newsfirstkannada.com

×

ವಿಶ್ವಕಪ್ ಗುರಿ.. ಭಾರತ ತಂಡದ ಮುಂದಿದೆ ‘ಪಂಚ’ ಸವಾಲ್; ಇವು ಸರಿ ಹೋದರಷ್ಟೇ ಕಪ್..!

Share :

Published August 13, 2023 at 9:22am

    ಅಕ್ಟೋಬರ್​​ 5 ರಿಂದ ಏಕದಿನ ವಿಶ್ವಕಪ್​ ಫೆಸ್ಟಿವಲ್​

    ಒಂದಕ್ಕಿಂತ ಒಂದು ಚಾಲೆಂಜ್​ ಭಿನ್ನ, ಕಠಿಣ ಕೂಡ

    ಕಪ್ ಕನಸಿಗೆ ಅಡ್ಡಿಯಾಗಿರೋ 5 ಚಾಲೆಂಜಸ್​ ಯಾವುದು?

ಈ ಸಲ ಭಾರತದಲ್ಲೇ ಒನ್ಡೇ ವಿಶ್ವಕಪ್ ನಡಿಯುತ್ತಿದೆ. ಸಹಜವಾಗಿ ರೋಹಿತ್ ಶರ್ಮಾ ಆ್ಯಂಡ್​​​​​ ಟೀಮ್​​​ ಟ್ರೋಫಿ ಗೆಲ್ಲುವ ಫೇವರಿಟ್​​ ತಂಡವನಿಸಿದೆ. ಆದರೆ ಟ್ರೋಫಿ ಗೆಲ್ಲುವ ಹಾದಿ ಸುಲಭವಿಲ್ಲ. ಈ ಪಂಚ ಮಹಾಸವಾಲುಗಳನ್ನ ಮೆಟ್ಟಿನಿಂತರಷ್ಟೇ ದಶಕದ ಐಸಿಸಿ ಟ್ರೋಫಿ ಬರ ನೀಗುತ್ತೆ.

ಅಕ್ಟೋಬರ್​​ 5 ರಿಂದ ಅಸಲಿ ಕ್ರಿಕೆಟ್​​ ಫೆಸ್ಟಿವಲ್ ಶುರುವಾಗಲಿದೆ. ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ ತವರಿನ ತಂಡಕ್ಕೆ ತುಂಬಾನೇ ಕ್ರೂಷಿಯಲ್​​.12 ವರ್ಷದಿಂದ ಮೆನ್​​ ಇನ್​ ಬ್ಲೂ ಪಡೆ ಏಕದಿನ ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ಬ್ಲೂ ಬಾಯ್ಸ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಗರಿಗೆದರಿವೆ. ಇಂತಹ ಹೊತ್ತಲ್ಲೇ ಭಾರತದ ವಿಶ್ವಕಪ್​​​ ಗೆಲ್ಲುವ ಕನಸಿಗೆ 5 ಬಿಗ್ ಚಾಲೆಂಜಸ್​ ತೊಡಕಾಗಿವೆ. ಟೂರ್ನಿಗೂ ಮುನ್ನ ಪಂಚ ಸವಾಲುಗಳನ್ನ ಬಗೆಹರಿಸಿಕೊಳ್ಳಲೇಬೇಕಿದೆ.

ಚಾಲೆಂಜ್​​ ನಂ.1:

ಒನ್ಡೇ ವಿಶ್ವಕಪ್​​​​ ಆರಂಭಕ್ಕೆ ಎರಡೂ ತಿಂಗಳಿಗೂ ಕಮ್ಮಿ ಸಮಯವಿದೆ. ಇಷ್ಟಾದ್ರು ಇಂಜುರಿ ಕೀ ಪ್ಲೇಯರ್ಸ್​ ವಿಶ್ವಕಪ್​ ಆಡ್ತಾರಾ? ಇಲ್ವಾ ಅನ್ನೋ ಕ್ಲಾರಿಟಿ ಸಿಕ್ಕಿಲ್ಲ. ಜಸ್​ಪ್ರೀತ್ ಬುಮ್ರಾ ಐರ್ಲೆಂಡ್ ಸರಣಿಗೆ ಕಮ್​​ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಕೆ.ಎಲ್ ರಾಹುಲ್​ ಹಾಗೂ ಶ್ರೇಯಸ್ ಅಯ್ಯರ್​ ಏಷ್ಯಾಕಪ್​​​​ಗೆ ಮರಳುವ ನಿರೀಕ್ಷೆ ಇದೆ. ಒಂದು ವೇಳೆ ಈ ತ್ರಿಮೂರ್ತಿಗಳು ವಿಶ್ವಕಪ್​​ಗೆ ಆಯ್ಕೆಯಾದರೂ ಎಷ್ಟು ಫಿಟ್ ಆಗಿರ್ತಾರೆ ಅನ್ನೋ ಪ್ರಶ್ನೆ ಕಾಡೋದು ಸಹಜ. ಯಾಕಂದ್ರೆ ಮಹಾಕದನಕ್ಕೂ ಮುನ್ನ ಭಾರತ ಬರೀ 8-10 ಒನ್ಡೇ ಮ್ಯಾಚಸ್ ಆಡಲಿದೆ. ಅಷ್ಟರೊಳಗೆ ಕೀ ಪ್ಲೇಯರ್ಸ್​ ಮತ್ತೆ ಇಂಜುರಿಗೆ ತುತ್ತಾದ್ರೆ ಬ್ಯಾಕ್​​ಅಪ್​​​ ಪ್ಲೇಯರ್ಸ್​ ಹುಡುಕಾಟ ಮ್ಯಾನೇಜ್​ಮೆಂಟ್​​ಗೆ ಟೆನ್ಷನ್ ತಂದೊಡ್ಡಲಿದೆ.

ಚಾಲೆಂಜ್​​ ನಂ.2:

ಮಲ್ಟಿನೇಶನ್​​​ ಟೂರ್ನಾಮೆಂಟ್​ಗಳಲ್ಲಿ ಓಪನಿಂಗ್​ ಉತ್ತಮವಾಗಿದ್ರೆ ಉತ್ತಮ ಆರಂಭ ಪಡೆಯಬಹುದು. ಆದರೆ ಭಾರತ ಈ ವಿಚಾರದಲ್ಲಿ ಹೆಚ್ಚು ಫೋಕಸ್​ ನಡೆಸಬೇಕು. ಯಾಕಂದ್ರೆ ಕಳೆದ 12 ತಿಂಗಳಲ್ಲಿ ಭಾರತ ತಂಡ 7 ಓಪನರ್ಸ್​ಗಳನ್ನ ಕಂಡಿದೆ. ರೋಹಿತ್​​-ಗಿಲ್​​ ಓಪನ್ ಮಾಡೋದು ಬಹುತೇಕ ಫಿಕ್ಸ್​​. ಆದ್ರೆ ಇಬ್ಬರು ಅಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇನ್ನುಳಿದ ಬೆರಳಿಕೆ ಏಕದಿನ ಪಂದ್ಯಗಳಲ್ಲಿ ಕನ್ಸಿಸ್ಟನ್ಸಿ ಪರ್ಫಾಮೆನ್ಸ್​ ನೀಡುವ ಅನಿವಾರ್ಯತೆ ಎದುರಾಗಿದೆ.

ಚಾಲೆಂಜ್​​ ನಂ.3:

ಟಾಪ್ ಆರ್ಡರ್ ಅಷ್ಟೇ ಅಲ್ಲ, ಟೀಮ್ ಇಂಡಿಯಾದಲ್ಲಿ ಮಿಡಲ್ ಆರ್ಡರ್​​​ ಗೊಂದಲ ಬಗೆಹರಿದಿಲ್ಲ. ಸ್ಟೆಬಲ್​ ಮಿಡಲ್ ಇಲ್ಲದೇ ಅದೆಷ್ಟು ತಿಂಗಳು ಉರುಳಿದಿದೆ. ರಾಹುಲ್​​-ಶ್ರೇಯಸ್​​ ಹೊರಬಿದ್ದ ಬಳಿಕ ಸೂರ್ಯಕುಮಾರ್​​, ದೀಪಕ್​ ಹೂಡಾ, ಅಕ್ಷರ್ ಪಟೇಲ್​​​​, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್​ ಪಾಂಡ್ಯ ಸೇರಿ ದಂಡು ಆಟಗಾರರನ್ನೇ ಆಡಿಸಲಾಗಿದೆ. ಇದೇ ದೊಡ್ಡ ಪ್ರಶ್ನೆಯನ್ನ ಹುಟ್ಟುಹಾಕಿದೆ. ಒಂದು ವೇಳೆ ರಾಹುಲ್ ಫಿಟ್​ ಆಗಿ ತಂಡಕ್ಕೆ ಮರಳಿದ್ರೆ ಸೂರ್ಯಕುಮಾರ್​​ಗೆ ಚಾನ್ಸ್ ಸಿಗುತ್ತಾ ? ಹಾಗಿಯೂ ಸ್ಕೈ ಆಡಿದ್ರೆ ಸ್ಯಾಮ್ಸನ್ ಕೀಪರ್ ಆಗಿ ಸ್ಥಾನ ಪಡೀತಾರಾ ? ಇಶಾನ್ ಕಿಶನ್​ ಯಾವ ಸ್ಲಾಟ್​​ನಲ್ಲಿ ಬ್ಯಾಟ್​​ನಲ್ಲಿ ಆಡ್ತಾರೆ ? ಇಂತಹ ಹಲವು ಅನ್​​ಸಾಲ್ಡ್​​​​ ಪ್ರಶ್ನೆಗಳು ತಂಡದ ಮುಂದಿವೆ.

ಚಾಲೆಂಜ್​​ ನಂ.4:

2011ರ ವಿಶ್ವಕಪ್​​ನಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ ಭಾರತ ಟ್ರೋಫಿ ಚರಿತ್ರೆ ಸೃಷ್ಟಿಸಿತ್ತು. ಇದೇ ವಿನ್ನಿಂಗ್ ಟೀಮ್​ ನಾಲ್ಕು ವರ್ಷ ಮಾಹಿ ನಾಯಕತ್ವದಲ್ಲಿ ಆಡಿತ್ತು. ಧೋನಿಗೆ ಒಂದು ಸೆಟಲ್ಡ್​ ಕೋರ್​ ಟೀಮ್​ ಸಿಕ್ಕಿತ್ತು. ಹೀಗಾಗಿ ವಿಶ್ವಕಪ್ ಗೆಲ್ಲೋದು ಈಸಿಯಾಯ್ತು. ಆದರೆ ಪ್ರಜಂಟ್ ಕ್ಯಾಪ್ಟನ್ ರೋಹಿತ್​​ ಇನ್ನೂ ತಂಡವನ್ನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಹಿಟ್​ಮ್ಯಾನ್ ಚುಕ್ಕಾಣಿ ಹಿಡಿದ ಬಳಿಕವೇ ತಂಡ ನಾಲ್ವರು ನಾಯಕರನ್ನ ಕಂಡಿದೆ. ರೆಗ್ಯೂಲರ್ ಕ್ಯಾಪ್ಟನ್​ಗೆ ಪ್ಲೇಯರ್ಸ್​ ಸ್ಟ್ರೆಂಥ್​ & ವೀಕ್ನೆಸ್ ಏನು ಅನ್ನೋದೆ ಸರಿಯಾಗಿ ಗೊತ್ತಿಲ್ಲ.

ಚಾಲೆಂಜ್​​ ನಂ.5

ವಿಶ್ವಕಪ್​ ಆರಂಭಕ್ಕೆ ಬೆರಳಣಿಕೆಯಷ್ಟು ದಿನಗಳು ಬಾಕಿ ಇದ್ರೂ ಫಿನಿಶಿಂಗ್ ರೋಲ್​ ನಿಭಾಯಿಸೋರು ಯಾರು ಅನ್ನೋ ಪ್ರಶ್ನೆ ತಲೆದೂರಿದೆ. ಒಂದು ವೇಳೆ ರಿಷಬ್​ ಪಂತ್​​ ವಿಶ್ವಕಪ್ ಆಡದಿದ್ದಲ್ಲಿ ಭಾರತಕ್ಕೆ ಜೆನ್ಯೂನ್ ಫಿನಿಶರ್ ಅಗತ್ಯವಿದೆ. ಹಾರ್ದಿಕ್​​​ ಅಥವಾ ಜಡೇಜಾ ಆ ಸ್ಥಾನ ತುಂಬಬೇಕು. ಆದರೆ ಪಾಂಡ್ಯ ಫಿನಿಶರ್​ ಆಗಿ ನ್ಯಾಯ ಒದಗಿಸಿಲ್ಲ. ಜಡ್ಡು ಕೆಪಾಸಿಟಿ ಹೊಂದಿದ್ದಾರೆ. ಆದ್ರೆ ಅವರನ್ನ ಮಿಡಲ್ ಆರ್ಡರ್​​ನಲ್ಲಿ ಆಡಿಸಿದ್ರೆ ಲೋವರ್ ಆರ್ಡರ್​​​ ಬ್ಯಾಟಿಂಗ್ ಡೆಪ್ತ್​ ಕಳೆದುಕೊಳ್ಳಲಿದೆ.
ಒಟ್ಟಿನಲ್ಲಿ ಒನ್ಡೇ ವಿಶ್ವಕಪ್​​ ಮಹಾದಂಗಲ್​​​ ಆರಂಭಕ್ಕೆ ಬರೀ 50 ಪ್ಲಸ್​ ದಿನಗಳಷ್ಟೇ ಬಾಕಿ ಇದೆ. ಅಷ್ಟರಲ್ಲಿ ಮೇಲಿನ ಫೈವ್​ ಚಾಲೆಂಜಸ್​​​​ಗೆ ಸೆಲ್ಯೂಷನ್​​​ ಅತ್ಯಗತ್ಯ. ಇಲ್ಲವಾದ್ರೆ ಈ ಬಾರಿಯು ಕಹಿ ನೆನಪು ಮರುಕಳಿಸೋದು ಪಕ್ಕಾ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್​

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ವಿಶ್ವಕಪ್ ಗುರಿ.. ಭಾರತ ತಂಡದ ಮುಂದಿದೆ ‘ಪಂಚ’ ಸವಾಲ್; ಇವು ಸರಿ ಹೋದರಷ್ಟೇ ಕಪ್..!

https://newsfirstlive.com/wp-content/uploads/2023/06/Team-India-1-1.jpg

Load More