newsfirstkannada.com

Asia Cup Final: ಟಾಸ್ ಗೆದ್ದ ಲಂಕಾ.. ಭಾರತದ ಪ್ಲೇಯಿಂಗ್- 11ಕ್ಕೆ ಹೊಸ ಎಂಟ್ರಿ, ಯಾರಿಗೆಲ್ಲ ಚಾನ್ಸ್​?

Share :

17-09-2023

    ಏಷ್ಯಾಕಪ್​ ಗೆಲ್ಲುವ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ ಟೀಮ್​

    ಇವತ್ತಿನ ಮ್ಯಾಚ್​ನಲ್ಲಿ ಮತ್ತೆ ಅಬ್ಬರಿಸ್ತಾರಾ ವಿರಾಟ್, ರಾಹುಲ್

    ಫೈನಲ್ ಪಂದ್ಯದಲ್ಲಿ ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ ಗೊತ್ತಾ?

ಶ್ರೀಲಂಕಾದ ಕೊಲೊಂಬೋದ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದುಕೊಂಡಿದೆ. ಲಂಕಾದ ಕ್ಯಾಪ್ಟನ್​ ದಸುನ್​ ಶನಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ರೋಹಿತ್ ಪಡೆಯನ್ನು ಫೀಲ್ಡಿಂಗ್​ಗೆ ಆಹ್ವಾನಿಸಿದ್ದಾರೆ.

ಈ ಬಾರಿ ನೇಪಾಳ ಸೇರಿ ಒಟ್ಟು ಆರು ತಂಡಗಳು ಏಷ್ಯಾಕಪ್​ ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಇದರಲ್ಲಿ ಸಖತ್ ಪೈಪೋಟಿ ಮಾಡಿ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್​ಗೆ ಬಂದಿವೆ. ಇನ್ನು ಟೀಮ್​ ಇಂಡಿಯಾದಲ್ಲಿ ಕ್ಯಾಪ್ಟನ್​ ರೋಹಿತ್ ಶರ್ಮಾ, ಶುಭ್​ಮನ್​ ಗಿಲ್​, ವಿರಾಟ್ ಕೊಹ್ಲಿ, ಕೆ.ಎಲ್​ ರಾಹುಲ್​ ಅದ್ಭುತವಾದ ಫಾರ್ಮ್​ನಲ್ಲಿದ್ದಾರೆ. ಈಗಾಗಲೇ ಕಳೆದ ಮ್ಯಾಚ್​ಗಳಲ್ಲಿ ಮೂರು ಸೆಂಚುರಿಗಳು ಒಲಿದು ಬಂದಿದ್ದು ಫೈನಲ್ ಪಂದ್ಯದಲ್ಲೂ ಈ ನಾಲ್ವರು ಆಟಗಾರರು ಆರ್ಭಟಿಸೋ ಮುನ್ಸೂಚನೆ ಇದೆ ಎನ್ನಲಾಗಿದೆ.

ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಕಣಕ್ಕೆ ಇಳಿಯಲಿದ್ದಾರೆ. ಭಾರತದ ಬೌಲಿಂಗ್ ಪಡೆ ಕೂಡ ಪ್ರಬಲವಾಗಿದ್ದು ಕೊಂಚ ಬದಲಾವಣೆ ಮಾಡಲಾಗಿದೆ. ಶಾರ್ದುಲ್ ಠಾಕೂರ್ ಬದಲಿಗೆ ಆಲ್​ ರೌಂಡರ್​ ವಾಷಿಂಗ್ಟನ್ ಸುಂದರ್​ಗೆ ಚಾನ್ಸ್​ ನೀಡಲಾಗಿದೆ. ಇನ್ನು ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್​ದೀಪ್ ಯಾದವ್ ಅವರು ವಿಕೆಟ್​ಗಳನ್ನು ಉರುಳಿಸಲು ರೆಡಿಯಾಗಿದ್ದಾರೆ.

ಭಾರತದ ಆಟಗಾರರು

2ನೇ ಬಾರಿಗೆ ಏಷ್ಯಾಕಪ್​ ಫೈನಲ್​ಗೆ ಲಗ್ಗೆ ಇಟ್ಟಿರುವ ಶ್ರೀಲಂಕಾ ಟೀಮ್ ಹೇಗಾದ್ರೂ ಮಾಡಿ ರೋಹಿತ್ ತಂಡವನ್ನು ಕಟ್ಟಿ ಹಾಕಲು ಬಿಗ್ ಪ್ಲಾನ್​ನಲ್ಲಿದ್ದಾರೆ. ನಾಯಕ ದಸುನ್ ಶನಕ್ ನೇತೃತ್ವದ ತಂಡ ಭಾರೀ ನೀರಿಕ್ಷಯಿಂದ ಕ್ರೀಸ್​ಗೆ ಇಳಿಯುತ್ತಿದೆ. ಯುವ ಆಟಗಾರ ದುನಿತ್ ವೆಲ್ಲಲಾಗೆ ಅವರು ಕಳೆದ ಪಂದ್ಯದಲ್ಲಿ ಭಾರತಕ್ಕೆ ಶಾಕ್ ನೀಡಿದ್ದರು. ಈ ಬಾರಿ ಏನು ಮಾಡುತ್ತಾರೆ ಎಂದು ಮ್ಯಾಚ್ ಶುರುವಾದ ಮೇಲೆ ಗೊತ್ತಾಗಲಿದೆ. ​

ಟೀಮ್​ ಇಂಡಿಯಾದ ಪ್ಲೇಯಿಂಗ್- 11

ರೋಹಿತ್ ಶರ್ಮಾ(ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್ ), ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಕುಲ್​ದೀಪ್ ಯಾದವ್, ಮೊಹಮ್ಮದ್ ಸಿರಾಜ್

Asia Cup Final: ಟಾಸ್ ಗೆದ್ದ ಲಂಕಾ.. ಭಾರತದ ಪ್ಲೇಯಿಂಗ್- 11ಕ್ಕೆ ಹೊಸ ಎಂಟ್ರಿ, ಯಾರಿಗೆಲ್ಲ ಚಾನ್ಸ್​?

https://newsfirstlive.com/wp-content/uploads/2023/09/ROHIT_SHANAK.jpg

Load More