newsfirstkannada.com

ಕುತೂಹಲ ಕೆರಳಿಸಿದೆ INDvsPAK ಪಂದ್ಯ.. ಪಾಕ್​​​ ಸಂಹಾರಕ್ಕೆ ಸಿದ್ದವಾಗಿ ನಿಂತಿದ್ದಾರೆ ಭಾರತದ 5 ಪವರ್​​ಫುಲ್​ ಬ್ರಹ್ಮಾಸ್ತ್ರಗಳು!

Share :

01-09-2023

  ಏಷ್ಯಾಕಪ್​​​​​​​​ನಲ್ಲಿ ಇಂಡೋ-ಪಾಕ್ ವಾರ್​​, ಹೆಚ್ಚಿಸಿದೆ ಹಾರ್ಟ್​ ಬೀಟ್​

  ಈ 5 ವೆಪನ್​ಗಳು​ ಸಿಡಿದರೆ ಪಾಕ್ ಉಡೀಸ್ ಫಿಕ್ಸ್​​..!

  ಪಲ್ಲೆಕೆಲೆಯಲ್ಲಿ ಪಾಕ್​ ಸೋಲಿನ ಖೆಡ್ಡಾಗೆ ಬೀಳೋದು ಗ್ಯಾರಂಟಿ

ಸದ್ಯ ಇಡೀ ವಿಶ್ವದುದ್ದಕ್ಕೂ ಇಂಡೋ-ಪಾಕ್​​​​ ಪಂದ್ಯದ ಕ್ರೇಜ್​ ಆವರಿಸಿ ಬಿಟ್ಟಿದೆ. ಈ ಮಹಾಬ್ಯಾಟಲ್​​​ನಲ್ಲಿ ಬದ್ಧವೈರಿ ಪಾಕಿಸ್ತಾನದ ಹೆಡೆಮುರಿಕಟ್ಟಲು ಭಾರತದ ಬತ್ತಳಿಕೆಯಲ್ಲಿ 5 ಬ್ರಹ್ಮಾಸ್ತ್ರಗಳಿವೆ. ಈ 5 ಬಿಗ್ ವೆಪನ್ಸ್​ ಮುಂದೆ ಬಾಬರ್​​ ಬಳಗದ ಲೆಕ್ಕಚಾರ ಠುಸ್ ಪಟಾಕಿ ಆಗೋದು ಗ್ಯಾರಂಟಿ.

ಇಂಡೋ – ಪಾಕ್​ ವಿರುದ್ಧದ ಪಂದ್ಯ ಅಂದ್ರೆ ಅದು ಬ್ಯಾಟ್​ & ಬಾಲ್​ನ ಗೇಮ್​ ಮಾತ್ರವಾಗಿರಲ್ಲ. ಅಲ್ಲಿ ಒಂದೊಂದು ಎಸೆತಕ್ಕೂ ಟ್ವಿಸ್ಟ್​ & ಟರ್ನ್​​, ಹಂತ ಹಂತಕ್ಕೂ ರೋಚಕತೆ, ಮಾತಿನ ವಾಕ್ಸಮರ, ಏಟಿಗೆ ಎದಿರೇಟು ಎಂಬ ಭಾವೋದ್ವೇಗ, ಹಾಗೂ ಸೇಡಿನ ಜ್ವಾಲೆ ಈ ಎಲ್ಲದರ ಮಿಶ್ರಣ. ಹೀಗಾಗಿಯೇ ಈ ಪಂದ್ಯವನ್ನ ನೋಡಲು ಕೇವಲ ಭಾರತ- ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿಗಳು ಮಾತ್ರವಲ್ಲ, ಇಡೀ ವಿಶ್ವವೇ ಕಾಯ್ತಿದೆ.

ನಾಳೆ ಏಷ್ಯಾಕಪ್​ ರಣರಂಗದಲ್ಲಿ ಬದ್ಧವೈರಿಗಳ ಮುಖಾಮುಖಿಯಾಗಲಿದೆ. ಪ್ರತಿಷ್ಠೆಯ ಕಾಳಗ ಗೆಲ್ಲಲು ಉಭಯ ತಂಡಗಳು​​ ನಾನಾ ತಂತ್ರ-ಪ್ರತಿತಂತ್ರ ರೂಪಿಸಿವೆ. ಆದ್ರೆ, ಈ ಬಾರಿ ಪಾಕ್​​​​​​ ಎಷ್ಟೇ ತಿಪ್ಪರಲಾಗ ಹಾಕಿದ್ರು ಬ್ಲೂ ಬಾಯ್ಸ್​ ಮುಂದೆ ಮಂಡಿಯೂರೋದು ಪಕ್ಕಾ.! ಯಾಕಂದ್ರೆ ಪಾಕ್​​​ ಸಂಹಾರಕ್ಕೆ ಭಾರತದ ಬತ್ತಳಿಕೆಯಲ್ಲಿ 5 ಪವರ್​​ಫುಲ್​ ಬ್ರಹ್ಮಾಸ್ತ್ರಗಳಿವೆ. ಒಂದೊಂದು ವೆಪನ್ಸ್​​ ತುಂಬಾನೇ ಡೇಂಜರಸ್​​​. ಈ 5 ವೆಪನ್ಸ್​​ ಸಿಡಿದು ಬಿಟ್ರೆ ಪಾಕ್​​ಗೆ ಬೇರೆ ದಾರಿಯೇ ಇಲ್ಲ. ಸೋಲೊಂದೇ ದಾರಿ.

ವೆಪನ್​​ ನಂ.1: ವಿರಾಟ್ ಕೊಹ್ಲಿ

ಕಿಂಗ್ ಕೊಹ್ಲಿ ಬಿಗ್ ಈವೆಂಟ್​​ನಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟುವ ಪಂಟರ್​​. ಅದ್ರಲ್ಲೂ ಪಾಕ್​​​​ ಅಂದ್ರಂತೂ ಮುಗಿದೆ ಹೋಯ್ತು. ಉಗ್ರನರಸಿಂಹನ ರೂಪ ಫಿಕ್ಸ್​​. ಪಾಕ್​ ಎದುರಿನ ಏಕದಿನ ಪಂದ್ಯಗಳಲ್ಲಿ ಈ ಹಿಂದೆ ರಣಾರ್ಭಟ ನಡೆಸಿರೋದೆ ಇದಕ್ಕೆ ಸಾಕ್ಷಿ. ಕೊಹ್ಲಿ ಈವರೆಗೆ ಪಾಕ್​​ ವಿರುದ್ಧ 13 ಇನ್ನಿಂಗ್ಸ್ ಆಡಿ 536 ರನ್​ ಚಚ್ಚಿದ್ದಾರೆ. 2022ರ ಟಿ20 ವಿಶ್ವಕಪ್​​ನಲ್ಲಿ ವಿರಾಟರೂಪ ತಾಳಿದ್ದ ಕೊಹ್ಲಿ, ನಾಳೆ ಏಷ್ಯಾಕಪ್​​ನಲ್ಲಿ ಪಾಕ್​​​​ ವಿರುದ್ಧ ಅದೇ ಖದರ್​ ರಿಪೀಟ್ ಮಾಡಿದ್ರು ಅಚ್ಚರಿಪಡಬೇಕಿಲ್ಲ.

ವೆಪನ್​​ ನಂ.2: ರೋಹಿತ್ ಶರ್ಮಾ

ಹೇಳಿಕೇಳಿ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್​ ಕಂಡ ಸ್ಟಾರ್​ ಓಪನರ್​​. ಬ್ಯಾಟ್​​ ಹಿಡಿದು ಅಂಗಳಕ್ಕಿಳಿದ್ರೆ ಸಾಕು ರನ್​ ಶಿಖರ ಕಟ್ಟೋ ಚತುರ. ಅದ್ರಲ್ಲೂ ಪಾಕ್​​​ ಎದುರಾಳಿ ಅಂದ್ರೆ ಸಾಕು.. ಹೈ ಪ್ರೆಶರ್ ಗೇಮ್​​ನಲ್ಲಿ ಹೈ ಪರ್ಫಾಮೆನ್ಸ್​ ನೀಡದೇ ಹಿಂತಿರುಗಲ್ಲ. ಈಗಿರೋ ಆಟಗಾರರಲ್ಲಿ ಹಿಟ್​ಮ್ಯಾನ್​, ಪಾಕ್ ವಿರುದ್ಧ ಅತಿ ಹೆಚ್ಚು ರನ್​ ಹೊಡೆದಿದ್ದಾರೆ. 16 ಪಂದ್ಯಗಳಿಂದ 720 ಚಚ್ಚಿ ಪಾಕ್​​​​​​​​​​​ ನಿದ್ದೆಗೆಡಿಸಿದ್ದಾರೆ.

ವೆಪನ್​​ ನಂ.3: ಹಾರ್ದಿಕ್​ ಪಾಂಡ್ಯ

ಇನ್ನು ಹಾರ್ದಿಕ್​ ವರ್ಸಸ್​​​​ ಪಾಕ್​​​​​​​ ಕಿಚ್ಚಿನ ಹೋರಾಟದ ಬಗ್ಗೆ ಹೆಚ್ಚು ಬಿಡಿಸಿ ಹೇಳಬೇಕಿಲ್ಲ. 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್​​, 2022ರ ಟಿ20 ವಿಶ್ವಕಪ್​ ನಲ್ಲಿ ವೀರಾವೇಶ ತೋರಿದ್ರು. ಇಲ್ಲಿತನಕ ಪಾಕ್​ ಎದುರು 4 ಪಂದ್ಯ ಆಡಿರೋ ಸ್ಟಾರ್ ಆಲ್​ರೌಂಡರ್ 179 ರ ಸ್ಟ್ರೈಕ್​ರೇಟ್​ನಲ್ಲಿ 122 ರನ್ ಹಾಗೂ 5 ವಿಕೆಟ್ ಕಬಳಿಸಿದ್ದಾರೆ. ಪಾಂಡ್ಯರ ಆಲ್​ರೌಂಡರ್​ ಧಮಾಕ ಬಾಬರ್​ ಅಝಂ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ವೆಪನ್​​ ನಂ.4: ರವೀಂದ್ರ ಜಡೇಜಾ

ಪಾಕ್​​ ತಂಡಕ್ಕೆ ಬಿಗ್​ ಥ್ರೆಟ್ ಆಗಿರೋ ಪರಿಣಮಿಸಿರೋ ಮತ್ತೊಬ್ಬ ಆಟಗಾರ ಅಂದ್ರೆ, ಆಲ್​ರೌಂಡರ್​​ ರವೀಂದ್ರ ಜಡೇಜಾ. ಅಪಾರ ಅನುಭವಿ ಜಡ್ಡು ಪಾಕಿಸ್ತಾನ ಎದುರು ಉತ್ತಮ ರೆಕಾರ್ಡ್​ ಹೊಂದಿದ್ದಾರೆ. ಆಡಿದ 9 ಪಂದ್ಯದಿಂದ 116 ರನ್ ಸಹಿತ 10 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಜಡ್ಡು ನಾಳೆಯೂ ಇಂಪ್ರೆಸ್ಸಿವ್​​ ಆಟವಾಡಿ ಪಾಕ್​​​​ಗೆ ಸೋಲಿನ ರುಚಿ ತೋರಿಸುವ ತವಕದಲ್ಲಿದ್ದಾರೆ.

ವೆಪನ್​​ ನಂ.5: ಜಸ್​​​ಪ್ರಿತ್​ ಬೂಮ್ರಾ

ಪಾಕಿಸ್ತಾನ ಪಡೆ ನಮ್ಮ ಬತ್ತಳಿಕೆಯಲ್ಲಿ ಬಾಬರ್​ ಅಝಂ, ಮೊಹಮ್ಮದ್ ರಿಜ್ವಾನ್​, ಫಖಾರ್​​ ಜಮಾನ್​ ಇದಾರೆ ಅಂತಿದೆ.. ಈ ಮೂವರಿಗೆ ಸುಲಭಕ್ಕೆ ಪೆವಿಲಿಯನ್​ ದಾರಿ ತೋರಿಸೋ ಯಾರ್ಕರ್​ ಸ್ಪೆಷಲಿಸ್ಟ್​ ಬೂಮ್ರಾ ಬಲ ಭಾರತಕ್ಕಿದೆ. ಕಮ್​ಬ್ಯಾಕ್​ ಕಿಂಗ್​ ಬೂಮ್ರಾ ಟೀಮ್​ ಇಂಡಿಯಾ ಮೇನ್​ ವೆಪನ್​..!

ಒಟ್ಟಿನಲ್ಲಿ, ಬದ್ಧವೈರಿ ಪಾಕ್​​​ ಸೊಕ್ಕಡಗಿಸಲು ಟೀಮ್ ಇಂಡಿಯಾದ 5 ಪವರ್​​​ಫುಲ್ ವೆಪನ್ಸ್ ಕಾದು ಕುಳಿತಿವೆ. ಹಾಗಂತ ಉಳಿದ ಆಟಗಾರರು ಏನು ಕಡಿಮೆ ಅನ್ಕೋಬೇಡಿ.. ಇಡೀ ಟೀಮ್​ ಇಂಡಿಯಾನೇ ಪಾಕ್​ ಸೋಲಿಸೋ ಪಣ ತೊಟ್ಟಿದೆ. ರಣಾಂಗಣದಲ್ಲಿ ಘರ್ಜಿಸೋದಷ್ಟೇ ರೋಹಿತ್​ ಪಡೆಯ ಗುರಿಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕುತೂಹಲ ಕೆರಳಿಸಿದೆ INDvsPAK ಪಂದ್ಯ.. ಪಾಕ್​​​ ಸಂಹಾರಕ್ಕೆ ಸಿದ್ದವಾಗಿ ನಿಂತಿದ್ದಾರೆ ಭಾರತದ 5 ಪವರ್​​ಫುಲ್​ ಬ್ರಹ್ಮಾಸ್ತ್ರಗಳು!

https://newsfirstlive.com/wp-content/uploads/2023/08/Team-India-2.jpg

Load More