newsfirstkannada.com

×

ಗಿಲ್​ ಡಕೌಟ್​, ರೋಹಿತ್, ಕೊಹ್ಲಿ 6 ರನ್​ಗೆ ಸುಸ್ತು.. ರಾಹುಲ್ ಸೇರಿ 4 ಮುತ್ತುಗಳ ಬ್ಯಾಟಿಂಗ್ ಹೇಗಿತ್ತು?

Share :

Published September 20, 2024 at 12:19pm

    4 ಮುತ್ತುಗಳು ಔಟ್ ಆಗಿದ್ದು ಹೇಗೆ, ಓಪನರ್ಸ್​ ಅಟ್ಟರ್ ಫ್ಲಾಪ್

    ಹೀನಾಯ ಬ್ಯಾಟಿಂಗ್ ಮಾಡುತ್ತೆಂದು ಫ್ಯಾನ್ಸ್​ ಊಹಿಸಿರಲಿಲ್ಲ

    8 ಎಸೆತ ಎದುರಿಸಿದ ಪಂಜಾಬ್​​ ಕಾ ಪುತ್ತರ್​, ಡಕೌಟ್ ಆಗಿದ್ದೇಗೆ?

ಟೀಮ್ ಇಂಡಿಯಾದ ಬ್ಯಾಟಿಂಗ್ ನೋಡಿದ್ಮೇಲೆ. ಪ್ರತಿ ಟೀಮ್ ಇಂಡಿಯಾ ಅಭಿಮಾನಿ ಖಂಡಿತ. ಇದೇನಾ ನಮ್​ ಬ್ಯಾಟಿಂಗ್ ಎಂಬ ಪ್ರಶ್ನೆ ಮನದಲ್ಲಿ ಹುಟ್ಟದಿರಲ್ಲ. ಅದ್ರಲ್ಲೂ ಈ 4 ಮುತ್ತುಗಳ ಆಟವಂತೂ ಕೇಳುವಂತೆ ಇಲ್ಲ. ಆ ಆಣಿಮುತ್ತುಗಳು ಬ್ಯಾಟಿಂಗ್ ಕಥೆ ಹೇಗಿತ್ತು?.

14 ರನ್​​ಗೆ 1 ವಿಕೆಟ್.. 28ಕ್ಕೆ 2 ವಿಕೆಟ್.. 34ಕ್ಕೆ 3 ವಿಕೆಟ್.. 10 ಓವರ್​ಗಳ ಅಂತರದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕಳೆದುಕೊಂಡ ರೀತಿ ಇದು. ನಿಜಕ್ಕೂ ಟೀಮ್ ಇಂಡಿಯಾದ ಟಾಪ್ ಆರ್ಡರ್​, ಇಷ್ಟು ಹೀನಾಯ ಬ್ಯಾಟಿಂಗ್ ಮಾಡುತ್ತೆ ಅನ್ನೋ ಊಹೆ ಇರಲಿಲ್ಲ. ಯಾಕಂದ್ರೆ, ಬಲಿಷ್ಠ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್​​​ಅಪ್​ನಲ್ಲಿದ್ದ ಆಣಿಮುತ್ತು. ಆದ್ರೆ, ಆ ಅಣಿ ಮುತ್ತುಗಳೇ ಅಟ್ಟರ್​ ಫ್ಲಾಫ್ ಬ್ಯಾಟಿಂಗ್ ನಡೆಸಿದರು. ಆ 4 ಮುತ್ತುಗಳ ಬ್ಯಾಟಿಂಗ್ ಕಥೆಯ ವ್ಯಥೆ ಇಲ್ಲಿದೆ.

ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್​​ರೌಂಡರ್..!​ ಏನದು

ರೋಹಿತ್ ಶರ್ಮಾ; 19 ಎಸೆತ 6 ರನ್

ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ, ರೆಡ್​ ಸಾಯಿಲ್​ ಪಿಚ್​​ನಲ್ಲಿ ಅಬ್ಬರಿಸ್ತಾರೆ ಅನ್ನೋ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದ್ರೆ, ಹಿಟ್​ಮ್ಯಾನ್, ಬಾಂಗ್ಲಾ ವೇಗಿಗಳ ಮಾರಕ ಎಸೆತಗಳಿಗೆ ಪರದಾಡಿದರು. ಹಸನ್ ಮೊಹ್ಮದ್ ಎಸೆದ ಆಫ್​ ಸ್ಟಂಪ್​ ಎಸೆತವನ್ನು ಕೆಣಕಿದ ರೋಹಿತ್, ಸ್ಲಿಪ್​ನಲ್ಲಿದ್ದ ಶಾಂಟ್ಯೋಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಶುಭ್​ಮನ್ ಗಿಲ್; ಡಕೌಟ್​

ಆರಂಭಿಕ ಅಘಾತ ಅನುಭವಿಸಿದ್ದ ಟೀಮ್ ಇಂಡಿಯಾಗೆ ಶುಭಮನ್​​​ ಗಿಲ್, ಶ್ರೀರಕ್ಷೆ ಆಗ್ತಾರೆ ಅನ್ನೋ ನಂಬಿಕೆ ಇತ್ತು. ಆದ್ರೆ, 8 ಎಸೆತಗಳನ್ನ ಎದುರಿಸಿದ ಪಂಜಾಬ್​​ ಕಾ ಪುತ್ತರ್​, ಅದೇ ಹಸನ್ ಮೊಹಮ್ಮದ್ ಬೌಲಿಂಗ್​ನಲ್ಲಿ ಡಕೌಟ್ ಆಗಿ ಪೆವಿಲಿಯನ್​ಗೆ ಹೆಜ್ಜೆ ಹಾಕಿದ್ರು.

ಕಿಂಗ್ ಕೊಹ್ಲಿ; 6 ಎಸೆತಕ್ಕೆ 06 ರನ್ಸ್

9 ತಿಂಗಳ ಬಳಿಕ ಟೆಸ್ಟ್​ ಅಖಾಡಕ್ಕಿಳಿದ ವಿರಾಟ್, ಉತ್ತಮ ಟಚ್​ನಲ್ಲಿರುವಂತೆ ಕಂಡರು. ಟೀಮ್ ಇಂಡಿಯಾದ ತಡೆಗೋಡೆ ಆಗ್ತಾರೆ ಅನ್ನೋ ನಿರೀಕ್ಷೆಯನ್ನು ಹುಟ್ಟಿಹಾಕಿದ್ರು. ಆದ್ರೆ, ವಿರಾಟ್​ ವಿಕ್ನೇಸ್​ ಮೇಲೆ ದಾಳಿ ನಡೆಸಿದ ಹಸನ್, ಆರೇ ಎಸೆತಕ್ಕೆ ಪೆವಿಲಿಯನ್ ಹಾದಿ ತೋರಿದ್ರು.

ಇದನ್ನೂ ಓದಿ: ಪದವೀಧರರಿಗೆ ಸರ್ಕಾರಿ ಕೆಲಸ.. ಸ್ಯಾಲರಿ ₹95,000; ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು?

ಕೆ.ಎಲ್ ರಾಹುಲ್;​ 52 ಎಸೆತ 16 ರನ್​, 1 ಬೌಂಡರಿ

6ನೇ ಕ್ರಮಾಂಖದಲ್ಲಿ ಬ್ಯಾಟಿಂಗ್​​ಗೆ ಇಳಿದ ರಾಹುಲ್, ತಾಳ್ಮೆಯ ಬ್ಯಾಟಿಂಗ್ ನಡೆಸಿದರು. ಬಾಂಗ್ಲಾ ಬೌಲರ್​ಗಳ ಕೆಲ ಕಾಲ ಕಾಡಿದರು. ಆದ್ರೆ, ಕೆ.ಎಲ್.ರಾಹುಲ್​ರ ಅತಿಯಾದ ಸ್ಲೋ ಬ್ಯಾಟಿಂಗ್​​​ ಮುಳ್ಳಾಯ್ತು. 52 ಎಸೆತಗಳಲ್ಲಿ ಜಸ್ಟ್​ 16 ರನ್ ಗಳಿಸಿದ ರಾಹುಲ್, ಗಲ್ಲಿಯಲ್ಲೇ ಕ್ಯಾಚ್ ನೀಡಿ ನಿರಾಸೆ ಮೂಡಿಸಿದ್ರು.

ಆದ್ರೆ, ಈ ಮುತ್ತುಗಳು ಪೆವಿಲಿಯನ್ ಸೇರಿದ ಬಳಿಕ ಒಂದಾದ ಜಡೇಜಾ, ಅಶ್ವಿನ್ ಜೋಡಿ, ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​​ಗಳಿಗೆ ಬ್ಯಾಟಿಂಗ್ ಪಾಠ ಮಾಡಿದ್ರು. ಉತ್ತಮ ಜೊತೆ ಆಟವಾಡಿದ ಈ ಜೋಡಿ, ಟೀಮ್ ಇಂಡಿಯಾದ ಮಾನ ಉಳಿಸಿದರು. ಇವರ ಬ್ಯಾಟಿಂಗ್ ನೋಡಿದ್ಮೇಲಾದರೂ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಜವಾಬ್ದಾರಿಯು ಇನ್ನಿಂಗ್ಸ್​ ಕಟ್ಟುವ ಕೆಲಸ ಮಾಡ್ತಾರಾ ಅನ್ನೋದನ್ನ ಕಾದುನೋಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗಿಲ್​ ಡಕೌಟ್​, ರೋಹಿತ್, ಕೊಹ್ಲಿ 6 ರನ್​ಗೆ ಸುಸ್ತು.. ರಾಹುಲ್ ಸೇರಿ 4 ಮುತ್ತುಗಳ ಬ್ಯಾಟಿಂಗ್ ಹೇಗಿತ್ತು?

https://newsfirstlive.com/wp-content/uploads/2024/09/ROHIT_KL_RAHUL.jpg

Load More