newsfirstkannada.com

ಚಂದ್ರಯಾನ-3 ಲ್ಯಾಂಡಿಂಗ್ ಸಕ್ಸಸ್​​.. ಹೇಗಿತ್ತು ಕೊನೆಯ ಆ 17 ನಿಮಿಷಗಳು..?

Share :

24-08-2023

    ಹೇಗಿದ್ದವು ಲ್ಯಾಂಡಿಂಗ್​ನ ಕೊನೆಯ 17 ನಿಮಿಷಗಳು?

    4 ಹಂತಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಹೇಗಿತ್ತು!

    ‘ವಿಕ್ರಮ’ನ ಪರಾಕ್ರಮ, ಬಂಗಾರದ ಹೆಜ್ಜೆ ಇಟ್ಟ ಇಸ್ರೋ

ಚಂದ್ರಯಾನ -3 ಸಕ್ಸಸ್​ ಆಗಿದೆ. ಶಶಿಯ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿ ಲ್ಯಾಂಡ್​ ಆಗಿದೆ. ಸೋಮಯಾನವನ್ನು ಸಾಧಿಸಿ ಭಾರತ ವಿಶ್ವದ ಗಮನ ಸೆಳೆದಿದೆ. ಕೊನೆಯ ಆ 4 ಹಂತಗಳನ್ನು ಬಹು ಆತಂಕದಲ್ಲೇ ದಾಟಿ ಶತಕೋಟಿ ಭಾರತೀಯರ ನಿರೀಕ್ಷೆಯನ್ನ ಹುಸಿಗೊಳಿಸದಂತೆ ಚಂದ್ರಯಾನ 3 ಯಶಸ್ವಿಯಾಗಿದೆ. ಸೋಮಯಾನ ಅದರ ಅರ್ಥ ​ ಚಂದ್ರಯಾನ 3 ನೌಕೆ ಚಂದ್ರಮನ ಚುಂಬನ ಮಾಡಿದೆ.

ಚಂದಾಮಾಮನ ಅಂಗಳದಲ್ಲಿ ಶತಕೋಟಿ ಭಾರತೀಯರ ಪ್ರತಿಧ್ವನಿಯಾಗಿ ಚಂದ್ರಯಾನ 3 ನೌಕೆ ಲ್ಯಾಂಡಿಂಗ್ ಆಗಿದೆ. ಶಶಿಯ ಅಂಗಳ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಶತಕೋಟಿ ಭಾರತೀಯರ ಪ್ರಾರ್ಥನೆ, ಇಸ್ರೋ ವಿಜ್ಞಾನಿಗಳ ಶ್ರಮ ಸಾಕಾರಗೊಂಡಿದೆ. ಇಸ್ರೋ ವಿಜ್ಞಾನಿಗಳು ಭಾರತದ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಲ್ಲಿ ಚರಿತ್ರೆ ಬರೆದಿದ್ದಾರೆ. ಚಂದ್ರಯಾನ 1 ಹಾಗೂ ಚಂದ್ರಯಾನ 2 ವಿಫಲವಾದ ಬೆನ್ನಲ್ಲೇ ಸಾಕಷ್ಟು ಶ್ರಮ ಹಾಗೂ ಜಾಗರೂಕತೆ ವಹಿಸಿ ಮಾಡಿದ ಚಂದ್ರಯಾನ 3 ಸಕ್ಸಸ್​ ಆಗಿದೆ. ಚಂದ್ರಯಾನ ಮೂರರ ವಿಕ್ರಮ್ ಲ್ಯಾಂಡರ್ ಚಂದಿರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್​ ಆಗಿದೆ.

ಸೋಮನ ಅಂಗಳದಲ್ಲಿ ಭಾರತದ ದಿಗ್ವಿಜಯ
ಚಂದ್ರಯಾನ ತ್ರಿ‘ವಿಕ್ರಮ’.. ಲ್ಯಾಂಡಿಂಗ್​ ಸಕ್ಸಸ್​

ಚಂದ್ರನ ಮೇಲೆ ಚಂದ್ರಯಾನ 3 ಯಶಸ್ವಿಯಾಗಿ ದಿಗ್ವಿಜಯ ಸಾಧಿಸಿದೆ. ಶಶಿಯ ದಕ್ಷಿಣ ಧ್ರುವದ ನೆಲಕ್ಕೆ ಚಂದ್ರಯಾನ 3 ನೌಕೆ ಮುತ್ತಿಕ್ಕಿದೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನಲ್ಲಿ ಭಾರತ ವಿಕ್ರಮ ಮೆರೆದಿದೆ. ವಿಕ್ರಮನು ಸಾಫ್ಟ್​ ಲ್ಯಾಂಡಿಂಗ್ ಮಾಡಿದ್ರೆ ಪ್ರಜ್ಞಾನ್​ ಯಶಸ್ವಿಯಾಗಿ ಚಂದ್ರನ ಪರ್ಯಟನೆಗೆ ಮುಂದಾಗಿದ್ದಾನೆ. ಇಸ್ರೋ ತನ್ನ ಅಶೋಕ ಚಕ್ರ ಹಾಗೂ ಲೋಗೋವನ್ನು ಚಂದ್ರನೆದೆಯ ಮೇಲೆ ಅಳಿಯದಂತೆ ಅಚ್ಚು ಮೂಡಿಸಿದೆ. ಈ ಐತಿಹಾಸಿಕ ಕ್ಷಣವನ್ನು ಇಡೀ ಭೂಮಂಡಲ ಕಣ್ತುಂಬಿಕೊಂಡಿದೆ. ಈ ಮೂಲಕ ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೆಂಬ ಖ್ಯಾತಿಗೆ ಭಾರತ ಭಾಜನವಾಗಿದೆ. ವಿಶೇಷ ಅಂದ್ರೆ ವಿಕ್ರಮ್ ಲ್ಯಾಂಡರ್​ನ ಸಾಫ್ಟ್​ ಲ್ಯಾಂಡಿಂಗ್​ ಪ್ರಕ್ರಿಯೆಯನ್ನು ಬೆಂಗಳೂರಿನ ಪೀಣ್ಯದಿಂದ ನಿರ್ವಹಿಸಲಾಗಿದೆ.

4 ಹಂತಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್
ನಿರ್ಣಾಯಕವಾಗಿದ್ದ ಲ್ಯಾಂಡಿಂಗ್​ನ ಕೊನೆಯ 17 ನಿಮಿಷಗಳು

ಜುಲೈ 14ರಂದು ಉಡಾವಣೆಗೊಂಡ ಇಸ್ರೋ ಬಾಹುಬಲಿ ರಾಕೆಟ್ ಚಂದ್ರನ ಮೇಲೆ ನೌಕೆಯನ್ನ ಲ್ಯಾಂಡ್ ಮಾಡಿದೆ. ಸಂಜೆ 6.04ರ ವರೆಗಿನ ಕೊನೆಯ 17 ನಿಮಿಷ ನಿಜಕ್ಕೂ ಆತಂಕ ಹಾಗೂ ರೋಚಕತೆಯಿಂದ ಕೂಡಿತ್ತು. ಸಂಜೆ 5.45ರಿಂದ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭವಾಗಿ ಬರೋಬ್ಬರಿ ನಾಲ್ಕು ಹಂತಗಳಲ್ಲಿ ಲ್ಯಾಂಡಿಂಗ್​ ಮಾಡಲಾಗಿದೆ. ರಫ್ ಬ್ರೇಕಿಂಗ್, ಎತ್ತರ ನಿಲುಗಡೆ ಹಂತ, ಫೈನ್ ಬ್ರೇಕಿಂಗ್, ಟರ್ಮಿನಲ್ ಡಿಸೆಂಟ್ ಅನ್ನೋ 4 ಹಂತಗಳ ಮೂಲಕ ಲ್ಯಾಂಡಿಂಗ್ ಮಾಡಲಾಗಿದೆ.

ಇಸ್ರೋದಲ್ಲಿ ಚಪ್ಪಾಳೆ ತಟ್ಟಿ ಸಂಭ್ರಮಾಚರಣೆ

ಕಡೇ ಕ್ಷಣದ ವರೆಗೂ ಬಿಗಿಹಿಡಿದಿದ್ದ ಉಸಿರು ಆ ಕ್ಷಣವೇ ನಿರಾಳವಾಗಿತ್ತು. ಇಸ್ರೋದ ಕಂಟ್ರೋಲ್‌ ರೂಂನನಲ್ಲಿ ಚಪ್ಪಾಳೆಗಳ ಸದ್ದು ಮೊಳಗಿತು. ಅಂದುಕೊಂಡಂತೆಯೇ ಇಸ್ರೋ ತನ್ನ ಚಂದ್ರಯಾನ-3 ಮಿಷನ್‌ನ ಲ್ಯಾಂಡಿಂಗ್‌ ಪ್ರಕ್ರಿಯೆ ಮುಗಿಸಿತ್ತು. ಇನ್ನು ಈ ಐತಿಹಾಸಿಕ ಕ್ಷಣವನ್ನು ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದಲ್ಲಿ ಕುಳಿತುಕೊಂಡೇ ವರ್ಚುವಲ್​ನಲ್ಲಿ ವೀಕ್ಷಿಸಿದ್ರು. ಚಂದ್ರಯಾನ 3 ಸಕ್ಸಸ್​ ಆಗಿದೆ. ವಿಕ್ರಮನು ಕೊನೆ ಕ್ಷಣದಲ್ಲಿ ಆತಂಕ ಮೂಡಿಸಿ ಭರ್ಜರಿಯಾಗೇ ಲ್ಯಾಂಡಿಂಗ್ ಮಾಡಿದ್ದಾನೆ. ವಿಕ್ರಮನಿಂದ ಪ್ರಜ್ಞಾನ್ ರೋವರ್ ಹೊರಬಂದು ಚಂದಿರನ ಪರ್ಯಟಣೆ ಶುರುಮಾಡಿದ್ದಾನೆ. ಭಾರತದ ಇಸ್ರೋ ವಿಜ್ಞಾನಿಗಳು ಖಗೋಳ ವಿಜ್ಞಾನದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು ಸುವರ್ಣಾಕ್ಷರಗಳಲ್ಲಿ ಇತಿಹಾಸ ಬರೆದಿದ್ದಾರೆ. ಇದು ಇಡೀ ಜಗತ್ತೇ ಭಾರತವನ್ನು ತಲೆ ಎತ್ತಿ ನೋಡುವಂತೆ ಮಾಡಿದೆ. ಸದ್ಯ ಚಂದ್ರಯಾನ ಸಕ್ಸಸ್ ಆಗಿದ್ದು ಮುಂದೆ ಸೂರ್ಯಯಾನದಲ್ಲೂ ಭಾರತ ತ್ರಿವಿಕ್ರಮ ಮೆರೆಯಲಿ ಅನ್ನೋದೇ ಶತಕೋಟಿ ಭಾರತೀಯರ ಮಹದಾಸೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಲ್ಯಾಂಡಿಂಗ್ ಸಕ್ಸಸ್​​.. ಹೇಗಿತ್ತು ಕೊನೆಯ ಆ 17 ನಿಮಿಷಗಳು..?

https://newsfirstlive.com/wp-content/uploads/2023/08/chandrayanna-6.jpg

Load More