newsfirstkannada.com

ಹೈವೋಲ್ಟೇಜ್ ಮ್ಯಾಚ್​​ಗೆ ತಣ್ಣೀರು ಎರಚಿದ ವರುಣ.. ಆದರೂ ಪಾಕ್ ವಿರುದ್ಧ ಟೀಮ್ ಇಂಡಿಯಾದ ಬ್ಯಾಟಿಂಗ್ ಹೇಗಿತ್ತು?

Share :

03-09-2023

  ಶಾಹೀನ್ ಆಫ್ರಿದಿ ದಾಳಿ ಟಾಪ್ ಆರ್ಡರ್ ಕಂಗಾಲ್

  ಪಂದ್ಯದಲ್ಲಿ ರೋಹಿತ್ ಲೆಕ್ಕಚಾರಗಳು ತಲೆಕೆಳಗಾದವು

  ಇಶನ್ ಕಿಶನ್, ಹಾರ್ದಿಕ್ ಅಬ್ಬರದ ಬ್ಯಾಟಿಂಗ್ ಹೇಗಿತ್ತು?

ನಿನ್ನೆ ಹೈ ಎಕ್ಸ್​ಪೆಕ್ಟೇಷನ್​​​ನಲ್ಲಿದ್ದ ಫ್ಯಾನ್ಸ್​ಗೆ ಆದ ನಿರಾಸೆ ಅಷ್ಟಿಷ್ಟಲ್ಲ. ಮೊದಲ ಇನ್ನಿಂಗ್ಸ್ ಟೀಮ್ ಇಂಡಿಯಾ ಬ್ಯಾಟಿಂಗ್, ಪಾಕ್ ಬೌಲರ್​​ಗಳ ಫೈರಿ ಸ್ಪೆಲ್​​​​​​​ ಕಣ್ತುಂಬಿಕೊಂಡಿದ್ದ ಫ್ಯಾನ್ಸ್, 2ನೇ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ಪರಾಕ್ರಮ ನೋಡಲು ಕಾದು ಕುಳಿತಿದ್ರು. ಆದರೆ, ಮಳೆಯಾಟದಲ್ಲಿ ಹೈವೋಲ್ಟೇಜ್​ ಮ್ಯಾಚ್​ ಕೊಚ್ಚಿ ಹೋಯ್ತು.

ಭಾರತ ಮತ್ತು ಪಾಕ್ ಆಟಗಾರರು

ಪಲ್ಲೆಕೆಲೆಯಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಆದ್ರೆ, ರೋಹಿತ್ ಲೆಕ್ಕಚಾರಗಳೆಲ್ಲ ಉಲ್ಟಾ ಆಯ್ತು. ಮೊದಲ ಪವರ್​ ಪ್ಲೇನಲ್ಲೇ ಟೀಮ್ ಇಂಡಿಯಾ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆತ್ಮವಿಶ್ವಾಸದಿಂದ ಬ್ಯಾಟಿಂಗ್ ನಡೆಸಿದ ಜೋಡಿ

5ನೇ ವಿಕೆಟ್​ಗೆ ಜೊತೆಯಾದ ಇಶಾನ್​ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಸರೆಯಾದ್ರು. 138 ರನ್​ಗಳ ಜೊತೆಯಾಟವಾಡಿದ ಈ ಜೋಡಿ, ಪಾಕ್​ ಬೌಲರ್​ಗಳನ್ನ ಕಾಡಿದರು. ಒತ್ತಡದಲ್ಲೂ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಾಕ್ ದಾಳಿಯನ್ನ ಧೂಳೀಪಟ ಮಾಡಿತ್ತು. ಅಷ್ಟೇ ಅಲ್ಲ, ಉಭಯ ಬ್ಯಾಟ್ಸ್​ಮನ್​ಗಳು ತಲಾ ಅರ್ಧಶತಕ ಸಿಡಿಸಿ ಮಿಂಚಿದರು.

266 ರನ್​ಗಳಿಗೆ ಟೀಮ್ ಇಂಡಿಯಾ ಆಲೌಟ್

ಅರ್ಧಶತಕ ಸಿಡಿಸುತ್ತಿದ್ದಂತೆ ಬಿಗ್ ಹಿಟ್ಟಿಂಗ್​​ಗೆ ಮೊರೆಹೋದ ಇಶಾನ್ ಕಿಶನ್ 82 ರನ್​ ಗಳಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ ಹೋರಾಟ 87 ರನ್​ಗಳಿಗೆ ಅಂತ್ಯಗೊಂಡಿತು. ಜಡೇಜಾ 14 ರನ್​​, ಶಾರ್ದೂಲ್​​ 3 ರನ್ ಮತ್ತು ಬೂಮ್ರಾ16 ರನ್​​ ಗಳಿಸಿದ್ರು. ಅಂತಿಮವಾಗಿ ಟೀಮ್ ಇಂಡಿಯಾ 48.5 ಓವರ್​ಗಳಲ್ಲಿ 266 ರನ್​ಗಳಿಗೆ ಆಲೌಟ್ ಆಯ್ತು. ಪಾಕ್​ ಪರ ಶಾಹೀನ್ ಅಫ್ರಿದಿ 4 ಮತ್ತು ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಪಡೆದ್ರು.

ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಕೊಹ್ಲಿ ಔಟ್ ಆದ ಕ್ಷಣ

ಟೀಮ್ ಇಂಡಿಯಾದ ಬ್ಯಾಟಿಂಗ್ ಮುಗಿದಿದ್ದೆ ತಡ, ನಂತರ ಮಳೆಯಾಟ ಶುರುವಾಯಿತು. ಕೊನೆಯವರೆಗೂ ಕಾದು ಕಾದು ಅಂಪೈರ್ಸ್ ಹಾಗೂ ಪ್ಲೇಯರ್ಸ್ ಸುಸ್ತಾದ್ರು. ಎಷ್ಟೇ ಕಾದರೂ ಮಳೆ ನಿಲ್ಲದ ಕಾರಣ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್​, ಪಂದ್ಯ ರದ್ದುಗೊಳಿಸಿದ್ರು. ಉಭಯ ತಂಡಗಳು ತಲಾ ಒಂದು ಅಂಕ ಸಂಪಾದಿಸಿದ್ವು. ಇದರೊಂದಿಗೆ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಪಾಕಿಸ್ತಾನ ಸೂಪರ್-4 ಎಂಟ್ರಿ ನೀಡ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹೈವೋಲ್ಟೇಜ್ ಮ್ಯಾಚ್​​ಗೆ ತಣ್ಣೀರು ಎರಚಿದ ವರುಣ.. ಆದರೂ ಪಾಕ್ ವಿರುದ್ಧ ಟೀಮ್ ಇಂಡಿಯಾದ ಬ್ಯಾಟಿಂಗ್ ಹೇಗಿತ್ತು?

https://newsfirstlive.com/wp-content/uploads/2023/09/HARDHIK_ISHAN.jpg

Load More