23 ಓವರ್, 114 ರನ್, 10 ವಿಕೆಟ್ ಡಮಾರ್..!
ಸಾಲಿಡ್ ಹಾಫ್ ಸೆಂಚುರಿ ಸಿಡಿಸಿದ ಕಿಶನ್
ಮತ್ತೆ ಯಾಱರು ಫೇಲ್.. ನಿನ್ನೆಯ ಆಟ ಹೇಗಿತ್ತು..?
ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಧಿಪತ್ಯ ಸಾಧಿಸಿದ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡಿದೆ. ಬ್ರಿಡ್ಜ್ಟೌನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಧಿಕಾರಯುತ ಗೆಲುವು ದಾಖಲಿಸಿದೆ. ಇಂಡೋ-ವಿಂಡೀಸ್ ಮೊದಲ ಏಕದಿನ ಕದನದ ಹೈಲೆಟ್ಸ್ ಇಲ್ಲಿದೆ.
ಮೊದಲ ಏಕದಿನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ಎಡವಿತು. 3ನೇ ಓವರ್ನಲ್ಲೇ ಕೈಲ್ ಮೇಯರ್ಸ್ 2 ರನ್ಗಳಿಸಿ ಔಟಾದರು. ಆ ಬಳಿಕ ಇನ್ನಿಂಗ್ಸ್ ಕಟ್ಟೋ ಪ್ರಯತ್ನದಲ್ಲಿದ್ದ ಅಲಿಕ್ ಅಥನಾಜೆ ಮತ್ತು ಬ್ರೆಂಡನ್ ಕಿಂಗ್ ಜೋಡಿಗೆ ಶಾರ್ದೂಲ್ ಠಾಕೂರ್, ಮುಖೇಶ್ ಕುಮಾರ್ ಶಾಕ್ ನೀಡಿದರು.
ಕುಲ್ದೀಪ್, ಜಡೇಜಾ ಸ್ಪಿನ್ ಮೋಡಿಗೆ ವಿಂಡೀಸ್ ವಿಲವಿಲ
4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶಾಯ್ ಹೋಪ್ 43 ರನ್ ಸಿಡಿಸಿದ್ದು ಬಿಟ್ರೆ, ಉಳಿದ ಯಾವ ಆಟಗಾರ ಕೂಡ ಹೋರಾಟ ನಡೆಸಿಲಿಲ್ಲ. ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಸ್ಪಿನ್ ಮೋಡಿಗೆ ಸಿಲುಕಿದ ವಿಂಡೀಸ್, ಪೆವಿಲಿಯನ್ ಪರೇಡ್ ನಡೆಸಿತು.
23 ಓವರ್, 114 ರನ್, 10 ವಿಕೆಟ್ ಡಮಾರ್..!
ಕೇವಲ 23 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಕೆರಬಿಯನ್ ಪಡೆ 114 ರನ್ಗಳಿಗೆ ಆಲೌಟ್ ಆಯ್ತು. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ 4, ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದ್ರೆ, ಹಾರ್ದಿಕ್, ಮುಖೇಶ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಕಬಳಿಸಿದ್ರು.
ಏಕದಿನದಲ್ಲೂ ಶುಭ್ಮನ್ ಗಿಲ್ ಪ್ಲಾಫ್
115 ರನ್ಗಳ ಸುಲಭದ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಪ್ರಯೋಗಕ್ಕೆ ಮುಂದಾಯ್ತು. ಆರಂಭಿಕರಾಗಿ ರೋಹಿತ್ ಬದಲು, ಇಶಾನ್ ಕಿಶನ್ ಶುಭ್ಮನ್ ಗಿಲ್ ಕಣಕ್ಕಿಳಿದ್ರು. ಆದ್ರೆ ಗಿಲ್ ಕೇವಲ 7 ರನ್ಗಳಿಗೆ ಆಟ ಮುಗಿಸಿದ್ರು.
ಕೇವಲ 19 ರನ್ಗೆ ಸೂರ್ಯನ ಆಟ ಅಂತ್ಯ
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯ ಕುಮಾರ್ ಯಾದವ್ ಕೂಡ ಇಂಪ್ರೆಸ್ ಮಾಡಲಿಲ್ಲ. 19 ರನ್ಗಳಿಸಿ ಸೂರ್ಯ ಆಟ ಮುಗಿಸಿದ್ರೆ ಅನ್ಲಕ್ಕಿ ಹಾರ್ದಿಕ್ ಪಾಂಡ್ಯ ರನೌಟ್ ಬಲೆಗೆ ಬಿದ್ರು. ಶಾರ್ದೂಲ್ ಠಾಕೂರ್ ಕೇವಲ 1 ರನ್ಗಳಿಸಿ ಔಟಾದರು.
ಸಾಲಿಡ್ ಹಾಫ್ ಸೆಂಚುರಿ ಸಿಡಿಸಿದ ಇಶಾನ್ ಕಿಶನ್
ಒಂದು ಕಡೆ ವಿಕೆಟ್ ಬೀಳ್ತಾ ಇದ್ರೂ ದಿಟ್ಟ ಹೋರಾಟ ನಡೆಸಿದ ಇಶಾನ್ ಕಿಶನ್ ಸಾಲಿಡ್ ಹಾಫ್ ಸೆಂಚುರಿ ಸಿಡಿಸಿದ್ರು. 7 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ ಸಿಡಿಸಿದ್ರು. ಹಾಫ್ ಸೆಂಚುರಿ ಬೆನ್ನಲ್ಲೇ ಕಿಶನ್ ಔಟಾದ್ರೆ, ರವೀಂದ್ರ ಜಡೇಜಾ – ನಾಯಕ ರೋಹಿತ್ ಶರ್ಮಾ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 22.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿದ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ