newsfirstkannada.com

ಭಾರತಕ್ಕೆ ಮಿಸ್ಟ್ರಿ ಗರ್ಲ್​ ಬೆಂಬಲ.. ಅಭಿಮಾನಿ ಬಳಿ ಚಾಕೋಲೆಟ್ ಕೇಳಿದ ಮಹೇಂದ್ರ ಸಿಂಗ್ ಧೋನಿ..!

Share :

12-09-2023

    ಪಾಕ್ ನಾಯಕ ಬಾಬರ್ ಕೋಪ ಹೇಗಿತ್ತು ಗೊತ್ತಾ..?

    ಮಳೆಯೋ ಮಳೆ, ಏಷ್ಯಾ ಕಪ್ ಫೈನಲ್ ಶಿಫ್ಟ್..!

    ಕ್ರಿಕೆಟ್ ಲೋಕದ ಸೂಪರ್​ ಸಿಕ್ಸ್​ ಇಲ್ಲಿವೆ

ಆಟೋಗ್ರಾಫ್​ ಕೊಟ್ಟು ಚಾಕೊಲೇಟ್ ವಾಪಸ್​ ಕೇಳಿದ ಮಾಹಿ

ಟೀಮ್ ಇಂಡಿಯಾ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅಮೆರಿಕಾದಲ್ಲಿ ಕಾಲ ಕಳೆಯುತ್ತಿದ್ದು, ಯುಎಸ್​ ಓಪನ್ ಟೂರ್ನಿ ಹಾಗೂ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಜೊತೆ ಗಾಲ್ಪ್​ ಆಡಿ ಭಾರೀ ಸುದ್ದಿಯಾಗಿದ್ದರು. ಇದೀಗ ಅಭಿಮಾನಿ ಜೊತೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗೆ ಆಟೋಗ್ರಾಫ್ ನೀಡಿರುವ ಮಾಹಿ, ಚಾಕೊಲೇಟ್ ವಾಪಸ್ ಕೊಡುವಂತೆ ಕೇಳಿದ್ದಾರೆ. ಅಷ್ಟೇ ಅಲ್ಲ..! ಫೋಟೋಗೆ ಫೋಸ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಏಷ್ಯಾಕಪ್ ಫೈನಲ್ ಶಿಫ್ಟ್​..?

ಕೊಲಬೊಂದಲ್ಲಿ ನಡೆಯಬೇಕಿರುವ ಏಷ್ಯಾಕಪ್ ಫೈನಲ್​ ಪಂದ್ಯ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಏಷ್ಯಾಕಪ್​ ಟೂರ್ನಿಯ ಫೈನಲ್ ಪಂದ್ಯವನ್ನು ಬೇರೆಡೆಗೆ ಶಿಫ್ಟ್​ ಮಾಡುವ ಬಗ್ಗೆ ಎಸಿಸಿ ಚಿಂತನೆ ನಡೆಸಿದೆ. ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ನಿಗಧಿಯಾಗಿರುವ ಏಷ್ಯಾಕಪ್ ಫೈನಲ್ ಪಂದ್ಯವನ್ನ ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ.

ವಿಭಿನ್ನವಾಗಿ ತಂಡ ಪ್ರಕಟಿಸಿದ ಕಿವೀಸ್

ಏಕದಿನ ವಿಶ್ವಕಪ್​​ ಟೂರ್ನಿಗೆ ಲೇಟ್​ ಆಗಿ ಲೇಟೆಸ್ಟ್ ಆಗಿ ತಂಡವನ್ನ ಪ್ರಕಟಿಸುವ ಮೂಲಕ ಗಮನ ಸೆಳೆದಿದೆ. ನಿನ್ನೆ ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡವನ್ನ ಪ್ರಕಟಿಸಿರುವ ನ್ಯೂಜಿಲೆಂಡ್, 15 ಸದ್ಯಸರ ತಂಡವನ್ನ ಪ್ರಕಟಿಸಿದೆ. ವಿಶೇಷವೆಂದ್ರೆ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ತಾಯಂದಿರು, ಪತ್ನಿಯರು, ಮಕ್ಕಳು ಹಾಗೂ ಗರ್ಲ್ ಫ್ರೆಂಡ್ಸ್​​ ಹೆಸರು ರಿವೀಲ್ ಮಾಡುವ ಮೂಲಕ ತಂಡವನ್ನು ಪ್ರಕಟಿಸಿದ್ದಾರೆ.

ಭಾರತಕ್ಕೆ ಅಫ್ಘಾನ್​ ಮಿಸ್ಟ್ರಿ ಗರ್ಲ್​ ಬೆಂಬಲ..!

ಏಷ್ಯಾಕಪ್ ಸೂಪರ್-4 ಪಂದ್ಯಗಳು ರೋಚಕತೆ ಪಡೆದುಕೊಂಡಿದ್ದು, ಇಂಡೋ-ಪಾಕ್ ಸೂಪರ್-4 ಮ್ಯಾಚ್​ ನಡುವೆ ಅಫ್ಗಾನಿಸ್ತಾನದ ಮಿಸ್ಟ್ರಿ ಗರ್ಲ್​ ವಾಜ್ಮಾ ಆಯುಬಿ ಸಖತ್ ವೈರಲ್ ಆಗ್ತಿದ್ದಾರೆ. ಮೂಲತಃ ಅಫ್ಗಾನಿಸ್ತಾನ ಅಭಿಮಾನಿಯಾಗಿರುವ ವಾಜ್ಮಾ ಆಯುಬಿ, ಟೀಮ್ ಇಂಡಿಯಾಗೆ ಬೆಂಬಲ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಟ್ವಿಟರ್​ನಲ್ಲಿ ಟೀಮ್ ಇಂಡಿಯಾ ಜೆರ್ಸಿ ತೊಟ್ಟು ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ಅಭಿಮಾನಿ ನಡೆಗೆ ಬಾಬರ್ ಗರಂ

ಪಾಕಿಸ್ತಾನ ನಾಯಕ ಬಾಬರ್ ಅಝಂ ಕೂಲ್ ಆ್ಯಂಡ್ ಕಾಮ್ ಆಗಿಯೇ ಕಾಣಿಸಿಕೊಂಡಿದ್ದೇ ಹೆಚ್ಚು. ಆದ್ರೀಗ ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ತಾಳ್ಮೆ ಕಳೆದುಕೊಂಡಿದ್ದಾರೆ. ಅಂದ್ಹಾಗೆ ಡ್ರೆಸ್ಸಿಂಗ್ ರೂಮ್​ಗೆ ತೆರಳುತ್ತಿದ್ದ ಬಾಬರ್, ಅಭಿಮಾನಿಯ ಸೆಲ್ಫಿಗೆ ಫೋಸ್ ನೀಡಿದರು. ಪದೇ ಪದೆ ಸೆಲ್ಪಿ ತೆಗೆದುಕೊಳ್ಳಲು ಮುಂದಾದ ಅಭಿಮಾನಿ ನಡೆಗೆ ಕುಪಿತಗೊಂಡ ಪಾಕ್ ನಾಯಕ, ಡ್ರೆಸ್ಸಿಂಗ್ ರೂಮ್​​ಗೆ ಬಂದುಬಿಡು ಎನ್ನುವಂತೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಳಿಕ ಅಲ್ಲಿಂದ ಅಭಿಮಾನಿ ಕಾಲ್ಕಿತ್ತಿದ್ದಾರೆ.

ಲಿಟ್ಲ್​ ಗರ್ಲ್​ಗೆ ನಸೀಮ್ ಶಾ ಆಟೋಗ್ರಾಫ್

ಪಾಕಿಸ್ತಾನ ಯುವ ವೇಗಿ ನಸೀಮ್ ಶಾ, ಲಿಟ್ಲ್ ಗರ್ಲ್​ಗೆ ಆಟೋಗ್ರಾಫ್​​​ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಕೊಲೊಂಬೋದ ಹೋಟೆಲ್​ನಿಂದ ಪ್ರೇಮದಾಸ ಸ್ಟೇಡಿಯಂಗೆ ಆಗಮಿಸಿದ ನಸೀಮ್ ಶಾಗಾಗಿ ತಾಯಿ ಹಾಗೂ 4 ವರ್ಷದ ಪುತ್ರಿ ಕಾಯ್ತಿದ್ದರು. ಈ ವೇಳೆ ಮಗುವಿನ ತಾಯಿ, ನಸೀಮ್ ಶಾರನ್ನ ಕರೆದರು. ಇದನ್ನ ಕೇಳಿಸಿಕೊಂಡ ನಸೀಮ್ ಶಾ, ಆತನ ಫೋಟೋಗಳಿಂದ ಬುಕ್​​​ ಮೇಲೆ ಆಟೋಗ್ರಾಫ್ ನೀಡಿ ಶುಭಕೋರಿದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತಕ್ಕೆ ಮಿಸ್ಟ್ರಿ ಗರ್ಲ್​ ಬೆಂಬಲ.. ಅಭಿಮಾನಿ ಬಳಿ ಚಾಕೋಲೆಟ್ ಕೇಳಿದ ಮಹೇಂದ್ರ ಸಿಂಗ್ ಧೋನಿ..!

https://newsfirstlive.com/wp-content/uploads/2023/09/wazma.jpg

Load More