newsfirstkannada.com

ಐರ್ಲೆಂಡ್​​ ಪ್ರವಾಸಕ್ಕೆ ಟೀಮ್​ ಇಂಡಿಯಾ ಪ್ರಕಟ.. ಬರೋಬ್ಬರಿ 327 ದಿನಗಳ ಬಳಿಕ ಬೂಮ್ರಾ ಕಂ​ಬ್ಯಾಕ್.. ಯಾರು ಇನ್, ಯಾರು ಔಟ್​..!

Share :

01-08-2023

  ಬೂಮ್ರಾಗೆ ಕ್ಯಾಪ್ಟನ್​.. ಯುವ ಆಟಗಾರನಿಗೆ ಉಪನಾಯಕ ಪಟ್ಟ

  ಯುವಕರಿಗೆ ಮಣೆ, ಕರ್ನಾಟಕದ ವೇಗಿಗೂ ಸಿಕ್ಕಿದೆ ಚಾನ್ಸ್​..?

  ದುಬೆಗೆ ಚಾನ್ಸ್.. ಕೊಹ್ಲಿ, ಜಡೇಜಾ, ರಾಹುಲ್ ಇದ್ದಾರಾ..?

ವೆಸ್ಟ್​ ಇಂಡೀಸ್​ ಸರಣಿಯ ಕೊನೆಯ ಏಕದಿನಕ್ಕೂ ಮುನ್ನ ಮುಂಬರೋ ಐರ್ಲೆಂಡ್​ ಟೂರ್​​ಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿರೋ ಸೆಲೆಕ್ಷನ್​ ಕಮಿಟಿ ಸ್ಟಾರ್​ಗಳಿಗೆಲ್ಲಾ ಕೊಕ್​ ಕೊಟ್ಟಿದ್ರೆ, ಹೊಸಬರಿಗೆ ಮಣೆ ಹಾಕಿದೆ. ಯಾರು ಇನ್​? ಯಾರು ಔಟ್​? ಅನ್ನೋ ವಿವರ ಇಲ್ಲಿದೆ.

ಅಗಸ್ಟ್​​ನಲ್ಲಿ 18ರಿಂದ ಆರಂಭವಾಗೋ ಐರ್ಲೆಂಡ್​ ವಿರುದ್ಧದ ಟಿ20 ಸರಣಿಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಎಕ್ಸ್​​ಪೆಕ್ಟೇಶನ್​ಗಳೆಲ್ಲಾ​ ಎಲ್ಲಾ ಉಲ್ಟಾ ಆಗಿದ್ದು, ಸೆಲೆಕ್ಷನ್​ ಕಮಿಟಿ ಅಚ್ಚರಿಯ ನಡೆಯನ್ನಿಟ್ಟಿದೆ. ಕೊಹ್ಲಿ, ರೋಹಿತ್​ ಶರ್ಮಾ, ಜಡೇಜಾ ಎಲ್ಲಾ ಔಟ್​ ಆಗಿದ್ರೆ ತಂಡದಿಂದ ಹೊರಬಿದ್ದವರೆಲ್ಲಾ ಕಮ್​​ಬ್ಯಾಕ್​ ಮಾಡಿದ್ದಾರೆ.

ಕ್ಯಾಪ್ಟನ್ ಬೂಮ್ರಾ
ಕ್ಯಾಪ್ಟನ್ ಬೂಮ್ರಾ

ಬೂಮ್ರಾ ಕಮ್​ಬ್ಯಾಕ್​, ಶ್ರೇಯಸ್​​, ರಾಹುಲ್​ ಔಟ್

ಬರೋಬ್ಬರಿ 327 ದಿನಗಳ ಬಳಿಕ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರೀತ್​ ಬೂಮ್ರಾ ಕಣಕ್ಕಿಳಿಯೋದು ಕನ್​ಫರ್ಮ್​ ಆಗಿದೆ. ಕಂಪ್ಲೀಟ್​​ ಫಿಟ್​ ಆಗಿರೋ ಬೂಮ್ರಾಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿದೆ. ಆದ್ರೆ ಶ್ರೇಯಸ್​​ ಅಯ್ಯರ್​, ಕೆ.ಎಲ್​ ರಾಹುಲ್​ ಹೊರ ಬಿದ್ದಿದ್ದಾರೆ. ಇದ್ರೊಂದಿಗೆ ಇವರಿಬ್ಬರೂ ಇನ್ನೂ ಕಂಪ್ಲೀಟ್​ ಫಿಟ್​ ಆಗಿಲ್ಲ ಅನ್ನೋದು ಖಾತರಿ​ ಆಗಿದೆ.

ಬೂಮ್ರಾ ನಾಯಕ, ಋತುರಾಜ್​ ಉಪನಾಯಕ..!

ಕಮ್​ಬ್ಯಾಕ್​ ಬೆನ್ನಲ್ಲೇ ಬೂಮ್ರಾಗೆ ಬಡ್ತಿ ಸಿಕ್ಕಿದ್ದು, ಐರ್ಲೆಂಡ್​ ಪ್ರವಾಸದಲ್ಲಿ ತಂಡವನ್ನ ಮುನ್ನಡೆಸೋ ಜವಾಬ್ದಾರಿ ನೀಡಲಾಗಿದೆ. ಏಷ್ಯನ್​ ಗೇಮ್ಸ್​ನಲ್ಲಿ ತಂಡದ ನಾಯಕನಾಗಿ ಆಯ್ಕೆಯಾಗಿರೋ ಋತುರಾಜ್​ ಗಾಯಕ್ವಾಡ್​ಗೆ ಉಪನಾಯಕನ ಪಟ್ಟವನ್ನ ಸೆಲೆಕ್ಷನ್​ ಕಮಿಟಿ ಕಟ್ಟಿದೆ.

ಪ್ರಸಿದ್ಧ್ ಕೃಷ್ಣ
ಪ್ರಸಿದ್ಧ್ ಕೃಷ್ಣ

ರಿಂಕು ಸಿಂಗ್, ಜಿತೇಶ್​ ಶರ್ಮಾಗೆ ಸ್ಥಾನ..!

ಐಪಿಎಲ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ನಿಂದ ಐಪಿಎಲ್​ ಟೂರ್ನಿಯಲ್ಲಿ ಅಬ್ಬರಿಸಿದ ಫಿನಿಷರ್​ ರಿಂಕು ಸಿಂಗ್​ಗೆ ಐರ್ಲೆಂಡ್​ ಟೂರ್​​ನಲ್ಲಿ ಚಾನ್ಸ್​ ಸಿಕ್ಕಿದೆ. ರಿಂಕು ಸಿಂಗ್​ ಜೊತೆಗೆ ಐಪಿಎಲ್​ನಲ್ಲಿ ಮೋಡಿ ಮಾಡಿದ ಜಿತೇಶ್​ ಶರ್ಮಾಗೂ ಸೆಲೆಕ್ಟರ್ಸ್​ ಮಣೆ ಹಾಕಿದ್ದಾರೆ. ಬ್ಯಾಕ್​​ ಅಪ್​ ವಿಕೆಟ್​ ಕೀಪರ್​ ಬ್ಯಾಟ್ಸ್​​​ಮನ್​​ ಆಗಿ ಜಿತೇಶ್​ಗೆ ಸ್ಥಾನ ಸಿಕ್ಕಿದೆ.

ಕನ್ನಡಿಗ ಪ್ರಸಿದ್ಧ್ ಕೃಷ್ಣ ವಾಪಸ್​

ಅಗಸ್ಟ್​ 2022ಕ್ಕೆ ಕೊನೆಯ ಪಂದ್ಯವನ್ನಾಡಿದ್ದ ಕೊನೆಗೂ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಗಾಯಗೊಂಡಿದ್ದ ಕರ್ನಾಟಕದ ವೇಗಿ ಹಲ ತಿಂಗಳಿನಿಂದ ಎನ್​ಸಿಎನಲ್ಲಿ ಬೀಡು ಬಿಟ್ಟಿದ್ರು. ಸದ್ಯ ಪ್ರಸಿದ್ಧ್​, ಕಂಪ್ಲೀಟ್​ ಫಿಟ್​ ಆಗಿದ್ದು, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಸಿದ್ಧ್​ ಜೊತೆಗೆ ಆರ್ಷ್​ದೀಪ್​ ಸಿಂಗ್, ಆವೇಶ್​ ಖಾನ್​​ ಕೂಡ ಕಮ್​​ಬ್ಯಾಕ್​ ಮಾಡಿದ್ದಾರೆ.
ಇವರಿಷ್ಟೇ ಅಲ್ಲ.. 2020ರಲ್ಲಿ ಟೀಮ್​ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿದ್ದ ಶಿವಂ​ ದುಬೆಯ ಕಮ್​ಬ್ಯಾಕ್​ ಕನಸೂ ನನಸಾಗಿದೆ. ಐಪಿಎಲ್​ ಹಾಗೂ ದೇವಧರ್​​​ ಟ್ರೋಫಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ದುಬೆಗೆ ಸೆಲೆಕ್ಟರ್ಸ್​ ಮಣೆ ಹಾಕಿದ್ದಾರೆ.

ಐರ್ಲೆಂಡ್​ ಪ್ರವಾಸಕ್ಕೆ ಟೀಮ್​ ಇಂಡಿಯಾ

ಬೂಮ್ರಾ, ಋತುರಾಜ್​, ಜೈಸ್ವಾಲ್​, ತಿಲಕ್​ ವರ್ಮಾ, ರಿಂಕು ಸಿಂಗ್​, ಶಿವಮ್​ ದುಬೆ, ಸಂಜು ಸ್ಯಾಮ್ಸನ್​, ಜಿತೇಶ್​ ಶರ್ಮಾ, ವಾಷಿಂಗ್ಟನ್​ ಸುಂದರ್, ಶಹಬಾಜ್​ ಅಹಮ್ಮದ್​, ರವಿ ಬಿಷ್ನೋಯಿ, ಪ್ರಸಿದ್ಧ್ ಕೃಷ್ಣ, ಅರ್ಷ್​​ದೀಪ್​ ಸಿಂಗ್​, ಮುಖೇಶ್​ ಕುಮಾರ್​, ಆವೇಶ್​ ಖಾನ್​

ಶಿವಂ ದುಬೆ
ಶಿವಂ ದುಬೆ

ಐರ್ಲೆಂಡ್​ ಪ್ರವಾಸದ ತಂಡಕ್ಕೆ ಬೂಮ್ರಾ ನಾಯಕನಾಗಿದ್ರೆ, ಋತುರಾಜ್​ ಗಾಯಕ್ವಾಡ್​ ಉಪನಾಯಕನಾಗಿದ್ದಾರೆ. ಬ್ಯಾಟ್ಸ್​ಮನ್​ಗಳಾಗಿ ಯಶಸ್ವಿ ಜೈಸ್ವಾಲ್​, ರಿಂಕು ಸಿಂಗ್​, ಶಿವಮ್​ ದುಬೆ ಸ್ಥಾನ ಗಿಟ್ಟಿಸಿಕೊಂಡಿದ್ರೆ, ವಿಕೆಟ್​ ಕೀಪರ್​ ಕೋಟಾದಲ್ಲಿ ಸಂಜು ಸ್ಯಾಮ್ಸನ್​, ಜಿತೇಶ್​ ಶರ್ಮಾಗೆ ಮಣೆ ಹಾಕಲಾಗಿದೆ. ಇನ್ನು ಸ್ಪಿನ್ನರ್​ಗಳಾಗಿ ವಾಷಿಂಗ್ಟನ್​ ಸುಂದರ್​, ಶಹಬಾಜ್​ ಅಹಮ್ಮದ್​, ರವಿ ಬಿಷ್ನೋಯಿಗೆ ಚಾನ್ಸ್​​ ಸಿಕ್ಕಿದೆ. ವೇಗಿ ಪ್ರಸಿದ್ಧ್​ ಕೃಷ್ಣ, ಆರ್ಷ್​​ದೀಪ್​ ಸಿಂಗ್​, ಮುಖೇಶ್​ ಕುಮಾರ್​ ಹಾಗೂ ಅವೇಶ್​ ಖಾನ್​ ಸ್ಥಾನ ಗಿಟ್ಟಿಸಿಕೊಂಡಿರುವ ವೇಗಿಗಳಾಗಿದ್ದಾರೆ.

ಒಟ್ಟಿನಲ್ಲಿ, ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಸೆಲೆಕ್ಷನ್​ ಕಮಿಟಿ ಕೆಲವೇ ಕೆಲವು ಅನುಭವಿಗಳ ಜೊತೆಗೆ ಬಹುತೇಕ ಯಂಗ್​​ಸ್ಟರ್​​ಗಳಿಗೆ ಮಣೆ ಹಾಕಿದೆ. ಇದರೊಂದಿಗೆ 2024ರ ಟಿ20 ವಿಶ್ವಕಪ್​ಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಸೂಚನೆಯನ್ನಂತೂ ನೀಡಿದೆ. ಆಯ್ಕೆಗಾರರ ಈ ನಿರ್ಧಾರವನ್ನ ಮೆಚ್ಚಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಐರ್ಲೆಂಡ್​​ ಪ್ರವಾಸಕ್ಕೆ ಟೀಮ್​ ಇಂಡಿಯಾ ಪ್ರಕಟ.. ಬರೋಬ್ಬರಿ 327 ದಿನಗಳ ಬಳಿಕ ಬೂಮ್ರಾ ಕಂ​ಬ್ಯಾಕ್.. ಯಾರು ಇನ್, ಯಾರು ಔಟ್​..!

https://newsfirstlive.com/wp-content/uploads/2023/08/BHUMRAH.jpg

Load More