newsfirstkannada.com

7 ಪಂದ್ಯಗಳಲ್ಲೂ ಕೊಹ್ಲಿ ಫ್ಲಾಫ್​ ಶೋ.. ವಿರಾಟ ರೂಪಕ್ಕೆ ಅಡ್ಡಿಯಾಗುತ್ತಿರೊದೇನು? ಸಂಕಟದಲ್ಲಿ ರನ್​ಮಷೀನ್​

Share :

Published June 28, 2024 at 11:31am

  ಸೆಮಿಸ್​​ ಸಮರದಲ್ಲೂ ಡಬಲ್​ ಡಿಜಿಟ್​ ಕ್ರಾಸ್​ ಮಾಡದ ಕಿಂಗ್​ ಕೊಹ್ಲಿ

  ವಿರಾಟ್​ ಕೊಹ್ಲಿ ವೈಫಲ್ಯ ಕಂಡು ಫ್ಯಾನ್ಸ್​ಗೆ ಭಾರೀ ನಿರಾಸೆ

  7 ಪಂದ್ಯ, ಕಿಂಗ್​ ಕೊಹ್ಲಿ ಸರಾಸರಿ10.71 ಅಂದ್ರೆ ನಂಬ್ತೀರಾ?

ಒಂದಲ್ಲ.. ಎರಡಲ್ಲ.. 7 ಪಂದ್ಯ.. 7 ಫ್ಲಾಫ್​ ಶೋ. ಟಿ20 ವಿಶ್ವಕಪ್​ನ ಸಾಮ್ರಾಟ ಅನಿಸಿಕೊಂಡಿದ್ದ ವಿರಾಟ್​ ಕೊಹ್ಲಿಯ ಪರ್ಫಾಮೆನ್ಸ್​ ಇದು. ಇದನ್ನ ಕಥೆ ಅನ್ನಬೇಕೋ, ವ್ಯಥೆ ಅನ್ನಬೇಕೋ ಗೊತ್ತಾಗ್ತಿಲ್ಲ. ಕಿಂಗ್​ ಕೊಹ್ಲಿ ಆಟ ಟೀಮ್​ ಇಂಡಿಯಾವನ್ನಂತೂ ಸಂಕಷ್ಟಕ್ಕೆ ದೂಡಿದ್ದು ಸುಳ್ಳಲ್ಲ.

ಅದೇ ರಾಗ.. ಅದೇ ಹಾಡು.. ಅಭಿಮಾನಿಗಳ ಇಟ್ಟಿದ್ದ ಬೆಟ್ಟದಂಥಾ ನಿರೀಕ್ಷೆ ನಿನ್ನೆಯೂ ನುಚ್ಚು ನೂರಾಯ್ತು. ಕ್ರಿಕೆಟ್​ ಲೋಕದ ಸುಲ್ತಾನ, ರನ್​ಮಷಿನ್​ ಕಿಂಗ್​ ಕೊಹ್ಲಿ, ಸೆಮಿಸ್​​ ಸಮರದಲ್ಲೂ ಡಬಲ್​ ಡಿಜಿಟ್​ ಕ್ರಾಸ್​ ಮಾಡಲಿಲ್ಲ. ಇದರಿಂದ, ಗಯಾನದಲ್ಲಿ ವಿರಾಟ್​​ ಘರ್ಜಿಸ್ತಾರೆ ಅನ್ನೋ ನಿರೀಕ್ಷೆ ಇಟ್ಟಿದ್ದ ಫ್ಯಾನ್ಸ್​ಗೆ ಆದ ನಿರಾಸೆ ಅಷ್ಟಿಷ್ಟಲ್ಲ.

ಇದನ್ನೂ ಓದಿ: ನಾವು ಹೊಂದಿಸಿಕೊಂಡ ರನ್​ ಆಟದ ಯಶಸ್ಸಿನ ಕಥೆಯಾಯ್ತು; ರೋಹಿತ್​ ಶರ್ಮಾ

ಕಿಂಗ್​ ಕೊಹ್ಲಿಗೆ ನಾಕೌಟ್ ಪಂಚ್​.!

ಐಸಿಸಿ ವಿಶ್ವಕಪ್​ ಟೂರ್ನಿ ಅಂತಾ ಬಂದ್ರೆ ಕೊಹ್ಲಿಯೇ ಕಿಂಗ್​. ಟಿ20 ವಿಶ್ವಕಪ್​ ಟೂರ್ನಿಗಂತೂ ವಿರಾಟನೇ ಸುಲ್ತಾನ. ನಾಕೌಟ್​ ಗೇಮ್​ಗಳಲ್ಲಂತೂ ಕೊಹ್ಲಿ ವೈಫಲ್ಯ ಅನ್ನೋದನ್ನೇ ಕಂಡಿಲ್ಲ. ಇದೆಲ್ಲಾ ಇಷ್ಟು ವರ್ಷಗಳಿಂದ ಇದ್ದ ಮಾತು. ಆದರೆ, ಈ ವಿಶ್ವಕಪ್​ನಲ್ಲಿ ಎಲ್ಲಾ ಬದಲಾಗ್ತಿದೆ. ಟೂರ್ನಿಯಲ್ಲಿ ಅಟ್ಟರ್​​ಫ್ಲಾಪ್​ ಶೋ ನೀಡ್ತಾ ಇರೋ ಕೊಹ್ಲಿ, ನಾಕೌಟ್​​ ಗೇಮ್​ನಲ್ಲೂ ಮುಗ್ಗರಿಸಿದ್ರು.

ವಿಶ್ವಕಪ್​​ನಲ್ಲಿ ರನ್​ಮಷೀನ್​ಗೆ ರನ್​ ಬರ.!

ಸೆಮಿಫೈನಲ್​ ಕದನದಲ್ಲಿ ಬಿಗ್​ಸ್ಕೋರ್​ ಲೆಕ್ಕಾಚಾರದಲ್ಲೇ ಕೊಹ್ಲಿ ಕಣಕ್ಕಿಳಿದ್ರು. ಸಾಲಿಡ್​​ ಸಿಕ್ಸರ್​ ಸಿಡಿಸಿ ಅದ್ಭುತ ಆರಂಭವನ್ನೇ ಪಡೆದುಕೊಂಡ್ರು. ಆ ಸಿಕ್ಸರ್​ ನೋಡಿದ ಪ್ರತಿಯೊಬ್ಬರೂ ಹಳೆ ಖದರ್​ಗೆ ಕಿಂಗ್​ ಬಂದಾಯ್ತು ಅಂದುಕೊಂಡ್ರು. ಆದರೆ, ನಂತರದ 2ನೇ ಎಸೆತಕ್ಕೆ ಎಲ್ಲರ ಊಹೆ ಸುಳ್ಳಾಯ್ತು. ಕೇವಲ ಒಂಬತ್ತು ರನ್​ಗಳಿಗೆ ಕೊಹ್ಲಿ ಆಟ ಅಂತ್ಯವಾಯ್ತು. ರಿಸೀ ಟಾಪ್ಲೆ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆಗಿ ನಿರ್ಗಮಿಸಿದ್ರು.

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ಕ್ರಿಕೆಟ್ ಲೋಕದ ಸುಲ್ತಾನನಿಗೆ ‘ಎಡಗೈ’ ಕಂಟಕ.!

ಗಯಾನದಲ್ಲಿ ನಡೆದ ಸೆಮಿಸ್​​ ಸಮರದಲ್ಲಿ ಕೊಹ್ಲಿ ಔಟಾಗಿದ್ದು, ಎಡಗೈ ವೇಗಿ ರೀಸಿ ಟಾಪ್ಲೆಗೆ. ಎಸೆತವನ್ನ ಜಡ್ಜ್​ ಮಾಡುವಲ್ಲಿ ಕೊಹ್ಲಿ ಫೇಲ್​ ಆದ್ರೆ, ಫರ್ಫೆಕ್ಟ್​ ಲೆಂಥ್​ನಲ್ಲಿ ಬಿದ್ದ ಪರ್ಫೆಕ್ಟ್​ ಎಸೆತ ಲೆಗ್​ಸ್ಟಂಫ್​ಗೆ ಬಡಿದು ಬೆಲ್ಸ್​​ ಎಗರಿಸ್ತು. ಇದೊಂದು ಬಾರಿ ಮಾತ್ರವಲ್ಲ. ಈ ವರ್ಷದಲ್ಲೇ ಟಿ20 ಫಾರ್ಮೆಟ್​ನಲ್ಲಿ ಲೆಫ್ಟ್​​ ಆಫ್​ ಪೇಸರ್ಸ್​​ ಎದುರು ವಿರಾಟ್ ಕೊಹ್ಲಿ​​ ರನ್​ಗಳಿಕೆಗೆ ತಿಣುಕಾಡಿದ್ದಾರೆ.

2024ರಲ್ಲಿ ಎಡಗೈ ವೇಗಿಗಳ ಎದುರು ಕೊಹ್ಲಿ

ಎಸೆತ 21
ರನ್​​ 21
ಡಾಟ್​ 12
ಔಟ್​ 03
4/6 0/2

2024ರಲ್ಲಿ ಆಡಿದ ಟಿ20 ಪಂದ್ಯಗಳ ಪೈಕಿ ಒಟ್ಟಾರೆ ಎಡಗೈ ವೇಗಿಗಳ 21 ಎಸೆತಗಳನ್ನ ಕೊಹ್ಲಿ ಎದುರಿಸಿದ್ದು, 21 ರನ್​ಗಳಿಸಿದ್ದಾರೆ. 12 ಎಸೆತಗಳಲ್ಲಿ ರನ್​ಗಳಿಸಲು ವಿಫಲರಾಗಿರುವ ಕೊಹ್ಲಿ 3 ಬಾರಿ ಔಟ್​ ಆಗಿದ್ದು, 2 ಸಿಕ್ಸರ್​​ ಸಿಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮನೆಯೇ ನಾಶವಾಯಿತು.. ಟಿಟಿ ವಾಹನ ಅಪಘಾತದಲ್ಲಿ ಅಣ್ಣನ ಮೃತದೇಹ ಕಂಡು ತಮ್ಮನ ಆಕ್ರಂದನ

ವಿಶ್ವಕಪ್​ನಲ್ಲಿ ಏನಾಯ್ತು ಕಿಂಗ್​ ಕೊಹ್ಲಿಗೆ.?

ಅದೇನಾಯ್ತೋ ಗೊತ್ತಿಲ್ಲ.. ಐಪಿಎಲ್​ ಟೂರ್ನಿಯಲ್ಲಿ ರನ್​ ಕೊಳ್ಳೆ ಹೊಡೆದಿದ್ದ ಕಿಂಗ್​ ಕೊಹ್ಲಿ, ವಿಶ್ವಕಪ್​ ಅಖಾಡದಲ್ಲಿ ಅಟ್ಟರ್​ ಫ್ಲಾಫ್​ ಶೋ ನೀಡ್ತಿದ್ದಾರೆ. ಗ್ರೂಪ್​ ಸ್ಟೇಜ್​ನಲ್ಲಿ ಸಿಂಗಲ್​ ಡಿಜಿಟ್​ ಡಾಟೋಕೆ ಪರದಾಡಿದ ಕೊಹ್ಲಿ, ಸೂಪರ್​​ 8ನಲ್ಲೂ ಮಂಕಾದ್ರು. ಇದೀಗ ಸೆಮಿಫೈನಲ್​ನಲ್ಲೂ ಮುಗ್ಗರಿಸಿದ್ದಾರೆ. ನಿಮಗೆ ಆಶ್ವರ್ಯ ಅನ್ನಿಸಬಹುದು.. ಈ ವಿಶ್ವಕಪ್​​​ ಟೂರ್ನಿಯಲ್ಲಿ 7 ಪಂದ್ಯವನ್ನಾಡಿರೋ ಕಿಂಗ್​ ಕೊಹ್ಲಿ ಸರಾಸರಿ ಕೇವಲ 10.71 ಅಂದ್ರೆ ನೀವು ನಂಬಲೇಬೇಕು.

T20 ವಿಶ್ವಕಪ್​ನಲ್ಲಿ ಕೊಹ್ಲಿ

T20 ವಿಶ್ವಕಪ್​ ಟೂರ್ನಿಯಲ್ಲಿ 7 ಇನ್ನಿಂಗ್ಸ್​ಗಳನ್ನಾಡಿರುವ ವಿರಾಟ್​ ಕೊಹ್ಲಿ 75 ರನ್​ ಸಿಡಿಸಿದ್ದಾರೆ. ಕೇವಲ 100ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ದು, 2 ಬಾರಿ ಡಕೌಟ್​ ಆಗಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಭೀಕರ ಅಪಘಾತ 13 ಸಾವು.. ಮತ್ತಷ್ಟು ಸಾವು ನೋವಿನ ಆತಂಕ.. ಮೃತರ ಗುರುತು ಪತ್ತೆ..

ಚುಟುಕು ವಿಶ್ವಕಪ್​ನ ಸಾಮ್ರಾಟನಾಗಿ ಮೆರೆದಾಡಿದ್ದ ವಿರಾಟ್​ ಕೊಹ್ಲಿ, ಈ ಬಾರಿಯ ಟೂರ್ನಿಯಲ್ಲಿ ರನ್​ಗಳಿಕೆಗೆ ಪರದಾಡಿದ್ದಾರೆ. ಅಬ್ಬರಿಸಿ ಬೊಬ್ಬರಿತಾ ಇದ್ದ ಕೊಹ್ಲಿ, ಸುಲಭದ ಎಸೆತಗಳಿಗೂ ಕಕ್ಕಾಬಿಕ್ಕಿಯಾಗಿ ಸೈಲೆಂಟಾಗಿ ಪೆವಿಲಿಯನ್​ ಸೇರಿದ್ದಾರೆ. ಆಡಿದ 7 ಪಂದ್ಯಗಳಲ್ಲೂ ಫೇಲ್​ ಆಗಿರೋ ವಿರಾಟ್​​, ಫೈನಲ್​ ಪಂದ್ಯದಲ್ಲಾದ್ರೂ ಅಬ್ಬರಿಸಿಬೇಕಿದೆ. ಸೀನಿಯರ್​ ಆಟಗಾರನಾಗಿ ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7 ಪಂದ್ಯಗಳಲ್ಲೂ ಕೊಹ್ಲಿ ಫ್ಲಾಫ್​ ಶೋ.. ವಿರಾಟ ರೂಪಕ್ಕೆ ಅಡ್ಡಿಯಾಗುತ್ತಿರೊದೇನು? ಸಂಕಟದಲ್ಲಿ ರನ್​ಮಷೀನ್​

https://newsfirstlive.com/wp-content/uploads/2024/06/Kohli-Dravid.jpg

Load More