newsfirstkannada.com

Asia Cup: ಭಾರತಕ್ಕೆ ಸುಲಭ ತುತ್ತಾದ ನೇಪಾಳ; ಕ್ಯಾಪ್ಟನ್​ ರೋಹಿತ್​, ಶುಭ್​ಮನ್​ ಗಿಲ್ ಭರ್ಜರಿ ಬ್ಯಾಟಿಂಗ್ ಹೇಗಿತ್ತು?

Share :

05-09-2023

    ಉತ್ತಮ ಆರಂಭ ಪಡೆದಿದ್ದ ನೇಪಾಳದ ಓಪನರ್​ ಬ್ಯಾಟ್ಸ್​ಮನ್ಸ್​

    ಭಾರತ-ನೇಪಾಳ ಮ್ಯಾಚ್​ನಲ್ಲಿ ವಿಫಲ ಫಿಲ್ಡಿಂಗ್​, 7 ಕ್ಯಾಚ್ ಡ್ರಾಪ್

    ಮಳೆ ಬಂದ್ರು ಭಾರತಕ್ಕೆ ಜಯ, ರೋಹಿತ್, ಗಿಲ್ ಬ್ಯಾಟಿಂಗ್ ಅಬ್ಬರ

ಏಷ್ಯಾಕಪ್​ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಟೀಮ್ ಇಂಡಿಯಾ ಗೆಲುವು ಪಡೆದು ಸೂಪರ್- 4 ಹಂತಕ್ಕೆ ಲಗ್ಗೆ ಇಟ್ಟಿದೆ. ಪಂದ್ಯ ಆರಂಭವಾದ ಮೇಲೆ ಮಳೆಯು ಬಿಟ್ಟು, ಬಿಟ್ಟು ಬಂದು ಅಡ್ಡಿಪಡಿಸಿದ್ದರಿಂದ ಕೊನೆಗೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ (DLS) 23 ಓವರ್​ಗಳಲ್ಲಿ 145 ರನ್​ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಭಾರತ ವಿಕೆಟ್​ ನಷ್ಟವಿಲ್ಲದೇ ಸುಲಭವಾಗಿ ಮುಟ್ಟಿ ಜಯ ದಾಖಲಿಸಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡು ನೇಪಾಳವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಕ್ರೀಸ್​ಗೆ​ ಆಗಮಿಸಿದ ಕುಶಾಲ್ ಭುರ್ಟೆಲ್ ಹಾಗೂ ಆಸಿಫ್ ಶೇಖ್ ಉತ್ತಮ ಆರಂಭವನ್ನೇ ತಂದುಕೊಂಡರು. ಮೊದಲ ವಿಕೆಟ್​ಗೆ 65 ರನ್​ಗಳ ಜೊತೆಯಾಟ ಆಡುವಾಗ ಶಾರ್ದೂಲ್ ಠಾಕೂರ್ ಬೌಲಿಂಗ್​ನಲ್ಲಿ ಕುಶಾಲ್ ಔಟ್ ಆಗುವ ಮೂಲಕ ಪಾರ್ಟನರ್​ಶಿಪ್ ಅನ್ನು ಮುರಿದರು. ಇದಕ್ಕೂ ಮೊದಲು ಟೀಮ್​ ಇಂಡಿಯಾ ಆಟಗಾರರು 3 ಕ್ಯಾಚ್​ಗಳನ್ನು ಡ್ರಾಪ್ ಮಾಡಿದ್ದರು. ಇದರ ಲಾಭ ಪಡೆದಿದ್ದ ಓಪನರ್ಸ್​ ಉತ್ತಮ ರನ್ ಕಲೆ ಹಾಕುವಲ್ಲಿ ಮುನ್ನುಗ್ಗುತ್ತಿದ್ದರು.

ನೇಪಾಳದ ಕ್ಯಾಪ್ಟನ್ ರೋಹಿತ್ ಮತ್ತು ಭಾರತದ ನಾಯಕ ರೋಹಿತ್ ಶರ್ಮಾ

ಆಸಿಫ್ ಶೇಖ್ 8 ಬೌಂಡರಿಗಳೊಂದಿಗೆ 58 ರನ್​ಗಳಿಂದ ಆಡುವಾಗ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಗುಲ್ಸನ್ ಝಾ 23, ದೀಪೇಂದ್ರ ಸಿಂಗ್ 29 ಹಾಗೂ ಸೋಂಪಾಲ್ ಕಾಮಿ (48) ಹಾಫ್​ ಸೆಂಚುರಿ ಹೊಸ್ತಿಲಲ್ಲಿ ಇರುವಾಗ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಔಟ್ ಆದರು. ನೇಪಾಳದ ಉಳಿದ ಯಾವ ಆಟಗಾರರು 10ರ ಗಡಿ ದಾಟಲಿಲ್ಲ. ಹೀಗಾಗಿ 48.2 ಓವರ್​ಗಳಲ್ಲಿ ನೇಪಾಳ 230 ರನ್​ಗೆ ಆಲೌಟ್ ಆಯಿತು.

ಈ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ಓಪನರ್ಸ್​ ರೋಹಿತ್ ಶರ್ಮಾ, ಶುಭ್​ಮನ್​ ಗಿಲ್ ಉತ್ತಮ ಆರಂಭ ಪಡೆದರು. ಇವರ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಕೆಲ ಕಾಲ ಪಂದ್ಯ ಸ್ಥಗಿತ ಮಾಡಲಾಗಿತ್ತು. ಬಳಿಕ ಮಳೆ ನಿಂತ ಮೇಲೆ ಡಕ್ವರ್ತ್ ನಿಯಮದ ಪ್ರಕಾರ 23 ಓವರ್​ಗಳಲ್ಲಿ ಭಾರತಕ್ಕೆ 145 ರನ್​ಗಳ ಗುರಿ ನೀಡಲಾಯಿತು.

ಈ ಗುರಿ ಬೆನ್ನತ್ತಿದ ಭಾರತ 20 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 147 ರನ್​ಗಳನ್ನು ಬಾರಿಸುವ ಮೂಲಕ 10 ವಿಕೆಟ್​ಗಳ ಭರ್ಜರಿ ಗೆಲುವು ಪಡೆಯಿತು. ಕ್ಯಾಪ್ಟನ್​ ರೋಹಿತ್ ಶರ್ಮಾ 5 ಭರ್ಜರಿ ಸಿಕ್ಸರ್​ ಸಮೇತ 74, ಗಿಲ್​ ಅಮೋಘವಾದ 8 ಬೌಂಡರಿಗಳಿಂದ 67 ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup: ಭಾರತಕ್ಕೆ ಸುಲಭ ತುತ್ತಾದ ನೇಪಾಳ; ಕ್ಯಾಪ್ಟನ್​ ರೋಹಿತ್​, ಶುಭ್​ಮನ್​ ಗಿಲ್ ಭರ್ಜರಿ ಬ್ಯಾಟಿಂಗ್ ಹೇಗಿತ್ತು?

https://newsfirstlive.com/wp-content/uploads/2023/09/ROHIT_GILL.jpg

Load More