ಫೈನಲ್ಸ್ನಲ್ಲಿ 20 ವರ್ಷಗಳ ಬಳಿಕ ಇಂಡೋ-ಆಸಿಸ್ ಕಾದಾಟ
ನಮೋ ಸ್ಟೇಡಿಯಂನಲ್ಲಿ ಇಂಡೋ-ಆಸಿಸ್ ಫೈನಲ್ ಫೈಟ್
ಅಂದು ಸೆಹ್ವಾಗ್ ಜೊತೆ ಹೋರಾಡಿದ್ದ ರಾಹುಲ್ ದ್ರಾವಿಡ್
ಏಕದಿನ ವಿಶ್ವಕಪ್‌ನಲ್ಲಿ ವಿಶ್ವ ಕ್ರಿಕೆಟ್ನ ಮದಗಜಗಳು ಮುಖಾಮುಖಿಯಾಗ್ತಿದೆ. ಈ ಫೈನಲ್ ಫೈಟ್.. 2003ರ ವಿಶ್ವಕಪ್ ಅನ್ನೇ ನೆನಪಿಸುತ್ತಿದೆ. ಇಂಥ ಮೆಗಾ ಟೂರ್ನಿಯ ಫೈನಲ್ ಫೈಟ್.. ಟೀಮ್ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಬದಲಾಗಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ವರ್ಸಸ್ ಆಸ್ಟ್ರೇಲಿಯಾ ನಡುವಿನ ಸೇಡಿನ ಸಮರ ಎಂಬಂತೆ ಬಿಂಬಿತವಾಗಿದೆ.
ಯಾರ್ ಆಗ್ತಾರೆ ವಿಶ್ವ ಚಾಂಪಿಯನ್.. ಸದ್ಯ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆ ಇದೊಂದೇ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಭಾನುವಾರ ನಮೋ ಸ್ಟೇಡಿಯಂನಲ್ಲಿ ಸಿಗಲಿದೆ. ಆದ್ರೆ ಇಬ್ಬರು ಬಲಿಷ್ಠರ ಕಾದಾಟ ಭಾರೀ ಕುತೂಹಲವನ್ನೇ ಮೂಡಿಸಿದೆ. ಇದಕ್ಕೆಲ್ಲಾ ಕಾರಣ ವಿಶ್ವ ಕ್ರಿಕೆಟ್ನ ಮದಗಜಗಾಳ ಕಾದಾಟ.
ಸೆಮಿಫೈನಲ್‌ನಲ್ಲಿ ಸೌತ್ ಆಫ್ರಿಕಾವನ್ನು ಸೋಲಿಸಿರುವ ಆಸ್ಟ್ರೇಲಿಯಾ, ದಾಖಲೆಯ 8 ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅತ್ತ ಸೋಲಿಲ್ಲದ ಸರದಾರ ಟೀಮ್ ಇಂಡಿಯಾ, ವಿಶ್ವ ಕಿರೀಟಕ್ಕೆ ಮುತ್ತಿಡುವ ಲೆಕ್ಕಚಾರದಲ್ಲಿದೆ. ಆದ್ರೆ ಇದೇ ಭಾನುವಾರ ನಮೋ ಅಂಗಳದಲ್ಲಿ ನಡೆಯೋ ಫೈನಲ್ ಫೈಟ್, ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಠೆಯಾಗಿದೆ. ಇದಕ್ಕೆ ಕಾರಣ ಹಳೆಯ ಸೇಡಿಗೆ ಸೇಡು.
ನಮೋ ಸ್ಟೇಡಿಯಂನಲ್ಲಿ ಇಂಡೋ-ಆಸಿಸ್ ಫೈನಲ್ ಕಾಳಗ..!
2003ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಮುಖಾಮುಖಿಯಾಗಿದ್ದ ಇಂಡೋ-ಆಸಿಸ್, ಈಗ ಬರೋಬ್ಬರಿ 20 ವರ್ಷಗಳ ನಂತರ ಮೆಗಾ ಟೂರ್ನಿಯ ಫೈನಲ್ನಲ್ಲಿನ ಕಾದಾಟಕ್ಕೆ ಸಜ್ಜಾಗಿದೆ. ವಿಶ್ವಕಪ್ ಅಭಿಯಾನವನ್ನ ಆಸ್ಟ್ರೇಲಿಯಾವನ್ನೇ ಬಗ್ಗುಬಡೆದು ಆರಂಭಿಸಿದ್ದ ಟೀಮ್ ಇಂಡಿಯಾ, ಈಗ ಅದೇ ಆಸ್ಟ್ರೇಲಿಯನ್ನರನ್ನ ಮಣಿಸಿ ಟ್ರೋಫಿಗೆ ಮುತ್ತಿಡುವ ಲೆಕ್ಕಚಾರದಲ್ಲಿದೆ. ಇದೆಲ್ಲಕ್ಕೂ ಮಿಗಿಲಾಗಿ ಭಾನುವಾರದ ಫೈನಲ್ ಫೈಟ್. ಟೀಮ್ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಹೊರತಾಗಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಸ್ಟ್ರೇಲಿಯನ್ಸ್ ನಡುವಿನ ಕಾಳಗವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ 20 ವರ್ಷದ ಹಿಂದಿನ ಆ ಪಂದ್ಯ.
2003ರ ವಿಶ್ವಕಪ್‌ನಲ್ಲಿ ಇಂಡೋ-ಆಸಿಸ್ ಜಿದ್ದಾಜಿದ್ದಿ!
2003ರ ಏಕದಿನ ವಿಶ್ವಕಪ್.. ಅಂದಿನ ಈ ವಿಶ್ವಕಪ್‌ನಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ, ಲೀಗ್ ಸ್ಟೇಜ್ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಆದ್ರೆ ಜೊಹನ್ಸ್ಬರ್ಗ್ನಲ್ಲಿ ನಡೆದ ಫೈನಲ್ಸ್ನಲ್ಲಿ ಆಸ್ಟ್ರೇಲಿಯನ್ಸ್ ಎದುರು ಮುಖಭಂಗ ಅನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಟೀಮ್ ಇಂಡಿಯಾಗೆ 360 ರನ್ಗಳ ಬೃಹತ್ ಸೆಟ್ ಮಾಡಿತ್ತು. ಈ ಬಿಗ್ ಟಾರ್ಗೆಟ್ ಬೆನ್ನಟ್ಟಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ಮುಗ್ಗರಿಸ್ತು.
ವೀರೇಂದ್ರ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಬಿಟ್ರೆ ಇನ್ಯಾವ ಬ್ಯಾಟರ್ ಅಂದು ಬಿಗ್ ಇನ್ನಿಂಗ್ಸ್ ಕಟ್ಟಲೇ ಇಲ್ಲ. ಪರಿಣಾಮ 234 ರನ್‌ಗಳಿಗೆ ಸರ್ವಪತನ ಕಂಡ ಟೀಮ್ ಇಂಡಿಯಾ, 125 ರನ್ಗಳ ಸೋಲು ಕಂಡಿತ್ತು. ವಿಶ್ವಕಪ್ ಗೆಲ್ಲೋ ಮಹಾದಾಸೆ ನುಚ್ಚುನೂರಾಗಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ, ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮುಂದಿದೆ.
ರೋಹಿತ್ ಪಡೆ ಮೂಲಕ ಸೇಡು ತೀರಿಸಿಕೊಳ್ಳಲು ವಾಲ್ ರೆಡಿ..?
ಅಂದು ಆಟಗಾರನಾಗಿ ವಿಶ್ವಕಪ್ ಗೆಲ್ಲಲು ವಿಫಲರಾಗಿರೋ ರಾಹುಲ್ ದ್ರಾವಿಡ್, ಈಗ ಕೋಚ್ ತೀರಿಸಿಕೊಳ್ಳುವ ಶಪಥ ಮಾಡಿದ್ದಾರೆ. ಇದರಂತೆಯೇ ರೋಹಿತ್ ಪಡೆಯನ್ನು ಸಜ್ಜುಗೊಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಒಂದೇ ಒಂದು ತಪ್ಪು ಹೆಜ್ಜೆ ಇಡದಂತೆ ನೋಡಿಕೊಂಡಿದ್ದಾರೆ. ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿರುವ ರಾಹುಲ್ ದ್ರಾವಿಡ್, ಆಟಗಾರರು ವಿಶ್ವಕಪ್ ಗೆದ್ದೇ ತೀರುವ ದೃಢ ಸಂಕಲ್ಪ ಮಾಡುವಂತೆ ಮಾಡಿದ್ದಾರೆ. ಪ್ರಸ್ತುತ ಆಟಗಾರರ ಫಾರ್ಮ್, ಟೀಮ್ ಇಂಡಿಯಾ ಗೆಲ್ಲೋ ಫೇವರಿಟ್ಸ್ ಆಗಿಸಿದೆ.
2003ರ ವಿಶ್ವಕಪ್‌ನಲ್ಲಿ ಆಸಿಸ್, ಇಂದು ಟೀಮ್ ಇಂಡಿಯಾ..!
ಆಸಿಸ್ ವಿರುದ್ಧ ಸೇಡು ತೀರಿಸಿಕೊಳ್ಳುವುದು ಟೀಮ್ ಇಂಡಿಯಾದ ಪರ, ಗುರಿಯಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ, 2003ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಅಜೇಯವಾಗಿ ಹೇಗೆ ವಿಶ್ವಕಪ್ ಗೆದ್ದಿತ್ತೋ ಅದೇ ಮಾದರಿಯಲ್ಲಿ ಭಾರತ ಗೆಲ್ಲಲು ಹೊರಟಿದೆ. ಅಂದು ಲೀಗ್ ಹಾಗೂ ಫೈನಲ್ನಲ್ಲಿ ಮಾತ್ರವೇ ಟೀಮ್ ಇಂಡಿಯಾ, ಆಸ್ಟ್ರೇಲಿಯನ್ಸ್ ಎದುರು ಸೋತಿತ್ತು. ಆಸ್ಟ್ರೇಲಿಯಾ 11 ಪಂದ್ಯಗಳಲ್ಲೂ ಗೆದ್ದು ಚಾಂಪಿಯನ್ ಆಗಿತ್ತು. ಪ್ರಸಕ್ತ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ, ಸೋಲಿಲ್ಲದ ಸರದಾರನಾಗೇ ಮುನ್ನುಗ್ಗುತ್ತಿದ್ದೆ. ಅಂದು ಆಸ್ಟ್ರೇಲಿಯನ್ಸ್ ನಡೆದ ಹಾದಿಯಲ್ಲೇ ಹೆಜ್ಜೆಹಾಕಿದೆ. ಅದಕ್ಕೆ ಉತ್ತರ ಎಂಬಂತೆ ಲೀಗ್ನಲ್ಲಿ ಆಸ್ಟ್ರೇಲಿಯನ್ಸ್ ಸೋಲಿಸಿರುವ ಟೀಮ್ ಇಂಡಿಯಾ, ಈಗ ಫೈನಲ್ಸ್ನಲ್ಲಿ ಮಗದೊಮ್ಮೆ ಸೋಲಿಸಿ 2003ರ ಸೇಡು ತೀರಿಸಿಕೊಳ್ಳಲು ಸನ್ನದ್ಧವಾಗಿದೆ.
ಈ ಕಾನ್ಫಿಡೆನ್ಸ್ಗೆ ಕಾರಣವೂ ಇದೆ. ಅದೇ ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ಇದುವರೆಗೆ ನೀಡಿರುವ ಪ್ರದರ್ಶನ. ತವರಿನ ಲಾಭದ ಜೊತೆಗೆ ಪ್ರಶಸ್ತಿ ಗೆಲ್ಲುವ ಅರ್ಹ ತಂಡವಾಗಿದೆ. ಹೀಗಾಗಿ ಲೀಗ್ನಲ್ಲಿ ಆಸ್ಟ್ರೇಲಿಯಾ ಸೋಲಿಸಿರುವ ಟೀಮ್ ಇಂಡಿಯಾ, ಫೈನಲ್ನಲ್ಲೂ ಸೋಲಿಸಿ ವಿಶ್ವಕಿರೀಟಕ್ಕೆ ಮುತ್ತಿಕ್ಕುವ ಲೆಕ್ಕಚಾರದಲ್ಲಿದೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್