newsfirstkannada.com

ಇಂದು ವಾಂಖೆಡೆಯಲ್ಲಿ INDvsNZ​ ದರ್ಬಾರ್​.. ವಿಶ್ವಕಪ್​ ಕನಸು ಹೊತ್ತ ರೋಹಿತ್​ ಪಡೆಗಿದೆ ಬಹುದೊಡ್ಡ ಸವಾಲು

Share :

15-11-2023

  ಸೆಮೀಸ್​ ಸಮರ ಅಲ್ಲ.. ಇದು ಸೇಡಿನ ಸಮರ.!

  ಲೀಗ್​ ಸ್ಟೇಜ್​ನಲ್ಲಿ ಟೀಮ್​ ಇಂಡಿಯಾ ಅಜೇಯ

  ವಾಂಖೆಡೆ ಅಂಗಳದಲ್ಲಿ ಸ್ಟಾರ್​ಗಳ ನಡುವೆ ವಾರ್​.​!

ಇಡೀ ವಿಶ್ವದ ಚಿತ್ತ ಇಂದು ಮುಂಬೈ ವಾಂಖೆಡೆಯತ್ತ ನೆಟ್ಟಿದೆ. ಟೀಮ್​ ಇಂಡಿಯಾ ಕೋಟ್ಯಂತರ ಅಭಿಮಾನಿಗಳ ಬಳಗ ಪ್ರಾರ್ಥನೆಯಲ್ಲಿ ಮುಳುಗಿದೆ. ಗೆದ್ದು ಬಾ ಭಾರತ ಅನ್ನೋದು ಸದ್ಯ ಎಲ್ಲರ ಮನದ ಮಾತಾಗಿದೆ. ಇಂದಿನ ಸೆಮೀಸ್​ ಸಮರದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗುತ್ತಾ.? ನ್ಯೂಜಿಲೆಂಡ್​ ಮತ್ತೆ ಟಕ್ಕರ್​ ಕೊಡುತ್ತಾ.? ಯಾರಿಗಿದೆ ಗೆಲುವಿನ ಲಕ್​.? ಇಲ್ಲಿದೆ ಸ್ಪೆಷಲ್​ ರಿಪೋರ್ಟ್​.

ಇಡೀ ವಿಶ್ವ ಕ್ರಿಕೆಟ್​ ಲೋಕ ಕಾಯ್ತಿರೋ ಮಹತ್ವದ ಕದನಕ್ಕೆ ಕೆಲವೇ ಗಂಟೆಗಳು ಬಾಕಿ. ವಿಶ್ವಕಪ್​ ಮೆಗಾ ಟೂರ್ನಿಯ ಮೊದಲ ಸೆಮಿಸ್​ ಕದನಕ್ಕೆ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್​ ವಾಂಖೆಡೆ ಮೈದಾನದಲ್ಲಿಂದು ಟೀಮ್​ ಇಂಡಿಯಾ ಹಾಗೂ ನ್ಯೂಜಿಲೆಂಡ್​ ತಂಡಗಳು ಮುಖಾಮುಖಿಯಾಗ್ತಿವೆ. ಉಭಯ ತಂಡಗಳು ಮೊದಲ ತಂಡವಾಗಿ ಫೈನಲ್ ಪ್ರವೇಶಿಸುವ ತವಕದಲ್ಲಿವೆ. ಇಡೀ ವಿಶ್ವದ ಕಣ್ಣು ಇಂಡೋ – ಕಿವೀಸ್​ ಕಾಳಗದ ಮೇಲೆ ನೆಟ್ಟಿದೆ.

ವಾಂಖೆಡೆಯಲ್ಲಿಂದು ಇಂಡೋ – ಕಿವೀಸ್​ ಕಾಳಗ.!

ಟೀಮ್​ ಇಂಡಿಯಾ ಹಾಗೂ ನ್ಯೂಜಿಲೆಂಡ್​ ನಡುವಿನ ಪಂದ್ಯ ಕೇವಲ ಸೆಮಿಫೈನಲ್​ ಪಂದ್ಯವಾಗಿ ಮಾತ್ರ ಉಳಿದಿಲ್ಲ. ಇದು ಸೇಡಿನ ಸಮರವಾಗಿ ಬದಲಾಗಿದೆ. ರಣಾಂಗಣದಲ್ಲಿ ಬ್ಯಾಟ್​ & ಬೌಲ್​ ಅನ್ನೋ ವೆಪನ್​ ಹಿಡಿದು ಯುದ್ಧ ಗೆಲ್ಲುವ ಉತ್ಸಾಹ ಟೀಮ್​ ಇಂಡಿಯಾದ್ದಾಗಿದೆ. ಈ ಹಿಂದೆ ಕಿವೀಸ್​ ಕ್ರಿಕೆಟರ್ಸ್​ ಅಂದ್ರೆ ಒಂದು ವಿಶೇಷವಾದ ಗೌರವ, ಪ್ರೀತಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಇತ್ತು. ಆದ್ರೆ 2019ರ ವಿಶ್ವಕಪ್​ ವಿಶ್ವಕಪ್​ ಸೆಮೀಸ್​ ಸೋಲಿನ ಬಳಿಕ ಅದೆಲ್ಲಾ ಬದಲಾಗಿದೆ. ಹೀಗಾಗಿ ಇದೊಂದು ಸೇಡಿನ ಸಮರ.

ಲೀಗ್​ ಸ್ಟೇಜ್​ನಲ್ಲಿ ಟೀಮ್​ ಇಂಡಿಯಾ ಅಜೇಯ.!

ಮೆಗಾ ಟೂರ್ನಿಯ ಲೀಗ್​ ಸ್ಟೇಜ್​ನಲ್ಲಿ ಟೀಮ್​ ಇಂಡಿಯಾ ಸೋಲೆ ಕಂಡಿಲ್ಲ. ಆಡಿದ ಎಲ್ಲಾ ಪಂದ್ಯಗಳನ್ನೂ ಗೆದ್ದು, ಸೋಲಿಲ್ಲದ ಸರದಾರನಾಗಿ ಸೆಮಿಸ್​ ಲಗ್ಗೆ ಇಟ್ಟಿದೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡಿದ ಆತ್ಮವಿಶ್ವಾಸ ಟೀಮ್​ ಇಂಡಿಯಾದ್ದು.

ಭರ್ಜರಿ ಆರಂಭ, ಮಧ್ಯದಲ್ಲಿ ಮುಗ್ಗರಿಸಿದ ಕಿವೀಸ್​.!

ವಿಶ್ವಕಪ್​ ಟೂರ್ನಿಯ ಲೀಗ್​ ಸ್ಟೇಜ್​ನಲ್ಲಿ ರನ್ನರ್​ಅಪ್​ ನ್ಯೂಜಿಲೆಂಡ್​​ ಭರ್ಜರಿ ಆರಂಭವನ್ನೇ ಮಾಡ್ತು. ಆದ್ರೆ, ಮಧ್ಯದಲ್ಲಿ ಮುಗ್ಗರಿಸಿತು. ಆರಂಭದಲ್ಲಿ ಸತತ 4 ಪಂದ್ಯ ಗೆದ್ದ ಬ್ಲ್ಯಾಕ್​ಕ್ಯಾಪ್ಸ್​​ ಪಡೆ, ನಂತರದಲ್ಲಿ ಸತತ 4 ಸೋಲಿಗೆ ಶರಣಾಯ್ತು. ಅಂತಿಮವಾಗಿ 9ನೇ ಗೆದ್ದು ಫೈನಲ್​ ಪ್ರವೇಶ ಮಾಡಿದೆ.

ಮುಂಬೈನ ವಾಂಖೆಡೆ ಕದನ ಕಣ ಇಂದು ಸ್ಟಾರ್​ ವಾರ್​ಗೆ ಸಾಕ್ಷಿಯಾಗಲಿದೆ. ವಾಂಖೆಡೆ ರನ್​ಭೂಮಿಯ red soil ಪಿಚ್​ನಲ್ಲಿ ನಡೆಯೋ ಸೆಮೀಸ್​ ಸಮರದಲ್ಲಿ ಎರಡೂ ತಂಡಗಳ ಸ್ಟಾರ್​ಗಳಿಗೆ ಅಗ್ನಿ ಪರೀಕ್ಷೆ ನಡೆಯಲಿದೆ. ತಂತ್ರ-ಪ್ರತಿತಂತ್ರಗಳ ಲೆಕ್ಕಾಚಾರದಲ್ಲಿ ಯಾರು ಗೆಲ್ತಾರೆ ಅನ್ನೋದೆ ಕುತೂಹಲ ಮೂಡಿಸಿದೆ.

ರೋಹಿತ್​ ಶರ್ಮಾ VS ಟ್ರೆಂಟ್​ ಬೋಲ್ಟ್​

ಇಂದಿನ ಕದನ ಕಣದಲ್ಲಿ ಟೀಮ್​ ಇಂಡಿಯಾ ಓಪನರ್​ ರೋಹಿತ್​ ಶರ್ಮಾಗೆ ಹೊಸ ಬಾಲ್​ನೊಂದಿಗೆ ಮೋಡಿ ಮಾಡೋ ಟ್ರೆಂಟ್​ ಬೋಲ್ಟ್​​​ ಸವಾಲಾಗೋ ಸಾಧ್ಯತೆಯಿದೆ. ವಿರಾಟ್​ ಕೊಹ್ಲಿಯನ್ನ ಸ್ಪಿನ್ನರ್​ ಮಿಚಲ್​ ಸ್ನಾಂಟ್ನೆರ್ ಕಾಡೋ ಸಾಧ್ಯತೆ ದಟ್ಟವಾಗಿದೆ. ಶುಭ್​ಮನ್​ ಗಿಲ್​ VS ಮ್ಯಾಟ್​ ಹೆನ್ರಿ ಹಾಗೂ ರಚಿನ್ ರವೀಂದ್ರ VS ಮೊಹಮ್ಮದ್​ ಶಮಿ ನಡುವೆ ಫೈಟ್​ ನಿರೀಕ್ಷಿಸಲಾಗಿದೆ. ಇನ್ನು ಒಂದು ಅಶ್ವಿನ್​ಗೆ ಚಾನ್ಸ್​ ಸಿಕ್ರೆ ಕೇನ್​ ವಿಲಿಯಮ್​ಸನ್​ರನ್ನ ಕಾಡೋದು ಕನ್​ಫರ್ಮ್​.!

ಮುಖಾಮುಖಿಯಲ್ಲಿ ಟೀಮ್​ ಇಂಡಿಯಾದ್ದೇ ದರ್ಬಾರ್.!

2019 ವಿಶ್ವಕಪ್​ ಸೆಮಿಫೈನಲ್​​ ಪಂದ್ಯ, 2021ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಮುಗ್ಗರಿಸಿದೆ ನಿಜ. ಆದ್ರೆ, ಏಕದಿನ ಮಾದರಿಯಲ್ಲಿ ಈವರೆಗೆ ಆಗಿರುವ ಮುಖಾಮುಖಿ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾ ದರ್ಬಾರ್​ ನಡೆಸಿದೆ.

ODIನಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ
ಪಂದ್ಯ 117
ಗೆಲುವು 59
ಸೋಲು 50
ಟೈ/ರದ್ದು 1/7

ಏಕದಿನ ಮಾದರಿಯಲ್ಲಿ ಈವರೆಗೆ ನ್ಯೂಜಿಲೆಂಡ್​ – ಟೀಮ್​ ಇಂಡಿಯಾ 117 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಟೀಮ್​ ಇಂಡಿಯಾ 59 ಪಂದ್ಯಗಳಲ್ಲಿ ಗೆದ್ದಿದ್ರೆ, 50 ಪಂದ್ಯಗಳಲ್ಲಿ ಸೋಲುಂಡಿದೆ. 1 ಪಂದ್ಯ ಟೈನಲ್ಲಿ ಅಂತ್ಯ ಕಂಡಿದ್ರೆ, 7 ಪಂದ್ಯಗಳು ರದ್ದಾಗಿವೆ.

ಒಟ್ಟಿನಲ್ಲಿ, ಇಂದಿನ ಸೇಡಿನ ಸಮರದಲ್ಲಿ ಯಾರು ಗೆಲ್ತಾರೆ ಅನ್ನೋದು ಸದ್ಯ ಎಲ್ಲರ ಕುತೂಹಲ ಹೆಚ್ಚಿಸಿದೆ. ಲೀಗ್​ ಸ್ಟೇಜ್​ನಲ್ಲಿ ಬಲಿಷ್ಟವಾಗಿರುವ ಟೀಮ್​ ಇಂಡಿಯಾಗೆ ಹೋಮ್​ ಅಡ್ವಾಂಟೇಜ್​ ಕೂಡ ಇದೆ. ಜೊತೆಗೆ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆಯೂ ತಂಡಕ್ಕಿದ್ದು, ಗೆದ್ದು ಬಾ ಭಾರತ ಅನ್ನೋದೆ ಎಲ್ಲರ ಮನದ ಮಾತಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂದು ವಾಂಖೆಡೆಯಲ್ಲಿ INDvsNZ​ ದರ್ಬಾರ್​.. ವಿಶ್ವಕಪ್​ ಕನಸು ಹೊತ್ತ ರೋಹಿತ್​ ಪಡೆಗಿದೆ ಬಹುದೊಡ್ಡ ಸವಾಲು

https://newsfirstlive.com/wp-content/uploads/2023/11/Rohit-Sharma-3.jpg

Load More