newsfirstkannada.com

Congratulations India, ಚಂದ್ರಯಾನ-3 ಉಡಾವಣೆ ಸಕ್ಸಸ್ -ಇಸ್ರೋ ಅಧಿಕೃತ ಘೋಷಣೆ

Share :

14-07-2023

  ಚಂದ್ರಯಾನ-3 ಉಡಾವಣೆ ಕಣ್ತುಂಬಿಕೊಂಡ ಭಾರತೀಯರು..!

  LVM- 3 ವೆಹಿಕಲ್​ ಮೂಲಕ ಚಂದ್ರಯಾನ- 3 ಯಶಸ್ವಿ ಉಡಾವಣೆ..!

  ಕಂಗ್ರಾಜ್ಯುಲೇಶನ್​ ಇಂಡಿಯಾ ಎಂದ ಇಸ್ರೋ ಅಧ್ಯಕ್ಷ ಎಸ್​​​ ಸೋಮನಾಥ್​

‘ಭಾರತಕ್ಕೆ ಅಭಿನಂದನೆಗಳು, ಚಂದ್ರಯಾನ -3 ಉಡಾವಣೆ ಯಶಸ್ವಿಯಾಗಿದೆ’ ಎಂದು ಇಸ್ರೋ ಅಧ್ಯಕ್ಷ ಎಸ್​​​ ಸೋಮನಾಥ್​ ಹೇಳಿದ್ದಾರೆ. ಚಂದ್ರಯಾನ-3 ನೌಕೆ ನಿಗದಿತ ಕಕ್ಷೆಯನ್ನು ಸೇರಿದ ಬಳಿಕ ಮಾತನಾಡಿದ ಅವರು, ಭಾರತ 3ನೇ ಬಾರಿಗೆ ಚಂದ್ರನತ್ತ ಕಳುಹಿಸಿದ ನೌಕೆಯ ಬಗ್ಗೆ ಮಾತನಾಡಿದ್ದಾರೆ.

ಸತೀಶ್​ ಧವನ್​ ಕೇಂದ್ರದಲ್ಲಿ ಮಾತನಾಡಿದ ಎಸ್​ ಸೋಮನಾಥ್​, ಚಂದ್ರಯಾನ-3 ಉಡಾವಣೆಗೆ ಕಾರಣರಾದ ಎಲ್ಲರಿಗೂ ನನ್ನ ಅಭಿನಂದನೆಗಳು ಸಲ್ಲಿಸಿದ್ದಾರೆ.

ಇನ್ನು ಶ್ರೀಹರಿಕೋಟಾದಲ್ಲಿ ಚಂದ್ರಯಾನ -3 ಯಶಸ್ವಿ ಉಡಾವಣೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮೂರು ಹಂತಗಳ ಕಕ್ಷೆಯನ್ನು ದಾಟಿದ ಬಳಿಕ ಈ ಸಂಭ್ರಮವನ್ನು ಆಚರಿಸಿದ್ದಾರೆ.

ಭಾರತದ ಕನಸಿನ ಚಂದ್ರಯಾನ-3 ಸಕ್ಸಸ್​ ಕಂಡಿರುವುವು ಹಮ್ಮೆಯ ವಿಚಾರವಾಗಿದೆ. 2019 ಬಳಿಕ ಚಂದ್ರನತ್ತ ಲ್ಯಾಂಡರ್​ ವಿಕ್ರಂನನ್ನು ಕಳುಹಿಸುವ ಯೋಜನೆ ಭಾರತರ ವಿಜ್ಞಾನಿಗಳದ್ದಾಗಿತ್ತು. ಅದರಂತೆಯೇ 4 ವರ್ಷಗಳ ಸತತ ಪ್ರಯತ್ನದ ಮೂಲಕ ‘ಲ್ಯಾಂಡರ್​ ವಿಕ್ರಂ’ ಸಿದ್ಧಪಡಿಸಲಾಗಿತ್ತು. ಇಂದು ಮದ್ಯಾಹ್ನ 2.35ಕ್ಕೆ ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮುವ ಮೂಲಕ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Congratulations India, ಚಂದ್ರಯಾನ-3 ಉಡಾವಣೆ ಸಕ್ಸಸ್ -ಇಸ್ರೋ ಅಧಿಕೃತ ಘೋಷಣೆ

https://newsfirstlive.com/wp-content/uploads/2023/07/CHANDRAYAANA-1-1.jpg

Load More