newsfirstkannada.com

×

ರೋಹಿತ್, ಕೊಹ್ಲಿ ಅಲ್ಲವೇ ಅಲ್ಲ.. ತವರಿನ ಟೆಸ್ಟ್​ನಲ್ಲಿ ಈ ಇಬ್ಬರು ಆಟಗಾರರು ಮಾತ್ರ ಭಾರತಕ್ಕೆ ಭರವಸೆ..!

Share :

Published September 19, 2024 at 8:52am

    ತವರಿನಲ್ಲಿ ಮ್ಯಾಚ್ ವಿನ್ನರ್​ಗಳೇ ಆಗ್ತಾರಾ ವಿಲನ್ಸ್​..?

    ಕೊಹ್ಲಿ ಬ್ಯಾಟಿಂಗ್​ ಸರಾಸರಿ ಶೇಕಡಾ 30ರಷ್ಟು ಕುಸಿತ, ಭಾರೀ ಪರದಾಟ

    ರೋಹಿತ್ ಶರ್ಮಾ ಬ್ಯಾಟ್​ ತವರಿನಲ್ಲಿ ಮಾಯ.. ಏನ್ ಹೇಳ್ತಿದೆ ದಾಖಲೆ?

ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಬ್ಯಾಟರ್ಸ್ ಯಾರು ಅಂದ್ರೆ, ಸಡನ್ ಆಗಿ ನಮ್​ ಕಣ್ಮುಂದೆ ಬರೋ ಹೆಸರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್​ ಪಂತ್. ಈಗ ಇದೇ ಮ್ಯಾಚ್​ ವಿನ್ನರ್​ಗಳು ಟೀಮ್ ಇಂಡಿಯಾಗೆ ಥ್ರೆಟ್ ಆಗುವ ಆತಂಕ ಎದುರಾಗಿದೆ.

ಭಾರತ ಬಾಂಗ್ಲಾ ನಡುವಿನ ಟೆಸ್ಟ್ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಪಾಕ್​ನಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿರುವ ಬಾಂಗ್ಲಾ, ಭಾರತಕ್ಕೆ ದಂಡೆತ್ತಿ ಬಂದಿದೆ. ಪಾಕ್​ನಂತೆ ಭಾರತದಲ್ಲೂ ಇತಿಹಾಸ ಸೃಷ್ಟಿಸುವ ಹುಮ್ಮಸ್ಸಿನಲ್ಲಿದೆ. ಆದ್ರೆ, ಭಾರತದಲ್ಲಿ ಗೆಲುವು ಅಷ್ಟು ಸುಲಭನಾ ಅಂದ್ರೆ, ನಿಜಕ್ಕೂ ಇಲ್ಲ. ಆದ್ರೂ, ತವರಿನಲ್ಲಿ ಭಾರತದ ಕೆಲ ಆಟಗಾರರ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ, ನಮ್ಮವರೇ ನಮಗೆ ವಿಲನ್ಸ್ ಆಗ್ತಾರಾ ಅನ್ನೋ ಅನುಮಾನ ಕಾಡದಿರಲ್ಲ.

ಇದನ್ನೂ ಓದಿ:ಭಾರತ-ಬಾಂಗ್ಲಾ ಮೊದಲ ಟೆಸ್ಟ್​; ಟೀಂ ಇಂಡಿಯಾ ಮುಂದಿರುವ ಹೊಸ ಭರವಸೆಗಳು ಇಲ್ಲಿವೆ..!

ತವರಿನಲ್ಲಿ ಮ್ಯಾಚ್ ವಿನ್ನರ್​ಗಳೇ ಆಗ್ತಾರಾ ವಿಲನ್ಸ್
ರೋಹಿತ್ ಶರ್ಮಾ ಆ್ಯಂಡ್ ವಿರಾಟ್​ ಕೊಹ್ಲಿ.. ಟೀಮ್ ಇಂಡಿಯಾದ ಮೇನ್ ಪಿಲ್ಲರ್ಸ್. ಟೀಮ್ ಇಂಡಿಯಾ ಗೆಲುವಿಗಾಗಿ ಆನ್​ಫೀಲ್ಡ್​​ನಲ್ಲಿ ವೀರ ಸೈನಿಕರಂತೆ ಹೋರಾಡುವ ಆಟಗಾರರು. ಒಂದು ಮಾತಲ್ಲಿ ಹೇಳುವುದಾದ್ರೆ ಟೀಮ್ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್​ಗಳು. ಆದ್ರೀಗ ಇದೇ ಜೋಡೆತ್ತು ಹೋಮ್ ಕಂಡೀಷನ್ಸ್​ನಲ್ಲಿ ಆಡಿರುವ ಆಟ ಎಂಥವರಿಗೂ ಆತಂಕಕ್ಕೆ ದೂಡುತ್ತೆ. 2021ರಿಂದ ಹೋಮ್​ ಕಂಡೀಷನ್ಸ್​ನಲ್ಲಿ ರೋಹಿತ್ ಹಾಗೂ ವಿರಾಟ್​ ಆರ್ಭಟ ನಡೆದಿಲ್ಲ. ಬ್ಯಾಟಿಂಗ್ ಆವರೇಜ್​​ನಲ್ಲಿ ಭಾರೀ ಕುಸಿತ ಕಂಡಿದೆ.

ತವರಿನಲ್ಲಿ ರೋಹಿತ್ ಶರ್ಮಾ​
ಒಟ್ಟಾರೆ ತವರಿನಲ್ಲಿ 29 ಟೆಸ್ಟ್​ ಪಂದ್ಯಗಳನ್ನಾಡಿರುವ ರೋಹಿತ್, 61.58ರ ಅವರೇಜ್​ನಲ್ಲಿ 2402 ರನ್​ ಗಳಿಸಿದ್ದು, 10 ಶತಕ ಸಿಡಿಸಿದ್ದಾರೆ. 2021ರಿಂದ 15 ಟೆಸ್ಟ್​ ಪಂದ್ಯಗಳನ್ನಾಡಿರುವ ರೋಹಿತ್, 1077 ರನ್ ಗಳಿಸಿದ್ದಾರೆ. 44.87ರ ಅವರೇಜ್​ನಲ್ಲಿ ಬ್ಯಾಟಿಂಗ್ ನಡೆಸಿರುವ ರೋಹಿತ್, 4 ಶತಕ ಸಿಡಿಸಿದ್ದು, ಬ್ಯಾಟಿಂಗ್ ಅವರೇಜ್​ನಲ್ಲಿ ಶೇಕಡ 16ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?

ತವರಿನಲ್ಲಿ ವಿರಾಟ್​ ಕೊಹ್ಲಿ ಬ್ಯಾಟಿಂಗ್
ವಿರಾಟ್, 50 ಟೆಸ್ಟ್ ಪಂದ್ಯಗಳಿಂದ 60.05ರ ಅವರೇಜ್​ನಲ್ಲಿ 4144 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 14 ಶತಕಗಳು ಇವೆ. 2021ರಿಂದ ವಿರಾಟ್ ಆಡಿರುವ 26 ಪಂದ್ಯಗಳಿಂದ ಕೇವಲ 35.58ರ ಅವರೇಜ್​ನಲ್ಲಿ 1530 ರನ್ ಗಳಿಸಿದ್ದಾರೆ. ಎರಡೇ ಎರಡು ಶತಕ ಸಿಡಿಸಿದ್ದಾರೆ.

ಕೆ.ಎಲ್.ರಾಹುಲ್ ಆಟವೂ ಅಷ್ಟಕ್ಕಷ್ಟೇ
ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿನೇ ಅಲ್ಲ. ಕೆ.ಎಲ್.ರಾಹುಲ್ ಆಟವೂ ತವರಲ್ಲಿ ಏನೇನೂ ನಡೆದಿಲ್ಲ. 2021ರಿಂದ ತವರಿನ ಅಂಗಳದಲ್ಲಿ 3 ಟೆಸ್ಟ್ ಪಂದ್ಯಗಳನ್ನಾಡಿರುವ ಕೆ.ಎಲ್​.ರಾಹುಲ್, 29ರ ಬ್ಯಾಟಿಂಗ್ ಅವರೇಜ್ ಹೊಂದಿದ್ದಾರೆ. ಇವರೆನ್ನೆಲ್ಲ ಹೊರತು ಪಡೆಸಿದ್ರೆ, ರಿಷಭ್ ಪಂತ್ ಹಾಗೂ ಜಡೇಜಾ ಮಾತ್ರವೇ ಬ್ಯಾಟಿಂಗ್ ಆವರೇಜ್​​ನಲ್ಲಿ ಬೆಸ್ಟ್​ ಎನಿಸಿಕೊಂಡಿದ್ದಾರೆ. 20 ತಿಂಗಳ ಬಳಿಕ ಟೆಸ್ಟ್​ನ ಅಗ್ನಿಪರೀಕ್ಷೆಗೆ ಇಳಿಯುತ್ತಿರುವ ಪಂತ್, ಅದೇ ಲಯ ಮುಂದುವರಿಸ್ತಾರಾ ಅನ್ನೋದೇ ಪ್ರಶ್ನೆಯಾಗಿದೆ.

ಇದನ್ನೂ ಓದಿ:‘ನಿನ್ನ ಜೊತೆ 5 ನಿಮಿಷ ಕೆಲಸ ಇದೆ’ ದಯಾಳ್ 2.0 ರೂಪುಗೊಂಡ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆ

ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಆ್ಯಂಡ್ ಕೆ.ಎಲ್.ರಾಹುಲ್. ಕ್ಲಾಸ್ ಬ್ಯಾಟರ್​​ಗಳು ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೀಗ ಇವ್ರೇ ಹೋಮ್ ಕಂಡೀಷನ್ಸ್​ನಲ್ಲಿ ಮಂಕಾಗಿದ್ದಾರೆ. ಬಾಂಗ್ಲಾ ಸರಣಿಯಲ್ಲಾದ್ರೂ ಈ ಮ್ಯಾಚ್​ ವಿನ್ನರ್​ಗಳ ಆರ್ಭಟ ನಡೆಯಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್, ಕೊಹ್ಲಿ ಅಲ್ಲವೇ ಅಲ್ಲ.. ತವರಿನ ಟೆಸ್ಟ್​ನಲ್ಲಿ ಈ ಇಬ್ಬರು ಆಟಗಾರರು ಮಾತ್ರ ಭಾರತಕ್ಕೆ ಭರವಸೆ..!

https://newsfirstlive.com/wp-content/uploads/2024/08/ROHIT_SHARMA_KOHLI-3.jpg

Load More