ವಿರಾಟ್ ಕೊಹ್ಲಿಯ ಮೇಲೆ ನಿರೀಕ್ಷೆಯ ಭಾರ.!
ಕೊಹ್ಲಿಯೇ ಕೊಲಂಬೋದ ರಿಯಲ್ ಕಿಂಗ್.!
ಕೊಹ್ಲಿ ಆರ್ಭಟದ ಮುಂದೆ ಲಂಕಾ ದಿಗ್ಗಜರೂ ಸೈಡ್.!
ಪಾಕ್ ವಿರುದ್ಧದ ಗ್ರೂಪ್ ಸ್ಟೇಜ್ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದ್ದಾರೆ. ಆದ್ರೆ, ಸೂಪರ್ 4 ಹಣಾಹಣಿಯಲ್ಲಿ ಜಬರ್ದಸ್ತ್ ಎಂಟರ್ಟೈನ್ಮೆಂಟ್ ಪಕ್ಕಾ.! ವಿರಾಟ್ ಆರ್ಭಟಕ್ಕೆ ಪಾಕ್ ಬೌಲಿಂಗ್ ಅಟ್ಯಾಕ್ ಉಡೀಸ್ ಆಗಲಿದೆ. ಈ ಕಾನ್ಫಿಡೆನ್ಸ್ ಯಾಕೆ ಅಂತೀರಾ.? ಕೊಲಂಬೋ ಕಿಂಗ್ ಕೊಹ್ಲಿಯ ಸ್ಪೆಷಲ್ ಸ್ಟೋರಿ ಇಲ್ಲಿದೆ ಓದಿ.
ಮತ್ತೊಂದು ಇಂಡೋ -ಪಾಕ್ ಫೈಟ್ಗೆ ವೇದಿಕೆ ಸಜ್ಜಾಗಿದೆ. ಏಷ್ಯಾಕಪ್ ಟೂರ್ನಿಯ ಸೂಪರ್ – 4 ಹಣಾಹಣಿಯಲ್ಲಿ ಟೀಮ್ ಇಂಡಿಯಾ ಮತ್ತೆ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಕಾದಾಡಲಿದೆ. ಸೂಪರ್ ಸಂಡೆಯ ಹೈವೋಲ್ಟೆಜ್ ಕದನದತ್ತ ಕ್ರಿಕೆಟ್ ಲೋಕದ ಚಿತ್ತ ಶಿಫ್ಟ್ ಆಗಿದ್ದು, ಒನ್ಸ್ ಅಗೇನ್ ಕಿಂಗ್ ಕೊಹ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.
ಮೊದಲ ಮುಖಾಮುಖಿಯಲ್ಲಿ ಕೊಹ್ಲಿ ಪ್ಲಾಫ್.!
ಏಷ್ಯಾಕಪ್ ಟೂರ್ನಿಯ ಇಂಡೋ -ಪಾಕ್ ಫೈಟ್ನ ಮೊದಲ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ಮೇಲೆ ನಿರೀಕ್ಷೆಯ ಭಾರವಿತ್ತು. ಪಾಕ್ ಬೌಲಿಂಗ್ ಅಟ್ಯಾಕ್ ಅನ್ನ ಕಿಂಗ್, ಧೂಳಿಪಟ ಮಾಡ್ತಾರೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ಆದ್ರೆ, ಕೊನೆಯಲ್ಲಿ ಆಗಿದ್ದು ನಿರಾಸೆ..! ಬೌಂಡರಿ ಸಿಡಿಸಿ ಭರ್ಜರಿ ಆರಂಭವನ್ನೇ ಮಾಡಿದ ಕೊಹ್ಲಿಯ ಆಟ ಕೇವಲ 4 ರನ್ಗೆ ಅಂತ್ಯವಾಯ್ತು.
ಸೂಪರ್ ಸಂಡೆ ಮತ್ತೆ ಹೈವೋಲ್ಟೆಜ್ ಕದನ.!
ಗ್ರೂಪ್ ಸ್ಟೇಜ್ ಮುಖಾಮುಖಿಯಲ್ಲಿ ಕೊಹ್ಲಿ, ಊಹಿಸಲಾಗದ ರೀತಿಯಲ್ಲಿ ಔಟಾದ್ರು. ಶಾಹೀನ್ ಅಫ್ರಿದಿ ಎಸೆತದಲ್ಲಿ ಇನ್ಸೈಡ್ ಎಡ್ಜ್ ಆದ ಬೌಲ್ ಬೆಲ್ಸ್ ಎಗರಿಸಿತ್ತು. ಎಸೆತವನ್ನ ಜಡ್ಜ್ ಮಾಡುವಲ್ಲಿ ಎಡವಿದ ಕೊಹ್ಲಿ, ಭಾರವಾದ ಹೆಜ್ಜೆಗಳನ್ನಿಟ್ಟು ಪೆವಿಲಿಯನ್ಗೆ ವಾಪಾಸ್ಸಾಗಿದ್ರು. ಆದ್ರೆ, ಭಾನುವಾರದ ಮುಖಾಮುಖಿಯಲ್ಲಿ ಹಾಗಾಗಲ್ಲ.. ಪಾಕ್ ಬೌಲರ್ಗಳ ದಾಳಿಯನ್ನ ಕೊಹ್ಲಿ ಪುಡಿಗಟ್ಟೋ ಆತ್ಮವಿಶ್ವಾಸದಲ್ಲಿದ್ದಾರೆ.
ಬರೋಬ್ಬರಿ 111ರ ಸರಾಸರಿಯಲ್ಲಿ ರನ್ಗಳಿಕೆ.!
ಹೌದು…! ವಿಶ್ವ ಕ್ರಿಕೆಟ್ ಸಾಮ್ರಾಟ ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಅಧಿಪತ್ಯ ಸಾಧಿಸಿದ್ದಾರೆ. ಈ ಮೈದಾನದಲ್ಲಿ ರನ್ಗಳಿಕೆಯ ಲೆಕ್ಕಾಚಾರದಲ್ಲಿ ತವರಿನ ಶ್ರೀಲಂಕಾದ ದಿಗ್ಗಜ ಆಟಗಾರರನ್ನೇ ಸೈಡ್ ಹೊಡೆದಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಕೊಹ್ಲಿಯೇ ಕೊಲಂಬೋ ಮೈದಾನದ ರಿಯಲ್ ಕಿಂಗ್..!
ಸನತ್ ಜಯಸೂರ್ಯ, ಮಾಹೇಲ ಜಯವರ್ಧನೆ, ಕುಮಾರ್ ಸಂಗಾಕ್ಕರ.. ಇವ್ರೆಲ್ಲಾ ಶ್ರೀಲಂಕಾ ಕ್ರಿಕೆಟ್ ಕಂಡ ದಿಗ್ಗಜ ಆಟಗಾರರು. ತವರಿನ ಕೊಲಂಬೋ ಮೈದಾನದಲ್ಲಿ ಸಾಕಷ್ಟು ಪಂದ್ಯಗಳನ್ನೂ ಆಡಿದ್ದಾರೆ. ಆದ್ರೆ, ರನ್ಗಳಿಕೆಯ ಸರಾಸರಿ ಲೆಕ್ಕಾಚಾರದಲ್ಲಿ ಇವ್ರೆಲ್ಲರೂ ಕೊಹ್ಲಿಗಿಂತ ಹಿಂದಿದ್ದಾರೆ. ಅಷ್ಟು ಕನ್ಸಿಸ್ಟೆಂಟ್ ಆಗಿ ಕಿಂಗ್ ಕೊಹ್ಲಿ ಕೊಲಂಬೋದಲ್ಲಿ ದರ್ಬಾರ್ ನಡೆಸಿದ್ದಾರೆ.
ಕೊಲಂಬೋದಲ್ಲಿ ಕೊಹ್ಲಿ ಪರ್ಫಾಮೆನ್ಸ್
ಪಂದ್ಯ 8
ರನ್ 519
ಸರಾಸರಿ 111
SR 82.83
ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಈವರೆಗೆ 8 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ 519 ರನ್ಗಳಿಸಿದ್ದಾರೆ. 111ರ ಸರಾಸರಿಯಲ್ಲಿ ರನ್ಗಳಿಸಿರೋ ಕೊಹ್ಲಿಯ ಸ್ಟ್ರೈಕ್ರೇಟ್ 82.83.!
ಬಿಗ್ ಮ್ಯಾಚ್ಗಳಲ್ಲಿ ಕೊಹ್ಲಿಯೇ ಆಧಾರ.!
ಕೊಹ್ಲಿಯನ್ನ ವಿಶ್ವ ಕ್ರಿಕೆಟ್ ಲೋಕ ಗುರುತಿಸೋದೆ ಬಿಗ್ ಮ್ಯಾಚ್ ಪ್ಲೇಯರ್ ಅಂತಾ.! ಒತ್ತಡದ ಸಂದರ್ಭದಲ್ಲಿ, ಬಲಿಷ್ಟ ಎದುರಾಳಿಗಳ ಎದುರು, ಛಲ ಬಿಡದೇ ಹೋರಾಟ ನಡೆಸೋದೆ ಕೊಹ್ಲಿಯ ಸ್ಟ್ರೆಂಥ್.! ಸೂಪರ್ ಸಂಡೆಯ ಪಾಕಿಸ್ತಾನ ವಿರುದ್ಧದ ಕದನವೂ ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್.! ಏಷ್ಯಾಕಪ್ ಫೈನಲ್ ದೃಷ್ಟಿಯಿಂದ ಈ ಪಂದ್ಯದಲ್ಲಿ ಗೆಲುವು ತುಂಬಾನೇ ಮುಖ್ಯ. ಹೀಗಾಗಿ ಈ ಪಂದ್ಯದಲ್ಲಿ ವಿರಾಟ್ ಪ್ರದರ್ಶನ ನಿರ್ಣಾಯಕವಾಗಲಿದೆ.
ನಿರೀಕ್ಷೆಯ ಭಾರವಾದ ಮೂಟೆಯನ್ನ ಹೊತ್ತು ಸಿಂಹಳೀಯ ನಾಡಿಗೆ ಕಾಲಿಟ್ಟ ಕೊಹ್ಲಿ, ಮೊದಲ ಪಂದ್ಯದಲ್ಲಿ ಫ್ಲಾಪ್ ಆದ್ರೆ, 2ನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡ್ಲೇ ಇಲ್ಲ. ಇದೀಗ 3ನೇ ಪಂದ್ಯ ಮತ್ತೆ ಬದ್ಧವೈರಿ ಪಾಕ್ ವಿರುದ್ಧವಿದ್ದು, ಫ್ಯಾನ್ಸ್ ವಲಯದಲ್ಲಿ ಕೊಹ್ಲಿ ಜಪ ಜೋರಾಗಿದೆ. ಅಭಿಮಾನಿಗಳ ನಿರೀಕ್ಷೆಯನ್ನ ಕಿಂಗ್ ಕೊಹ್ಲಿ ಫುಲ್ಫಿಲ್ ಮಾಡ್ತಾರಾ.? ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ