ಕೊಹ್ಲಿಯ ಆಟ ಅದ್ಭುತ, ಸಿಕ್ಸರ್ ಮನಮೋಹಕ.!
ವಿರಾಟ್ ಕೊಹ್ಲಿ ಆಟಕ್ಕೆ ಕ್ರಿಕೆಟ್ ಲೋಕ ಫಿದಾ.!
ಹೇಗಿತ್ತು ಸೆಂಚೂರಿ ಸರದಾರನ ಶತಕದ ಆಟ..?
ವಿರಾಟ್ ಕೊಹ್ಲಿ ನಿನ್ನೆ ಪಾಕ್ ವಿರುದ್ಧ ಸೆಂಚುರಿ ಚಚ್ಚಿ ಆರ್ಭಟಿಸಿದ್ದು, ಒಂದಿಷ್ಟು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಇನ್ನು ಹಲವು ಫ್ಯಾನ್ಸ್ಗೆ ಪಕ್ಕಾ ಟ್ರೀಟ್ ನೀಡಿದ್ದು ಆ 2 ಸಿಕ್ಸರ್. ಆ ಅದ್ಭುತ ಶಾಟ್ಗಳಿಗೆ ಕ್ರಿಕೆಟ್ ಲೋಕವೇ ಫಿದಾ ಆಗಿದೆ.
ಇಂಡೋ-ಪಾಕ್.. ಕ್ರಿಕೆಟ್ ಫೈಟ್ ಅಂದ್ರೆ ಮುಗೀತು. ಇಡೀ ವಿಶ್ವ ಕ್ರಿಕೆಟ್ ಜಗತ್ತೇ ಪಂದ್ಯವನ್ನ ನೋಡಲು ಕಾದು ಕುಳಿತಿರುತ್ತೆ. ಇಡೀ ವಿಶ್ವದ ಮೂಲೆ ಮೂಲೆಯ ಕ್ರಿಕೆಟ್ ಅಭಿಮಾನಿಗಳಲ್ಲೂ ಹೈ-ವೋಲ್ಟೆಜ್ ಕದನವನ್ನು ಕಣ್ತುಂಬಿಕೊಳ್ಳೋ ಹಂಬಲವಿರುತ್ತೆ. ನಿನ್ನೆ, ಮೊನ್ನೆಯಿಂದಲ್ಲ.. ಇದಕ್ಕಿರೋ ಇತಿಹಾಸ ತುಂಬಾ ದೊಡ್ಡದು. ಆದ್ರೆ ಕೆಲ ವರ್ಷಗಳಿಂದ ಇದ್ರಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಆ ಬದಲಾವಣೆ ತಂದಿದ್ದೇ ಕಿಂಗ್ ಕೊಹ್ಲಿ.
ಮೊದಲೆಲ್ಲಾ ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ಅನ್ನೋ ಕಾರಣಕ್ಕೆ ಕ್ರಿಕೆಟ್ ಲೋಕದಲ್ಲಿ ಇದರ ಕ್ರೇಜ್ ಹೆಚ್ಚಾಗ್ತಿತ್ತು. ಈಗ ವಿರಾಟ್ ಕೊಹ್ಲಿ ಅನ್ನೋ ಆ ಕ್ರೇಜ್ನ ಇನ್ನಷ್ಟು ಹೆಚ್ಚು ಮಾಡ್ತಿದೆ. ಕಿಂಗ್ ಕೊಹ್ಲಿಯಲ್ಲಿರೋ ಕಿಚ್ಚು, ಛಲ, ಅಗ್ರೆಶನ್, ಎಲ್ಲವೂ ಅಭಿಮಾನಿಗಳ ಕ್ಯೂರಿಯಾಸಿಟಿಯನ್ನು ಹೆಚ್ಚಿಸ್ತಿದೆ. ಒಂದೇ ಮಾತಲ್ಲಿ ಹೇಳಬೇಕಂದ್ರೆ ಭಾರತ vs ಪಾಕಿಸ್ತಾನ ಅಲ್ಲ. ಕೊಹ್ಲಿ vs ಪಾಕ್ ಫೈಟ್ ಅಂತಾನೇ ಫ್ಯಾನ್ಸ್ ಕರಿತಿರೋದು.
ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಕೊಹ್ಲಿಯೇ ಸೆಂಟರ್ ಆಫ್ ಅಟ್ರಾಕ್ಷನ್ ಆಗ್ತಾರೆ. ಏಷ್ಯಾಕಪ್ ಟೂರ್ನಿಯ ಲೀಗ್ ಫೈಟ್ನಲ್ಲಿ ಪ್ಲಾಫ್ ಶೋ ನೀಡಿದ್ರೂ ಕೊಹ್ಲಿಯೇ ಸೂಪರ್-4 ಪಂದ್ಯಕ್ಕೂ ಮುನ್ನ ಎಲ್ಲರ ಕೂತೂಹಲಕ್ಕೆ ಕಾರಣವಾಗಿದ್ರು. ಯಾಕಂದ್ರೆ ಬಿಗ್ಸ್ಟೇಜ್, ಬಿಗ್ ಗೇಮ್, ಹೈ-ಪ್ರೆಶರ್ ಇದ್ದಷ್ಟೂ ಕೊಹ್ಲಿಯ ಘರ್ಜನೆ ಜೋರಾಗಿರುತ್ತೆ. ನಿನ್ನೆಯೂ ಪಾಕ್ ವಿರುದ್ಧ ಕೊಹ್ಲಿ ಸಿಡಿದೇಳ್ತಾರೆ ಅನ್ನೋದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆ ನಿರೀಕ್ಷೆ ಹುಸಿಯಾಗ್ಲಿಲ್ಲ. ಮನಮೋಹಕ ಶತಕ ಬಿಡಿ.. ಆ 2 ಸಿಕ್ಸರ್ಗಳೇ ಅಭಿಮಾನಿಗಳನ್ನು ಫುಲ್ ಖುಷ್ ಮಾಡಿಬಿಟ್ವು.
ಶತಕದ ಗಡಿಯಲ್ಲಿ ಸೂಪರ್ ಡೂಪರ್ ಸಿಕ್ಸ್..!
ಶತಕದ ಗಡಿಯಲ್ಲಿದ್ದಾಗ ಸಿಕ್ಸ್ ಸಿಡಿಸೋದು ಸಿಕ್ಕಾಪಟ್ಟೆ ಕಷ್ಟದ ವಿಚಾರ. ಅದ್ರಲ್ಲೂ ಪಾಕ್ ಯಂಗ್ಗನ್ ನಸೀಮ್ ಶಾ ಬೌಲಿಂಗ್ ಅಂದ್ರೆ ರಿಸ್ಕ್ ತಗೋಳಲ್ಲ. ಆದ್ರೆ ಕೊಹ್ಲಿ ಈ ವಿಚಾರದಲ್ಲಿ ಡಿಫರೆಂಟ್.. 90 ರನ್ಗಳಿಸಿದ್ದ ವೇಳೆ ಲಾಂಗ್ ಆನ್ ಕಡೆಗೆ ಸೂಪರ್ ಡೂಪರ್ ಸಿಕ್ಸರ್ ಸಿಡಿಸೇ ಬಿಟ್ರು.
ಇನ್ನಿಂಗ್ಸ್ನ ಕೊನೆ ಎಸೆತದಲ್ಲಿ ಮನಮೋಹಕ ಸಿಕ್ಸ್
ಇನ್ನಿಂಗ್ಸ್ನ ಕೊನೆ ಎಸೆತದಲ್ಲಿ ಕೊಹ್ಲಿ ಸಿಡಿಸಿದ್ದಂತೂ ಮನಮೋಹಕ ಸಿಕ್ಸರ್. ಫಾಹೀಮ್ ಆರ್ಶಫ್ ಬೌಲಿಂಗ್ನಲ್ಲಿ ಲೋ ಫುಲ್ ಟಾಸ್ ಎಸೆತವನ್ನು ಲಾಂಗ್ ಆನ್ ಕಡೆಗೆ ಸಿಕ್ಸರ್ ಸಿಡಿಸಿದ ಬಳಿಕ ಕೊಟ್ಟ ಪೋಸ್ ಇದ್ಯಲ್ಲ. ಅದಂತೂ ಕ್ಲಾಸ್.
ಹ್ಯಾರೀಸ್ ರೌಫ್ ಬೌಲಿಂಗ್ನಲ್ಲಿ ಶತಮಾನದ ಶಾಟ್
ಕಳೆದ ಟಿ20 ವಿಶ್ವಕಪ್ ಟೂರ್ನಿಯ ಇಂಡೋ-ಪಾಕ್ ಪಂದ್ಯವನ್ನು ಬೇಕಾದ್ರೂ ಮರೀಬೋದು.. ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ ಕೊಹ್ಲಿ ಸಿಡಿಸಿದ ಸಿಕ್ಸರ್ನ ಮರೆಯೋಕೆ ಸಾಧ್ಯವೇ ಇಲ್ಲ. ಅದನ್ನು ಶತಮಾನದ ಶಾಟ್ ಅಂದರೂ ತಪ್ಪಾಗಲ್ಲ. ಒಳ್ಳೆ ಬೌಲಿಂಗ್ ಅಟ್ಯಾಕ್ ಎದುರು ಘರ್ಜಿಸೋದೇ ಕಿಂಗ್ ಕೊಹ್ಲಿ ತಾಕತ್ತು. ಇದಕ್ಕೆ ನಿನ್ನೆಯ ಪಂದ್ಯ ಬೆಸ್ಟ್ ಎಕ್ಸಾಂಪಲ್. ವಿಶ್ವವೇ ಪಾಕಿಸ್ತಾನದ ಬೌಲಿಂಗ್ ಅಟ್ಯಾಕ್ ಕೊಂಡಾಡುತ್ತದೆ.
ಆದ್ರೆ ಕೊಹ್ಲಿ ಆ ಬೌಲಿಂಗ್ ಅಟ್ಯಾಕ್ ಧೂಳೀಪಟ ಮಾಡಿದ್ರು. ಕೊಹ್ಲಿ ಒದೊಂದು ಬೌಂಡರಿ ಬಾರಿಸ್ತಿದ್ರೆ, ಪಾಕ್ನ ಕಥೆ ಸೂತ್ರವಿಲ್ಲದ ಗಾಳಿಪಟದಂತಾಗಿತ್ತು. ವಿಶ್ವದ ಉಳಿದ ರಾಷ್ಟ್ರಗಳನ್ನ ಬಿಡಿ.. ಪಾಕಿಸ್ತಾನ ವಿರುದ್ಧದ ಪಂದ್ಯ ಅಂದ್ರೆ ಮುಗೀತು. ವಿರಾಟ್ ಕೊಹ್ಲಿ ಆಟ ನೆಕ್ಸ್ಟ್ ಲೆವೆಲ್ನಲ್ಲಿರೋದು ಕನ್ಫರ್ಮ್ ಅನ್ನೋ ಮಾತಿದೆ. ಆ ಮಾತು ನಿಜ ಅನ್ನೋದಕ್ಕೆ ನಿನ್ನೆಯ ಪಂದ್ಯ ಒಂದೊಳ್ಳೆ ಎಕ್ಸಾಂಪಲ್.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್