ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ವೀರರ ಬಲಿದಾನಗಳು ನಡೆದಿವೆ
ಕೊರೊನಾ ಬಳಿಕ ಇಡೀ ವಿಶ್ವವೇ ಭಾರತವನ್ನು ಗೌರವಿಸುತ್ತಿದೆ
ಭವಿಷ್ಯದಲ್ಲಿ ನಮ್ಮ ಭಾರತ ಇನ್ನಷ್ಟು ಅಭಿವೃದ್ಧಿ ಸಾಧಿಸಲಿದೆ..!
ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದರು. ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಆಗಸದಲ್ಲಿ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಲಾಯಿತು. ಪ್ರಧಾನಿ ಮೋದಿಯವರು 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದರು.
ಅಮೃತಕಾಲ ಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ಭಾರತದ ಮೇಲೆ ಹಲವು ಬಾರಿ ಆಕ್ರಮಣಗಳು ನಡೆದಿವೆ. ಸುಮಾರು 1 ಸಾವಿರ ವರ್ಷಗಳ ಕಾಲ ಗುಲಾಮರ ರೀತಿಯಲ್ಲಿ ಜೀವಿಸಿದ್ದೇವೆ. ಯುವ ಶಕ್ತಿ ಮೇಲೆ ನನಗೆ ನಂಬಿಕೆ, ವಿಶ್ವಾಸವಿದೆ. ದೇಶದ ಅಭಿವೃದ್ಧಿಗೆ ಯುವಶಕ್ತಿ, ರೈತರು, ಶ್ರಮಿಕರ, ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಭಾರತದ ಅತಿದೊಡ್ಡ ಸಾಮರ್ಥ್ಯವೇ ಆತ್ಮವಿಶ್ವಾಸ ಎಂದು ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣದಲ್ಲಿ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ