newsfirstkannada.com

×

ಟೀಂ ಇಂಡಿಯಾದಲ್ಲಿ ಮತ್ತೊಂದು ಚರ್ಚೆ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ..?

Share :

Published September 27, 2024 at 7:41am

    ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾರು ಬೆಸ್ಟ್..?

    ಟೀಮ್ ಇಂಡಿಯಾಗೆ ಟಾಪ್ ಆರ್ಡರ್ ಕಳವಳ

    ಬ್ಯಾಟಿಂಗ್ ಸರಾಸರಿ ಕುಸಿತದ ಹಿಂದಿದೆ ಕಾರಣ

ಟೀಮ್ ಇಂಡಿಯಾದ ಬ್ಯಾಟಿಂಗ್​ ಸ್ಟ್ರೆಂಥ್​ ಏನು ಅಂದ್ರೆ ಒಂದು ಕ್ಷಣ ಯೋಚಿಸದೇ ಟಾಪ್ ಆರ್ಡರ್​ ಅನ್ನೋ ಉತ್ತರ ಬರುತ್ತೆ. ಈ ಉತ್ತರ ಈಗ ನಿಜಕ್ಕೂ ಸುಳ್ಳಾಗಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಆರ್ಡರ್​ನಲ್ಲಿ ಟಾಪ್ ಆರ್ಡರ್​ಗಿಂತ, ಲೋವರ್​ ಆರ್ಡರ್​​ ಇಂಪಾರ್ಟೆಂಟ್​ ಆಗಿ ಬದಲಾಗಿದೆ.

ಟಾಪ್ ಆರ್ಡರ್​.. ಟೀಮ್ ಇಂಡಿಯಾ ಬ್ಯಾಟಿಂಗ್​ ಲೈನ್​ಆಪ್​ನ ಮೇನ್ ಸ್ಟ್ರೆಂಥ್.. ಯಾವುದೇ ಕಂಡೀಷನ್ಸ್​ ಆಗಲಿ, ಎಂಥಹ ಬೌಲಿಂಗ್ ಲೈನ್​​​​​​​​​ ಆಪ್​ ಆಗಿರಲಿ, ದೇಶ ಇರಲಿ, ವಿದೇಶವೇ ಆಗಿರಲಿ. ಟೀಮ್ ಇಂಡಿಯಾದ ಟಾಪ್ ಆರ್ಡರ್​​​​​​​​ ಬ್ಯಾಟರ್​​​​ಗಳು ಗುಡುಗಿದ್ರೆ, ಎದುರಾಳಿ ಮಟಾಶ್ ಆಗೋದು ಗ್ಯಾರಂಟಿ ಅನ್ನೋ ಮಾತಿತ್ತು. ಕಾಲ ಕಳೆದಂತೆ ಈ ಮಾತು ಹುಸಿಯಾಗ್ತಿದೆ.

ಇದನ್ನೂ ಓದಿ:ಮೊದಲ ಪಂದ್ಯ ಗೆದ್ದರೂ ರೋಹಿತ್​ಗೆ ತಪ್ಪದ ಟೆನ್ಶನ್, ಟೆನ್ಶನ್.. ಅದಕ್ಕೆ ದೊಡ್ಡ ಕಾರಣ ಇದೆ

ಚೆನ್ನೈನಲ್ಲಿ ನಡೆದ ಬಾಂಗ್ಲಾ ಎದುರಿನ ಮೊದಲ ಟೆಸ್ಟ್​ನಲ್ಲಿ ಘಟಾನುಘಟಿ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದ್ದಾರೆ. ತಂಡ ನೆಚ್ಚಿಕೊಂಡಿದ್ದ ಟಾಪ್ ಆರ್ಡರ್​​ ಬ್ಯಾಟರ್​​ಗಳೇ ಸುಲಭದ ತುತ್ತಾಗಿದ್ದಾರೆ. ಈ ವೀಕ್​ನೆಸ್​ ಟೀಮ್ ಇಂಡಿಯಾದಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

ಟಾಪ್ ಆರ್ಡರ್ V/S ಲೋವರ್ ಆರ್ಡರ್​..!

ಟೀಮ್ ಇಂಡಿಯಾದ ಟಾಪ್ ಆರ್ಡರ್ ವರ್ಸಸ್ ಲೋವರ್ ಆರ್ಡರ್​. ಈ ಎರಡರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆ ಬಂದ್ರೆ, ಸಹಜವಾಗೇ ಕ್ರಿಕೆಟ್ ಫ್ಯಾನ್ಸ್ ಆಯ್ಕೆ ಟಾಪ್ ಆರ್ಡರ್​ ಆಗಿರುತ್ತೆ. ಆದ್ರೀಗ ಇದು ಬದಲಾಗುವ ಕಾಲ ಸನ್ನಿಹಿತವಾಗಿದೆ. ಟೀಮ್ ಇಂಡಿಯಾದ ಟಾಪ್ ಆರ್ಡರ್, ವಿಶ್ವ ಕ್ರಿಕೆಟ್​ನ ಮೋಸ್ಟ್​ ಡೇಂಜರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ರೋಹಿತ್​ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್​ ಕೊಹ್ಲಿ, ರಿಷಭ್ ಪಂತ್​ರಂಥ ಟಾಪ್​​ ಕ್ಲಾಸ್ ಬ್ಯಾಟರ್​ಗಳಿದ್ದಾರೆ. ಎಂಥದ್ದೇ ಸವಾಲನ್ನ ಮೆಟ್ಟಿ ನಿಲ್ಲುವ ತಾಕತ್ತಿದೆ. 2021ರ ಬಳಿಕ ಟೀಮ್ ಇಂಡಿಯಾದಲ್ಲಿ ಈ ಟಾಪ್ ಕ್ಲಾಸ್ ಬ್ಯಾಟರ್​​ಗಳ ಬ್ಯಾಟಿಂಗ್​ ದರ್ಬಾರ್​ಗಿಂತ, ಲೋವರ್ ಆರ್ಡರ್ ಬ್ಯಾಟರ್​ಗಳ ದರ್ಬಾರ್ ಜೋರಾಗಿದೆ.

ಲೋವರ್ ಆರ್ಡರ್ ಬ್ಯಾಟಿಂಗ್ ಸರಾಸರಿಯೇ ಉತ್ತಮ
ಟೀಮ್ ಇಂಡಿಯಾದ ಟಾಪ್ ಆರ್ಡರ್​ಗಿಂತ ಲೋವರ್ ಆರ್ಡರ್​​ ಬ್ಯಾಟಿಂಗ್ ಬೊಂಬಾಟ್​ ಅಂದ್ರೆ, ನಿಜಕ್ಕೂ ನಂಬಲು ಕಷ್ಟಕರ. 2021ರಿಂದ ಟೀಮ್ ಇಂಡಿಯಾದ ಬ್ಯಾಟಿಂಗ್ ನೋಡಿದ್ರೆ ಟಾಪ್​​-5ಗಿಂತ ಲೋವರ್ ಆರ್ಡರ್​​​ನ 6 ರಿಂದ 8ರ ವರೆಗಿನ​ ಆಟಗಾರರ ಆಟವೇ ಅತ್ಯುತ್ತಮವಾಗಿದೆ. ​ಹೋಮ್ ಕಂಡೀಷನ್ಸ್​ನಲ್ಲಿ ಟಾಪ್ ಆರ್ಡರ್​ನ ಬ್ಯಾಟಿಂಗ್ ಅವರೇಜ್​ ಅನ್ನೇ ಲೋವರ್ ಆರ್ಡರ್​ನ ಮೂವರು ಬ್ಯಾಟರ್​ಗಳು ಮೀರಿಸಿದ್ದಾರೆ.

ಇದನ್ನೂ ಓದಿ:ಅಶ್ವಿನ್ ಶತಕ ವೈಭವಕ್ಕೆ ರಿಷಬ್ ಪಂತ್ ಮಾಡಿದ ಪಾಠ ಕಾರಣ..! ಸತ್ಯ ಬಿಚ್ಚಿಟ್ಟ ಸ್ಟಾರ್..!

ಟಾಪ್​ ಆರ್ಡರ್ V/S ಲೋ. ಆರ್ಡರ್
2021ರಿಂದ ಟೀಮ್ ಇಂಡಿಯಾದ ಟಾಪ್-5 ಬ್ಯಾಟರ್​ಗಳು 37.4ರ ಸರಾಸರಿಯಲ್ಲಿ 5428 ರನ್ ಗಳಿಸಿದ್ದಾರೆ. ಈ ಪೈಕಿ 13 ಶತಕ, 23 ಅರ್ಧಶತಕ ದಾಖಲಿಸಿದ್ದಾರೆ. ಇದೇ ಅವಧಿಯಲ್ಲಿ 6ರಿಂದ 8ನೇ ಕ್ರಮಾಂಕದ ಮೂವರು ಬ್ಯಾಟರ್​ಗಳು 38.2ರ ಬ್ಯಾಟಿಂಗ್ ಅವರೇಜ್​ನಲ್ಲಿ 2753 ರನ್ ಕಲೆ ಹಾಕಿದ್ದಾರೆ. 4 ಶತಕ, 18 ಅರ್ಧಶತಕ ದಾಖಲಿಸಿದ್ದಾರೆ. ಟಾಪ್​-5 ಬ್ಯಾಟರ್​ಗಳಿಗೆ ಹೋಲಿಸಿದ್ರೆ ಕೆಳ ಕ್ರಮಾಂಕದ ಆಟಗಾರರ ರನ್​ ಕಡಿಮೆಯಾಗಿರಬಹುದು. ಬ್ಯಾಟಿಂಗ್ ಅವರೇಜ್​ನಲ್ಲಿ ಟಾಪ್-5 ಬ್ಯಾಟರ್​ಗಳನ್ನೇ ಮೀರಿಸಿದ್ದಾರೆ. ಟಾಪ್ ಆರ್ಡರ್​ಗಿಂತ ಲೋವರ್ ಆರ್ಡರ್ ಬೆಸ್ಟ್​ ಅನ್ನೋದನ್ನ ಈ ಅಂಕಿ ಅಂಶಗಳೇ ನಿರೂಪಿಸಿವೆ.

ಟೀಮ್ ಇಂಡಿಯಾಗೆ ಟಾಪ್ ಆರ್ಡರ್ ಕಳವಳ
ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟಿಂಗ್ ಅವರೇಜ್ ಕುಸಿತವಾಗಿದೆ. ಇದಕ್ಕೆ ಪ್ರಮುಖ ಕಾರಣ ತಂಡದ ಟಾಪ್​-5ನಲ್ಲಿ ಆಗ್ತಿರುವ ಬದಲಾವಣೆ ಒಂದಾದ್ರೆ, ಮತ್ತೊಂದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್​ಮನ್​​ ಗಿಲ್​​ ನೀಡ್ತಿರೋ ಇನ್​​ಕನ್ಸಿಸ್ಟೆಂಟ್​ ಪ್ರದರ್ಶನ. ಮಿಡಲ್ ಆರ್ಡರ್​ಗೆ ಖಾಯಂ ಬ್ಯಾಟರ್​ಗಳು ಇಲ್ಲದಿರುವುದು ಸಹ ಬ್ಯಾಟಿಂಗ್ ಅವರೇಜ್​ ಕುಸಿತಕ್ಕೆ ಪ್ರಮುಖ ರೀಸನ್ ಆಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಾದರು, ತಪ್ಪಗಳನ್ನ ತಿದ್ದಿಕೊಂಡು ಟಾಪ್ ಆರ್ಡರ್​ ಟಾಪ್ ಕ್ಲಾಸ್ ಪರ್ಫಾಮೆನ್ಸ್​ ನೀಡಬೇಕಿದೆ. ಇದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯವೂ ಆಗಿದೆ.

ಇದನ್ನೂ ಓದಿ:16 ವರ್ಷಗಳ ಇತಿಹಾಸದಲ್ಲಿ RCB ಇಬ್ಬರು ಆಟಗಾರರನ್ನು ರಿಲೀಸ್ ಮಾಡಿಯೇ ಇಲ್ಲ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾದಲ್ಲಿ ಮತ್ತೊಂದು ಚರ್ಚೆ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ..?

https://newsfirstlive.com/wp-content/uploads/2024/09/TEAM_INDIA_NEW.jpg

Load More