newsfirstkannada.com

5 ಸಾವಿರ ಕಿ.ಮೀ ಸೈಕಲ್‌ ಸವಾರಿ.. 63ನೇ ವಯಸ್ಸಿನಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದ ಕನ್ನಡಿಗ

Share :

11-11-2023

    ಗುರುಮೂರ್ತಿ ಮಾತರಂಗಿಮಠ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್

    ಯುವ‌ ಪೀಳಿಗೆಗೆ ಮಾದರಿಯಾದ ಗುರುಮೂರ್ತಿ ಮಾತರಂಗಿಮಠ ಉತ್ಸಾಹ

    ಕ್ರಿಕೆಟ್, ವಾಲಿಬಾಲ್, ಫುಟ್ ಬಾಲ್, ಟೆನ್ನಿಸ್​ ಆಟಗಳಲ್ಲೂ ಪರಿಣಿತ

ಹುಬ್ಬಳ್ಳಿ: ಸಾಧನೆಗೆ ವಯಸ್ಸು ಅಡ್ಡಿಯಲ್ಲ. ಸಾಧಿಸುವ ಛಲವೊಂದಿದ್ದರೇ ಏನು ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಹುಬ್ಬಳ್ಳಿಯ ಈ ಸಾಧಕನೇ ಸಾಕ್ಷಿ. ತಮ್ಮ 63 ನೇ ವಯಸ್ಸಿನಲ್ಲಿಯೂ ಕೂಡ ಸೈಕ್ಲಿಂಗ್​ನಲ್ಲಿ ಸಾಧನೆ ಮಾಡುವ ಮೂಲಕ ಇಂದಿನ ಯುವ‌ಪೀಳಿಗೆಗೆ ಮಾದರಿಯಾಗಿದ್ದಾರೆ.

ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಗುರುಮೂರ್ತಿ ಮಾತರಂಗಿಮಠ ಎಂಬುವವರೇ ಸಾಧನೆ ಮಾಡಿದವರು. ಇವರು ತಮ್ಮ 63ನೇ ವಯಸ್ಸಿನಲ್ಲಿ 5,000 ಕಿ.ಮೀ ಸೈಕಲ್‌ ಸವಾರಿ ಮಾಡಿರುವುದು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 100 ದಿನಗಳ ಕಾಲ ಪ್ರತಿದಿನ 50 ಕಿ.ಮೀ ಸೈಕಲ್‌ ಸವಾರಿ ಮಾಡಿದರು. ಇದಕ್ಕೂ ಮೊದಲು ಅವರು ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ನಿಂದ 2020–21 ಹಾಗೂ 2021–22 ಸಾಲಿನಲ್ಲಿ ಹಲವು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಹುಬ್ಬಳ್ಳಿ ಬೈಸಿಕಲ್ ಕ್ಲಬ್‌ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈಗ ತಮ್ಮ 63ನೇ ವಯಸ್ಸಿನಲ್ಲಿಯೇ 5,000 ಕಿಲೋಮೀಟರ್ ಸೈಕ್ಲಿಂಗ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸಾಧನೆ ಮಾಡಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಗುರುಮೂರ್ತಿ ಮಾತರಂಗಿಮಠ ಅವರು ಮೊದಲಿನಿಂದಲೂ ಹಲವು ಸ್ಪೋರ್ಟ್ಸ್‌ಗಳಲ್ಲಿ ಆಸಕ್ತಿ ಹೊಂದಿದ್ದರು. ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್, ಟೆನ್ನಿಸ್​ ಸೇರಿದಂತೆ ಹಲವು ಆಟಗಳನ್ನು ಆಡುತ್ತಿದ್ದರು.‌ ಆದರೆ ಅವರಿಗೆ 60ನೇ ವಯಸ್ಸಿನಲ್ಲಿ ಫುಟ್ ಕಾರ್ನ್‌ (ಕಾಲಿನಲ್ಲಿ ಉಂಟಾಗುವ ಆಣಿ) ಆಗಿತ್ತು. ಇದರಿಂದ ನಡೆಯಲು ಕೂಡ ಸಾಧ್ಯವಾಗುತ್ತಿರಲ್ಲಿಲ್ಲ. ಹೀಗಾಗಿ ಅವರು ಆರೋಗ್ಯದ ದೃಷ್ಟಿಯಿಂದ ಯಾವುದಾದರೂ ಚಟುವಟಿಕೆ ಮಾಡಲು ಯೋಚನೆ ಮಾಡಿದರು.

ಆಗ ತಮ್ಮ ನಿವಾಸ ಶಿರೂರ ಪಾರ್ಕ್ ಬಳಿ ಸೈಕಲ್ ಸವಾರನೊಬ್ಬನನ್ನು ಗಮನಿಸಿದರು. ಆಗ ಪಾದಕ್ಕೆ ಭಾರ ಬೀಳದಂತೆ ದೈಹಿಕ ಚಟುವಟಿಕೆ ಒಳ್ಳೆಯದೆಂದು ಸೈಕ್ಲಿಂಗ್ ನತ್ತ ತಮ್ಮ ಒಲವು ಹರಿಸಿದರು. ಅಲ್ಲದೆ ಸೈಕ್ಲಿಂಗ್ ಮಾಡುವುದರಿಂದ ದೈಹಿಕ ಆರೋಗ್ಯವಾಗಿರಬಹುದು ಮತ್ತು ಪರಿಸರ ರಕ್ಷಣೆಯಾಗುತ್ತದೆ ಎಂಬ ನಿಲುವು ತಾಳಿದ ಗುರುಮೂರ್ತಿಯವರು ಸೈಕ್ಲಿಂಗ್ ಆರಂಭಿಸಿದರು. ಆಗಿನಿಂದ ಆರಂಭವಾದ ಈ ಚಟುವಟಿಕೆ ತಮ್ಮ ಇಳಿ ವಯಸ್ಸಿನಲ್ಲಿ ಸೈಕಲ್​​ನಲ್ಲಿ 5 ಸಾವಿರ ಕಿಮೀ ಕ್ರಮಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ಸಾವಿರ ಕಿ.ಮೀ ಸೈಕಲ್‌ ಸವಾರಿ.. 63ನೇ ವಯಸ್ಸಿನಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದ ಕನ್ನಡಿಗ

https://newsfirstlive.com/wp-content/uploads/2023/11/bng-20.jpg

Load More