newsfirstkannada.com

×

ಅಯ್ಯರ್​​​ಗೆ ಡೋರ್​ ಕ್ಲೋಸ್ ಸಂದೇಶ ಕೊಟ್ಟ ಬಿಸಿಸಿಐ​; ವಿಲನ್ ಆಗಿದ್ದು ಮತ್ತೊಬ್ಬ ಮುಂಬೈ ಆಟಗಾರ..!

Share :

Published September 10, 2024 at 10:25am

Update September 10, 2024 at 10:27am

    ಕೆಲ ಆಟಗಾರರನ್ನ ಕಡೆಗಣಿಸಿತಾ ಸೆಲೆಕ್ಷನ್ ಕಮಿಟಿ..?

    ಶ್ರೇಯಸ್​ ಅಯ್ಯರ್ ಡೋರ್ ಕ್ಲೋಸ್ ಆಯ್ತಾ..?

    ಶ್ರೇಯಸ್​​ಗೆ ಮುಂಬೈಕರ್ ಸರ್ಫರಾಜ್ ವಿಲನ್​..?

ಬಾಂಗ್ಲಾ ಎದುರಿನ ಮೊದಲ ಟೆಸ್ಟ್​ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. 16 ಸದ್ಯಸರ ಬಲಾಢ್ಯ ತಂಡವನ್ನೇ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆಯೋ ನಿರೀಕ್ಷೆಯಲ್ಲಿದ್ದವರಿಗೆ ಆಯ್ಕೆ ಸಮಿತಿ ಶಾಕ್ ನೀಡಿದೆ.

ಸೆಪ್ಟೆಂಬರ್‌ 19ರಿಂದ ನಡೆಯಲಿರುವ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಅನುಭವಿ ಹಾಗೂ ಯುವಕರನ್ನೊಳಗೊಂಡ ಬಲಿಷ್ಠ ತಂಡಕ್ಕೆ ಆಯ್ಕೆ ಸಮಿತಿ ಮಣೆ ಹಾಕಿದೆ. ಬಲಾಢ್ಯ ತಂಡವನ್ನು ಪ್ರಕಟಿಸಿದ ಹೊರತಾಗಿಯೂ ಸೆಲೆಕ್ಷನ್ ಕಮಿಟಿ, ಕೆಲ ಆಟಗಾರರನ್ನ ಕಡೆಗಣಿಸಿದೆ. ತಂಡದಿಂದ ಕೈಬಿಟ್ಟು ಪರೋಕ್ಷ ಗೇಟ್​ಪಾಸ್ ಸಂದೇಶ ನೀಡ್ತಾ ಎಂಬ ಅನುಮಾನವನ್ನು ಮೂಡಿಸಿದೆ.

ಶ್ರೇಯಸ್​ ಅಯ್ಯರ್ ಡೋರ್ ಕ್ಲೋಸ್ ಆಯ್ತಾ?
2024, ಫೆಬ್ರವರಿ 5, ಶ್ರೇಯಸ್​ ಅಯ್ಯರ್​​ನ ಕೊನೆ ಟೆಸ್ಟ್​ ಮ್ಯಾಚ್. ಸತತ ವೈಫಲ್ಯ ಅನುಭವಿಸಿದ್ದ ಶ್ರೇಯಸ್​ ಅಯ್ಯರ್​​ಗೆ, ಇಂಗ್ಲೆಂಡ್ ಎದುರಿನ 2ನೇ ಟೆಸ್ಟ್ ಪಂದ್ಯದ ಬೆನ್ನಲ್ಲೇ ಕೊಕ್ ನೀಡಲಾಗಿತ್ತು. ಅಷ್ಟೇ ಅಲ್ಲ.! ದೇಶಿ ಟೂರ್ನಿಯಲ್ಲಿ ಆಡಿ ಕಮ್​​ಬ್ಯಾಕ್ ಮಾಡುವ ಸಲಹೆಯೂ ನೀಡಲಾಗಿತ್ತು. ಆದ್ರೀಗ ಇದೆಲ್ಲವೂ ಉಲ್ಟಾ ಆಗಿದೆ. ಕಮ್​​ಬ್ಯಾಕ್ ಕನಸು ಕಮರಿದೆ. ಇದಕ್ಕೆಲ್ಲಾ ಕಾರಣ ಶ್ರೇಯಸ್​ ಆಟದ ವೈಖರಿ ಹಾಗೂ ಸರ್ಫರಾಜ್​​​ ಖಾನ್..

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಬೇಸರ; ಸ್ಟಾರ್ ಆಲ್​ರೌಂಡರ್ ಕ್ರಿಕೆಟ್​ಗೆ ಗುಡ್​ಬೈ

ಶ್ರೇಯಸ್​​ಗೆ ಯಾಕಿಲ್ಲ ಚಾನ್ಸ್..?

  • 2023ರಿಂದ ಟೆಸ್ಟ್​ ​ಕ್ರಿಕೆಟ್​​ನಲ್ಲಿ ಶ್ರೇಯಸ್ ಅಯ್ಯರ್​ ವಿಫಲ
  • ಬುಚ್ಚಿಬಾಬು ಟೂರ್ನಿಯಲ್ಲೂ ಶ್ರೇಯಸ್ ಅಯ್ಯರ್​ ವೈಫಲ್ಯ
  • ದುಲೀಪ್ ಟ್ರೋಫಿಯಲ್ಲಿ ಇಂಪ್ರೆಸ್ ಮಾಡದ ಶ್ರೇಯಸ್​ ಅಯ್ಯರ್
  • ಟೆಸ್ಟ್​ ತಂಡದ ಮಿಡಲ್ ಆರ್ಡರ್​ನಲ್ಲಿ ಹೆಚ್ಚಿದ ಕಾಂಪಿಟೇಷನ್
  • ಕೆ.ಎಲ್.ರಾಹುಲ್, ಸರ್ಫರಾಜ್ ಕನ್ಸಿಸ್ಟೆನ್ಸಿ ಅಯ್ಯರ್​ಗೆ ಮುಳುವು

ಒಂದೇ ಪಂದ್ಯಕ್ಕೆ ಭಾರವಾದ್ರಾ ಪಡಿಕ್ಕಲ್?
ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್​ ಸರಣಿಯ ಕೊನೆ ಪಂದ್ಯದಲ್ಲಿ ಡೆಬ್ಯು ಮಾಡಿದ್ದ ಪಡಿಕ್ಕಲ್, ಸಿಕ್ಕ ಮೊದಲ ಅವಕಾಶವನ್ನೇ ಎರಡೂ ಕೈಗಳಿಂದ ಚಾಚಿಕೊಂಡಿದ್ದರು. ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದ ಪಡಿಕ್ಕಲ್, ದುಲೀಪ್ ಟ್ರೋಫಿಯಲ್ಲೂ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿದ್ದರು. ವಿರಾಟ್​ ಕಮ್​​ಬ್ಯಾಕ್, ಪಡಿಕ್ಕಲ್ ಟೆಸ್ಟ್​ ತಂಡದ ಸ್ಥಾನಕ್ಕೆ ಮುಳುವಾಯ್ತು.

ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ

ಮುಖೇಶ್​​ಗೆ ಮುಚ್ಚಿತಾ ಟೀಮ್ ಇಂಡಿಯಾ ಬಾಗಿಲು?
ಮುಖೇಶ್​ ಕುಮಾರ್, ಒಂದೇ ವರ್ಷದಲ್ಲಿ ಟೀಮ್ ಇಂಡಿಯಾ ಪರ ಮೂರು ಫಾರ್ಮೆಟ್ ಆಡಿದ ಕ್ರಿಕೆಟರ್. ಆದ್ರೀಗ ಈತನಿಗೆ ಟೀಮ್ ಇಂಡಿಯಾ ಬಾಗಿಲು ಮುಚ್ಚಿದೆಯಾ ಎಂಬ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ. ಇಂಗ್ಲೆಂಡ್ ಎದುರಿನ ಟೆಸ್ಟ್​ ಸರಣಿಯಲ್ಲಿ ಆಡಿದ್ದ ಮುಖೇಶ್, ಹೇಳಿಕೊಳ್ಳುವಂತ ಪರ್ಫಾಮೆನ್ಸ್ ನೀಡಿರಲಿಲ್ಲ. ಮೊನ್ನೆ ನಡೆದ ದುಲೀಪ್ ಟ್ರೋಫಿಯಲ್ಲಿ 5 ವಿಕೆಟ್ ಪಡೆದು ಮಿಂಚಿದ್ದಾರೆ. ಇದರ ಹೊರತಾಗಿಯೂ ಮುಖೇಶ್​​ಗೆ ಟೆಸ್ಟ್​ ತಂಡದಲ್ಲಿ ಚಾನ್ಸ್ ಇಲ್ಲ. ಇಷ್ಟೇ ಅಲ್ಲ! ಜಿಂಬಾಬ್ವೆ ಟಿ20 ಸರಣಿಯಲ್ಲಿ ಬಿಟ್ರೆ, ಉಳಿದ್ಯಾವ ಸರಣಿಯಲ್ಲೂ ಮುಖೇಶ್​​ಗೆ ಚಾನ್ಸ್ ನೀಡಿಲ್ಲ. ಹೀಗಾಗಿ ಗಂಭೀರ್ ಆಗಮನದ ಬೆನ್ನಲ್ಲೇ ಮುಖೇಶ್​​, ತೆರೆ ಮರೆಗೆ ಸರೀತಿದ್ದಾರಾ ಅನ್ನೋ ಅನುಮಾನ ಹುಟ್ಟಿಸಿದೆ.

ಸೈನಿಗಿಲ್ಲ ಸ್ಥಾನ.. ಅರ್ಷ್​ದೀಪ್​ಗೆ ಇಲ್ಲ ಬುಲಾವ್!
2021ರ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯದ ನವದೀಪ್ ಸೈನಿ, 3 ವರ್ಷದ ಬಳಿಕ ಕಮ್​​ಬ್ಯಾಕ್ ಕನಸು ಕಂಡಿದ್ದರು. ದುಲೀಪ್ ಟ್ರೋಫಿಯಲ್ಲಿ ಅದ್ಭುತ ದಾಳಿ ಸಂಘಟಿಸಿದ್ದ ಸೈನಿ, ಬೌಲಿಂಗ್​ನಲ್ಲಿ 5 ವಿಕೆಟ್ ಪಡೆದು ಮಿಂಚಿದರೆ. ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿದ್ದರು. ಇದೇ ಕಾರಣಕ್ಕೆ ಟೆಸ್ಟ್ ತಂಡ ಸೇರುವ ಕನಸು ಕಂಡಿದ್ದರು. ಆದ್ರೆ, ಈ ಆಸೆ ಸಹ ಕಮರಿದೆ. ಟಿ20 ವಿಶ್ವಕಪ್ ಹಾಗೂ ಲಂಕಾ ಸರಣಿಯಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿದ್ದ ಅರ್ಷ್​ದೀಪ್​, ಮೊಹಮ್ಮದ್ ಶಮಿಯ ಅಲಭ್ಯತೆಯಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯೋ ಲೆಕ್ಕಚಾರದಲ್ಲಿದ್ದರು. ಆದ್ರೆ, ಕಳೆದ 2 ವರ್ಷಗಳಿಂದ ಹೆಚ್ಚು ರೆಡ್ ಬಾಲ್ ಕ್ರಿಕೆಟ್​ ಆಡದ ಕಾರಣಕ್ಕೆ ಟೆಸ್ಟ್​ ತಂಡದ ಬಾಗಿಲು ತೆರೆಯದಂತಾಗಿದೆ. ಒಟ್ನಲ್ಲಿ, ಬಾಂಗ್ಲಾ ಎದುರಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, 2ನೇ ಟೆಸ್ಟ್‌ ಪಂದ್ಯಕ್ಕಾದರೂ ಈ ಯಂಗ್ ಸ್ಟರ್​ಗಳಿಗೆ ಅವಕಾಶ ನೀಡ್ತಾರಾ ಕಾದು ನೋಡಬೇಕು.

ಇದನ್ನೂ ಓದಿ:ಪವಿತ್ರಾ ಗೌಡ ಬಂಡವಾಳ ಬಿಚ್ಚಿಟ್ಟ ದರ್ಶನ್ ಪತ್ನಿ; ನ್ಯೂಸ್​ಫಸ್ಟ್​ನಲ್ಲಿ ಹೇಳಿಕೆಯ Exclusive ಡಿಟೇಲ್ಸ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಯ್ಯರ್​​​ಗೆ ಡೋರ್​ ಕ್ಲೋಸ್ ಸಂದೇಶ ಕೊಟ್ಟ ಬಿಸಿಸಿಐ​; ವಿಲನ್ ಆಗಿದ್ದು ಮತ್ತೊಬ್ಬ ಮುಂಬೈ ಆಟಗಾರ..!

https://newsfirstlive.com/wp-content/uploads/2024/03/Shreyas-Iyer.jpg

Load More