. ಎಷ್ಟು ವರ್ಷದಿಂದ ಸರಣಿ ಗೆಲ್ಲುತ್ತ ಬರುತ್ತಿದೆ ಭಾರತ?

Share :

Published October 2, 2024 at 11:15am

Update October 2, 2024 at 11:28am

    ರೋಹಿತ್ ಪಡೆಯ ಅಂತಿಮ ದಿನದ ರೋಚಕ ಕ್ಷಣ ಹೇಗಿದ್ದವು?

    ಅಸಾಧ್ಯ ಎನಿಸಿದ್ದ ಪಂದ್ಯ ಗೆದ್ದು ತೋರಿಸಿರುವ ರೋಹಿತ್ ಸೇನೆ

    ಜೈಸ್ವಾಲ್​​ ಭರ್ಜರಿ ಬ್ಯಾಟಿಂಗ್​,​ ಬಾಂಗ್ಲಾ ಟೈಗರ್ಸ್ ಸೈಲೆಂಟ್..!

ಬೌಲರ್​​ಗಳ ಬೊಂಬಾಟ್ ಬೌಲಿಂಗ್. ರೋಹಿತ್ ಶರ್ಮಾರ ಚಾಣಾಕ್ಷ ನಾಯಕತ್ವ. ಒಂದೇ ದಿನದಲ್ಲಿ ಗೆಲ್ಲಬೇಕೆಂಬ ಹಠ. ಇಂಥಹ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಕಾನ್ಪುರ ಟೆಸ್ಟ್​ನ ಕೊನೆಯ ದಿನದ ಆಟ. ಹಾಗಾದರೆ, ಆ ಅಂತಿಮ ದಿನದ ರೋಚಕ ಕ್ಷಣಗಳು ಹೇಗಿದ್ದವು?.

26 ರನ್​​​​​​​​.. 2 ವಿಕೆಟ್​​ನೊಂದಿಗೆ 5ನೇ ದಿನದಾಟ ಆರಂಭಿಸಿದ ಬಾಂಗ್ಲಾ, ಅಂತಿಮ ದಿನದಾಟ ಟೀಮ್ ಇಂಡಿಯಾಗೆ ಕಾಡುವ ಲೆಕ್ಕಾಚಾರದಲ್ಲಿತ್ತು. ಆದರೆ, ಈ ಲೆಕ್ಕಾಚಾರವನ್ನು ಟೀಮ್ ಇಂಡಿಯಾ ಬೌಲರ್​​ಗಳು ತಲೆ ಕೆಳಗಾಗಿಸಿದರು.

ಇದನ್ನೂ ಓದಿ: 6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​

ರೋಹಿತ್ ಸ್ಟ್ರಾಟರ್ಜಿ.. ರಾಹುಲ್​​ ಅದ್ಭುತ ಕ್ಯಾಚ್, ಹಕ್​ ಔಟ್​!​​

ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಗಳಿಸಿದ್ದ ಮೊಮಿನುಲ್ ಹಕ್‌, 2ನೇ ಇನ್ನಿಂಗ್ಸ್​ನಲ್ಲಿ ಕಾಡುವ ಹಂಬಲದಲ್ಲಿದ್ದರು. ಆದ್ರೆ, ರೋಹಿತ್ ಬ್ರಿಲಿಯಂಟ್ ಕ್ಯಾಪ್ಟನ್ಸಿ, ಹಾಗೂ ಕೆ.ಎಲ್.ರಾಹುಲ್​ರ ಅಮೋಘ ಕ್ಯಾಚ್​​ಗೆ ಪೆವಿಲಿಯನ್ ಸೇರಿದರು.

ಬ್ಯಾಟರ್​​​ಗಳ ಪರೇಡ್​.. ಶದ್ಮಾನ್ ಫಿಫ್ಟಿ..!

4ನೇ ವಿಕೆಟ್​ಗೆ ಶದ್ಮಾನ್ ಜೊತೆಯಾದ ಬಾಂಗ್ಲಾ ಕ್ಯಾಪ್ಟನ್ ಶಾಂಟೋ ಬಿಗ್ ಇನ್ನಿಂಗ್ಸ್​ ಕಟ್ಟೋ ಮುನ್ಸೂಚನೆ ನೀಡಿದರು. ಆದ್ರೆ, 19 ರನ್​​ ಗಳಿಸಿದ್ದ ವೇಳೆ ಶಾಂಟೋನ ಜಡೇಜಾ ಕ್ಲೀನ್ ಬೋಲ್ಡ್​ ಮಾಡಿದ್ರೆ, 50 ರನ್ ಗಳಿಸಿ ಮುನ್ನುಗ್ಗುತ್ತಿದ್ದ ​​ ಶದ್ಮಾನ್ ಇಸ್ಲಾಂಗೆ ಅಶ್ವಿನ್, ಪೆವಿಲಿಯನ್​​ ದಾರಿ ತೋರಿಸಿದ್ರು..

ನಂತರ ಬಂದ ಲಿಟನ್ ದಾಸ್​​, ಶಕೀಬ್ ಅಲ್​ ಹಸನ್​​ ವಿಕೆಟ್ ಬೇಟೆಯಾಡಿದ ಜಡೇಜಾ, ಬಾಂಗ್ಲಾ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದ್ರು. ಒಂದ್ಕಡೆ ಬಾಂಗ್ಲಾ ಬ್ಯಾಟರ್​ಗಳ ಪರೇಡ್​ ನಡೀತಿದ್ರೆ. ಇತ್ತ ಮುಷ್ಪಿಕರ್ ರಹೀಂ ಏಕಾಂಗಿ ಹೋರಾಟ ನಡೆಸಿದರು. ಅಂತಿಮವಾಗಿ 37 ರನ್​ ಗಳಿಸಿದ ವೇಳೆ ಮುಷ್ಫಿಕರ್ ರಹೀಂ, ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಬಾಂಗ್ಲಾ 2ನೇ ಇನ್ನಿಂಗ್ಸ್ 146 ರನ್​ಗಳಿಗೆ ಸರ್ವ ಪತನವಾಯ್ತು. ಟೀಮ್ ಇಂಡಿಯಾಗೆ 95 ರನ್​ಗಳ ಟಾರ್ಗೆಟ್​ ನೀಡಿತು.

ಯಶಸ್ವಿ ಸ್ಪೋಟಕ ಆಟ.. ಬಾಂಗ್ಲಾಗೆ ವೈಟ್​ವಾಶ್ ಮುಖಭಂಗ

95 ರನ್​ ಗಳ ಟಾರ್ಗೆಟ್ ಬೆನ್ನತ್ತಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ರೋಹಿತ್ ಹಾಗೂ ಗಿಲ್​​ ವಿಕೆಟ್ ಕಳೆದುಕೊಂಡಿತು. ಆದ್ರೆ, ಮುಂಬೈಕರ್ ಜೈಸ್ವಾಲ್​​ ಸ್ಫೋಟಕ ಬ್ಯಾಟಿಂಗ್​​ ಮುಂದೆ ಬಾಂಗ್ಲಾ ಟಾರ್ಗೆಟ್ ಸವಾಲಾಗಲೇ ಇಲ್ಲ. ಬಾಂಗ್ಲಾ ಬೌಲರ್​ಗಳನ್ನ ಮನಬಂದಂತೆ ದಂಡಿಸಿದ ಜೈಸ್ವಾಲ್, 45 ಎಸೆತಗಳಲ್ಲೇ 8 ಬೌಂಡರಿ, 1 ಸಿಕ್ಸರ್​ ಒಳಗೊಂಡ 51 ರನ್ ಚಚ್ಚಿ ಔಟಾದ್ರೆ ಜೈಸ್ವಾಲ್ ಜೊತೆ 58 ರನ್​ಗಳ ಜೊತೆಯಾಟವಾಡಿದ್ದ ವಿರಾಟ್​, ಅಜೇಯ 29 ರನ್ ಗಳಿಸಿದರು. ಜೈಸ್ವಾಲ್ ವಿಕೆಟ್ ಪತನದ ಬಳಿಕ ಬಂದ ಪಂತ್, ಬೌಂಡರಿಯೊಂದಿಗೆ ಗೆಲುವಿನ ರನ್ ಬಾರಿಸಿದರು.

ಇದನ್ನೂ ಓದಿ: Ind vs Ban; ಅಶ್ವಿನ್​ ಮತ್ತೊಂದು ದಾಖಲೆ.. ಟೀಮ್ ಇಂಡಿಯಾ ಗೆಲ್ಲಲು ಏನ್ ಮಾಡಬೇಕು?

18 ಸರಣಿ.. 11 ವರ್ಷ ಟೀಮ್ ಇಂಡಿಯಾ ಅಜೇಯ ಓಟ..!

2012ರಲ್ಲಿ ಭಾರತಕ್ಕೆ ಆಗಮಿಸಿದ್ದ ಇಂಗ್ಲೆಂಡ್, 2-1ರ ಅಂತರದಿಂದ ಟೆಸ್ಟ್ ಸರಣಿ ವಶಪಡಿಸಿಕೊಂಡಿತ್ತು. ಈ ಬಳಿಕ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ 4 ಪಂದ್ಯಗಳ ಟೆಸ್ಟ್ ಸರಣಿಯನ್ನ ಕ್ಲೀನ್​​ಸ್ಲೀಪ್​​​ ಮಾಡಿದ್ದ ಟೀಮ್ ಇಂಡಿಯಾ, ಅಂದಿನಿಂದ ತವರಿನಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 18 ಟೆಸ್ಟ್ ಸರಣಿಗಳನ್ನ ಗೆದ್ದ ದಾಖಲೆ ಬರೆದಿರುವ ಟೀಮ್ ಇಂಡಿಯಾ, 11 ವರ್ಷಗಳಿಂದ ತವರಲ್ಲೇ ಸೋಲನ್ನೇ ಅರಿಯದ ತಂಡವಾಗಿದೆ.

ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್​​​​​​​​​​​​​​​ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಟೀಮ್ ಇಂಡಿಯಾ, ಅಸಾಧ್ಯ ಎನಿಸಿದ್ದ ಪಂದ್ಯವನ್ನು ಗೆದ್ದು ತೋರಿಸಿದೆ. ಈ ಗೆಲುವಿನ ಓಟ ಹೀಗೆ ಮುಂದುವರಿಯಲಿ ಅನ್ನೋದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ತವರಲ್ಲಿ ಎಂದಿಗೂ ಟೀಮ್ ಇಂಡಿಯಾ ಕಿಂಗ್​.. ಎಷ್ಟು ವರ್ಷದಿಂದ ಸರಣಿ ಗೆಲ್ಲುತ್ತ ಬರುತ್ತಿದೆ ಭಾರತ?

https://newsfirstlive.com/wp-content/uploads/2024/10/ROHIT_TEAM.jpg

Load More