ಬೆಳಗ್ಗೆ ಆರಂಭ ಆಗಬೇಕಿತ್ತ ಪಂದ್ಯ ಇದುವರೆಗೂ ಶುರು ಆಗಿಲ್ಲ
ಕಾನ್ಪುರದ ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್
ವಿರಾಟ್ ಕೊಹ್ಲಿ, ರೋಹಿತ್ ಸೇರಿ ಯಾರು ಮೈದಾನಕ್ಕೆ ಇಳಿದಿಲ್ಲ
ಬಾಂಗ್ಲಾದೇಶ ಹಾಗೂ ಭಾರತ ನಡುವೆ ನಡೆಯುತ್ತಿರುವ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ಗೆ ಮಳೆ ಅಡ್ಡಿ ಮಾಡಿದೆ. ಹೀಗಾಗಿ 2ನೇ ದಿನದ ಇನ್ನಿಂಗ್ಸ್ ಅನ್ನು ಇದುವರೆಗೂ ಪ್ರಾರಂಭ ಮಾಡಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬ್ಯಾಟಿಂಗ್ಗೆ ಆಗಮಿಸಿದ್ದ ಬಾಂಗ್ಲಾ 3 ವಿಕೆಟ್ಗೆ 107 ರನ್ಗಳನ್ನ ಗಳಿಸಿದೆ. ಮೊದಲ ದಿನವು ಮಳೆ ಬಂದಿದ್ದರಿಂದ ಕೇವಲ 35 ಓವರ್ಗಳನ್ನು ಮಾತ್ರ ಆಡಿಸಲಾಗಿತ್ತು. ಇಂದು ಇನ್ನಿಂಗ್ಸ್ ಆರಂಭಕ್ಕೂ ಮೊದಲೇ ವರುಣ ಎಂಟ್ರಿಕೊಟ್ಟಿದ್ದರಿಂದ ಇದವರೆಗೂ ಪ್ಲೇಯರ್ಸ್ ಮೈದಾನಕ್ಕೆ ಇಳಿದಿಲ್ಲ.
ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಟೀಮ್ ಇಂಡಿಯಾ ಬೌಲರ್ಸ್ ಎದುರಾಳಿಗಳ ವಿಕೆಟ್ ಅನ್ನು ಬೇಗನೆ ಪಡೆದರು. ಆಕಾಶ್ ದೀಪ್ ಬೌಲಿಂಗ್ನಲ್ಲಿ ಜಾಕೀರ್ ಹಸನ್ ಡಕೌಟ್ ಆದರೆ, ಶಾದ್ಮಾನ್ ಇಸ್ಲಾಮ್ ಕೇವಲ 24 ರನ್ಗೆ ಔಟ್ ಆದರು. ಚೆನ್ನೈನಲ್ಲಿ ನಡೆದ ಟೆಸ್ಟ್ ಗೆಲುವಿಗೆ ಕಾರಣರಾಗಿದ್ದ ಆರ್.ಅಶ್ವಿನ್ ಅವರು ನಜ್ಮುಲ್ ಹೊಸೈನ್ ಶಾಂತೋ ವಿಕೆಟ್ ಉರುಳಿಸಿ ಸಂಭ್ರಮಿಸಿದರು. ಸದ್ಯ ಬಾಂಗ್ಲಾ 3 ವಿಕೆಟ್ಗೆ 107 ರನ್ ಗಳಿಸಿದೆ. ಮಳೆ ಬರುತ್ತಿರುವ ಕಾರಣ ಇನ್ನಿಂಗ್ಸ್ ಅನ್ನು ಇನ್ನೂ ಪ್ರಾರಂಭಿಸಿಲ್ಲ ಎಂದು ತಿಳಿದು ಬಂದಿದೆ.
Kanpur test rainy day #indvsban#kanpurtestpic.twitter.com/YGcAxqUw2P
— CricZebra (@criczebra) September 28, 2024
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ