newsfirstkannada.com

ಹಿಸ್ಟರಿ ಕೆದಕಿದ್ರೆ ಪಾಕಿಸ್ತಾನದ​​​​​​ ವಿರುದ್ಧ ಕೊಹ್ಲಿ ಆರ್ಭಟ ಹೇಗಿದೆ..? ವಿರಾಟರೂಪಕ್ಕೆ ಅಭಿಮಾನಿಗಳ ಕಾತರ!

Share :

02-09-2023

    ಆಡಿದ 13 ಪಂದ್ಯಗಳಲ್ಲಿ 48.72 ರ ಬ್ಯಾಟಿಂಗ್ ಎವರೇಜ್

    ಲೆಜೆಂಡರಿ ವಿರಾಟ್ ಕೊಹ್ಲಿ ಮೇಲೆ ಕ್ರಿಕೆಟ್ ಫ್ಯಾನ್ಸ್​ ಚಿತ್ತ

    ಪಾಕ್ ಬೌಲರ್​ಗಳನ್ನ ಬೆಂಡೆತ್ತುವುದು ಕೊಹ್ಲಿಗೆ ಅಭ್ಯಾಸ

ವಿರಾಟ್ ಕೊಹ್ಲಿ ಆಟದ ವಿಚಾರಕ್ಕೆ ಬಂದ್ರೆ ಮದವೇರಿದ ಮದ್ದಾನೆ. ಕ್ರಿಕೆಟ್​ ಅಂಗಳದಲ್ಲಿ ಈ ಒಂಟಿಸಲಗವನ್ನ ಕಟ್ಟಿಹಾಕೋದು ನಿಜಕ್ಕೂ ಕಷ್ಟ. ಪಾಕಿಸ್ತಾನ ಎದುರಿನ ಇಂದಿನ ಪಂದ್ಯದಲ್ಲಿ ಕ್ರಿಕೆಟ್​ ಜಗತ್ತಿನ ಚಿತ್ತ ಸೆಂಚುರಿ ಸಾಮ್ರಾಟನ ಮೇಲಿದೆ.

ಕೊಹ್ಲಿ ಸಪ್ತಸಾಗರದಾಚೆಗಿನ ಯುಎಸ್​ಎನಿಂದ ಹಿಡಿದು ಕನ್ಯಾಕುಮಾರಿ ತನಕವು ಒಂದೇ ಘೋಷಣೆ. ಅದುವೇ ವಿರಾಟ್ ಕೊಹ್ಲಿ. ಈ ಗ್ಲೋಬಲ್​​​ ಐಕಾನ್​ ಬ್ಯಾಟ್ ಹಿಡಿದು ಅಂಗಳಕ್ಕೆ ಇಳಿಯೋದನ್ನ ಅಭಿಮಾನ ಕಾಯುತ್ತಿರುತ್ತೆ. ಅಂತಹದರಲ್ಲಿ ಬಿಗ್ ಟೂರ್ನ್​ಮೆಂಟ್​​​​​ ಬಂದ್ರಂತೂ ಮುಗಿದೇ ಹೋಯಿತು. ರನ್ ಮಷಿನ್ ಇಡೀ ಕ್ರಿಕೆಟ್ ದುನಿಯಾವನ್ನೇ ಆವರಿಸಿ ಬಿಡ್ತಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್

ಫ್ಯಾನ್ಸ್​​ ನಿರೀಕ್ಷೆ ಹುಸಿಗೊಳಿಸಲ್ಲ ಸೆಂಚುರಿ ಸ್ಪೆಶಲಿಸ್ಟ್ ಕೊಹ್ಲಿ

ಭಾರತ ವರ್ಸಸ್ ಪಾಕಿಸ್ತಾನ. ಈ ಬಿಗ್​​ ಬ್ಯಾಟಲ್​​ ಕಣ್ತುಂಬಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ. ಬಿಕಾಜ್ ಕಿಂಗ್ ಕೊಹ್ಲಿ. ಇಂದಿನ ಕಾಳಗ ಇಂಡೋ ವರ್ಸಸ್ ​​​​ಪಾಕ್ ಅಲ್ಲ, ಕೊಹ್ಲಿ ವರ್ಸಸ್​​ ಪಾಕ್. ವಿರಾಟ್ ಬದ್ಧವೈರಿ ವಿರುದ್ಧ ಹೇಗೆ ಆಡ್ತಾರೆ. ಬೌಲರ್​ಗಳ ಮೇಲೆ ಹೇಗೆ ಮುಗಿಬೀಳ್ತಾರಾ?. 2022ರ ಏಷ್ಯಾಕಪ್​​​​ ಹಾಗೂ ಟಿ20 ವಿಶ್ವಕಪ್​​​​​ ದಮ್ನಾರ್​​​ ಪರ್ಫಾಮೆನ್ಸ್​ ಮರುಕಳಿಸುತ್ತಾ ?.

ಹೀಗೆ ಹಲವು ಪ್ರಶ್ನೆಗಳು ಕೊಹ್ಲಿ ಅಭಿಮಾನಿಗಳಿಗೆ ಕಾಡ್ತಿವೆ. ಯಾಕಂದ್ರೆ ಬಿಗ್ ಸ್ಟೇಜ್​​​, ಬಿಗ್ ಮ್ಯಾಚ್​​ಗಳಲ್ಲಿ ವಿರಾಟ್ ಅಭಿಮಾನಿಗಳನ್ನ ಬೇಸರ ಪಡಿಸಿದ್ದೇ ಇಲ್ಲ. ಉಗ್ರನರಸಿಂಹನ ರೂಪ ತಾಳಿ ಮನರಂಜನೆಯ ಫುಲ್ ಮೀಲ್ಸ್​ ಉಣಬಡಿಸಿದ್ದಾರೆ. ಪಾಕ್​​​​​​ ಎದುರಿನ ಹಿಸ್ಟರಿ ಕೆದಕಿದ್ರೆ ಕೊಹ್ಲಿ ಹೇಗೆ ಆರ್ಭಟಿಸಬಲ್ಲರು ಅನ್ನೋದು ಗೊತ್ತಾಗುತ್ತೆ.

2022 ರಲ್ಲಿ ಪಾಕ್ ವಿರುದ್ಧ ಕೊಹ್ಲಿ

ಕಳೆದ ವರ್ಷದ ಏಷ್ಯಾಕಪ್​​​ನಲ್ಲಿ ವಿರಾಟ್, ಪಾಕ್ ವಿರುದ್ಧ 2 ಪಂದ್ಯಗಳನ್ನ ಆಡಿದ್ರು. ಮೊದಲ ಪಂದ್ಯದಲ್ಲಿ 34 ಎಸೆತಗಳಿಂದ 35 ರನ್ ಬಾರಿಸಿದ್ರೆ, 2ನೇ ಪಂದ್ಯದಲ್ಲಿ 44 ಎಸೆತದಿಂದ 60 ರನ್ ಗಳಿಸಿ ಶೈನ್ ಆಗಿದ್ರು. ಟಿ20 ವಿಶ್ವಕಪ್​​​​​​​​​ ಮ್ಯಾಚ್​​ನಲ್ಲಿ ಪಾಕ್​​ ಜನ್ಮ ಜಾಲಾಡಿದ್ದ ಕೊಹ್ಲಿ, 53 ಎಸೆತಗಳಲ್ಲಿ ಸ್ಫೋಟಕ 82 ರನ್​ ಗಳಿಸಿದ್ರು.

ಇನ್ನು 2022 ಅಷ್ಟೇ ಅಲ್ಲ, ಯಾವಾಗೆಲ್ಲ ವಿರಾಟ್ ಪಾಕಿಸ್ತಾನ ವಿರುದ್ಧ ಆಡಿದ್ದಾರೋ ಆವಾಗೆಲ್ಲ ಅಕ್ಷರಶಃ ರನ್​ ಹೊಳೆಯನ್ನೇ ಹರಿಸಿದ್ದಾರೆ. ಆಡಿದ 13 ಪಂದ್ಯಗಳಲ್ಲಿ 48.72 ರ ಬ್ಯಾಟಿಂಗ್ ಎವರೇಜ್​​​ನಲ್ಲಿ ಬರೋಬ್ಬರಿ 536 ರನ್​ ಚಚ್ಚಿದ್ದಾರೆ. ಇದ್ರಲ್ಲಿ 2 ಅಮೋಘ ಶತಕ, 2 ಹಾಫ್​​ಸೆಂಚುರಿ ಇವೆ.

ಇಂದು ಪಾಕ್​ಗೆ​​​ ಕಾದಿದೆ ಮಾರಿಹಬ್ಬ..!

ಇಂಡೋ-ಪಾಕ್​​ ಮ್ಯಾಚ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಮಾನ್​ಸ್ಟಾರ್​ ಕೊಹ್ಲಿ ಅಬ್ಬರಿಸುವ ಸೂಚನೆ ನೀಡಿದ್ದು ಪಾಕ್​​ಗೆ ಭಯ ಶುರುವಾಗಿದೆ.

ವಿರಾಟ್ ಕೊಹ್ಲಿ, ಭಾರತದ ಆಟಗಾರ

‘ಕಠಿಣ ಶ್ರಮ ನಿಲ್ಲಿಸಬಾರದು’

ಒಂದು ವೇಳೆ ಉತ್ತಮ ಪ್ರದರ್ಶನ ನೀಡುವುದು ನಿಮ್ಮ ಗುರಿಯಾದರೆ ಅದು ತೃಪ್ತಿಕರ. ಯಾವುದೇ ಕಾರಣಕ್ಕೂ ಕಠಿಣ ಶ್ರಮ ನಿಲ್ಲಬಾರದು. ಇದಕ್ಕೆ ಯಾವುದೇ ನಿಯಂತ್ರಣವಿಲ್ಲ. ಪ್ರತಿ ದಿನ ನಾನು ಏನು ಉತ್ತಮಪಡಿಸಿಕೊಳ್ಳಬಲ್ಲೆ ಅನ್ನೋದನ್ನ ಯೋಚಿಸುತ್ತೇನೆ. ಹಾಗೂ ನನ್ನ ತಂಡವನ್ನ ಹೇಗೆ ಗೆಲ್ಲಿಸಿಕೊಡಬಹುದು ಎಂದು ಚಿಂತಿಸುತ್ತೇನೆ.

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಕ್ರಿಕೆಟಿಗ

ಇಂದಿನ ಹೈವೋಲ್ಟೇಜ್​ ಇಂಡೋ-ಪಾಕ್​​ ಮ್ಯಾಚ್​ನಲ್ಲಿ ಕಿಂಗ್ ಕೊಹ್ಲಿ ಕೇಂದ್ರ ಬಿಂದು ಅನ್ನೋದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಿಸ್ಟರಿ ಕೆದಕಿದ್ರೆ ಪಾಕಿಸ್ತಾನದ​​​​​​ ವಿರುದ್ಧ ಕೊಹ್ಲಿ ಆರ್ಭಟ ಹೇಗಿದೆ..? ವಿರಾಟರೂಪಕ್ಕೆ ಅಭಿಮಾನಿಗಳ ಕಾತರ!

https://newsfirstlive.com/wp-content/uploads/2023/09/VIRAT_KOHLI_BATTING.jpg

Load More