newsfirstkannada.com

×

ಮೊದಲ ಪಂದ್ಯ ಗೆದ್ದರೂ ರೋಹಿತ್​ಗೆ ತಪ್ಪದ ಟೆನ್ಶನ್, ಟೆನ್ಶನ್.. ಅದಕ್ಕೆ ದೊಡ್ಡ ಕಾರಣ ಇದೆ

Share :

Published September 27, 2024 at 6:57am

Update September 27, 2024 at 6:56am

    ಚೆಪಾಕ್​ ಟೆಸ್ಟ್​​ನಲ್ಲಿ ಹಿಟ್​ಮ್ಯಾನ್​ ರೋಹಿತ್​ ಫ್ಲಾಪ್​

    ಹಿಟ್​ಮ್ಯಾನ್​ ರೋಹಿತ್ ಶರ್ಮಾ​ಗೆ ಬಾಂಗ್ಲಾ ಭಯ..?

    ಕಾನ್ಪುರದಲ್ಲಿ ಕಮ್​ಬ್ಯಾಕ್​ ಮಾಡ್ತಾರಾ ರೋಹಿತ್​..?

ಇಂಡೋ-ಬಾಂಗ್ಲಾ ಮೊದಲ ಟೆಸ್ಟ್​​ನಲ್ಲಿ ದಿಗ್ವಿಜಯ ಸಾಧಿಸಿದ್ರೂ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​​ ಶರ್ಮಾಗೆ ಟೆನ್ಶನ್​​ ತಪ್ಪಿಲ್ಲ. ತನ್ನ ವೈಯಕ್ತಿಕ ಬ್ಯಾಟಿಂಗ್​ ಪರ್ಫಾಮೆನ್ಸ್​ ರೋಹಿತ್​ ಶರ್ಮಾನ ಬಿಡದೇ ಕಾಡ್ತಿದೆ. ಅಬ್ಬರಿಸಿ ಬೊಬ್ಬಿರಿದು ಕ್ರಿಕೆಟ್​ ಲೋಕದಲ್ಲಿ ಹಿಟ್​ಮ್ಯಾನ್​ ಅಂತಾನೇ ಫೇಮಸ್​ ಆಗಿರೋ ರೋಹಿತ್​ ಬ್ಯಾಟ್​, ಬಾಂಗ್ಲಾ ವಿರುದ್ಧ ಫುಲ್​ ಸೈಲೆಂಟ್​​.

ಚೆಪಾಕ್​ ಟೆಸ್ಟ್​​ನಲ್ಲಿ ದಿಗ್ವಿಜಯ ಸಾಧಿಸಿದ ಟೀಮ್​ ಇಂಡಿಯಾ, ಇದೀಗ ಸರಣಿ ಕ್ಲೀನ್​ಸ್ವೀಪ್​ ಮೇಲೆ ಕಣ್ಣಿಟ್ಟಿದೆ. 2ನೇ ಟೆಸ್ಟ್​ ಪಂದ್ಯವನ್ನಾಡಲು ಈಗಾಗಲೇ ಕಾನ್ಪುರಕ್ಕೆ ಟೀಮ್​ ಇಂಡಿಯಾ ಪ್ರಯಾಣಿಸಿದೆ. ಜಯದ ಆತ್ಮವಿಶ್ವಾಸದ ಅಲೆಯಲ್ಲಿರೋ ಟೀಮ್​ ಇಂಡಿಯಾ, ಇಂದಿನಿಂದ ಆರಂಭವಾಗೋ ಪಂದ್ಯವನ್ನ ಗೆದ್ದು ಸರಣಿ ವಶಪಡಿಸಿಕೊಳ್ಳೋ ತವಕದಲ್ಲಿದೆ.

ಇದನ್ನೂ ಓದಿ:ಕಳೆದ ಬಾರಿ ಹಸರಂಗ ಯಾಕೆ IPL ಆಡಲಿಲ್ಲ? ಇಲ್ಲೂ ಇದೆ ಆರ್​ಸಿಬಿಯ ಒಂದು ನಿರ್ಧಾರದ ಕತೆ..!

ಬಾಂಗ್ಲಾ ಬಲೆಗೆ ರೋಹಿತ್ ಶರ್ಮಾ​ ಸುಲಭದ ಬಲಿ
ಮೊದಲ ಟೆಸ್ಟ್​​ನಲ್ಲಿ ಟೀಮ್​ ಇಂಡಿಯಾ ಆಲ್​​ರೌಂಡ್​​ ಪರ್ಫಾಮೆನ್ಸ್​ ನೀಡಿದೆ. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​ ಮೂರೂ ವಿಭಾಗದಲ್ಲಿ ಪಾರಮ್ಯ ಮೆರೆದಿದೆ. ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ನಾಯಕತ್ವಕ್ಕೂ ಫುಲ್​ ಮಾರ್ಕ್ಸ್​​ ಸಿಕ್ಕಿದೆ. ಆದ್ರೂ ತನ್ನ ಬ್ಯಾಟಿಂಗ್ ಪರ್ಫಾಮೆನ್ಸೇ​ ಕ್ಯಾಪ್ಟನ್​​ ರೋಹಿತ್​ ಶರ್ಮಾಗೆ ಟೆನ್ಶನ್​ ಹೆಚ್ಚಿಸಿದೆ.

6 ರನ್​​ಗಳಿಗೆ ಸುಸ್ತಾದ ರೋಹಿತ್
ಚೆಪಾಕ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ರೋಹಿತ್​ ಶರ್ಮಾ ಆಟ ಕ್ರಿಸ್​​ಗಿಳಿದ 26 ನಿಮಿಷಕ್ಕೆ ಅಂತ್ಯವಾಯ್ತು. ಹಸನ್​ ಮಹ್ಮದ್​​ ಎಸೆತದಲ್ಲಿ ಸೆಕೆಂಡ್​ ಸ್ಲಿಪ್​ನಲ್ಲಿದ್ದ ಶಾಂಟೋಗೆ ಕ್ಯಾಚ್​ ಕೊಟ್ಟ ರೋಹಿತ್​ ಶರ್ಮಾ 6 ರನ್​ಗಳಿಸಿ ನಿರ್ಗಮಿಸಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ಸಿಂಗಲ್​ ಡಿಜಿಟ್​​ ಸ್ಕೋರ್​ಗೆ ಔಟಾದ ರೋಹಿತ್​ ಶರ್ಮಾ ಸೆಕೆಂಡ್​ ಇನ್ನಿಂಗ್ಸ್​ನಲ್ಲೂ ಫ್ಲಾಪ್​ ಶೋ ನೀಡಿದ್ರು. ಕೇವಲ 5 ರನ್​​ಗಳಿಗೆ ರೋಹಿತ್​ ಆಟ ಅಂತ್ಯವಾಯ್ತು.

ರೋಹಿತ್​ಗೆ ಬಾಂಗ್ಲಾ ಭಯ..?
ಚೆಪಾಕ್​ ಟೆಸ್ಟ್​ನಲ್ಲಿ ಮಾತ್ರವಲ್ಲ.. ಬಾಂಗ್ಲಾದೇಶ ವಿರುದ್ಧ ರೋಹಿತ್​ ಶರ್ಮಾ ಈ ಹಿಂದೆಯೂ ವೈಫಲ್ಯ ಕಂಡಿದ್ದಾರೆ. ವಿಶ್ವದ ಒನ್​ ಆಫ್​​ ದ ಗ್ರೇಟ್​ ಓಪನರ್​ ಅನಿಸಿಕೊಂಡಿರೋ ರೋಹಿತ್​, ಬಾಂಗ್ಲಾ ಬೌಲರ್​ಗಳಿಗೆ ಸುಲಭದ ತುತ್ತಾಗಿದ್ದಾರೆ. ಬಾಂಗ್ಲಾದೇಶದ ಎದುರು ಹಿಟ್​ಮ್ಯಾನ್​ ಆರ್ಭಟ ನಡೆದೇ ಇಲ್ಲ. ಬಾಂಗ್ಲಾ ಎದುರು ಟೆಸ್ಟ್​​ನಲ್ಲಿ 5 ಇನ್ನಿಂಗ್ಸ್​ಗಳನ್ನಾಡಿರೋ ರೋಹಿತ್​ ಒಂದು ಬಾರಿ ಮಾತ್ರ ಸಿಂಗಲ್​ ಡಿಜಿಟ್​ ಸ್ಕೋರ್​ನ ಗಡಿ ದಾಟಿರೋದು. ಸರಾಸರಿಯಂತೂ ಕಳಪೆ ಅಂದ್ರೆ ಕಳಪೆಯಾಗಿದೆ. ಬಾಂಗ್ಲಾದೇಶ ಎದುರು 5 ಇನ್ನಿಂಗ್ಸ್​ಗಳನ್ನಾಡಿರುವ ರೋಹಿತ್​ ಶರ್ಮಾ ಕೇವಲ 44 ರನ್​ಗಳಿಸಿದ್ದಾರೆ. 8.80ರ ಹೀನಾಯ ಸರಾಸರಿಯನ್ನ ಹೊಂದಿದ್ದು, 21 ಬೆಸ್ಟ್​ ಸ್ಕೋರ್​ ಆಗಿದೆ. ಐದು ಪಂದ್ಯಗಳಲ್ಲಿ ಬಾಂಗ್ಲಾ ಬಲೆಗೆ ಹಿಟ್​ಮ್ಯಾನ್​ ಶರ್ಮಾ ಸುಲಭದ ತುತ್ತಾಗಿದ್ದಾರೆ.

ಇದನ್ನೂ ಓದಿ:ಅಶ್ವಿನ್ ಶತಕ ವೈಭವಕ್ಕೆ ರಿಷಬ್ ಪಂತ್ ಮಾಡಿದ ಪಾಠ ಕಾರಣ..! ಸತ್ಯ ಬಿಚ್ಚಿಟ್ಟ ಸ್ಟಾರ್..!

ಕಾನ್ಪುರದಲ್ಲಿ ಕಮ್​ಬ್ಯಾಕ್.​.?
ಕಳೆದ ಐದೂ ಇನ್ನಿಂಗ್ಸ್​ಗಳಲ್ಲಿ ಫ್ಲಾಪ್​ ಶೋ ನೀಡಿರುವ ರೋಹಿತ್​ ಶರ್ಮಾ ಮುಂದೆ ಮತ್ತೊಂದು ಗೋಲ್ಡನ್​ ಆಪಾರ್ಚುನಿಟಿಯಿದೆ. ಶುಕ್ರವಾರದಿಂದ ಆರಂಭವಾಗೋ ಕಾನ್ಪುರದ ಗ್ರೀನ್​ ಪಾರ್ಕ್​ನಲ್ಲಿ ನಡೆಯೋ ಟೆಸ್ಟ್​​ಗೂ ಮುನ್ನ ರೋಹಿತ್​ ತಮ್ಮ ವೀಕ್​ನೆಸ್​ ಮೇಲೆ ವರ್ಕೌಟ್​ ಮಾಡಬೇಕಿದೆ. ಉತ್ತಮ ಅಭ್ಯಾಸ ನಡೆಸಿ, ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ್ರೆ, ಬಾಂಗ್ಲಾ ಟೈಗರ್ಸ್​ ಬೇಟೆ ರೋಹಿತ್​ಗೆ ದೊಡ್ಡ ವಿಚಾರವೇನಲ್ಲ.

ವಿಶ್ವದ ಬಲಾಡ್ಯ ತಂಡಗಳ ಎದುರು ಅಬ್ಬರಿಸಿ ಬೊಬ್ಬಿರಿದ ಇತಿಹಾಸವನ್ನ ರೋಹಿತ್​ ಶರ್ಮಾ ಹೊಂದಿದ್ದಾರೆ. ಅಬ್ಬರದ ಬ್ಯಾಟಿಂಗ್​ನಿಂದಲೇ ವಿಶ್ವ ಕ್ರಿಕೆಟ್​​ನಲ್ಲಿ ಹಿಟ್​ಮ್ಯಾನ್​ ಎಂಬ ಬಿರುದು ಕೂಡ ಒಲಿದಿದೆ. ಇಂಥಾ ರೋಹಿತ್​ ಶರ್ಮಾ, ಬಾಂಗ್ಲಾ ಎದುರು ರನ್​ಗಳಿಕೆಗೆ ಪರದಾಡಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

ಇದನ್ನೂ ಓದಿ:ಬರೋಬ್ಬರಿ 750 ವಿಕೆಟ್​ ಪಡೆದ ಸ್ಟಾರ್​​ ಆಲ್​ರೌಂಡರ್; ತನ್ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ R ಅಶ್ವಿನ್​​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮೊದಲ ಪಂದ್ಯ ಗೆದ್ದರೂ ರೋಹಿತ್​ಗೆ ತಪ್ಪದ ಟೆನ್ಶನ್, ಟೆನ್ಶನ್.. ಅದಕ್ಕೆ ದೊಡ್ಡ ಕಾರಣ ಇದೆ

https://newsfirstlive.com/wp-content/uploads/2024/09/ROHIT_BATTING.jpg

Load More