newsfirstkannada.com

×

ಬೂಮ್ರಾ ಮುಂದೆ ನಡೆಯಲಿಲ್ಲ ಬಾಂಗ್ಲಾ ಆಟ; 8 ವಿಕೆಟ್ ಢಮಾರ್.. ಹಿಡಿತ ಸಾಧಿಸಿದ ರೋಹಿತ್ ಪಡೆ

Share :

Published September 20, 2024 at 2:37pm

    ಚೆನ್ನೈನ ಚೆಪಾಕ್​ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ

    ಭಾರತೀಯ ಬ್ಯಾಟ್ಸ್​​ಮನ್​ಗೆ ನೀರು ಕುಡಿಸಿದ್ದ ಬಾಂಗ್ಲಾ ಬೌಲರ್ಸ್

    ಇಂದು ಖಡಕ್ ಉತ್ತರ ಕೊಟ್ಟ ಟೀಂ ಇಂಡಿಯಾದ ಬೌಲರ್ಸ್

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನ ಎರಡನೇ ದಿನದಲ್ಲಿ ಬೂಮ್ರಾ ಮುಂದೆ ಬಾಂಗ್ಲಾದೇಶದ ಆಟ ನಡೆಯಲಿಲ್ಲ. ಬೂಮ್ ಬೂಮ್ ಬೂಮ್ರಾ ದಾಳಿಗೆ ತತ್ತರಿಸುರುವ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಂದ್ಹಾಗೆ ಇಂದು ಬೆಳಗ್ಗೆ ಭಾರತವು ಜಡೇಜಾ ಹಾಗೂ ಅಶ್ವಿನ್ ಅವರ ವಿಕೆಟ್ ಕಳೆದುಕೊಂಡು ಬೇಗ ಆಲೌಟ್ ಆಯಿತು. 91.2 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 376 ರನ್​​ಗಳಿಸಿತು. ಈ ಟಾರ್ಗೆಟ್​ನೊಂದಿಗೆ ಬ್ಯಾಟಿಂಗ್​ಗೆ ಇಳಿದಿದ್ದ ಬಾಂಗ್ಲಾ ತಂಡ ಟೀ ಬ್ರೇಕ್ ಅಂತ್ಯದ ವೇಳೆಗೆ 112 ರನ್​ಗಳಿಸಿ 8 ವಿಕೆಟ್ ಕಳೆದುಕೊಂಡು ಪೇಚಿಗೆ ಸಿಲುಕಿದೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್​​; ಟೀಮ್​ ಇಂಡಿಯಾದಿಂದಲೇ ಯುವ ಆಟಗಾರನಿಗೆ ಕೊಕ್​​!

ಟೀಂ ಇಂಡಿಯಾ ಪರ ಜಸ್​​ಪ್ರೀತ್ ಬೂಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿದರು. ಕೇವಲ 6.5 ಓವರ್​ನಲ್ಲಿ 28 ರನ್​​ ನೀಡಿ 3 ಮೂರು ವಿಕೆಟ್ ಪಡೆದುಕೊಂಡರು. ಬ್ಯಾಟಿಂಗ್​ನಲ್ಲಿ ದರ್ಬಾರ್ ನಡೆಸಿದ್ದ ರವೀಂದ್ರ ಜಡೆಜಾ 2 ವಿಕೆಟ್​ ಕಿತ್ತಿದ್ದಾರೆ. ಅದೇ ರೀತಿ ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ಸಿರಾಜ್ ಕೂಡ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಎರಡು ವಿಕೆಟ್ ಉರುಳಿದರೆ ರೋಹಿತ್ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ ಭಾರೀ ಅಂತರದ ಮುನ್ನಡೆ ಕಾಯ್ದುಕೊಳ್ಳಲಿದೆ.

ಇದನ್ನೂ ಓದಿ:ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಅಶ್ವಿನ್ ಶತಕ ವೈಭವ.. ಬಾಂಗ್ಲಾಗೆ ಚೆಕ್​​ಮೇಟ್ ಇಟ್ಟ ಕ್ಷಣ ಹೇಗಿತ್ತು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೂಮ್ರಾ ಮುಂದೆ ನಡೆಯಲಿಲ್ಲ ಬಾಂಗ್ಲಾ ಆಟ; 8 ವಿಕೆಟ್ ಢಮಾರ್.. ಹಿಡಿತ ಸಾಧಿಸಿದ ರೋಹಿತ್ ಪಡೆ

https://newsfirstlive.com/wp-content/uploads/2024/09/BHUMRAH.jpg

Load More