ಜನರಲ್ಲಿ ಹೊಸ ವಿಶ್ವಾಸವನ್ನ ಹುಟ್ಟಿಸುವ ದಿನಗಳು ಆರಂಭ
ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್ ತರಬೇತಿ..!
ಮಹಿಳೆಯರು ಹೆಚ್ಚು ಹೆಚ್ಚು ತಂತ್ರಜ್ಞಾನದಲ್ಲಿ ಪಾಲ್ಗೊಳ್ಳಲಿ
ನವದೆಹಲಿ: ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆ ಮೇಲೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು. ನಂತರ ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದರು.
ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದ ಮಹಿಳೆಯರಿಗೆ ಶಕ್ತಿ ತುಂಬಿದರು. ಇಂದಿನ ಆಧುನಿಕ ವಿಜ್ಞಾನ, ತಂತ್ರಜ್ಞಾನದಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಳ್ಳಬೇಕು. ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಮುನ್ನುಗ್ಗಬೇಕಿದೆ. ಇನ್ನಷ್ಟು ಮಹಿಳೆಯರು ತಂತ್ರಜ್ಞಾನದತ್ತ ಬರಲಿ, ಇದರಿಂದ ದೇಶ ಪ್ರಗತಿ ಕಡೆ ಸಾಗುತ್ತದೆ. ಈಗಾಗಲೇ ಬೇರೆ ದೇಶಕ್ಕಿಂತ ಭಾರತದಲ್ಲಿ ಹೆಚ್ಚು ಮಹಿಳಾ ಪೈಲಟ್ಗಳನ್ನು ಹೊಂದಿದೆ. ಇದು ಭಾರತ ಆಧುನಿಕತೆಯತ್ತ ಹೆಜ್ಜೆ ಇಡುತ್ತಿರುವುದು ತೋರಿಸುತ್ತಿದೆ ಎಂದು ಹೇಳಿದರು.
ಟೆಕ್ನಾಲಾಜಿ, ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ವಿಭಾಗಗಳಲ್ಲಿ ಹೆಚ್ಚಾಗಿ ಯುವತಿಯರು ಉತ್ಸಾಹದಿಂದ ಸೇರಿಕೊಂಡು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡ್ರೋನ್ ಬಳಕೆ ಬಗ್ಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ತರಬೇತಿ ನೀಡಲಾಗುವುದು. ಜನ ಪರ ಕಲ್ಯಾಣಕ್ಕೆ ಹೆಚ್ಚು ಹಣ ವ್ಯಯ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ