newsfirstkannada.com

×

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿಗೆ ಕಾರಣವಾಗಿದ್ದು ಈ ಆಟಗಾರ..!

Share :

Published October 2, 2024 at 2:55pm

    ಕಾನ್ಪುರದಲ್ಲಿ ಬಾಂಗ್ಲಾ ಟೈಗರ್ಸ್​ಗೆ ಖೆಡ್ಡಾ ತೋಡಿದ್ದು ಯಾರು?

    ಚೆಪಾಕ್​ನಲ್ಲೂ ಕಮಾಲ್​ ಮಾಡಿದ ಲೋಕಲ್​ ಬಾಯ್ ಇವರೇ!

    2 ಟೆಸ್ಟ್, ಬೊಂಬಾಟ್​ ಆಟ, ಸರಣಿ ಶ್ರೇಷ್ಠ ಗೌರವ

ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ರವಿಚಂದ್ರನ್​ ಅಶ್ವಿನ್​ ಮತ್ತೊಮ್ಮೆ ಕೈಚಳಕ ತೋರಿದ್ದಾರೆ. ಮಾಂತ್ರಿಕನ​ ಮೋಡಿಗೆ ಬಾಂಗ್ಲಾ ಟೈಗರ್ಸ್​ ಕಕ್ಕಾಬಿಕ್ಕಿಯಾಗಿದ್ರೆ ಮ್ಯಾಜಿಕ್​ ಮಾಡಿದ ಕೇರಂ ಸ್ಪಿನ್ನರ್​ ಭಾರತದ ಗೆಲುವಿನ ರೂವಾರಿಯಾಗಿದ್ದಾರೆ. ಈ ಗೆಲುವು ಮತ್ತೊಮ್ಮೆ ಅಶ್ವಿನ್​ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್​ ಅನ್ನೋದನ್ನ ಪ್ರೂವ್​ ಮಾಡಿದೆ. ಭಾರತ ಮಾತ್ರ ಮಾತ್ರವಲ್ಲ.. ಈಗ ಅಶ್ವಿನ್ ವಿಶ್ವದ ಶ್ರೇಷ್ಠ ಟೆಸ್ಟ್​ ಕ್ರಿಕೆಟಿಗ.

ಕಾನ್ಪುರದಲ್ಲಿ ಬಾಂಗ್ಲಾ ಟೈಗರ್ಸ್​ಗೆ ಅಶ್ವಿನ್​ ಖೆಡ್ಡಾ
ಕಾನ್ಪುರ ಟೆಸ್ಟ್​ ಪಂದ್ಯದಲ್ಲಿ ಅಶ್ವಿನ್​ ಸ್ಪಿನ್​ ಜಾಲಕ್ಕೆ ಸಿಲುಕಿದ ಬಾಂಗ್ಲಾದೇಶ ತಂಡ ವಿಲವಿಲ ಒದ್ದಾಡಿತು. ಮೊದಲ ಇನ್ನಿಂಗ್ಸ್​ನಲ್ಲಿ ಟೈಟ್​ ಸ್ಪೆಲ್​ ಹಾಕಿದ ಅಶ್ವಿನ್​, 2 ವಿಕೆಟ್​ಗಳನ್ನ ಬೇಟೆಯಾಡಿದ್ರು. ಬಳಿಕ 2ನೇ ಇನ್ನಿಂಗ್ಸ್​ಗಳಲ್ಲಿ ಮೂವರು ಪ್ರಮುಖ ಬ್ಯಾಟರ್ಸ್ ಅಶ್ವಿನ್​ ಖೆಡ್ಡಾಗೆ ಸುಲಭಕ್ಕೆ ಬಿದ್ರು. ಪಂದ್ಯದಲ್ಲಿ 5 ವಿಕೆಟ್​ ಕಬಳಿಸಿ ಮಿಂಚಿ ಮ್ಯಾನ್​ ಆಫ್​ ದ ಮ್ಯಾಚ್​ ಆಗಿ ಹೊರಹೊಮ್ಮಿದ್ರು.

ಇದನ್ನೂ ಓದಿ:ಬೂಮ್ರಾ ಯಶಸ್ಸಿನ ಹಿಂದೆ ಇರೋದು ರೋಹಿತ್ ಶರ್ಮಾನಾ, ವಿರಾಟ್​ ಕೊಹ್ಲಿನಾ..?

ಚೆಪಾಕ್​ನಲ್ಲಿ ಕಮಾಲ್​ ಮಾಡಿದ ಲೋಕಲ್​ ಬಾಯ್
ಹೋಮ್​​​ಗ್ರೌಂಡ್​​ ಚೆಪಾಕ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್​ನಲ್ಲೂ ಅಶ್ವಿನ್​, ಆಲ್​​ರೌಂಡ್​ ದರ್ಬಾರ್​ ನಡೆಸಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ವಿಕೆಟ್​ ಲೆಸ್​ ಆದರೂ ಬ್ಯಾಟಿಂಗ್​ನಲ್ಲಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾದ್ರು. 2ನೇ ಇನ್ನಿಂಗ್ಸ್​​ನಲ್ಲಿ ಅಶ್ವಿನ್​ ಮಾಡಿದ ಸ್ಪಿನ್​ ಮ್ಯಾಜಿಕ್​ಗೆ ಬಾಂಗ್ಲಾ ತಬ್ಬಿಬ್ಬಾಗಿತ್ತು. ಪಂದ್ಯಶ್ರೇಷ್ಟ ಪರ್ಫಾಮೆನ್ಸ್​ ನೀಡಿದ್ದ ಕೇರಂ ಸ್ಪಿನ್ನರ್ 6 ವಿಕೆಟ್​ ಬೇಟೆಯಾಡಿದ್ರು.

ಸರಣಿ ಶ್ರೇಷ್ಠ ಗೌರವ
ಬಾಂಗ್ಲಾ ವಿರುದ್ಧದ 2 ಟೆಸ್ಟ್​ ಪಂದ್ಯಗಳಲ್ಲಿ ಅಶ್ವಿನ್​ ಬೊಂಬಾಟ್​ ಪ್ರದರ್ಶನ ನೀಡಿದ್ರು. ಬ್ಯಾಟ್​ ಹಿಡಿದು 114 ರನ್​​ ಗಳಿಸಿದ್ರೆ, 11 ವಿಕೆಟ್​​ಗಳನ್ನ ಬೇಟೆಯಾಡಿದ್ರು. ಈ ಮೂಲಕ ಮ್ಯಾನ್​ ಆಫ್​ ದ ಸೀರಿಸ್​ ಗೌರವಕ್ಕೂ ಪಾತ್ರರಾದ್ರು.

ಇದೊಂದು ದೊಡ್ಡ ಮೈಲಿಗಲ್ಲು. ನಾನು ತುಂಬಾ ಸಂತಸಗೊಂಡಿದ್ದೇನೆ. ಯಾಕಂದ್ರೆ, ನೀವು ಪ್ರೀತಿಸುವ ಆಟದಿಂದ ಅಂತಿಮವಾಗಿ ಏನನ್ನಾದರೂ ಬಯಸುತ್ತೀರಿ. ಈ ಎಲ್ಲಾ ಸಂಖ್ಯೆಗಳು ನಾನು ಆಟದ ಕಡೆಗೆ ನೀಡುತ್ತಿರುವ ಸಂತೋಷದಿಂದ ಬಂದಿವೆ. ನಾನು ಯಾವಾಗಲೂ ಹೇಳುವಂತೆ, ನನ್ನ ಆಟವನ್ನ ಪ್ರೀತಿಸುತ್ತೇನೆ -ಅಶ್ವಿನ್

ಬಾಂಗ್ಲಾ ಎದುರು ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದ ಅಶ್ವಿನ್​, ಹೊಸ ದಾಖಲೆಯನ್ನೇ ಬರೆದ್ರು. ಟೆಸ್ಟ್​​ ಸರಣಿಗಳಲ್ಲಿ ವಿಶ್ವ ಕ್ರಿಕೆಟ್​ನಲ್ಲೇ ಹೆಚ್ಚು ಬಾರಿ ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ಮೀರಿಸಿದ್ದಾರೆ. ಇಬ್ಬರೂ 11 ಬಾರಿ ಪ್ರಶಸ್ತಿ ಗೆದ್ದಿದ್ರೂ, ಆಡಿದ ಸರಣಿಗಳ ಲೆಕ್ಕಾಚಾರ ಹಾಕಿದ್ರೆ, ಸ್ಪಿನ್​ ದಿಗ್ಗಜರಾದ ಶೇನ್​ವಾರ್ನ್​, ಮುತ್ತಯ್ಯ ಮುರಳೀಧರನ್​ಗಿಂತ ಅಶ್ವಿನ್​ ದಿ ಬೆಸ್ಟ್​ ಎನಿಸಿದ್ದಾರೆ.

ಟೆಸ್ಟ್​​ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ
ಕರಿಯರ್​ನಲ್ಲಿ 61 ಟೆಸ್ಟ್​ ಸರಣಿಗಳನ್ನಾಡಿ ಮುತ್ತಯ್ಯ ಮುರಳೀಧರನ್​ 11 ಬಾರಿ ಮ್ಯಾನ್​​ ಆಫ್​​ ಸೀರಿಸ್​​ ಪ್ರಶಸ್ತಿ ಗೆದ್ದಿದ್ದಾರೆ. ಆದ್ರೆ, 13 ಸರಣಿಗಳಲ್ಲೇ ಅಶ್ವಿನ್​ 11 ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಶೇನ್​ವಾರ್ನ್​ 46 ಸರಣಿಗಳಿಂದ 8 ಬಾರಿ ಸರಣಿ ಶ್ರೇಷ್ಟ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:RCB ವಿರುದ್ಧ ಸೋತಾಗ ಕೋಪದಲ್ಲಿ TV ಒಡೆದು ಹಾಕಿದ ಧೋನಿ! ಅಚ್ಚರಿಯ ಘಟನೆ ಬಿಚ್ಚಿಟ್ಟ ಪತ್ರಕರ್ತ

ಭಾರತದ ರಿಯಲ್​ ಮ್ಯಾಚ್​ ವಿನ್ನರ್​!
ಈ ಹಿಂದೆ ಸಚಿನ್​ ತೆಂಡುಲ್ಕರ್​​, ಈಗ ವಿರಾಟ್​ ಕೊಹ್ಲಿ ಹೀಗೆ ಹಲವು ಕ್ರಿಕೆಟರ್​ಗಳನ್ನ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಎನ್ನಲಾಗುತ್ತದೆ. ಅಸಲಿಗೆ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್​ ಅಶ್ವಿನ್​.. ಮ್ಯಾನ್ ಆಫ್​ ದ ಸೀರಿಸ್​ ಅವಾರ್ಡ್​​ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.

ಟೆಸ್ಟ್​​ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ
ಟೆಸ್ಟ್​ನಲ್ಲಿ ಭಾರತದ ಪರ 43 ಸರಣಿಗಳನ್ನಾಡಿ 11 ಬಾರಿ ಅಶ್ವಿನ್ ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದು ಅಗ್ರಸ್ಥಾನದಲ್ಲಿದ್ದಾರೆ. 42 ಸರಣಿಗಳಿಂದ 5 ಬಾರಿ ಗೆದ್ದಿರೋ ಸೆಹ್ವಾಗ್​ 2, 74 ಸರಣಿಗಳನ್ನಾಡಿ 5 ಬಾರಿ ಗೆದ್ರಿರುವ ಸಚಿನ್​ ತೆಂಡುಲ್ಕರ್​ 3ನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ 38 ಸರಣಿಗಳಿಂದ 4 ಪ್ರಶಸ್ತಿ ಗೆದ್ದಿರುವ ಅನಿಲ್​ ಕುಂಬ್ಳೆ 4ನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಕಪಿಲ್ ದೇವ್​​, ಹರ್ಭಜನ್ ಸಿಂಗ್​, ರಾಹುಲ್​ ದ್ರಾವಿಡ್​​ 4 ಬಾರಿ ಸರಣಿ ಶ್ರೇಷ್ಟ ಕಿರೀಟ ಗೆದ್ದಿದ್ರೆ, ಕೊಹ್ಲಿ ಕೇವಲ 3 ಬಾರಿ ಈ ಸಾಧನೆ ಮಾಡಿದ್ದಾರೆ.

ಒಟ್ಟಿನಲ್ಲಿ ಬಾಂಗ್ಲಾ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಅಶ್ವಿನ್,​ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್​ ಅನ್ನೋದು ಮತ್ತೊಮ್ಮೆ ಪ್ರೂವ್​ ಆಗಿದೆ. ಮಂದೆಯೂ ಇದೇ ಪರ್ಫಾಮೆನ್ಸ್​ ನೀಡೋ ಹುರುಪು ಕೂಡ ಅಶ್ವಿನ್​ರಲ್ಲಿದೆ. 38ರ ವಯಸ್ಸಿನಲ್ಲೂ ಬಾಲ್​ ಹಿಡಿದು ಮೆಜಿಶಿಯನ್​​ನಂತೆ ಮ್ಯಾಜಿಕ್​ ಮಾಡ್ತಿರೋ ಮಾಂತ್ರಿಕ ಅಶ್ವಿನ್​ ಒಂದು ಸಲಾಂ ಹೇಳಲೇಬೇಕು.

ಇದನ್ನೂ ಓದಿ:ಕನ್ನಡಿಗ ಭರ್ಜರಿ ಬ್ಯಾಟಿಂಗ್​​​; ಮೈದಾನದಲ್ಲೇ KL ರಾಹುಲ್​​ಗೆ ಕಿಸ್​ ಕೊಟ್ಟ ಕೊಹ್ಲಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿಗೆ ಕಾರಣವಾಗಿದ್ದು ಈ ಆಟಗಾರ..!

https://newsfirstlive.com/wp-content/uploads/2024/09/ASHWIN_BOWLING.jpg

Load More