newsfirstkannada.com

‘ಪಿಚ್ ದೂಷಿಸಲ್ಲ, ಆದರೆ..’ ಸೋಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೊಟ್ಟಿದ್ದಾರೆ ಕಾರಣ..!

Share :

20-11-2023

    ವಿಶ್ವಕಪ್ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ

    ವಿಶ್ವಕಪ್ ಸೋಲಿನ ಮೂಲಕ ಭಾರತ ತಂಡಕ್ಕೆ ನಿರಾಸೆ

    ಪಂದ್ಯ ಮುಗಿದ ಬೆನ್ನಲ್ಲೇ ರೋಹಿತ್ ಶರ್ಮಾ ಹೇಳಿದ್ದೇನು?

2023ರ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಈ ಸೋಲಿನ ಮೂಲಕ ಭಾರತೀಯ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ರೋಹಿತ್ ಶರ್ಮಾ, ನಾವು ಚೆನ್ನಾಗಿ ಬ್ಯಾಟ್ ಮಾಡಲಿಲ್ಲ, ಸೋಲಿಗೆ ಪಿಚ್ ಅನ್ನು ದೂಷಿಸಲ್ಲ ಎಂದು ಹೇಳಿದ್ದಾರೆ.

ಪಂದ್ಯದ ಫಲಿತಾಂಶವು ನಮ್ಮ ಪರವಾಗಿರಲಿಲ್ಲ ಮತ್ತು ನಾವು ಉತ್ತಮವಾಗಿ ಆಡಲಿಲ್ಲ ಎಂದು ನಮಗೆ ಗೊತ್ತಿದೆ. ಆದರೆ ನಮ್ಮ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಈ ಪಂದ್ಯವನ್ನು ನಾವು ಸೋಲಬಾರದಿತ್ತು. ನಾನು ಇನ್ನೂ 20 ರಿಂದ 30 ರನ್ ಹೆಚ್ಚು ಗಳಿಸಿದ್ದರೆ ಚೆನ್ನಾಗಿರುತ್ತಿತ್ತು. ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಬ್ಯಾಟಿಂಗ್ ಮಾಡುವಾಗ ಸ್ಕೋರ್ 270 ಅಥವಾ 280ಕ್ಕೆ ಹೋಗಲಿದೆ ಎಂದು ಭಾವಿಸಿದ್ದೇವು. ಆದರೆ ನಿಗದಿತ ಅಂತರದಲ್ಲಿ ನಾವು ವಿಕೆಟ್ ಕಳೆದುಕೊಂಡೆವು. ಮೂರು ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಉತ್ತಮ ಜೊತೆಯಾಟ ಆಡಿತು. 240 ರನ್‌ಗಳ ಸ್ಕೋರ್ ಮಾಡಿದ್ದ ನಾವು ವಿಕೆಟ್‌ಗಳನ್ನು ಬೇಗ ಪಡೆಯಬೇಕಾಗಿತ್ತು. ಈಗ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಸ್‌ಸೆನ್​ಗೆ ಪಂದ್ಯದ ಕ್ರೆಡಿಟ್ ನೀಡಬೇಕಾಗಿದೆ.

ಟ್ರಾವಿಸ್ ಮತ್ತು ಮಾರ್ನಸ್ ನಮ್ಮನ್ನು ಸೋಲಿಸಿದರು. ಅವರಿಗೆ ಲೈಟ್‌ಗಳ ಅಡಿಯಲ್ಲಿ ಬ್ಯಾಟ್ ಮಾಡುವುದು ಸುಲಭವಾಯಿತು ಎಂದು ಭಾವಿಸುತ್ತೇನೆ. ನನ್ನ ಪ್ರಕಾರ ಬೆಳಕು ಇರುವ ಸಮಯದಲ್ಲಿ ಬ್ಯಾಟ್ ಮಾಡೋದು ಉತ್ತಮ. ಪಿಚ್ ವಿಚಾರದಲ್ಲಿ ಎಕ್ಸ್​ಕ್ಯೂಸ್ ಇಲ್ಲ. ನಾವು ಚೆನ್ನಾಗಿ ಬ್ಯಾಟ್ ಮಾಡಲಿಲ್ಲ. ಎರಡೂ ತಂಡದ ಆಟಗಾರರು ಪಂದ್ಯವನ್ನು ದೂರವಿಟ್ಟ ಟ್ರಾವಿಸ್ ಮತ್ತು ಮಾರ್ನಸ್‌ಗೆ ಕ್ರೆಡಿಟ್ ನೀಡಬೇಕು ಎಂದರು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ, 240 ರನ್ ಗಳಿಸಿ ಆಲೌಟ್ ಆಗಿತ್ತು. 241 ರನ್​ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಪಿಚ್ ದೂಷಿಸಲ್ಲ, ಆದರೆ..’ ಸೋಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೊಟ್ಟಿದ್ದಾರೆ ಕಾರಣ..!

https://newsfirstlive.com/wp-content/uploads/2023/11/ROHIT-SHARMA-2-3.jpg

Load More