ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಬ್ಯಾಟಿಂಗ್ ಭವಿಷ್ಯ ಅಧೋಗತಿ
ಡೆಡ್ಲಿ ಎಸೆತ ಎದುರಿಸುವಲ್ಲಿ ಚೇತೇಶ್ವರ್ ಪೂಜಾರ ಬೆಸ್ಟ್
ಸಿಡ್ನಿ ಟೆಸ್ಟ್ ಬಳಿಕ ಪೂಜಾರ ಬ್ಯಾಟಿಂಗ್ಗೆ ಏನಾಯಿತು?
ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮಾತ್ರವಲ್ಲ, 2021-23ರ WTCಯಲ್ಲೇ ಕೆಟ್ಟದಾಗಿ ಬ್ಯಾಟಿಂಗ್ ಪರ್ಫಾಮ್ ಮಾಡಿದ್ರು. ಇವರ ಆಟ ನೋಡಿದ್ರೆ, ಟೀಂ ಇಂಡಿಯಾ ಈತ ವಿಚಾರದಲ್ಲಿ ಒಂದು ಗಟ್ಟಿ ನಿರ್ಧಾರಕ್ಕೆ ಬರಲೇಬೇಕು.
ಚೇತೇಶ್ವರ್ ಪೂಜಾರ, ರಾಹುಲ್ ದ್ರಾವಿಡ್ ನಂತರ ರೆಡ್ಬಾಲ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾಗೆ ಸಿಕ್ಕ ಟ್ರಬಲ್ ಶೂಟರ್. ಡೆಡ್ಲಿ ಎಸೆತಗಳನ್ನ ಸಾಲಿಡ್ ಆಗಿ ಡಿಫೆನ್ಸ್ ಮಾಡೋದ್ರಲ್ಲೂ ಪೂಜಾರಾ ಮಾಸ್ಟರ್. ಫ್ಲಾಟ್ ಟ್ರ್ಯಾಕ್ಗಳೇ ಇರಲಿ SENA ದೇಶಗಳ ಸ್ಪೀಡ್ ಆ್ಯಂಡ್ ಬೌನ್ಸಿ ಟ್ರ್ಯಾಕ್ಗಳಲ್ಲೇ ಆಗಿರಲಿ ಕಲ್ಲು ಬಂಡೆಯಂತೆ ಕ್ರೀಸ್ನಲ್ಲಿ ನೆಲಕಚ್ಚಿ ನಿಲ್ಲೋದ್ರಲ್ಲಿ ಈತನಿಗಿಲ್ಲ ಸಾಟಿ. ಏಕಾಂಗಿಯಾಗಿ ಹೋರಾಟ ನಡೆಸಿ, ಸೈಲೆಂಟ್ ಆಗಿಯೇ ಮ್ಯಾಚ್ ಗೆಲ್ಲಿಸುತ್ತಿದ್ದ ಈ ಟೆಸ್ಟ್ ಸ್ಪೆಷಲಿಸ್ಟ್ ಈಗ ಫುಲ್ ಸೈಲೆಂಟ್ ಆಗಿದ್ದಾರೆ.
ಟಾಪ್ ಆರ್ಡರ್ ವೈಫಲ್ಯ ಕಂಡ್ರೆ ಸಾಕು, ಕಲ್ಲು ಬಂಡೆಯಂತೆ ನೆಲೆಯೂರಿ ಟೀಂ ಇಂಡಿಯಾಗೆ ನೆರವಾಗುತ್ತಿದ್ದ ಈ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ಆದ್ರೀಗ ಇದೇ ಪೂಜಾರ ಭವಿಷ್ಯ ಅಧೋಗತಿಗೆ ಸಿಲುಕಿದೆ. ಇವರ ಕರಿಯರ್ಗೆ ಫುಲ್ ಸ್ಟಾಪ್ ಬೀಳೋ ದಿನಗಳು ಹತ್ತಿರವಾಗ್ತಿವೆ. ಇದಕ್ಕೆಲ್ಲ ರೀಸನ್ ಸೌರಾಷ್ಟ್ರ ಬ್ಯಾಟರ್ ನೀಡ್ತಿರೋ ಅಟ್ಟರ್ ಫ್ಲಾಪ್ ಪರ್ಫಾಮೆನ್ಸ್. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕೂವರೆ ವರ್ಷಗಳಿಂದ ಇದೇ ಆಟವಾಗಿದೆ.
2019ರ ಸಿಡ್ನಿ ಟೆಸ್ಟ್ ಬಳಿಕ ಪೂಜಾರ ಫುಲ್ ಚೇಂಜ್.!
ಟೀಂ ಇಂಡಿಯಾದ ಅಪದ್ಬಾಂದವ ಎನಿಸಿಕೊಂಡಿದ್ದ ಪೂಜಾರ 2019ರ ಸಿಡ್ನಿ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಎದುರು ಅಬ್ಬರಿಸಿ ಬೊಬ್ಬೆರೆದಿದ್ದರು. 193 ರನ್ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದ ಮಿಸ್ಟರ್ ಡಿಫೆಂಡಬಲ್, ಅಂದಿನಿಂದ ಆಟವೇ ಕಂಪ್ಲೀಟ್ ಬದಲಾಯಿತು. ಸೈಲೆಂಟ್ ಆಗಿ ರನ್ ಶಿಖರ ಕಟ್ಟುತ್ತಿದ್ದ ಈ ಸೈಲೆಂಟ್ ಆಟಗಾರ ಆ ಬಳಿಕ ಕ್ರೀಸ್ನಲ್ಲಿ ಟೈಮ್ ಸ್ಪೆಂಡ್ ಮಾಡಿದಕ್ಕಿಂತ ಹೆಚ್ಚು ಸೈಲೆಂಟ್ ಆಗಿ ಡಗೌಟ್ ಆಗಿದ್ದೆ ಹೆಚ್ಚು.
ನಾಲ್ಕೂವರೆ ವರ್ಷದಿಂದ ಸಿಡಿಸಿದ್ದು ಜಸ್ಟ್ ಒಂದೇ ಶತಕ
2019ರ ಸಿಡ್ನಿ ಟೆಸ್ಟ್ನಲ್ಲಿ ಶತಕ ಸಿಡಿಸಿದ್ದ ಪೂಜಾರ ಟೀಂ ಇಂಡಿಯಾ ಪರ ಮತ್ತೆ ಶತಕ ಸಿಡಿಸಿದ್ದು ಬರೋಬ್ಬರಿ 3 ವರ್ಷ 347 ದಿನಗಳ ಬಳಿಕ. ಅದು ಕೂಡ 6 ತಿಂಗಳ ಹಿಂದೆ ನಡೆದ ಬಾಂಗ್ಲಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಅನ್ನೋದು ವಿಪರ್ಯಾಸ. ಈ ಸರಣಿಯಲ್ಲಿ ಒಂದಿಷ್ಟು ರನ್ ಗಳಿಸಿ ಕಮ್ಬ್ಯಾಕ್ ಮಾಡೋ ಮುನ್ಸೂಚನೆ ನೀಡಿದ್ರೂ, ಮತ್ತದೇ ಹಾದಿ ಹಿಡಿದು ಟೀಕಾಕಾರರಿಗೆ ಆಹಾರವಾಗುದ್ದಾರೆ. ನಿಜಕ್ಕೂ ಪೂಜಾರ ಟೀಂ ಇಂಡಿಯಾಗೆ ಬೇಕಾ ಎಂಬ ಪ್ರಶ್ನೆಯನ್ನೂ ಉದ್ಬವಿಸುವಂತೆ ಮಾಡಿದ್ದಾರೆ. ಇದಕ್ಕೆಲ್ಲ ರೀಸನ್ ಈತನ ಬ್ಯಾಟಿಂಗ್ ಅನ್ನೋದು ಬಿಡಿಸಿ ಹೇಳಬೇಕಿಲ್ಲ.
2019 ರಿಂದ ಒಟ್ಟು 35 ಟೆಸ್ಟ್ ಪಂದ್ಯಗಳಿಂದ 62 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬಿಸಿರೋ ಪೂಜಾರ 29.98ರ ಸರಾಸರಿಯಲ್ಲಿ 1,769 ರನ್ ಸಿಡಿಸಿದ್ದಾರೆ. ಈ ಪೈಕಿ ದಾಖಲಾಗಿರೋದು ಒಂದೇ ಒಂದು ಶತಕ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತಿ ಕೆಟ್ಟ ಪ್ರದರ್ಶನ ನೀಡಿರೋ ಪೂಜಾರ WTC ಹಿಸ್ಟರಿಯಲ್ಲಿ ಅತಿ ಕೆಟ್ಟ ಅವರೇಜ್ ಹೊಂದಿರೋ ಬ್ಯಾಟ್ಸ್ಮನ್ ಎಂಬ ಕುಖ್ಯಾತಿ ಹೊಂದಿದ್ದಾರೆ. ಇದೇ ವೈಫಲ್ಯವನ್ನ ಮುಂದಿವರಿಸಿರೋ ಮಿಸ್ಟರ್ ಡಿಪೆಂಡಬಲ್ ಈಗ ಟೀಂ ಇಂಡಿಯಾಗೆ ಅವಶ್ಯಕವೇ ಎಂಬ ಪ್ರಶ್ನೆ ಹುಟ್ಟಿ ಹಾಕಿದೆ.
ಪೂಜಾರನ ಬಿಟ್ಟು ಸಾಗಬೇಕು ಟೀಮ್ ಇಂಡಿಯಾ..!
ಕಳೆದ ಕೆಲ ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುವಲ್ಲಿ ಮಿಸ್ಟರ್ ಡಿಪೆಂಡಬಲ್ ವಿಫಲರಾಗಿದ್ದಾರೆ. ಇನ್ಫ್ಯಾಕ್ಟ್_ ಈಗಾಗಲೇ 35 ವರ್ಷದ ಪೂಜಾರಗೆ ಇದು ಕರಿಯರ್ನ ಯುಗಾಂತ್ಯದ ದಿನಗಳು ಕೂಡ. ಅಷ್ಟೇ ಅಲ್ಲ.! ಸದ್ಯ ಭವಿಷ್ಯದ ತಂಡದ ಕಟ್ಟಬೇಕಾದ ಜವಾಬ್ದಾರಿಯು ಬಿಸಿಸಿಐ ಆ್ಯಂಡ್ ಟೀಂ ಮ್ಯಾನೇಜ್ಮೆಂಟ್ ಮುಂದಿದೆ. ಹೀಗಾಗಿ ಸಮರ್ಥ ಆಟಗಾರನ ಹುಡುಕಬೇಕಾಗಿದೆ. ಹೀಗಾಗಿ ಜುಲೈನಿಂದ ಆರಂಭವಾಗೋ ವಿಂಡೀಸ್ ಟೂರ್ಗೆ ತಂಡ ಪ್ರಕಟಿಸುವಾಗಲೇ ಪೂಜಾರ ಭವಿಷ್ಯದ ಫಿಚ್ಚರ್ ಬಗ್ಗೆ ಒಂದಿಷ್ಟು ಸ್ಪಷ್ಟ ಚಿತ್ರಣ ಸಿಕ್ಕೇ ಸಿಗುತ್ತೆ. ಭವಿಷ್ಯದ ದೃಷ್ಟಿಯಿಂದ ಇಂಥದ್ದೊಂದು ನಡೆ ತೆಗೆದುಕೊಳ್ಳಬೇಕಾದ ಅಗತ್ಯತೆಯೂ ಇದ್ದೇ ಇದೆ. ಹೀಗಾಗಿ ಪೂಜಾರ ಆಡಿರೋ WTC ಫೈನಲ್ ಪಂದ್ಯವೇ ಕೊನೆ ಟೆಸ್ಟ್ ಆದರೂ ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ