newsfirstkannada.com

×

IND vs BAN 2ನೇ ಟೆಸ್ಟ್​.. ​ಗೇಮ್ ಪ್ಲಾನ್ ಬದಲಾಯಿಸಿದ ಟೀಂ ಇಂಡಿಯಾ.. ಬಾಂಗ್ಲಾಗೆ ಢವಢವ..!

Share :

Published September 27, 2024 at 9:18am

    ಕಾನ್ಪುರದಲ್ಲಿಂದು ಇಂಡೋ-ಬಾಂಗ್ಲಾ 2ನೇ ಟೆಸ್ಟ್​

    ಸರಣಿ ಕ್ಲೀನ್​​ಸ್ವೀಪ್​ ಮೇಲೆ ಭಾರತ ತಂಡದ ಕಣ್ಣು

    2ನೇ ಟೆಸ್ಟ್​ಗೆ ಟೀಮ್​ ಇಂಡಿಯಾದ ಮಾಸ್ಟರ್​ ಪ್ಲಾನ್..!

ಕಾನ್ಪುರದಲ್ಲಿ ಬಾಂಗ್ಲಾ ಟೈಗರ್ಸ್​​ ಬೇಟೆಗೆ ಟೀಮ್​ ಇಂಡಿಯಾ ಸಜ್ಜಾಗಿದೆ. 5 ದಿನದ ಟೆಸ್ಟ್​ ಪಂದ್ಯವನ್ನ ಮೂರೇ ದಿನಕ್ಕೆ ಮುಗಿಸಲು ಮಾಸ್ಟರ್​ ಪ್ಲಾನ್​ ರೆಡಿಯಾಗಿದೆ. ಕಾನ್ಪುರದ ಗ್ರೀನ್​ಪಾರ್ಕ್​​ ಸ್ಟೇಡಿಯಂನಲ್ಲಿ ಟೆಸ್ಟ್​ ಫೈಟ್​ ಆರಂಭವಾಗಲಿದೆ. ಈ ಪಂದ್ಯ ಆರಂಭಕ್ಕೂ ಮೊದಲೇ ಟೀಮ್​ ಇಂಡಿಯಾ ಕ್ಯಾಂಪ್​​​ನಲ್ಲಿ ಅಂತ್ಯದ ಲೆಕ್ಕಾಚಾರ ಶುರುವಾಗಿದೆ. ಸರಣಿ ಕ್ಲೀನ್​ಸ್ವೀಪ್​ ಮೇಲೆ ಕಣ್ಣಿಟ್ಟಿರೋ ಟೀಮ್​ ಇಂಡಿಯಾ ಮೂರೇ ದಿನಕ್ಕೆ ಈ ಪಂದ್ಯ ಮುಗಿಸೋ ಪ್ಲಾನ್​ನಲ್ಲಿದೆ.

ಮೂರೇ ದಿನಕ್ಕೆ ಕಾನ್ಪುರ ಟೆಸ್ಟ್​ ‘ಖೇಲ್​’ ಖತಂ!
ಗ್ರೀನ್​​​ಪಾರ್ಕ್ ಸ್ಟೇಡಿಯಂನಲ್ಲಿ ಬಾಂಗ್ಲಾ ಬ್ಯಾಟರ್​​ಗಳನ್ನ ಇಂಡಿಯನ್​​ ಸ್ಪಿನ್ನರ್ಸ್​​ ಗಿರ್​​ಗಿಟ್ಲೆ ಆಡಿಸೋಕೆ ಸಜ್ಜಾಗಿದ್ದಾರೆ. ಚೆಪಾಕ್​ನಲ್ಲಿ ರೆಡ್​ ಸಾಯ್ಲ್​​ ಪಿಚ್​ನಲ್ಲಿ ಮೊದಲ ಟೆಸ್ಟ್​ ಆಡಿದ್ದ ಟೀಮ್​ ಇಂಡಿಯಾ, 2ನೇ ಟೆಸ್ಟ್​ ಪಂದ್ಯವನ್ನ ಬ್ಲ್ಯಾಕ್​​ ಸಾಯ್ಲ್​​​ ಪಿಚ್​​ನಲ್ಲಿ ಆಡಲಿದೆ. ಸ್ಪೆಷಲ್​ ಆಗಿ ತಯಾರಿಸಿರೋ ಈ ಪಿಚ್​​ ಪೇಸರ್ಸ್​​ಗಿಂತ, ಸ್ಪಿನ್ನರ್ಸ್​ಗೆ ಹೆಚ್ಚಿನ ನೆರವು ನೀಡಲಿದೆ. ಇಂತಾ ಪಿಚ್​ನಲ್ಲಿ ಸ್ಪಿನ್​ ಮಾಂತ್ರಿಕರಾದ ಅಶ್ವಿನ್​​, ಜಡೇಜಾ ಮುಂದೆ ಬಾಂಗ್ಲಾದ ಆಟ ನಡೆಯುತ್ತಾ?

ಇದನ್ನೂ ಓದಿ:ಏ..! ನಿಮ್ಮ ವಯಸ್ಸು ಎಷ್ಟು..? ಹಾಗಿದ್ದರೆ ಪ್ರತಿದಿನ ನೀವು ಎಷ್ಟು ಹೆಜ್ಜೆ ನಡೆಯಬೇಕು ಗೊತ್ತೇ..?

ಕಾನ್ಪುರದಲ್ಲಿ ಅಶ್ವಿನ್​ ರಿಯಲ್​ ‘ಕಿಂಗ್​’
ಹೋಮ್​​ಗ್ರೌಂಡ್​​ ಚೆನ್ನೈನಲ್ಲಿ ನಡೆದ ಮೊದಲ​ ಟೆಸ್ಟ್​ನಲ್ಲಿ ಫಸ್ಟ್​ ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಹಿಡಿದು ಮಿಂಚಿದ ಅಶ್ವಿನ್​, 2ನೇ ಇನ್ನಿಂಗ್ಸ್​ನಲ್ಲಿ ಬಾಲ್​ ಹಿಡಿದು ಕೈಚಳಕ ತೋರಿದ್ರು. ಅಶ್ವಿನ್​​ ಸ್ಪಿನ್​​ ಮ್ಯಾಜಿಕ್​ಗೆ ಕಕ್ಕಾಬಿಕ್ಕಿಯಾದ ಬಾಂಗ್ಲಾ ಬ್ಯಾಟರ್ಸ್​​ ತರಗೆಲೆಗಳಂತೆ ಉದುರಿದ್ರು. ಸಾಲಿಡ್​ ರಿದಮ್​ನಲ್ಲಿರೋ ಅಶ್ವಿನ್​, ಕಾನ್ಪುರದಲ್ಲೂ ವಿಕೆಟ್​ ಬೇಟೆಯಾಡೋದು ಖಚಿತ. ಅಶ್ವಿನ್​​ ಕಾನ್ಪುರದ ರಿಯಲ್​ ಕಿಂಗ್​. ಈ ಸ್ಟೇಡಿಯಂನಲ್ಲಿ ಅದ್ಭುತ ರೆಕಾರ್ಡ್​​​​ ಹೊಂದಿದ್ದಾರೆ.

ಕಾನ್ಪುರದಲ್ಲಿ ಅಶ್ವಿನ್​ ಬೌಲಿಂಗ್
ಕಾನ್ಪುರದಲ್ಲಿ ಈವರೆಗೆ 2 ಟೆಸ್ಟ್​ ಪಂದ್ಯವನ್ನಾಡಿರೋ ಅಶ್ವಿನ್​, 4 ಇನ್ನಿಂಗ್ಸ್​ಗಳಿಂದ 138.5 ಓವರ್​ ಬೌಲಿಂಗ್​ ಮಾಡಿದ್ದಾರೆ. ಒಟ್ಟಾರೆ 16 ವಿಕೆಟ್​ಗಳನ್ನ ಬೇಟೆಯಾಡಿದ್ದು, 132 ರನ್​ ನೀಡಿ 6 ವಿಕೆಟ್​ ಕಬಳಿಸಿರೋದು ಇನ್ನಿಂಗ್ಸ್​ವೊಂದರ ಬೆಸ್ಟ್​ ಸಾಧನೆಯಾಗಿದೆ.

ಕಾನ್ಪುರದಲ್ಲಿ ಮಾಂತ್ರಿಕ ಜಡೇಜಾ ಮೋಡಿ
ಅಶ್ವಿನ್​ ಮಾತ್ರವಲ್ಲ.. ಜಡೇಜಾ ಕೂಡ ಬಾಂಗ್ಲಾ ಟೈಗರ್ಸ್​ ಬೇಟೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಚೆಪಾಕ್ ಟೆಸ್ಟ್​ನಲ್ಲಿ 5 ವಿಕೆಟ್​ ಉರುಳಿಸಿದ ಜಡೇಜಾ ಕಾನ್ಪುರದಲ್ಲಿ ಇನ್ನೂ ಹೆಚ್ಚಿನ ವಿಕೆಟ್​ ಬೇಟೆಯಾಡೋ ವಿಶ್ವಾಸದಲ್ಲಿದ್ದಾರೆ. ಈ ಹಿಂದೆ ಕಾನ್ಪುರದಲ್ಲಿ ಆಡಿರೋ ಟೆಸ್ಟ್​​ಗಳಲ್ಲಿ ಸ್ಪಿನ್​ ಜಾದೂ ಮಾಡಿ, ಬ್ಯಾಟ್ಸ್​ಮನ್​ಗಳನ್ನ ಜಡೇಜಾ ಕಾಡಿದ್ರು. ಆ ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​​ ಇದೀಗ ಜಡ್ಡು ಆತ್ಮವಿಶ್ವಾಸವನ್ನ ಇನ್ನಷ್ಟು ಹೆಚ್ಚಿಸಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಮತ್ತೊಂದು ಚರ್ಚೆ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ..?

ಕಾನ್ಪುರದಲ್ಲಿ ಜಡೇಜಾ ಬೌಲಿಂಗ್
ಕಾನ್ಪುರದಲ್ಲಿ 4 ಇನ್ನಿಂಗ್ಸ್​ಗಳನ್ನಾಡಿರುವ ರವೀಂದ್ರ ಜಡೇಜಾ, 129 ಓವರ್​ ಬೌಲಿಂಗ್​ ಮಾಡಿದ್ದಾರೆ. ಒಟ್ಟಾರೆ 11 ವಿಕೆಟ್​ಗಳನ್ನ ಬೇಟೆಯಾಡಿದ್ದು, 73 ರನ್​ ನೀಡಿ 5 ವಿಕೆಟ್​​ ಕಬಳಿಸಿರೋದು ಇನ್ನಿಂಗ್ಸ್​ ಒಂದರ ಬೆಸ್ಟ್​ ಸಾಧನೆಯಾಗಿದೆ. ಅಶ್ವಿನ್​, ಜಡೇಜಾ ಮಾತ್ರವಲ್ಲ.. ಗ್ರೀನ್​ಪಾರ್ಕ್​ ಸ್ಟೇಡಿಯಂನಲ್ಲಿ ಆಡಿದ ಒಂದೇ ಒಂದು ಟೆಸ್ಟ್​ನಲ್ಲಿ 6 ವಿಕೆಟ್​ಗಳನ್ನ ಬೇಟೆಯಾಡಿದ ರೆಕಾರ್ಡ್​ನ​​ ಅಕ್ಷರ್​ ಪಟೇಲ್​ ಹೊಂದಿದ್ದಾರೆ. ಇನ್ನು, ಹೋಮ್​​ಗ್ರೌಂಡ್​ನಲ್ಲಿ ಮೊದಲ ಟೆಸ್ಟ್​ ಆಡೋ ಕನವರಿಕೆಯಲ್ಲಿರೋ ಕುಲ್​​​ದೀಪ್​ ಯಾದವ್​ನೂ ಕಡೆಗಣಿಸುವಂತಿಲ್ಲ. ಇದೇ ಮೈದಾನದಲ್ಲಿ ಆಡಿ ಬೆಳೆದಿರೋ ಚೈನಾಮನ್​ ಸ್ಪಿನ್ನರ್​​ ಚಾನ್ಸ್​ ಸಿಕ್ರೆ, ಬಾಂಗ್ಲಾನ ಉಡೀಸ್​ ಮಾಡೋ ಲೆಕ್ಕಾಚಾರದಲ್ಲಿದ್ದಾರೆ.

ಒಟ್ಟಿನಲ್ಲಿ, ಸ್ಪಿನ್​ ಅಸ್ತ್ರ ಬಳಸಿ ಬಾಂಗ್ಲಾ ಎದುರಿನ 2ನೇ ಟೆಸ್ಟ್​ ಪಂದ್ಯವನ್ನ ಮೂರೇ ದಿನಕ್ಕೆ ಮುಕ್ತಾಯಗಳಿಸಲು ಟೀಮ್​ ಇಂಡಿಯಾ ಸಜ್ಜಾಗಿದೆ. ಭಾರತ ತಂಡದ ಸ್ಪಿನ್​ ತಂತ್ರಕ್ಕೆ ಬಾಂಗ್ಲಾ ಪ್ರತ್ಯುತ್ತರ ನೀಡುತ್ತಾ? ಅಥವಾ ಸರಂಡರ್​ ಆಗುತ್ತಾ? ಕಾದು ನೋಡಬೇಕಿದೆ.

ಇದನ್ನೂ ಓದಿ:ಮೊದಲ ಪಂದ್ಯ ಗೆದ್ದರೂ ರೋಹಿತ್​ಗೆ ತಪ್ಪದ ಟೆನ್ಶನ್, ಟೆನ್ಶನ್.. ಅದಕ್ಕೆ ದೊಡ್ಡ ಕಾರಣ ಇದೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IND vs BAN 2ನೇ ಟೆಸ್ಟ್​.. ​ಗೇಮ್ ಪ್ಲಾನ್ ಬದಲಾಯಿಸಿದ ಟೀಂ ಇಂಡಿಯಾ.. ಬಾಂಗ್ಲಾಗೆ ಢವಢವ..!

https://newsfirstlive.com/wp-content/uploads/2024/09/IND-vs-BAN-1.jpg

Load More