28 ಇನ್ನಿಂಗ್ಸ್ನಲ್ಲಿ 4 ಗಂಟೆಗೂ ಅಧಿಕ ಸಮಯ ಕ್ರೀಸ್ನಲ್ಲಿ ಬ್ಯಾಟಿಂಗ್
ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳ್ತಾರಾ ಪೂಜಾರ..? ಯಾಕಂದರೆ..?
ಟೆಸ್ಟ್ ಎಂದರೇ ಪೂಜಾರ ಸೆಕೆಂಡ್ ವಾಲ್ ಎಂದೇ ಖ್ಯಾತಿ
ಈತ ಪಕ್ಕಾ ಟೆಸ್ಟ್ ಪ್ಲೇಯರ್ ಟೀಮ್ ಇಂಡಿಯಾ ಪರ ಮರೆಯಲಾಗದ ಇನ್ನಿಂಗ್ಸ್ಗಳನ್ನ ಕಟ್ಟಿಕೊಟ್ಟ ಈ ಮ್ಯಾಚ್ ವಿನ್ನರ್ ಈಗ ತಂಡಕ್ಕೆ ಬೇಡವಾಗಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಿಂದ ಕಿಕ್ಔಟ್ ಆಗಿರೋ ದಿಗ್ಗಜನ ಖೇಲ್ ಖತಂ ಆಗಿದೆ ಅಂತಾನೇ ಬಹುತೇಕರು ಭವಿಷ್ಯ ನುಡಿಯುತ್ತಿದ್ದಾರೆ. ಹಾಗಾದ್ರೆ, ನಿಜಕ್ಕೂ ಟೆಸ್ಟ್ ಸ್ಪೆಷಲಿಸ್ಟ್ ಕರಿಯರ್ ಎಂಡ್ ಆಯ್ತಾ?.
ಚೇತೇಶ್ವರ್ ಪೂಜಾರ ಟೀಮ್ ಇಂಡಿಯಾದ ಮಿಸ್ಟರ್ ಡಿಪೆಂಡಬಲ್. ಭಾರತಕ್ಕೆ ಸಿಕ್ಕ ಟ್ರಬಲ್ ಶೂಟರ್. ನಯಾ ವಾಲ್ ಅಂತಾನೇ ಕರೆಸಿಕೊಳ್ಳೋ ಈತ, ಡೆಡ್ಲಿ ಎಸೆತಗಳನ್ನು ಸಾಲಿಡ್ ಆಗಿ ಡಿಫೆನ್ಸ್ ಮಾಡೋದ್ರಲ್ಲೂ ಮಾಸ್ಟರ್. ಫ್ಲಾಟ್ ಟ್ರ್ಯಾಕ್ಗಳೆ ಇರಲಿ, SENA ಕಂಟ್ರಿಯ ಸ್ಪೀಡ್ ಆ್ಯಂಡ್ ಬೌನ್ಸಿ ಟ್ರ್ಯಾಕ್ಗಳಲ್ಲಿಯೆ ಆಗಿರಲಿ ಕಲ್ಲು ಬಂಡೆಯಂತೆ ಕ್ರೀಸ್ನಲ್ಲಿ ನೆಲಕಚ್ಚಿ ನಿಲ್ಲೋದ್ರಲ್ಲಿ ಪೂಜಾರಗೇ ಸರಿಸಾಟಿಯೇ ಇಲ್ಲ. ಏಕಾಂಗಿಯಾಗಿ ಹೋರಾಟ ನಡೆಸಿ, ಸೈಲೆಂಟ್ ಆಗಿಯೇ ಮ್ಯಾಚ್ ಗೆಲ್ಲಿಸುತ್ತಿದ್ದ ಈ ಟೆಸ್ಟ್ ಸ್ಪೆಷಲಿಸ್ಟ್ ಕರಿಯರ್ ಈಗ ಆಧೋಗತಿಗೆ ಸಿಲುಕಿದೆ.
ಟಾಪ್ ಆರ್ಡರ್ ವೈಫಲ್ಯ ಕಂಡ್ರೆ ಸಾಕು, ಕಲ್ಲು ಬಂಡೆಯಂತೆ ನೆಲೆಯೂರಿ ಟೀಮ್ ಇಂಡಿಯಾಗೆ ನೆರವಾಗ್ತಿದ್ದ ಸೌರಾಷ್ಟ್ರ ಆಟಗಾರನಿಗೆ ಈಗ ಟೀಮ್ ಇಂಡಿಯಾದಿಂದ ಗೇಟ್ಪಾಸ್ ಸಿಕ್ಕಿದೆ. ಸದ್ಯ ಟೀಮ್ ಇಂಡಿಯಾದಿಂದ ಔಟ್ ಆಗಿದ್ದಾರೆ. ಆದ್ರೆ, ಕಿಕ್ಔಟ್ ಆಗಿರೋ ಪೂಜಾರ ನಿಜಕ್ಕೂ ಟೀಮ್ ಇಂಡಿಯಾದ ನಯಾ ವಾಲ್ ಆಗಿದ್ದರೂ, ಸೈಲೆಂಟ್ ಆಗಿಯೇ ರನ್ ಶಿಖರ್ ಕಟ್ಟುತ್ತಾ ಎದುರಾಳಿಗೆ ಟ್ರಬಲ್ ಆಗ್ತಿದ್ದರು. ಇಂಥಹ ಮ್ಯಾಚ್ ವಿನ್ನರ್ ಪ್ಲೇಯರ್ ಈಗ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆ.
ಲಾಂಗ್ ಇನ್ನಿಂಗ್ಸ್ ಕಟ್ಟುವಲ್ಲಿ ಪೂಜಾರಗಿಲ್ಲ ಸರಿಸಾಟಿ..!
ಟೀಮ್ ಇಂಡಿಯಾದಿಂದ ಪೂಜಾರ ತಂಡದಿಂದ ಹೊರ ಬಿದ್ದಿರಬಹುದು. ಆದ್ರೆ, ತಂಡದ ಗೆಲುವಿಗಾಗಿ ಹೋರಾಟ ನಡೆಸೋದ್ರಲ್ಲಿ ಪೂಜಾರ ಎಂದಿಗೂ ರಿಯಲ್ ಫೈಟರ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 2021ರ ಸಿಡ್ನಿ ಟೆಸ್ಟ್.
ಈ ಟೆಸ್ಟ್ನಲ್ಲಿ ಟೀಮ್ ಇಂಡಿಯಾಗೆ ತಡೆಗೋಡೆಯಂತೆ ನಿಂತಿದ್ದ ಪೂಜಾರ 2 ಇನ್ನಿಂಗ್ಸ್ಳಲ್ಲಿ ಕಟ್ಟಿದ್ದು ಮ್ಯಾರಥಾನ್ ಇನ್ನಿಂಗ್ಸ್. ಮೊದಲ ಇನ್ನಿಂಗ್ಸ್ 176 ಎಸೆತಗಳಲ್ಲಿ 50 ರನ್ ದಾಖಲಿಸಿದ್ದ ಪೂಜಾರ, 2ನೇ ಇನ್ನಿಂಗ್ಸ್ ಬುಲೆಟ್ ವೇಗದಲ್ಲಿ ಬಂದ ಚೆಂಡು ಎದೆಗೆ ಅಪ್ಪಳಿಸುತ್ತಿದ್ದರೂ ಎದೆಯೊಡ್ಡಿ ಕ್ರೀಸ್ ಅಲ್ಲಿ ನೆಲೆ ನಿಂತಿದ್ದರು. 205 ಎಸೆತಗಳನ್ನ ಎದುರಿಸಿ ಪಂದ್ಯವನ್ನ ಸೋಲಿನ ದವಡೆಯಿಂದ ಪಾರು ಮಾಡಿದ್ದರೂ, ಇಂಥಹ ಅಮೋಘ ಇನ್ನಿಂಗ್ಸ್ಗಳನ್ನ ಪೂಜಾರ ಕಟ್ಟಿದ್ದು ಒಂದಾ ಎರಡಾ. ನಿಜಕ್ಕೂ ಹಲವು. ಇದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ.
8 ಬಾರಿ ಏಳೂವರೆ ಗಂಟೆಗೂ ಅಧಿಕ ಕಾಲ ಬ್ಯಾಟಿಂಗ್..!
ಟೀಮ್ ಇಂಡಿಯಾ ಪರ 103 ಟೆಸ್ಟ್ ಪಂದ್ಯಗಳನ್ನಾಡಿರುವ ಪೂಜಾರ 8 ಬಾರಿ ಏಳೂವರೆ ಗಂಟೆಗೂ ಅಧಿಕ ಸಮಯ ಕ್ರೀಸ್ನಲ್ಲಿ ನೆಲೆ ನಿಂತರೆ. 28 ಕ್ರೀಸ್ನಲ್ಲಿ ನಾಲ್ಕೂವರೆ ಗಮಟೆಗೂ ಅಧಿಕ ಹೊತ್ತು ಕ್ರೀಸ್ನಲ್ಲಿ ಕಳೆದಿದ್ದಾರೆ. 103 ಟೆಸ್ಟ್ ಪಂದ್ಯಗಳಿಂದ 364 ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿರೋದು ವಿಶೇಷ. ಇಂಥಹ ಹಲವು ಇನ್ನಿಂಗ್ಸ್ ಕಟ್ಟಿಕೊಟ್ಟ ಲೆಜೆಂಡರ್ ಎನಿಸಿಕೊಂಡ ಪೂಜಾರ, ಈಗ ತಂಡದಿಂದ ಹೊರಬಿದ್ದಿದ್ದು ನಿಜಕ್ಕೂ ದುರಾದೃಷ್ಟವೇ.
2020ರಿಂದ ಶುರುವಾಯ್ತು ದಿಗ್ಗಜನ ಡೌನ್ಫಾಲ್..!
ರೋಮಾಚನಕಾರಿ ಇನ್ನಿಂಗ್ಸ್ಗಳನ್ನು ಕಟ್ಟಿಕೊಟ್ಟಿದ್ದ ಪೂಜಾರ ಕರಿಯರ್ ಕುಸಿತ ಆರಂಭವಾಗಿದ್ದೇ 2020ರಿಂದ. 2020ಕ್ಕೂ ಮುನ್ನ ಟೀಮ್ ಇಂಡಿಯಾದ ಆಪ್ತ ರಕ್ಷಕನಾಗಿದ್ದ ಪೂಜಾರ ಆಟ, ನಂತರ ನಿಜಕ್ಕೂ ಕರಾಳ ದಿನಗಳನ್ನ ಎಣಿಸುವಂತೆ ಮಾಡಿತ್ತು. ಇದಕ್ಕೆ ಸಾಕ್ಷಿ 2020ರಿಂದ ಪೂಜಾರ ಬ್ಯಾಟ್ನಿಂದ ರನ್ಗಳೇ ಸಾಕ್ಷಿ.
ಮತ್ತೆ ಕಮ್ಬ್ಯಾಕ್ ಮಾಡ್ತಾರಾ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ..?
ಮತ್ತೆ ಟೆಸ್ಟ್ ಸ್ಪೆಲಿಸ್ಟ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳು ಚಾನ್ಸ್ ಇದೆಯಾ ಅಂದ್ರೆ, ಖಂಡಿತ ಇಲ್ಲ. ಯಾಕಂದ್ರೆ, ಸದ್ಯ ಭವಿಷ್ಯದ ತಂಡದ ಕಟ್ಟೋಕೆ ಹೊರಟಿರೋ ಬಿಸಿಸಿಐ, ಈಗಾಗಲೇ ಮೂರನೇ ಕ್ರಮಾಂಕಕ್ಕಾಗಿ ಋತುರಾಜ್, ಯಶಸ್ವಿ ಜೈಸ್ವಾಲ್ರಂತಹ ಆಟಗಾರರನ್ನ ಪ್ರಯೋಗಿಸುತ್ತಿದೆ. ಅಷ್ಟೇ ಅಲ್ಲ.! ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಅವರಂಥ ಆಟಗಾರರು ಮಿಡಲ್ ಆರ್ಡರ್ಗೆ ಶಕ್ತಿ ತುಂಬಬಲ್ಲವರು ಆಗಿದ್ದಾರೆ. ಹೀಗಾಗಿ ಈ ಯಂಗ್ ಡೈನಾಮಿಕ್ ಪ್ಲೇಯರ್ಸ್ ಸಕ್ಸಸ್ ಕಂಡ್ರೆ, 35 ವರ್ಷದ ಪೂಜಾರ ಟೆಸ್ಟ್ನಲ್ಲಿ ಕಾಣಿಸುವುದು ಅಸಾಧ್ಯದ ಮಾತೇ ಆಗಿದೆ.
ಈಗ ದೇಶಿ ಕ್ರಿಕೆಟ್ ಆಡೋಕೆ ಸನ್ನದ್ಧರಾಗ್ತಿರೋ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ರಣರೌದ್ರವತಾರ ಪ್ರದರ್ಶಿಸಿ ಟೀಮ್ ಇಂಡಿಯಾಗೆ ರೀ ಎಂಟ್ರಿ ನೀಡಿದರೂ ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ