newsfirstkannada.com

2023 ಏಕದಿನ ವಿಶ್ವಕಪ್​​​: ಕೊನೆಗೂ ಟೀಂ ಇಂಡಿಯಾ ಎದುರು ಮಂಡಿಯೂರಿದ ಪಾಕ್​​ ತಂಡ

Share :

07-08-2023

    2023 ಏಕದಿನ ವಿಶ್ವಕಪ್​​​ ಟೂರ್ನಿ

    ಭಾರತಕ್ಕೆ ಬರಲಿದೆ ಪಾಕ್​​ ತಂಡ..!

    ಪಾಕ್​​ ಸರ್ಕಾರದಿಂದ ಸಿಕ್ತು ಅನುಮತಿ

ಕೊನೆಗೂ ಪಾಕಿಸ್ತಾನ ಸರ್ಕಾರವೂ ಕ್ಯಾಪ್ಟನ್​​ ಬಾಬರ್​​ ಅಜಂ ನೇತೃತ್ವದ ಕ್ರಿಕೆಟ್​​​​ ತಂಡಕ್ಕೆ ಮುಂದಿನ 2023ರ ಏಕದಿನ ವಿಶ್ವಕಪ್​​ನಲ್ಲಿ ಭಾಗಿಯಾಗಲು ಅನುಮತಿ ನೀಡಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿ, ಯಾವುದೇ ಕಾರಣಕ್ಕೂ ಕ್ರೀಡೆಯನ್ನು ರಾಜಕೀಯದ ಜತೆ ಬೆರೆಸಬಾರದು. ಹೀಗಾಗಿ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕ್​ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದ್ದೇವೆ ಎಂದಿದೆ.

ಈ ಹಿಂದೆ ಟೀಂ ಇಂಡಿಯಾ ಪಾಕಿಸ್ತಾನದಲ್ಲಿ ನಡೆಯೋ ಏಷ್ಯಾಕಪ್‌ನಲ್ಲಿ ಭಾಗವಹಿಸಲು ಆಗಲ್ಲ ಎಂದಿತ್ತು. ಬಿಸಿಸಿಐ ನಿರ್ಧಾರ ಬದಲಿಸದೆ ಹೋದಲ್ಲಿ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಪಾಕಿಸ್ತಾನ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಪಿಸಿಬಿ ಎಚ್ಚರಿಕೆ ನೀಡಿತ್ತು. ಈಗ ಕೊನೆಗೂ ತನ್ನ ನಿಲುವು ಬದಲಿಸಿರೋ ಪಿಸಿಬಿ ಭಾರತದಲ್ಲಿ ನಡೆಯೋ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗಿಯಾಗಲಿದೆ ಎಂದು ಹೇಳಿದೆ.

ಇನ್ನು, ಪಿಸಿಬಿ ವಿಶ್ವಕಪ್ ಮೈದಾನಗಳನ್ನು ಪರಿಶೀಲಿಸಲು ಪಾಕಿಸ್ತಾನದ ಭದ್ರತಾ ತಂಡವನ್ನು ಭಾರತಕ್ಕೆ ಕಳುಹಿಸಿತ್ತು. ಇದರ ವರದಿ ಆಧಾರದ ಮೇರೆಗೆ ಪಾಕ್​ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

ಭಾರತ, ಪಾಕ್​ ಪಂದ್ಯ ಯಾವಾಗ?

ಅಕ್ಟೋಬರ್ 15ನೇ ತಾರೀಕು ಅಹಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕ್​​, ಟೀಂ ಇಂಡಿಯಾ ಮಧ್ಯದ ಹೈ-ವೋಲ್ಟೇಜ್ ಪಂದ್ಯ ನಡೆಯಬೇಕಿತ್ತು. ಕೊನೆಗೆ ನವರಾತ್ರಿ ಕಾರಣ ಪಂದ್ಯದ ವೇಳಾಪಟ್ಟಿ ಅಕ್ಟೋಬರ್ 14ಕ್ಕೆ ಬದಲಾಯಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2023 ಏಕದಿನ ವಿಶ್ವಕಪ್​​​: ಕೊನೆಗೂ ಟೀಂ ಇಂಡಿಯಾ ಎದುರು ಮಂಡಿಯೂರಿದ ಪಾಕ್​​ ತಂಡ

https://newsfirstlive.com/wp-content/uploads/2023/06/IND_PAK.jpg

Load More