newsfirstkannada.com

9 ದಿನಗಳು ಬಾಕಿ.. INDvsPAK​ ಪಂದ್ಯದತ್ತ ಕ್ರಿಕೆಟ್ ಜಗತ್ತಿನ ಚಿತ್ತ; ಯಾರ ಬ್ಯಾಟಿಂಗ್ ಸ್ಟ್ರಾಂಗ್​?

Share :

21-08-2023

    ಆಗಸ್ಟ್​​ 30 ರಿಂದ ಏಷ್ಯಾಕಪ್​​ ಟೂರ್ನಿ ಆರಂಭ

    ಇಂಡೋ VS ಪಾಕ್​​​​..ಯಾರ ಬ್ಯಾಟಿಂಗ್ ಸ್ಟ್ರಾಂಗ್​

    ಈ ವರ್ಷ ರನ್​​ ಗಳಿಕೆಯಲ್ಲಿ ಯಾರು ಬೆಸ್ಟ್​​..?

ಇಂಡೋ-ಪಾಕ್ ಏಷ್ಯಾಕಪ್​ ಪಂದ್ಯಕ್ಕೆ ಕೌಂಟ್​​ಡೌನ್ ಶುರುವಾಗಿದೆ. ಯಾರು ಗೆಲ್ತಾರೆ ? ಯಾರು ಸೋಲ್ತಾರೆ? ಅನ್ನೋ ಚರ್ಚೆ ಕೂಡ ಜೋರಾಗಿದೆ. ಈ ಬಾರಿ ಅಖಾಡದಲ್ಲಿ ಬ್ಯಾಟಿಂಗ್ ವಾರ್ ನಡೆಯೋದು ಪಕ್ಕಾ.! ಹಾಗಾದ್ರೆ ಯಾವ ಟೀಮ್​ ಬ್ಯಾಟಿಂಗ್​​​ ಸ್ಟ್ರಾಂಗ್ ಆಗಿದೆ. ಭಾರತದ್ದಾ ? ಇಲ್ಲ ಪಾಕ್​​ದಾ ? ಆ ಕುರಿತ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ.

ಆಗಸ್ಟ್​​​​ 30 ರಿಂದ ಕ್ರಿಕೆಟ್ ಪ್ರೇಮಿಗಳನ್ನ ಹಿಡಿಯೋರೆ ಇಲ್ಲ. ಯಾಕಂದ್ರೆ ಅವತ್ತಿನಿಂದ ಅಸಲಿ ಕ್ರಿಕೆಟ್ ಫೆಸ್ಟಿವಲ್ ಶುರುವಾಗಲಿದೆ. ಏಷ್ಯಾಕಪ್​​ನಿಂದ ಶುರುವಾಗಿ ಒನ್ಡೇ ವಿಶ್ವಕಪ್​​​​​ ತನಕ ಅಭಿಮಾನಿ ದೇವರುಗಳು ಮನರಂಜನೆ ಅಲೆಯಲ್ಲಿ ತೇಲಾಡಲಿದ್ದಾರೆ. ಅದ್ರಲ್ಲೂ ಬದ್ಧವೈರಿ ಇಂಡೋ-ಪಾಕ್​ ಪಂದ್ಯವೆಂದ್ರೆ ಮುಗಿದೇ ಹೋಯ್ತು. ಫುಲ್​ ಮೀಲ್ಸ್ ಸವಿಯೋದು ಪಕ್ಕಾ.

ಟೀಮ್ ಇಂಡಿಯದ್ದಾ ? ಬದ್ಧವೈರಿ ಪಾಕಿಸ್ತಾನದ್ದಾ..?

ಆಗಸ್ಟ್​​ 30ಕ್ಕೆ ಏಷ್ಯಾಕಪ್ ಟೂರ್ನಿ ಶುರುವಾದ್ರು, ಅಸಲಿಗೆ ಪಂದ್ಯಾವಳಿ ರಂಗೇರೋದು ಸೆಪ್ಟಂಬರ್​​ 2 ರಿಂದ. ಯಾಕಂದ್ರೆ ಅಂದು ಬದ್ಧವೈರಿಗಳಾದ ಇಂಡೋ-ಪಾಕ್​​ ಕಾದಾಡಲಿವೆ. ಈ ಸೇಡಿನ ಸಮರ ಡೆಫಿನೆಟ್ಲಿ ಬ್ಯಾಟಿಂಗ್​​ ವಾರ್​​​​​​​ ಆಗಿ ಬದಲಾಗಲಿದೆ. ಯಾಕಂದ್ರೆ, ಎರಡೂ ಟೀಮ್ಸ್​​ನಲ್ಲಿ ವರ್ಲ್ಡ್ ಕ್ಲಾಸ್​​ ಬ್ಯಾಟ್ಸ್​​ಮನ್​​ಗಳಿದ್ದಾರೆ.

ODI ಱಂಕಿಂಗ್​ನಲ್ಲಿ ಭಾರತೀಯ ಬ್ಯಾಟರ್ಸ್​

ಶುಭ್​ಮನ್​ ಗಿಲ್​ – 5
ವಿರಾಟ್ ಕೊಹ್ಲಿ – 9

ಐಸಿಸಿ ಏಕದಿನ ಬ್ಯಾಟ್ಸ್​ಮನ್​ಗಳ ಟಾಪ್​​​-10 ಱಂಕಿಂಗ್​​ನಲ್ಲಿ ಟೀಮ್ ಇಂಡಿಯಾದ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ. ಶುಭ್​ಮನ್ ಗಿಲ್​ 5ನೇ ಱಂಕಿಂಗ್​ ಹೊಂದಿದ್ರೆ, ವಿರಾಟ್ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ. ಭಾರತೀಯ ಬ್ಯಾಟ್ಸ್​ಮನ್​ಗಳಿಗೆ ಹೋಲಿಸಿದ್ರೆ ಪಾಕಿಸ್ತಾನ ಪ್ಲೇಯರ್ಸ್​ ಐಸಿಸಿ ಱಂಕಿಂಗ್​​ನಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ.

ODI ಱಂಕಿಂಗ್​ನಲ್ಲಿ ಪಾಕಿಸ್ತಾನ ಬ್ಯಾಟರ್ಸ್​
ಬಾಬರ್ ಅಝಂ​ – 1
ಫಖರ್ ಜಮಾನ್ ​ – 3
ಇಮಾಮ್​ ಉಲ್​ ಹಕ್​ – 4

ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಅಝಂ ಏಕದಿನ ಱಕಿಂಗ್​​ನಲ್ಲಿ ನಂಬರ್​​ 1 ಪಟ್ಟ ಅಲಂಕರಿಸಿದ್ದಾರೆ. ಇನ್ನು ಫಖರ್ ಝಮಾನ್ 3 ಹಾಗೂ ಇಮಾಮ್​​​ ಉಲ್​​ ಹಕ್​ 4ನೇ ಱಂಕಿಂಗ್​​​ ಸಂಪಾದಿಸಿದ್ದಾರೆ.

ಱಂಕಿಂಗ್​ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾ ಬ್ಯಾಟರ್ಸ್​ ಹಿನ್ನಡೆ ಅನುಭವಿಸಿರಬಹುದು. ಆದ್ರೆ, ಪ್ರಸಕ್ತ ವರ್ಷ ಏಕದಿನ ಫಾರ್ಮೆಟ್​ನಲ್ಲಿ ಟೀಮ್ ಇಂಡಿಯಾ ಪ್ಲೇಯರ್ಸ್​ ರನ್ ಭರಾಟೆ ನಡೆಸಿದ್ದಾರೆ. ಆ ಪೈಕಿ ಯಂಗ್​ಗನ್​ ಶುಭ್​​ಮನ್ ಗಿಲ್​ ಅಂತೂ ಧೂಳೆಬ್ಬಿಸಿದ್ದಾರೆ.

ಈ ವರ್ಷ ಏಕದಿನದಲ್ಲಿ ಭಾರತೀಯರ ಪ್ರದರ್ಶನ.. ಆಟಗಾರ ಪಂದ್ಯ ರನ್​ ಸರಾಸರಿ
ಕೊಹ್ಲಿ 10 427 53.37
ರೋಹಿತ್​ 09 383 47.87
ಗಿಲ್​ 12 750 68.18

2023 ರಲ್ಲಿ ಆಡಿದ 10 ಪಂದ್ಯಗಳಿಂದ ವಿರಾಟ್​ ಕೊಹ್ಲಿ 53.37ರ ಸರಾಸರಿ​ಯಲ್ಲಿ 427 ರನ್​ ಬಾರಿಸಿದ್ದಾರೆ. 1 ಶತಕ, 2 ಹಾಫ್​ಸೆಂಚುರಿ ಮೂಡಿ ಬಂದಿವೆ. ಕ್ಯಾಪ್ಟನ್ ರೋಹಿತ್ 9 ಇನ್ನಿಂಗ್ಸ್ ಆಡಿದ್ದು 47.87ರ ಸರಾಸರಿಯಲ್ಲಿ 383 ರನ್​ ಕೊಳ್ಳೆ ಹೊಡೆದಿದ್ದಾರೆ. ಶುಭ್​ಮನ್​ ಗಿಲ್​ ಆಡಿದ 12 ಇನ್ನಿಂಗ್ಸ್​​ಗಳಿಂದ 68.18 ಎವರೇಜ್​ನಲ್ಲಿ 750 ರನ್​ಗಳಿಸಿದ್ದಾರೆ.

ಟೀಮ್​ ಇಂಡಿಯಾ ಬ್ಯಾಟರ್ಸ್​ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ ಎಂದ ಮಾತ್ರಕ್ಕೆ ಪಾಕ್​ ಪ್ಲೇಯರ್ಸ್​​ನ ಸಾದಾರಣಕ್ಕೆ ಪರಿಗಣಿಸುವಂತೇ ಇಲ್ಲ.. ಪಾಕ್​​​​ ಪ್ಲೇಯರ್ಸ್​ ಕೂಡ ನಾವೇನು ಕಮ್ಮಿ ಎನ್ನುವಂತೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ್ದಾರೆ.

ಈ ವರ್ಷ ಏಕದಿನದಲ್ಲಿ ಪಾಕ್​ ಆಟಗಾರರ ಪ್ರದರ್ಶನ..ಆಟಗಾರ ಪಂದ್ಯ ರನ್​ ಎವರೇಜ್

ಬಾಬರ್​​ 8 425 53.13
ಫಖಾರ್​ 8 520 74.29
ರಿಜ್ವಾನ್​​ 8 343 68.60
ಇಫ್ತಿಖಾರ್​​ 2 122 122.00

ಬಾಬರ್​ ಅಝಂ​ ಈ ವರ್ಷ 8 ಪಂದ್ಯ ಆಡಿದ್ದೂ, 53.13 ರ ಎವರೇಜ್​ನಲ್ಲಿ 425 ರನ್​ ಬಾರಿಸಿದ್ದಾರೆ. ಫಖಾರ್​​​ ಝಮಾನ್​ 8 ಮ್ಯಾಚ್​ ಆಡಿ 74.29 ಸರಾಸರಿಯಲ್ಲಿ 520 ರನ್ ಗಳಿಸಿದ್ದಾರೆ. ಇನ್ನು, ಮೊಹಮ್ಮದ್ ರಿಜ್ವಾನ್​​ 8 ಪಂದ್ಯಗಳಿಂದ 68.60 ರ ಸರಾಸರಿಯಲ್ಲಿ 343 ರನ್ ಬಾರಿಸಿದ್ದಾರೆ. ಇಫ್ತಿಕಾರ್​ ಅಹಮ್ಮದ್​ 2 ಪಂದ್ಯ ಆಡಿ 122ರ ಎವರೇಜ್​​​ನಲ್ಲಿ ಒಂದು ಹಾಫ್​ಸೆಂಚುರಿ ಸಹಿತ 122 ರನ್​ ಬಾರಿಸಿದ್ದಾರೆ.

ಒಟ್ಟಿನಲ್ಲಿ ಐಸಿಸಿ ಱಂಕಿಂಗ್​​​ ಹಾಗೂ ಪ್ರಸಕ್ತ ವರ್ಷದ ರನ್ ಗಳಿಕೆ ನೋಡಿದ್ರೆ ಟೀಮ್ ಇಂಡಿಯಾಗಿಂತ ಪಾಕಿಸ್ತಾನ ಬ್ಯಾಟಿಂಗ್​​ಲೈನ್​ ಅಪ್​​ ಉತ್ತಮವಾಗಿ ಕಾಣಿಸ್ತಿದೆ. ಇದು ಟೀಮ್​ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆ ಅಂದ್ರೂ ತಪ್ಪಾಗಲ್ಲ.. ಯಾಕಂದ್ರೆ, ಪಾಕ್​ ಬೌಲಿಂಗ್​ ಸಿಕ್ಕಾಪಟ್ಟೆ ಬಲಿಷ್ಟವಾಗಿದೆ. ಹೀಗಾಗಿ ಭಾರತೀಯ ಬ್ಯಾಟರ್ಸ್​ ಎಚ್ಚರಿಕೆಯ ಆಟವಾಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

9 ದಿನಗಳು ಬಾಕಿ.. INDvsPAK​ ಪಂದ್ಯದತ್ತ ಕ್ರಿಕೆಟ್ ಜಗತ್ತಿನ ಚಿತ್ತ; ಯಾರ ಬ್ಯಾಟಿಂಗ್ ಸ್ಟ್ರಾಂಗ್​?

https://newsfirstlive.com/wp-content/uploads/2023/06/INDVSPAK_MATCH_1.jpg

Load More