newsfirstkannada.com

ಸೂಪರ್​- 8ಗೆ ಹೋಗಬೇಕಾದ್ರೆ ಈ ತಪ್ಪು ಮಾಡಬಾರ್ದು.. ದುಬೆ, ಸೂರ್ಯ ಬದಲಿಗೆ ಸಂಜುಗೆ ಇಂದು ಚಾನ್ಸ್?

Share :

Published June 12, 2024 at 2:55pm

  ವಿಶ್ವಕಪ್​ ಪಂದ್ಯದಲ್ಲಿ ಪ್ರಯೋಗಕ್ಕೆ ಮುಂದಾಗುತ್ತಾ ದ್ರಾವಿಡ್ & ಟೀಮ್​?

  ಕ್ರಿಕೆಟ್​ ಶಿಶು ಎದುರು ಬೆಂಚ್ ಸ್ಟ್ರೆಂಥ್ ಪರೀಕ್ಷೆಗೆ ಮುಂದಾಗೋ ಸಾಧ್ಯತೆ ಇದೆ

  ಅಮೆರಿಕದ ಪಿಚ್​ಗಳಲ್ಲಿ ವಿರಾಟ್, ಸೂರ್ಯ​ ಕೂಡ ಫೇಲ್ಯೂರ್ ಆಗಿದ್ದಾರೆ

ಟಿ20 ವಿಶ್ವಕಪ್​​ನ ಆರಂಭಿಕ ಎರಡು ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ, ಇದೀಗ 3ನೇ ಪಂದ್ಯಕ್ಕೆ ಸಜ್ಜಾಗಿದೆ. ನ್ಯೂಯಾರ್ಕ್​ನಲ್ಲೇ ಗೆದ್ದು, ಕೆರಿಬಿಯನ್ ನಾಡಿಗೆ ಶಿಫ್ಟ್ ಆಗೋ ಲೆಕ್ಕಚಾರದಲ್ಲಿದೆ. ಆದ್ರೆ, ಇದಕ್ಕೂ ಮುನ್ನ ಟೀಮ್ ಮ್ಯಾನೇಜ್​ಮೆಂಟ್​​ನ ಮೈಂಡ್​​ಸೆಟ್​​ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.

ಜಸ್ಟ್​ ಒಂದೇ ಒಂದು ಹೆಜ್ಜೆ.. ಟಿ20 ವಿಶ್ವಕಪ್​ನ ಸೂಪರ್-8 ಎಂಟ್ರಿಗೆ ಜಸ್ಟ್​ ಒಂದೇ ಒಂದು ಹೆಜ್ಜೆ ಮಾತ್ರವೇ ಬಾಕಿಯಿದೆ. ಕ್ರಿಕೆಟ್​ ಶಿಶು ಯುಎಸ್​ಎ ಎದುರಿನ ರಣಕಣದಲ್ಲಿ ಗೆದ್ದು ಎಂಟರ ಘಟ್ಟಕ್ಕೆ ಎಂಟ್ರಿ ನೀಡುವ ಮಹಾದಾಸೆ ಇದೆ. ಆದ್ರೆ, ಇದಕ್ಕೂ ಮುನ್ನ ಟೀಮ್ ಮ್ಯಾನೇಜ್​​ಮೆಂಟ್​​​ನ​​ ಗೇಮ್​ಪ್ಲಾನ್ ಹಾಗೂ ಸ್ಟ್ರಾಟರ್ಜಿ ಹೇಗಿರುತ್ತೆ ಎಂಬ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.

ಇದನ್ನೂ ಓದಿ: ಹಿಟ್​ಮ್ಯಾನ್​ ರೋಹಿತ್​​ಗೆ ಬಿಗ್ ಶಾಕ್.. ಮುಂಬೈ ಬ್ಯಾಟರ್​​ಗಳಿಂದ ಟೀಮ್​ಗೆ ಭಾರೀ ಆಘಾತ

ಇಂದು ಟೀಮ್ ಇಂಡಿಯಾಗೆ ಕ್ರಿಕೆಟ್ ಶಿಶು ಸವಾಲ್ ಎದುರಾಗುತ್ತಿದ್ದು, ಉಭಯ ತಂಡಗಳ ಕಾದಾಟಕ್ಕೆ ನ್ಯೂಯಾರ್ಕ್​ನ ನಸ್ಸೌ ಸ್ಟೇಡಿಯಂ ವೇದಿಕೆಯಾಗ್ತಿದೆ. ಇದುವರೆಗೆ ಸೋಲನ್ನೇ ಕಾಣದ ಉಭಯ ತಂಡಗಳು, ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿದೆ. ಆದ್ರೆ, ಇಂದಿನ ಮಹಾ ಕದನದಲ್ಲಿ ಟೀಮ್ ಇಂಡಿಯಾ ಹೊಸ ಗೇಮ್​​ಪ್ಲಾನ್​​ನಲ್ಲಿ ಕಣಕ್ಕಿಳಿಯುತ್ತಾ ಎಂಬ ಪ್ರಶ್ನೆ ಇದ್ದೇ ಇದೆ.

ಅಜೇಯ ಭಾರತಕ್ಕೆ ಸೂಪರ್​-8 ಮೇಲೆಯೇ ಕಣ್ಣು..!

ಟಿ20 ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರನಂತೆ ಟೀಮ್ ಇಂಡಿಯಾ ಮುನ್ನುಗ್ಗುತ್ತಿದೆ. ಸತತ ಎರಡು ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಅಮೆರಿಕವನ್ನ ಮಣಿಸಿ ಸೂಪರ್​-8ಗೆ ಗ್ರ್ಯಾಂಡ್​ ಎಂಟ್ರಿ ನೀಡುವ ಲೆಕ್ಕಚಾರದಲ್ಲಿದೆ. ಆದ್ರೆ, ಗೆಲುವಿನ ಹೊರತಾಗಿಯೂ ನೆಮ್ಮದಿ ಕಳೆದುಕೊಂಡಿರುವ ಟೀಮ್ ಮ್ಯಾನೇಜ್​ಮೆಂಟ್​​, ಕ್ರಿಕೆಟ್​ ಶಿಶು ಎದುರು ಬೆಂಚ್ ಸ್ಟ್ರೆಂಥ್ ಪರೀಕ್ಷೆಗೆ ಮುಂದಾಗುವ ಸಾಧ್ಯತೆ ಇದೆ. ಆದ್ರೆ, ದ್ರಾವಿಡ್ ಆ್ಯಂಡ್ ಟೀಮ್​ನ ಡಿಸಿಷನ್ ಮೇಲೆಯೇ ಎಲ್ಲವೂ ನಿಂತಿದೆ.

ಇದನ್ನೂ ಓದಿ: ನನಗೆ ಸಿಗರೇಟ್ ಬೇಕು.. ಟೆನ್ಷನ್​ನಲ್ಲಿರೋ ನಟ ದರ್ಶನ್‌ಗೆ ಪೊಲೀಸ್ರು ಚಾಕಲೇಟ್ ಕೊಟ್ಟು ಖಡಕ್ ವಾರ್ನಿಂಗ್!

ಸದ್ಯ ಶಿವಂ ದುಬೆ, ಸೂರ್ಯಕುಮಾರ್ ಯಾದವ್ ಸತತ ಫೇಲ್ಯೂರ್ ಆಗ್ತಿದ್ದಾರೆ. ಸಾಮರ್ಥ್ಯಕ್ಕೆ ತಕ್ಕ ಆಟ ಆಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅಭ್ಯಾಸ ಪಂದ್ಯದಲ್ಲಿ ಆಡಿದ್ದ ಸಂಜು ಸ್ಯಾಮ್ಸನ್​ಗೆ ಚಾನ್ಸ್ ನೀಡುವ ಸಾಧ್ಯತೆ ಇದೆ. ಕಂಡೀಷನ್ಸ್​ ಜೊತೆಗೆ ಮಿಡಲ್ ಆರ್ಡರ್​ಗೆ ಹೊಂದಿಕೊಳ್ಳಬಲ್ಲ ಸಂಜು, ಐಪಿಎಲ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ್ದಾರೆ. ಹೀಗಾಗಿ ಶಿವಂ ದುಬೆಗೆ ಪರ್ಪೆಕ್ಟ್​ ರಿಪ್ಲೇಸ್​ಮೆಂಟ್ ಅನ್ನೋ ಮಾತಿದೆ.

ಆದ್ರೆ, ನ್ಯೂಯಾರ್ಕ್​ನ ಪೇಸ್ ಆ್ಯಂಡ್ ಬೌನ್ಸಿ ಪಿಚ್​ನಲ್ಲಿ ಸಂಜು ಆಟ ಎಷ್ಟರ ಮಟ್ಟಿಗೆ ನಡೆಯುತ್ತೆ ಅನ್ನೋದೇ ಡೌಟ್​. ವಿರಾಟ್, ಸೂರ್ಯ​ ಕೂಡ ಫೇಲ್ಯೂರ್ ಆಗಿದ್ದಾರೆ. ಆದ್ರೆ, ವಿರಾಟ್​ ಬೆಂಚ್ ಕಾಯುವುದು ಅನುಮಾನ.

ನ್ಯೂಯಾರ್ಕ್​ನಲ್ಲಿ ಕೊನೆ ಮ್ಯಾಚ್​.. ಪ್ರಯೋಗ ಡೌಟ್​..?

ನ್ಯೂಯಾರ್ಕ್​ನ ನಸ್ಸೌ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾಗೆ ಇದೇ ಕೊನೆ ಮ್ಯಾಚ್. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ವೆಸ್ಟ್​ ಇಂಡೀಸ್​ಗೆ ಶಿಫ್ಟ್​ ಆಗಲಿದೆ. ಹೀಗಾಗಿ ತಂಡವನ್ನು ಡಿಸ್ಟರ್ಬ್ ಮಾಡುವುದು ಸಾಧ್ಯತೆ ವಿರಳ. ಆದ್ರೆ, ಐಪಿಎಲ್​​ ಬಳಿಕ ಆಟಗಾರರಿಗೆ ವಿಶ್ರಾಂತಿ ಸಿಕ್ಕಿಲ್ಲ. ಇದಿಷ್ಟೇ ಅಲ್ಲ, ಕೆಲ ಆಟಗಾರರು ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಕಾರಣಕ್ಕೆ ಸೂಪರ್-8 ಪಂದ್ಯಕ್ಕೂ ಮುನ್ನ ಕೆಲ ಆಟಗಾರರಿಗೆ ರೆಸ್ಟ್​ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದ್ರೆ, ನ್ಯೂಯಾರ್ಕ್​ನಲ್ಲಿ ಟಫ್ ಕಂಡೀಷನ್ಸ್​ನಲ್ಲಿ ಹೊಸ ಆಟಗಾರರನ್ನು ಪ್ರಯೋಗಕ್ಕೆ ಮುಂದಾಗುವುದು ಕಷ್ಟಸಾಧ್ಯ ಅನ್ನೋದನ್ನ ಮರೆಯುವಂತಿಲ್ಲ.

ಅಮೆರಿಕವನ್ನ ಸುಲಭವಾಗಿ ಪರಿಗಣಿಸುವಂತಿಲ್ಲ..!

ಸೂಪರ್​-8 ಹೊಸ್ತಿಲಿಲ್ಲ ಇರುವ ಅಮೆರಿಕವನ್ನ ಸುಲಭವಾಗಿ ಪರಿಗಣಿಸುವಂತಿಲ್ಲ. ಯಾಕಂದ್ರೆ, ಪಾಕ್​ ಹಾಗೂ ಕೆನಡಾ ತಂಡಗಳಿಗೆ ಅಮೆರಿಕ ಚಳ್ಳೆ ಹಣ್ಣು ತಿನ್ನಿಸಿದೆ. ಇನ್​ಫ್ಯಾಕ್ಟ್​_ ಕಂಡೀಷನ್ಸ್​ ಬಗ್ಗೆ ಚೆನ್ನಾಗಿ ಅರಿತಿದೆ. ಹಾಗಾಗಿ ನ್ಯೂಯಾರ್ಕ್​ನಂಥ ಕಷ್ಟಕರ ಪಿಚ್​ನಲ್ಲಿ ಟೀಮ್ ಇಂಡಿಯಾ, ಬೆಂಚ್ ಸ್ಟ್ರೆಂಥ್​ ಪ್ರಯೋಗಕ್ಕೆ ಮುಂದಾಗುವುದು ನಿಜಕ್ಕೂ ಡೇರಿಂಗ್ ಡಿಸಿಷನ್. ಈ ಕಾರಣಕ್ಕೆ ಟೀಮ್ ಇಂಡಿಯಾ ಫುಲ್​ ಸ್ಟ್ರೆಂಥ್​ನೊಂದಿಗೆ ಕಣಕ್ಕಿಳಿಯುವುದೇ ಬೆಸ್ಟ್​. ಆದ್ರೆ, ಟೀಮ್ ಮ್ಯಾನೇಜ್​ಮೆಂಟ್​ ನಡೆ ಏನಾಗಿರುತ್ತೆ ಎಂಬ ಕುತೂಹಲ ಇದ್ದೇ ಇದೆ. ಸೂಪರ್​-8ಗೂ ಮುನ್ನ ಟೀಮ್ ಇಂಡಿಯಾ ಬೆಂಚ್ ಪರೀಕ್ಷೆಗೆ ಮುಂದಾಗುತ್ತಾ..? ಇಲ್ಲ ಟಫ್ ಕಂಡೀಷನ್ಸ್​ನಲ್ಲಿ ಅದೇ ತಂಡವನ್ನ ಮುಂದುವರಿಸುವ ನಿರ್ಧಾರ ಕೈಗೊಳ್ಳುತ್ತಾ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂಪರ್​- 8ಗೆ ಹೋಗಬೇಕಾದ್ರೆ ಈ ತಪ್ಪು ಮಾಡಬಾರ್ದು.. ದುಬೆ, ಸೂರ್ಯ ಬದಲಿಗೆ ಸಂಜುಗೆ ಇಂದು ಚಾನ್ಸ್?

https://newsfirstlive.com/wp-content/uploads/2024/06/SANJU_SHIVAM.jpg

Load More