ಶಮಿಯನ್ನೂ ಆಟ ಆಡಿಸುವಂತೆ ಭಜ್ಜಿ ಒತ್ತಾಯ
ನಾಳೆ ಮಧ್ಯಾಹ್ನ ಭಾರತ-ನ್ಯೂಜಿಲೆಂಡ್ ಪಂದ್ಯ
ಸತತ 4 ಪಂದ್ಯ ಗೆದ್ದು ಉತ್ತಮ ಫಾರ್ಮ್ನಲ್ಲಿರುವ ಭಾರತ
ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಎಡಗಾಲಿನ ಪಾದಕ್ಕೆ ಗಾಯಮಾಡಿಕೊಂಡಿರುವ ಹಾರ್ದಿಕ್ ಪಾಂಡ್ಯ ನಾಳೆ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಟೀಂ ಇಂಡಿಯಾಗೆ ಆಘಾತಕಾರಿ ಸುದ್ದಿ ಇದಾಗಿದ್ದು, ಪಾಂಡ್ಯ ಸ್ಥಾನಕ್ಕೆ ಯಾರನ್ನು ಆಡಿಸಬೇಕು ಎಂಬ ಚರ್ಚೆ ಶುರುವಾಗಿದೆ.
ಧರ್ಮಶಾಲಾದಲ್ಲಿ ನಡೆಯುವ ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅವರನ್ನು ಆಡಿಸಬೇಕು. ಸೂರ್ಯಕುಮಾರ್ ಯಾದವ್ ಅವರನ್ನು 6ನೇ ಸ್ಲಾಟ್ನಲ್ಲಿ ಆಡಿಸಬೇಕು ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ರವಿಚಂದ್ರನ್ ಅಶ್ವಿನ್ ಬದಲಿಗೆ ಶಮಿಯನ್ನು ಆಡಿಸಬೇಕು ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಆಡದಿರೋದು ಭಾರತಕ್ಕೆ ದೊಡ್ಡ ಹೊಡೆತ. ಅವರು ತಂಡದ ಕಾಂಬಿನೇಷನ್ಗೆ ಸೆಟ್ ಆಗಿದ್ದರು. ಆದರೆ ಇಂದು ಬದಲಾವಣೆ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಇಶಾನ್ ಕಿಶನ್ ಅವರನ್ನೂ ಆಡಿಸಬಹುದು, ನನ್ನ ಪ್ರಕಾರ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆ. ಶಾರ್ದುಲ್ ಠಾಕೂರು ಆಲ್ರೌಂಡರ್ ಆಟವನ್ನು ಪ್ರದರ್ಶಿಸಲಿದ್ದಾರೆ. ಇನ್ನು ಶಮಿ ಅವರನ್ನೂ ಪ್ಲೇಯಿಂಗ್-11ನಲ್ಲಿ ಆಡಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ