ಬಲಿಷ್ಠ ಸೈನ್ಯ ಸಜ್ಜುಗೊಳಿಸಿದ ಭಾರತಕ್ಕೆ ಬಿಗ್ ಟೆನ್ಷನ್..!
ಕ್ಯಾಪ್ಟನ್-ಕೋಚ್ಗೆ ಸವಾಲಾದ ಆ ನಾಲ್ಕು ವಿಚಾರ
ಯಾರ ಮೇಲಿದೆ ರೋಹಿತ್ ಶರ್ಮಾ ಕೃಪಾಕಟಾಕ್ಷ..?
ತವರಿನಲ್ಲಿ ಟೀಮ್ ಇಂಡಿಯಾ ಹುಲಿಗಳು ಬಾಂಗ್ಲಾ ಹುಲಿಗಳನ್ನ ಸುಲಭವಾಗಿ ಬೇಟೆಯಾಡುವ ಲೆಕ್ಕಚಾರದಲ್ಲಿದೆ. ಅದಕ್ಕಾಗಿ ಸೈನ್ಯವು ಸಜ್ಜಾಗಿದೆ. ಆದ್ರೀಗ ಆ ಸೈನ್ಯವೇ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಗಂಭೀರ್ ಅವರನ್ನು ಸಂಕಷ್ಟಕ್ಕೆ ದೂಡಿದೆ.
ಬಾಂಗ್ಲಾ ಬೇಟೆಯಾಡೋ ಭಾರತಕ್ಕೆ ಟೆನ್ಷನ್ ಟೆನ್ಷನ್
ಭಾರತ-ಬಾಂಗ್ಲಾದೇಶ ಟೆಸ್ಟ್ ದಂಗಲ್ ಸಮೀಪಿಸಿದೆ. ಸಪ್ಟೆಂಬರ್ 19 ರಿಂದ ಉಭಯ ದೇಶಗಳ ನಡುವೆ ರೆಡ್ಬಾಲ್ ವಾರ್ ಆರಂಭಗೊಳ್ಳಲಿದ್ದು, ಎಲ್ಲರ ಚಿತ್ತ ಈ ಸರಣಿ ಮೇಲೆ ನೆಟ್ಟಿದೆ. ಬಿಸಿಸಿಐ ಆಯ್ಕೆ ಸಮಿತಿ ಏನೋ ಬಾಂಗ್ಲಾ ಸಂಹಾರಕ್ಕೆ ಬಲಿಷ್ಠ 16 ಸದಸ್ಯರ ಸೈನ್ಯವನ್ನ ಪ್ರಕಟಿಸಿದೆ. ಆದ್ರೆ ಆಡುವ ಹನ್ನೊಂದರ ಬಳಗದ ಆಯ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ಕೋಚ್ ಗೌತಮ್ ಗಂಭೀರ್ ದೊಡ್ಡ ತಲೆನೋವಾಗಿದೆ. ನಾಲ್ಕು ಸ್ಥಾನಕ್ಕೆ ಇನ್ನಿಲ್ಲದ ಪೈಪೋಟಿ ಏರ್ಪಟ್ಟಿದ್ದು, ಈ ಕಗ್ಗಂಟನ್ನ ಬಿಡಿಸೋದು ಟೀಮ್ ಮ್ಯಾನೇಜ್ಮೆಂಟ್ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ: 6, 0, 6, 6, 6, 6 ! ಬದೋನಿಯ ಒಂದೇ ಓವರ್ನಲ್ಲಿ 5 ಸಿಕ್ಸರ್ ಬಾರಿಸಿದ ಮಯಾಂಕ್ -VIDEO
ರಾಹುಲ್ vs ಸರ್ಫರಾಜ್.. ಯಾರಿಗೆ ಚಾನ್ಸ್..?
ಬಾಂಗ್ಲಾ ಎದುರಿನ ಮೊದಲ ಟೆಸ್ಟ್ನಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಹಾಗೂ ಕಿಂಗ್ ಕೊಹ್ಲಿ ಆಡುವುದು ಬಹುತೇಕ ಕನ್ಫರ್ಮ್. 5ನೇ ಕ್ರಮಾಂಕದಲ್ಲಿ ಆಡೋದ್ಯಾರು ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಈ ಸ್ಲಾಟ್ ಮೇಲೆ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಸರ್ಫರಾಜ್ ಖಾನ್ ಕಣ್ಣಿಟ್ಟಿದ್ದಾರೆ. ಸರ್ಫರಾಜ್ ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಇಂಪ್ರೆಸ್ಸಿವ್ ಆಟವಾಡಿದ್ರೆ, ರಾಹುಲ್ ಕೂಡ ನಂಬಿಗಸ್ಥ ಪ್ಲೇಯರ್. ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದು, ಯಾರನ್ನ ಆಡಿಸ್ಬೇಕು ಅನ್ನೋದು ಕ್ಯಾಪ್ಟನ್ ರೋಹಿತ್ರನ್ನ ಚಿಂತೆಗೀಡು ಮಾಡಿದೆ.
ಪಂತ್ vs ಧ್ರುವ್ ಜುರೆಲ್..ಯಾರು ಉತ್ತಮ..?
ಟೀಮ್ ಮ್ಯಾನೇಜ್ಮೆಂಟ್ಗಿರೋ ಎರಡನೇ ಬಿಗ್ಗೆಸ್ಟ್ ಚಾಲೆಂಜ್ ಅಂದ್ರೆ ವಿಕೆಟ್ ಕೀಪಿಂಗ್ ಆಯ್ಕೆ. ಒಂದು ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ ಇದೆ. ರಿಷಬ್ ಪಂತ್ 21 ತಿಂಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಕಮ್ಬ್ಯಾಕ್ಗೆ ಎದುರು ನೋಡ್ತಿದ್ದಾರೆ. ಇನ್ನು ಪಂತ್ ಅಲಭ್ಯತೆಯಲ್ಲಿ ಆಡಿದ್ದ ದೃವ್ ಜುರೆಲ್ ಕೂಡ ರೇಸ್ನಲ್ಲಿದ್ದಾರೆ. ಇಬ್ಬರ ಪೈಕಿ ಪಂತ್ ಹೆಸರು ಮುಂಚೂಣಿಯಲ್ಲಿದ್ರು, ಜುರೆಲ್ ಆಯ್ಕೆಯನ್ನ ಕಡೆಗಣಿಸುವಂತಿಲ್ಲ. ಯಾಕಂದ್ರೆ ಇಂಗ್ಲೆಂಡ್ ವಿರುದ್ಧ 190 ರನ್ ಗಳಿಸಿ ಆಯ್ಕೆಯ್ನ ಸಮರ್ಥಿಸಿಕೊಂಡಿದ್ರು. ಹೀಗಾಗಿ ಪಂತ್ ವರ್ಸಸ್ ಜುರೆಲ್ ಆಯ್ಕೆ ನಿರ್ಧರಿಸೋದು ಕಠಿಣವೆನಿಸಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಬೇಸರ; ಸ್ಟಾರ್ ಆಲ್ರೌಂಡರ್ ಕ್ರಿಕೆಟ್ಗೆ ಗುಡ್ಬೈ
3ನೇ ಸ್ಪಿನ್ನರ್ ಅಕ್ಷರ್ ಪಟೇಲಾ?
ಬಾಂಗ್ಲಾ ಸರಣಿಯಲ್ಲಿ ಭಾರತಕ್ಕೆ 3ನೇ ಸ್ಪಿನ್ನರ್ ಆಯ್ಕೆಯೂ ಕಠಿಣವೆನಿಸಿದೆ. ಲೆಜೆಂಡ್ರಿ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಆಡುವುದು ಖಚಿತ. ಇಬ್ಬರಿಗೆ ಸಾಥ್ ಕೊಡಲು ಮತ್ತೋರ್ವ ಸ್ಪಿನ್ನರ್ ಯಾರು? ಉತ್ತರ ಸಸ್ಪೆನ್ಸ್ ಆಗಿದೆ. ಅಕ್ಷರ್ ಪಟೇಲ್ ಬೆಸ್ಟ್ ಚಾಯ್ಸ್ ನಿಜ. ಆದ್ರೆ ಕುಲ್ದೀಪ್ ಯಾದವ್ ಕೂಡ ವಿಶ್ವದ ಬೆಸ್ಟ್ ಸ್ಪಿನ್ನರ್. ಹಾಗಾಗಿ ಈ ಇಬ್ಬರಲ್ಲಿ ಒಬ್ಬರ ಆಯ್ಕೆ ಸುಲಭವಿಲ್ಲ. ಕ್ಯಾಪ್ಟನ್ ಹಾಗೂ ಕೋಚ್ ಯಾರಿಗೆ ಮಣೆ ಹಾಕ್ತಾರೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
ಸಿರಾಜ್-ಆಕಾಶ್ ದೀಪ್ ನಡ್ವೆ ಫೈಟ್
ರೆಡ್ಬಾಲ್ ಬ್ಯಾಟಲ್ನಲ್ಲಿ ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾ ವೇಗದ ಬೌಲಿಂಗ್ ಅನ್ನ ಲೀಡ್ ಮಾಡಲಿದ್ದಾರೆ. ಆದ್ರೆ 2ನೇ ವೇಗಿ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ನಡ್ವೆ ಫೈಟ್ ಏರ್ಪಟ್ಟಿದೆ. ಇಬ್ಬರೂ ಇಂಗ್ಲೆಂಡ್ ವಿರುದ್ಧ ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡಿದ್ರು. ಸಿರಾಜ್ 6 ವಿಕೆಟ್ ಕಬಳಿಸಿದ್ರೆ, ಆಕಾಶ್ ದೀಪ್ ಡೆಬ್ಯು ಪಂದ್ಯದಲ್ಲಿ 3 ವಿಕೆಟ್ ಬೇಟೆಯಾಡಿದ್ರು. ಇದೀಗ ಟೀಮ್ ಮ್ಯಾನೇಜ್ಮೆಂಟ್ ಚೆಪಾಕ್ ಟೆಸ್ಟ್ನಲ್ಲಿ ಯಾರ ಮೇಲೆ ನಂಬಿಕೆ ಇಡುತ್ತೋ ಅನ್ನೋದು ಸಸ್ಪೆನ್ಸ್ ಆಗಿದೆ.
ಇದನ್ನೂ ಓದಿ: ಉಪನಾಯಕನ ವಿಚಾರದಲ್ಲಿ BCCI ಜಾಣ ನಡೆ; ಭಾರೀ ಚರ್ಚೆ ಆಗ್ತಿದೆ ಈ ನಿರ್ಧಾರ
ಒಂದೆಡೆ ಅಳೆದು ತೂಗಿ ತಂಡವನ್ನ ಪ್ರಕಟಿಸಿದ್ರೂ ಟೀಮ್ ಮ್ಯಾನೇಜ್ಮೆಂಟ್ಗೆ ಟೆನ್ಷನ್ ತಪ್ಪಿಲ್ಲ. 16ರ ಪೈಕಿ ಬಲಿಷ್ಠ ಪ್ಲೇಯಿಂಗ್-11 ಆಯ್ಕೆ ಕಬ್ಬಿಣದ ಕಡಲೆಯಾಗಿದೆ. ಕ್ಯಾಪ್ಟನ್ ರೋಹಿತ್ ಹಾಗೂ ಹೆಡ್ಕೋಚ್ ಗೌತಮ್ ಗಂಭೀರ್ ಈ ಕಗ್ಗಂಟನ್ನ ಹೇಗೆ ಬಿಡಿಸ್ತಾರೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್