newsfirstkannada.com

ವರ್ಲ್ಡ್ ​​ಕಪ್​ನಲ್ಲಿ ರಗಢ್​​​ ಪರ್ಫಾಮೆನ್ಸ್.. ಸೆಮಿಫೈನಲ್​​ನಲ್ಲಿ ಈ ಪ್ಲೇಯರ್ಸ್​​ನಿಂದ ಇಂಗ್ಲೆಂಡ್​ಗೆ ಬಿಗ್​ ಶಾಕ್

Share :

Published June 27, 2024 at 12:33pm

Update June 27, 2024 at 12:42pm

    ಬೌಲರ್​​​ಗಳೇ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ಸ್​..!

    ಗ್ರೂಪ್​​​ ಸ್ಟೇಜ್​ನಿಂದ ಸೂಪರ್​​​-8 ತನಕ ಮಿಂಚಿನ ದಾಳಿ

    ಇಂಗ್ಲೆಂಡ್​ ತಂಡವನ್ನ ಸುಲಭಕ್ಕೆ ಮಣಿಸುವ ಕಾನ್ಫಿಡೆನ್ಸ್​​​​

ಭಾರತ- ಇಂಗ್ಲೆಂಡ್​ ಸೆಮಿಫೈನಲ್​​​​​​​​​​​​​ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ರೋಹಿತ್​ ಪಡೆ ಇಂಗ್ಲೆಂಡ್​ ತಂಡವನ್ನ ಸುಲಭಕ್ಕೆ ಮಣಿಸುವ ಫುಲ್ ಕಾನ್ಫಿಡೆನ್ಸ್​​​​ನಲ್ಲಿದೆ. ಇದಕ್ಕೆ ಕಾರಣ ಬೆಂಕಿ ಬೌಲರ್​ಗಳು. ಭಾರತದ ತೂಫಾನ್​​​ ಬೌಲರ್​ಗಳು ಸಿಡಿದ್ದೆದ್ರೆ, ಆಂಗ್ಲರು ಗಂಟುಮೂಟೆ ಕಟ್ಟೋದು ಗ್ಯಾರೆಂಟಿ​​​​​​.

ಇಂದು ಆಂಗ್ಲರಿಗೆ ಖೆಡ್ಡಾ ತೋಡ್ತಾರಾ ಭಲೇ ಬೌಲರ್ಸ್​..?

T20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ ಜಬರ್ದಸ್ತ್​​​​​ ಪ್ರದರ್ಶನ ನೀಡ್ತಿದೆ. ಒಂದೂ ಸೋಲನ್ನೇ ಕಾಣದೆ ಸೆಮಿಫೈನಲ್​​ ರೇಸ್​​​ಗೆ ಎಂಟ್ರಿಕೊಟ್ಟಿದೆ. ಇದಕ್ಕೆಲ್ಲ ಕಾರಣ ಬೌಲರ್ಸ್​ ಅಂದ್ರು ತಪ್ಪಲ್ಲ. ಈ ವಿಶ್ವಕಪ್​​​ನಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಅತ್ಯಾದ್ಭುತ ಪ್ರದರ್ಶನ ನೀಡ್ತಿದ್ದಾರೆ. ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸ್ತಿದ್ದಾರೆ.

ಇದನ್ನೂ ಓದಿ: ಟಾಸ್ ಗೆದ್ದು ತಪ್ಪು ನಿರ್ಣಯ ತೆಗೆದುಕೊಂಡ ರಶೀದ್ ಖಾನ್.. ಕೋಚ್ ಮುಂದೆ ಹೋಗಿ ಗಳಗಳನೇ ಕಣ್ಣೀರಿಟ್ಟ ನಾಯಕ..!

ಇಂದು ನಡೆಯುವ ಸೆಮಿಫೈನಲ್​ ದಂಗಲ್​ನಲ್ಲಿ ಟೀಮ್ ಇಂಡಿಯಾ ಬಲಾಢ್ಯ ಇಂಗ್ಲೆಂಡ್​ ತಂಡವನ್ನ ಎದುರಿಸಲಿದೆ. ಈ ಬಿಗ್ ಗೇಮ್​​​​ನಲ್ಲಿ ಭಾರತ ತಂಡ ಬೌಲರ್​​​​​​​​​ಗಳನ್ನೇ ಹೆಚ್ಚು ನಂಬಿಕೊಂಡಿದೆ. ಬೌಲರ್ಸ್​ ಗ್ರೂಪ್​​​ ಸ್ಟೇಜ್​ನಿಂದ ಹಿಡಿದು ಸೂಪರ್​​​-8 ತನಕ ಮಿಂಚಿನ ದಾಳಿ ನಡೆಸಿದ್ದಾರೆ. ಇಂದು ಕೂಡ ಅದೇ ಡೆಡ್ಲಿ ಪೇಸ್​ ಹಾಗೂ ಸ್ಪಿನ್ ಮ್ಯಾಜಿಕ್​​ ನಡೆಸಿ ಆಂಗ್ಲರಿಗೆ ಸೋಲಿನ ರುಚಿ ತೋರಿಸುವ ಇರಾದೆಯಲ್ಲಿದ್ದಾರೆ.

T20 WCನಲ್ಲಿ ಭಾರತೀಯ ಬೌಲರ್ಸ್​

ಈ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ 6 ಪಂದ್ಯಗಳನ್ನ ಆಡಿದೆ. ಬೌಲರ್​ಗಳು ಒಟ್ಟು 116 ಓವರ್​​ ಬೌಲಿಂಗ್ ಮಾಡಿದ್ದು, 48 ವಿಕೆಟ್ ಬೇಟೆಯಾಡಿದ್ದಾರೆ. ಈ ಪೈಕಿ 5 ಓವರ್ಸ್​ ಮೇಡನ್​​ ಆಗಿವೆ.

ವೇಗಿಗಳ ಪಾರಮ್ಯ ಜೋರು.. ಸ್ಪಿನ್ನರ್ಸ್​ ಬಿಡ್ತಿಲ್ಲ ಪಟ್ಟು..!

ಕ್ರಿಕೆಟ್ ಅನ್ನೋ ಜಂಟಲ್​ಮನ್​​ ಗೇಮ್​ನಲ್ಲಿ ಒಬ್ಬ ಬ್ಯಾಟ್ಸ್​ಮನ್ ಆಡಿದ್ರೆ ಒಂದು ಪಂದ್ಯ ಮಾತ್ರ ಗೆಲ್ಲಬಹುದು. ಆದ್ರೆ ಬೌಲರ್ಸ್​ ಸಿಡಿದೆದ್ರೆ ಟೂರ್ನಿಯನ್ನ ಗೆಲ್ಲಬಹುದು. ಈ ಮಾತನ್ನ ಇಂಡಿಯನ್ ಬೌಲರ್ಸ್​ ಅಕ್ಷರಶಃ ಪ್ರೂವ್ ಮಾಡಿದ್ದಾರೆ. ಫಾಸ್ಟ್​ ಹಾಗೂ ಸ್ಪಿನ್​ ಬೌಲರ್ಸ್​ ಜಿದ್ದಿಗೆ ಬಿದ್ದವರಂತೆ ವಿಕೆಟ್ ಸರಮಾಲೆ ಕಟ್ತಿದ್ದಾರೆ. ವೇಗಿಗಳಂತೂ ಟೂರ್ನಿಯುದ್ದಕ್ಕೂ ಬೆಂಕಿ ಉಗುಳಿದ್ದಾರೆ.

T20 WC ನಲ್ಲಿ ವೇಗಿಗಳು

ಪ್ರಸಕ್ತ ಟಿ20 ವಿಶ್ವಕಪ್​​ನಲ್ಲಿ ವೇಗಿ ಅರ್ಷ್​ದೀಪ್ ಸಿಂಗ್​​ ಒಟ್ಟು 6 ಇನ್ನಿಂಗ್ಸ್​ಗಳನ್ನ ಆಡಿದ್ದು, 7.41 ಎಕಾನಮಿಯಲ್ಲಿ 15 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಬೂಮ್ರಾ 6 ಇನ್ನಿಂಗ್ಸ್​​ನಿಂದ 4.08 ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟು 11 ವಿಕೆಟ್​​​ ಬೇಟೆಯಾಡಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಅಷ್ಟೇ ಇನ್ನಿಂಗ್ಸ್ ಆಡಿ 7.47ರ ಎಕಾನಮಿಯಲ್ಲಿ 8 ವಿಕೆಟ್​​​​ ಕಬಳಿಸಿದ್ದಾರೆ. ಮೊಹಮ್ಮದ್ ಸಿರಾಜ್ 3 ಇನ್ನಿಂಗ್ಸ್​ಗಳಲ್ಲಿ ಕಣಕ್ಕಿಳಿದಿದ್ದು, 5.18 ಎಕಾನಮಿ ಕಾಯ್ದುಕೊಂಡು, 1 ವಿಕೆಟ್​​​​ ಪಡೆದಿದ್ದಾರೆ.

ಬರೀ ಪೇಸರ್ಸ್​ ಅಷ್ಟೇ ಅಲ್ಲ, ಸ್ಪಿನ್​ ಬೌಲರ್​ಗಳೂ ಕೂಡ ಕೈಗೆ ಚೆಂಡು ಸಿಕ್ಕಾಗಲೆಲ್ಲ ಜಾದೂ ಮಾಡಿದ್ದಾರೆ. ಭಾರತೀಯ ಸ್ಪಿನ್ನರ್​ಗಳ ಮ್ಯಾಜಿಕ್​ ಮುಂದೆ ಎದುರಾಳಿ ಬ್ಯಾಟರ್ಸ್​ ಪರದಾಡಿದ್ದಾರೆ.

ಇದನ್ನೂ ಓದಿ: ನ್ಯೂಸ್ ​ಫಸ್ಟ್ ಇಂಫ್ಯಾಕ್ಟ್​; ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು

T20 WCನಲ್ಲಿ ಸ್ಪಿನ್ನರ್ಸ್

ಚೈನಾಮನ್​​ ಸ್ಪಿನ್ನರ್​ ಕುಲ್​ದೀಪ್ ಯಾದವ್ ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ 3 ಇನ್ನಿಂಗ್ಸ್​​ಗಳಲ್ಲಿ ಮಾತ್ರ ಆಡಿದ್ದು, 6.52 ಎಕಾನಮಿಯಲ್ಲಿ 7 ವಿಕೆಟ್ ಪಡೆದಿದ್ದಾರೆ. ಇನ್ನು ಅಕ್ಷರ್ ಪಟೇಲ್​ 6 ಇನ್ನಿಂಗ್ಸ್ ಆಡಿ 7.21ರ ಎಕಾನಮಿ ಹೊಂದಿದ್ದು 5 ವಿಕೆಟ್​​​​​ ಬೇಟೆಯಾಡಿದ್ದಾರೆ. ರವೀಂದ್ರ ಜಡೇಜಾ 5 ಇನ್ನಿಂಗ್ಸ್​ಗಳಿಂದ 7.80 ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ಒಡಲು ಬಗೆದು ಲೂಟಿಗೆ ಸ್ಕೆಚ್​.. ನ್ಯೂಸ್​ ಫಸ್ಟ್​ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್​, ಭೂಗಳ್ಳ ಶಾಕ್..!

ಇಲ್ಲಿಯವರೆಗಿನ ಎಲ್ಲ ಪಂದ್ಯಗಳ ಗೆಲುವಲ್ಲಿ ಟೀಮ್​ ಇಂಡಿಯಾ ಬೌಲರ್ಸ್​ ಮಿಂಚು ಹರಿಸಿದ್ದಾರೆ. ಗ್ರೂಪ್​​​​ ಸ್ಟೇಜ್ ಹಾಗೂ ಸೂಪರ್​​​​-8ನಂತೆ ಸೆಮಿಫೈನಲ್​​ನಲ್ಲೂ ರಗಢ್​​​ ಪರ್ಫಾಮೆನ್ಸ್​​ ನೀಡಿದ್ರೆ, ಆಂಗ್ಲರ ಖೇಲ್​ ಖತಂ ಆಗೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವರ್ಲ್ಡ್ ​​ಕಪ್​ನಲ್ಲಿ ರಗಢ್​​​ ಪರ್ಫಾಮೆನ್ಸ್.. ಸೆಮಿಫೈನಲ್​​ನಲ್ಲಿ ಈ ಪ್ಲೇಯರ್ಸ್​​ನಿಂದ ಇಂಗ್ಲೆಂಡ್​ಗೆ ಬಿಗ್​ ಶಾಕ್

https://newsfirstlive.com/wp-content/uploads/2024/06/TEAM-INDIA-3.jpg

Load More