/newsfirstlive-kannada/media/post_attachments/wp-content/uploads/2024/11/MAHARASHTRA-ELECTION-3.jpg)
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೆಚ್ಚು ಕಡಿಮೆ ತುಂಬಾ ಶಾಂತವಾಗಿ ನಡೆದಿದೆ. ಆದ್ರೆ ಬೀದ್​ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಭೀಕರ ದುರಂತ ನಡೆದು ಹೋಗಿದೆ. ಬೀದ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಬಾಳಾಸಾಹೇಬ್ ಶಿಂಧೆ ಎಂಬುವವರು ಮತಗಟ್ಟೆಯ ಬಳಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಬೀಡಿ ಸಿಟಿಯ ಛತ್ರಪತಿ ಸಾಹು ವಿದ್ಯಾಲಯದಲ್ಲಿ ಮತದಾನ ನಡೆಯುತ್ತಿತ್ತು. ಸ್ಥಳಕ್ಕೆ ಬಾಳಾ ಸಾಹೇಬ್ ಶಿಂಧೆ ಆಗಮಿಸಿದಾಗ ಅವರನ್ನು ಒಳಗೆ ಹೋಗದಂತೆ ಪೊಲೀಸರು ತಡೆದಿದ್ದಾರೆ. ಇದೇ ವೇಳೆ ಬಾಳಾ ಸಾಹೇಬ್​ ಶಿಂಧೆ ಕುಸಿದು ಬಿದ್ದಿದ್ದಾರೆ.
ಕುಸಿದು ಬಿದ್ದ ಬಾಳಾಸಾಹೇಬ್ ಶಿಂಧೆರನ್ನು ಸಮೀಪದ ಛತ್ರಪತಿ ಸಂಭಾಜಿ ನಗರದ ನಾನಾ ಆಸ್ಪತ್ರೆಗೆ ಸೇರಿಸಲಾಯಿತು. ಪರೀಕ್ಷೆ ಮಾಡಿದ ವೈದ್ಯರು ಬಾಳಾಸಾಹೇಬ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಿಸಿಕೊಳ್ಳದೇನೇ ವೈದ್ಯರು ಶಿಂಧೆ ಮಾರ್ಗಮಧ್ಯೆಯೇ ತೀರಿ ಹೋಗಿದ್ದಾರೆ ಎಂದು ದೃಢಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us