Advertisment

ಅಂದು ಹೀನಾಯ ಸೋಲು, ಅವಮಾನ.. ಉತ್ತರ ಕೊಡುವ ಸಮಯ ರೋಹಿತ್​​ಗೆ ಬಂದಿದೆ..!

author-image
Ganesh
Updated On
ಕ್ಯಾಪ್ಟನ್​ ಇಲ್ಲದೇ ಟೀಮ್ ಇಂಡಿಯಾ ಆಟಗಾರರ ಸಮರಾಭ್ಯಾಸ.. ರೋಹಿತ್ ಎಲ್ಲಿದ್ದಾರೆ?
Advertisment
  • ಟೀಮ್ ಇಂಡಿಯಾಗೆ ಪ್ರತಿಷ್ಠೆ ಅಡಿಲೇಡ್ ಟೆಸ್ಟ್​..!
  • ಅಡಿಲೇಡ್ ಅಗ್ನಿಪರೀಕ್ಷೆ ಗೆದ್ದರೆ ಸರಣಿ ನಮ್ದೇ..!
  • ಅಂದು ಸೈಲೆಂಟ್.. ಈಗ ಫುಲ್ ವೈಲೆಂಟ್..!

ಆಸ್ಟ್ರೇಲಿಯಾ ಭದ್ರಕೋಟೆ ಬೇಧಿಸಿದ ಟೀಮ್ ಇಂಡಿಯಾಗೆ ಈಗ ಅಡಿಲೇಡ್ ಚಾಲೆಂಜ್ ಎದುರಾಗಿದೆ. ಗೆಲ್ಲಲೇಬೇಕಾದ ಒತ್ತಡಕ್ಕಿಂತ 4 ವರ್ಷಗಳ ಹೀನಾಯ ಸೋಲಿಗೆ ರಿವೇಂಜ್ ತೀರಿಸಿಕೊಳ್ಳಬೇಕಿದೆ. ಡಿಸೆಂಬರ್​​ 6ರಿಂದ ಶುರುವಾಗಲಿರುವ ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಠೆಯೂ ಆಗಿದೆ.

Advertisment

ಪರ್ತ್​ ಗೆದ್ದ ಟೀಮ್ ಇಂಡಿಯಾಗೆ ಬಿಗ್​ ಚಾಲೆಂಜ್!
ಪರ್ತ್ ಟೆಸ್ಟ್​​ ಗೆದ್ದಾಯ್ತು.. ಬಾರ್ಡರ್​ ಗವಾಸ್ಕರ್ ಟೆಸ್ಟ್​ ಸರಣಿಯಲ್ಲಿ ಶುಭಾರಂಭ ಮಾಡಾಯ್ತು. ಈಗ ಏನಿದ್ರೂ, ಟೀಮ್ ಇಂಡಿಯಾ ಮುಂದಿರುವುದು ಅಡಿಲೇಡ್ ಎಂಬ ಅಗ್ನಿಪರೀಕ್ಷೆಯ ಬಿಗ್​​ ಬ್ಯಾಟಲ್​. ಪರ್ತ್​ನಲ್ಲಿ ಮೊದಲ ಪಂದ್ಯ ಜಯಿಸಿರುವ ಟೀಮ್ ಇಂಡಿಯಾ, ಈಗ ಅಡಿಲೇಡ್ ಟೆಸ್ಟ್​ ಪಂದ್ಯಕ್ಕೆ ಸಜ್ಜಾಗ್ತಿದೆ. ಇದು ಟೀಮ್ ಇಂಡಿಯಾಗೆ ಕೇವಲ ಟೆಸ್ಟ್​ ಪಂದ್ಯವಾಗಿಲ್ಲ. ಪ್ರತಿಷ್ಠೆಯ ಪಂದ್ಯವಾಗಿದೆ. ಇದಕ್ಕೆ ಕಾರಣ 4 ವರ್ಷಗಳ ಹಿಂದಿನ ಮುಖಭಂಗ.

ಇದನ್ನೂ ಓದಿ:5 ವರ್ಷದಿಂದ ವಿಫಲ ಪ್ರಯತ್ನ.. ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೇ RCB ಮಾಜಿ ವೇಗಿ ಕ್ರಿಕೆಟ್​ಗೆ ಗುಡ್​ಬೈ..!

ಮೊದಲ ಇನ್ನಿಂಗ್ಸ್​ 244 ರನ್
2020, ಡಿಸೆಂಬರ್ 17. ಅಡಿಲೇಡ್​​ನ ಪಿಂಕ್​ ಬಾಲ್​ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ, ಟೀಮ್ ಇಂಡಿಯಾ ಮುಖಾಮುಖಿಯಾಗಿತ್ತು. ಈ ಪಂದ್ಯದ ಮೊದಲ ಇನ್ನಿಂಗ್ಸ್​ 244 ರನ್​​ ಗಳಿಸಿದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯಾವನ್ನು 191 ರನ್​ಗಳಿಗೆ ಕಟ್ಟಿಹಾಕಿತ್ತು. ಆ ಮೂಲಕ 53 ರನ್​ಗಳ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್​ನಲ್ಲಿ ಎಲ್ಲವೂ ಉಲ್ಟಾ ಆಗಿತ್ತು. 53 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ, ಬಿಗ್ ಇನ್ನಿಂಗ್ಸ್​ ಕಟ್ಟುವ ನಿರೀಕ್ಷೆ ಇತ್ತು. ಆಸ್ಟ್ರೇಲಿಯನ್ ಬೌಲರ್​ಗಳ ಬಿರುಗಾಳಿಯ ಬೌಲಿಂಗ್​ಗೆ ತತ್ತರಿಸಿದ ಟೀಮ್ ಇಂಡಿಯಾ ಬ್ಯಾಟರ್​​ಗಳು ಒಂದಕ್ಕಿ ಮೊತ್ತವನ್ನು ದಾಟದ ಮುವತ್ತೇ ಮುವತ್ತು ರನ್​ಗಳಿಗೆ ಆಲೌಟ್ ಆಗಿತ್ತು. ವಿಶ್ವ ಕ್ರಿಕೆಟ್​ನ ಮುಂದೆ ನಗೆ ಪಾಟಿಲಿಗೆ ಗುರಿಯಾಗಿತ್ತು. ಅಪಹಾಸ್ಯಕ್ಕೆ ಒಳಗಾಗಿತ್ತು.

Advertisment

ಹೀನಾಯ ಸೋಲು, ಅವಮಾನ
ಅಪಮಾನವಾದಲ್ಲೇ ಸನ್ಮಾನ ಸ್ವೀಕರಿಸಬೇಕು. ಸೋತಲ್ಲೇ ಗೆಲ್ಲಬೇಕು ಅನ್ನೋ ಮಾತು ಟೀಮ್ ಇಂಡಿಯಾಗೆ ಸ್ಫೂರ್ತಿಯಾಗಿದೆ. ಅಡಿಲೇಡ್​ನಲ್ಲಿ ಗೆಲುವಿಗೆ ಪಣ ತೊಟ್ಟಿದೆ. 4 ವರ್ಷಗಳ ಹಿಂದೆ ಪಿಂಕ್​ ಬಾಲ್​ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿದ್ದ ಟೀಮ್ ಇಂಡಿಯಾ, ಈಗ ಅದೇ ಅಡಿಲೇಡ್​ನಲ್ಲೇ ಪಿಂಕ್ ಬಾಲ್ ಟೆಸ್ಟ್​ ಪಂದ್ಯವನ್ನಾಡಲಿದೆ. ಅಂದು ಎದುರಾಗಿದ್ದ ಅಪಮಾನಕ್ಕೆ ತಕ್ಕ ಉತ್ತರ ನೀಡುವ ತವಕದಲ್ಲಿದೆ. ಸೋತು ಅಪಮಾನ ಎದುರಿಸಿದ್ದ ಅದೇ ಸ್ಟೇಡಿಯಂನಲ್ಲೇ ಆಸ್ಟ್ರೇಲಿಯಾವನ್ನು ಬಗ್ಗು ಬಡೆದು ಸನ್ಮಾನ ಸ್ವೀಕರಿಸುವ ಹೆಬ್ಬಯಕೆ ಹೊಂದಿದೆ.

ಇದನ್ನೂ ಓದಿ:IPL 2025: ಆರ್​ಸಿಬಿಯಲ್ಲಿ 5 ಸರ್​​ಪ್ರೈಸ್ ಎಂಟ್ರಿಗಳ ಹಿಂದಿನ ಸೀಕ್ರೆಟ್ ರಿವೀಲ್..!

ಅಡಿಲೇಡ್ ಪ್ರತೀಕಾರಕ್ಕೆ ಇದೇ ಬೆಸ್ಟ್​ ಟೈಮ್​
ಪರ್ತ್​ನಲ್ಲಿ ಟೆಸ್ಟ್​ ಗೆದ್ದ ಟೀಮ್ ಇಂಡಿಯಾ, ಅಡಿಲೇಡ್​​ನ 4 ವರ್ಷಗಳ ಪ್ರತೀಕಾರ ತೀರಿಸಿಕೊಳ್ಳಲು ಇದು ಸರಿಯಾದ ಸಮಯವಾಗಿದೆ. ಅವತ್ತು ಟೀಮ್ ಇಂಡಿಯಾಗೆ ಕಾಡಿದ್ದ ಜೋಶ್ ಹೇಜಲ್​ವುಂಡ್, ಮಿಚೆಲ್​ ಸ್ಟಾರ್ಕ್​ಗೆ ತಕ್ಕ ಪಾಠ ಕಲಿಸಲು ಸುವರ್ಣಾವಕಾಶ ಆಗಿದೆ. ಡೇ ಅಂಡ್ ನೈಟ್​ ಟೆಸ್ಟ್​ನ ಅನುಭವಿಗಳು ಅಂತಾನೇ ಬೀಗ್ತಿರುವ ಆಸ್ಟ್ರೇಲಿಯಾ ಎದುರು ಎರಡೇ ಎರಡು ಪಿಂಕ್ ಬಾಲ್ ಟೆಸ್ಟ್​ ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ ಟೀಮ್ ಇಂಡಿಯಾ, ಗೆದ್ದರೆ ಇತಿಹಾಸವನ್ನಷ್ಟೇ ಬರೆಯಲ್ಲ. ಟೆಸ್ಟ್​ ಸರಣಿ ಗೆಲುವಿನ ಭದ್ರಬುನಾದಿಯೂ ಹಾಕುವಂತಾಗುತ್ತೆ.

Advertisment

ಅಂದಿನಂತೆ ಇಲ್ಲ ಈಗ ಟೀಮ್ ಇಂಡಿಯಾ
2020ರ ಪಿಂಕ್ ಬಾಲ್​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಸೋತಿರಬಹುದು. ಈಗ ಟೀಮ್ ಇಂಡಿಯಾ ಸುಲಭವಾಗಿ ಸೋಲಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾಗೂ ಅಂದಿನ ಟೀಮ್ ಇಂಡಿಯಾಗೂ ಅಜಗಜಾಂತರ ವ್ಯತ್ಯಾಸ ಇದೆ. ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಹಾರಂಥ ಆಟಗಾರರ ತಂಡದಲ್ಲಿ ಈಗ ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ರಿಷಭ್ ಪಂತ್​​ರಂಥ ವೈಲೆಂಟ್ ಆಟಗಾರರಿದ್ದಾರೆ. ಬೌಲಿಂಗ್​ನಲ್ಲಿ ಬೂಮ್ರಾ ಜೊತೆ ಬೆಂಕಿ ಚೆಂಡುಗಳನ್ನು ಎಸೆಯೋ ಸಿರಾಜ್, ಹರ್ಷಿತ್​ ರಾಣಾ ಇದ್ದಾರೆ. ಹೀಗಾಗಿ ಅಡಿಲೇಡ್​ನಲ್ಲಿ ಆಸ್ಟ್ರೇಲಿಯಾವನ್ನುಒಂದು ಆಟ ಆಡಿಕೊಳ್ಳುವುದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ:Umpire Jobs: ಕ್ರಿಕೆಟ್ ಅಂಪೈರ್ ಆಗೋದು ಹೇಗೆ..? ಲಕ್ಷ ಲಕ್ಷ ಸ್ಯಾಲರಿ..! ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?

ಒಟ್ನಲ್ಲಿ, 4 ವರ್ಷಗಳ ಅಡಿಲೇಡ್ ಹಿಂದಿನ ಅಡಿಲೇಡ್ ಸೋಲು, ಇವತ್ತಿಗೂ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಕಾಡುತ್ತಿದೆ. ಆ ನೋವಿಗೆ ಮುಲಾಮು ಹಚ್ಚುವ ಸಮಯ ಬಂದಾಗಿದ್ದು, ಟೀಮ್ ಇಂಡಿಯಾ ಹೇಗೆ ಬಳಸಿಕೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment