ಶತಮಾನಗಳ ಹಿಂದೆ ಒಂದು ಸಣ್ಣ ದಾಳಿ ಆಯ್ತು
ಗುಲಾಮಿತನದ ನಮ್ಮ ಬೇಡಿಗಳನ್ನ ಒಡೆಯಲು ಹೋರಾಡ್ತಿದ್ದರು
ಜನರಲ್ಲಿ ಹೊಸ ವಿಶ್ವಾಸವನ್ನ ಹುಟ್ಟಿಸುವ ಕ್ಷಣ 1947ರಲ್ಲಿ ಬಂತು
ಕಳೆದ ಕೆಲವು ದಿನಗಳಿಂದ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿವೆ. ಹಿಂಸಾಚಾರದಿಂದ ಹಲವರು ಪ್ರಾಣಗಳನ್ನ ಸಹ ಕಳೆದುಕೊಂಡಿದ್ದಾರೆ. ಆದರೆ ಈಗ ಕೆಲ ದಿನಗಳಿಂದ ಸತತ ಶಾಂತಿಯ ಸುದ್ದಿಗಳು ಬರುತ್ತಿವೆ. ಕೆಲ ವಾರಗಳ ಹಿಂದೆ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಹಲವರು ಜೀವತೆತ್ತಿದ್ದಾರೆ. ದೇಶ ಮಣಿಪುರದ ಜನತೆಯ ಜೊತೆಗಿದೆ. ಮಣಿಪುರದ ಜನರು ಶಾಂತಿಯನ್ನ ಕಾಪಾಡಿಕೊಳ್ಳಬೇಕಾಗಿದೆ. ಶಾಂತಿಯಿಂದಲೇ ಇದಕ್ಕೆ ಪರಿಹಾರ ಸಿಗಲಿದೆ. ಕಳೆದ ಕೆಲವು ದಿನಗಳಿಂದ ಶಾಂತಿ ನೆಲೆಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಅವರ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತಿವೆ. ಸತತವಾಗಿ ಪರಿಹಾರಕ್ಕೆ ಯತ್ನಿಸ್ತಿದೆ, ಇದನ್ನ ಮುಂದುವರಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಇಂದು ದೆಹಲಿಯ ಕೆಂಪು ಕೋಟೆಯ ಮೇಲೆ ನಿಂತು ಭಾಷಣ ಮಾಡಿದ್ದಾರೆ.
ಶತಮಾನಗಳ ಹಿಂದೆ ಒಂದು ಸಣ್ಣ ದಾಳಿ ಆಯ್ತು
77ನೇ ಸ್ವಾತಂತ್ರ್ಯೋತ್ಸವದ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಲವೊಂದು ಘಟನೆಗಳು ಮೊದಲಿಗೆ ಚಿಕ್ಕದು ಅನಿಸುತ್ತದೆ. ಆದರೆ ಇದೇ ಮುಂದೆ ದೊಡ್ಡ ಸಮಸ್ಯೆಗಳ ಮೂಲವಾಗುತ್ತೆ. ನಮ್ಮ ಮೇಲೆ ಶತಮಾನಗಳ ಹಿಂದೆ ಒಂದು ಸಣ್ಣ ದಾಳಿ ಆಯ್ತು. ಮೊದಲು ಸಣ್ಣ ರಾಜ್ಯದ ರಾಜನನ್ನ ಒಬ್ಬರು ಸೋಲಿಸಿದ್ದರು. ಮುಂದೆ ಅದೇ ನಮ್ಮನ್ನ ಸಾವಿರಾರು ವರ್ಷಗಳ ಗುಲಾಮತನಕ್ಕೆ ತಳ್ಳಿತು. ಸ್ವಾತಂತ್ರ್ಯದ ಕನಸನ್ನ ಕಾಣದೇ ಬದುಕಿದ್ದ ಒಬ್ಬ ಭಾರತೀಯನಿರಲಿಲ್ಲ. ಹಲವು ಮಹಾಪುರುಷರು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡ್ತಿದ್ದರು ಎಂದು ಹೇಳಿದರು.
140 ಕೋಟಿ ಜನರ ದೇಶ ಇದು
ಬಳಿಕ ಮಾತು ಮುಂದುವರಿಸಿದ ಅವರು, ಇಷ್ಟು ದೊಡ್ಡ ದೇಶ, 140 ಕೋಟಿ ಜನರ ದೇಶ ಇದು. ನನ್ನ ಸೋದರ, ಸೋದರಿಯರು ಸ್ವಾತಂತ್ರ್ಯೋತ್ಸವ ಆಚರಿಸ್ತಿದ್ದಾರೆ. ಜಗತ್ತಿನಲ್ಲೆಡೆ ಇರುವ ಭಾರತವನ್ನ ಪ್ರೀತಿಸುವ, ಗೌರವಿಸುವ ಕೋಟಿ ಕೋಟಿ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸ್ತೇನೆ. ಗುಲಾಮಿತನದ ನಮ್ಮ ಬೇಡಿಗಳನ್ನ ಒಡೆಯಲು ಹೋರಾಡ್ತಿದ್ದರು. ಜನರಲ್ಲಿ ಹೊಸ ವಿಶ್ವಾಸವನ್ನ ಹುಟ್ಟಿಸುವ ಕ್ಷಣ 1947ರಲ್ಲಿ ಬಂತು. ಆಗಸ್ಟ್ 15ರಂದು ಭಾರತವು ಸ್ವಾತಂತ್ರ್ಯವಾಯಿತು. ಇವತ್ತು ಮತ್ತೆ ದೇಶದ ಒಂದು ಅವಕಾಶ ಬಂದಿದೆ. ನಾವು ಈ ಕಾಲದಲ್ಲಿ ಬದುಕಿರುವುದು ನಮ್ಮ ಸೌಭಾಗ್ಯ. ಭಾರತದ ಅಮೃತಕಾಲದಲ್ಲಿ ನಾವು ಜೀವಿಸುತ್ತಿರುವುದು ಸೌಭಾಗ್ಯ. ಇದು ಅಮೃತಕಾಲದ ಮೊದಲ ವರ್ಷ, ಈಗ ನಮ್ಮ ಹೆಜ್ಜೆ ಮುಖ್ಯ. ನಾವು ತೆಗೆದುಕೊಳ್ಳು ನಿರ್ಧಾರಗಳು, ಈಗಾಗುವ ಘಟನೆಗಳು ಮುಂದಿನ ಸಾವಿರ ವರ್ಷಗಳಿಗೆ ತನ್ನ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ.
ನನ್ನ ಭಾರತ ಮಾತೆ ಬೆಳಕಿನ ಜ್ವಾಲೆಯಾಗಿದ್ದಳು
ಗುಲಾಮಿಯ ಮಾನಸಿಕತೆಯಿಂದ ಹೊರ ಬಂದಿರುವ ದೇಶ ನಮ್ಮದು. ಹೊಸ ವಿಶ್ವಾಸ, ಸಂಕಲ್ಪಗಳೊಂದಿಗೆ ಇವತ್ತು ಮುನ್ನಡೆಯುತ್ತಿದೆ. ನನ್ನ ಭಾರತ ಮಾತೆ ಬೆಳಕಿನ ಜ್ವಾಲೆಯಾಗಿದ್ದಳು, ಆದ್ರೆ ಕತ್ತಲೆಯಲ್ಲಿದ್ದಳು. ಆದರೀಗ ಅದೇ ತಾಯಿ ಭಾರತಿ ಮತ್ತೆ ಜಾಗೃತಳಾಗಿದ್ದಾಳೆ, ಜನ ಎಚ್ಚೆತ್ತಿದ್ದಾರೆ. ಕಳೆದ 9-10 ವರ್ಷಗಳಲ್ಲಿ ಭಾರತದ ಸಾಮರ್ಥ್ಯವನ್ನ ಜಗತ್ತು ನೋಡ್ತಿದೆ. ಜಗತ್ತಿನಲ್ಲಿ ಹೊಸ ಆಕರ್ಷಣೆ, ಹೊಸ ವಿಶ್ವಾಸ ಭಾರತದ ಮೇಲೆ ಬಂದಿದೆ. ಭಾರತದ ಈ ಬೆಳಕಿನಲ್ಲಿ ಜಗತ್ತಿಗೆ ತನ್ನ ಬೆಳಕು ಕಾಣಿಸುತ್ತಿದೆ. ನಮ್ಮ ಬಳಿ ನಮ್ಮ ಪೂರ್ವಿಕರು ನೀಡಿರುವ ಅಮೂಲ್ಯ ವಸ್ತುಗಳಿವೆ. ನಮ್ಮ ಬಳಿ ಡೆಮೋಗ್ರಫಿ, ಡೆಮಾಕ್ರಸಿ, ಡೈವರ್ಸಿಟಿ ಇದೆ. ಈ ತ್ರಿವೇಣಿ ಭಾರತದ ಎಲ್ಲ ಕನಸುಗಳನ್ನ ನನಸಾಗಿಸುವ ಸಾಮರ್ಥ್ಯ ಹೊಂದಿದೆ. ಜಗತ್ತಿನಲ್ಲಿ ಹಲವು ದೇಶಗಳ ವಯಸ್ಸು ಕ್ಷೀಣಿಸುತ್ತಿದೆ. ಆದರೆ ಭಾರತ ತನ್ನ ಯವ್ವನದತ್ತ ಮುನ್ನುಗ್ಗುತ್ತಿದೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೋಟಿ ಕೋಟಿ ಜನರಿದ್ದಾರೆ. ಕೋಟಿ ಕೋಟಿ ಭುಜಗಳು, ಕೋಟಿ ಕೋಟಿ ಮೆದಳು, ಕೋಟಿ ಕೋಟಿ ಕನಸು ನಾವು ಬಯಸುವ ಫಲಿತಾಂಶವನ್ನ ಇದರಿಂದ ಪಡೆಯಲು ಸಾಧ್ಯ. ಈ ಸಾಮರ್ಥ್ಯವೇ ದೇಶದ ಭಾಗ್ಯವನ್ನ ಬದಲಾಯಿಸುತ್ತದೆ. ಭಾರತ ಮುಂದಿನ ಸಾವಿರ ವರ್ಷದ ಭವ್ಯ ಪರಂಪರೆಯಲ್ಲಿದ್ದೇವೆ. ಹೀಗಾಗಿ ನಾವು ಈಗ ನಿಲ್ಲಬಾರದು, ಗೊಂದಲದಲ್ಲಿ ಬಾಳಬಾರದು ಎಂದು ಮೋದಿ ಭಾಷಣ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ