newsfirstkannada.com

ಏಕದಿನ ವಿಶ್ವಕಪ್ ಎದುರು ನೋಡ್ತಿರುವ ಭಾರತ ತಂಡಕ್ಕೆ ಇದೆ ಬಿಗ್ ಸವಾಲ್​.. ಅವುಗಳ ವಿವರ ಇಲ್ಲಿದೆ

Share :

Published June 20, 2023 at 4:31pm

Update June 20, 2023 at 5:13pm

    ಅ. 5 ರಿಂದ ನವೆಂಬರ್ 19 ವರೆಗೆ ವಿಶ್ವಕಪ್

    ಈ ವರ್ಷ ಭಾರತದಲ್ಲಿ ನಡೆಯಲಿದೆ ವರ್ಲ್ಡ್​​​ಕಪ್

    ಜೂ.27 ರಂದು ವಿಂಡೀಸ್ ಟೂರ್​ಗೆ ತಂಡ ಪ್ರಕಟ

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ವಿಶ್ರಾಂತಿಯಲ್ಲಿದೆ. ನಿರಂತರ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡುತ್ತಿದ್ದ ಭಾರತ ತಂಡವು, ವರ್ಷದಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ ಒಂದು ತಿಂಗಳ ಕಾಲ ಆಟಗಾರರು ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿಲ್ಲ. ಮುಂದಿನ ತಿಂಗಳನಿಂದ ಭಾರತ ತಂಡವು ವೆಸ್ಟ್ ವಿಂಡೀಸ್ ಪ್ರವಾಸ ಮಾಡಲಿದೆ. ಅಲ್ಲಿ ಐದು ಟಿ-20 ಪಂದ್ಯ, ಮೂರು ಏಕದಿನ ಹಾಗೂ ಎರಡು ಟೆಸ್ಟ್​ ಮ್ಯಾಚ್​ಗಳನ್ನು ಆಡಲಿದೆ. ಇದರ ಮಧ್ಯೆ ಬಿಸಿಸಿಐ ವಿಶ್ವಕಪ್​ಗೆ ತಯಾರಿ ನಡೆಸುತ್ತಿದೆ. ವಿಶ್ವಕಪ್ ಎದುರು ನೋಡ್ತಿರುವ ಭಾರತ ತಂಡಕ್ಕೆ ಅನೇಕ ಸವಾಲುಗಳು ಎದುರಾಗಿದೆ.

ಗಾಯದ ಸಮಸ್ಯೆ..!

ಟೀಂ ಇಂಡಿಯಾವನ್ನು ಮುಖ್ಯವಾಗಿ ಕಾಡ್ತಿರೋದು ಗಾಯದ ಸಮಸ್ಯೆ. ಟೀಂ ಇಂಡಿಯಾದ ಬೆನ್ನೆಲುಬುಗಳಾದ ಕೆ.ಎಲ್​.ರಾಹುಲ್, ಜಸ್​ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್​ ತಂಡಕ್ಕೆ ವಾಪಸ್ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ಮೂವರು ಆಟಗಾರರು ಸೆಪ್ಟೆಂಬರ್​ನಲ್ಲಿ ನಡೆಯಲಿರುವ ‘ಏಷ್ಯಾ ಕಪ್​’ಗೆ ಕಂಬ್ಯಾಕ್ ಮಾಡಲಿದ್ದಾರೆ.

ಸ್ಟ್ರಾಂಗ್ ಕಂಬ್ಯಾಕ್ ಮಾಡ್ತಾರಾ ಬೂಮ್ರಾ..!

ಒಂದು ವೇಳೆ ತಂಡಕ್ಕೆ ಈ ಮೂವರು ಸ್ಟ್ರಾಂಗ್ ಕಂಬ್ಯಾಕ್ ಮಾಡಿದರೆ, ಭಾರತ ತಂಡವು ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡ ಎನಿಸಿಕೊಳ್ಳಲಿದೆ. ಹೀಗಿದ್ದೂ ತಂಡಕ್ಕೆ ಬೌಲರ್ಸ್​ ಸಮಸ್ಯೆ ಮತ್ತೆ ಕಾಡಲಿದೆ. ಕಳೆದ ಒಂದು ವರ್ಷದಿಂದ ಮೊಹಮ್ಮದ್ ಸಿರಾಜ್ ಮಾತ್ರ ಆ್ಯಕ್ಟೀವ್ ಬೌಲರ್​ ಆಗಿ ಹೊರಹೊಮ್ಮಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಬೌಲರ್ಸ್​ ಪ್ರದರ್ಶನ ಆಶಾದಾಯಕವಾಗಿಲ್ಲ. ಐಸಿಸಿ ಱಂಕಿಂಗ್​ನಲ್ಲಿ ಸಿರಾಜ್ 25ನೇ ಸ್ಥಾನದಲ್ಲಿದ್ದರೆ, ಕುಲ್ದೀಪ್ ಯಾದವ್ 24ನೇ ಪ್ಲೇಸ್​ನಲ್ಲಿದ್ದಾರೆ. ಇನ್ನು, ಮೊಹಮ್ಮದ್ ಶಮಿ 30ನೇ ಸ್ಥಾನದಲ್ಲಿದ್ದಾರೆ.

ಸಿರಾಜ್ ಬಿಟ್ಟರೆ ಬೇರೆ ಯಾರೂ ಇಲ್ಲ

ಸಿರಾಜ್ ಕಳೆದ ಒಂದು ವರ್ಷದಿಂದ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸಿರಾಜ್, ಕೇವಲ 24 ಪಂದ್ಯಗಳನ್ನು ಆಡಿ, 43 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಸಿರಾಜ್ ಮೇಲೆ ಸಣ್ಣ ಭರವಸೆ ಇದ್ದರೂ, ಅವರ ಜೊತೆಗೆ ಇನ್ಯಾರು ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಜಸ್ಪ್ರೀತ್ ಬುಮ್ರಾ ಜುಲೈ 2022 ರಿಂದ ಯಾವುದೇ ODI ಪಂದ್ಯವನ್ನು ಆಡಿಲ್ಲ. ಐಸಿಸಿ ಱಂಕ್​ನಲ್ಲಿ 27ನೇ ಸ್ಥಾನದಲ್ಲಿರುವ ಅವರು, 2019ರ ವಿಶ್ವಕಪ್‌ ಬಳಿಕ ಕೇವಲ 14 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಬುಮ್ರಾ ಫಿಟ್‌ನೆಸ್ ಕಳವಳಕಾರಿಯಾಗಿದ್ದರೆ, ಶಮಿ ಉತ್ತಮ ಸ್ಥಿತಿಯಲ್ಲಿಲ್ಲ. ಬೌಲರ್ ಶಾರ್ದೂಲ್ ಠಾಕೂರ್ ಅವರು 43 ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ODI ಪ್ಲೇಯಿಂಗ್ XIಗೆ ಬಂದಾಗ ಅವರ ಆಯ್ಕೆ ಬಹುತೇಕ ಕಷ್ಟ ಎನ್ನಲಾಗುತ್ತಿದೆ.

ಕೇವಲ 11 ODI ಪಂದ್ಯ

ಇನ್ನು ವಿಶ್ವಕಪ್‌ಗೂ ಮೊದಲು ಭಾರತ ಕೇವಲ 11 ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಹೀಗಾಗಿ ಟಿ20ಯಲ್ಲಿ ಮಿಂಚಿರುವ ಆಟಗಾರರನ್ನು ಇಟ್ಟುಕೊಂಡು ಹೆಚ್ಚು ಪ್ರಯೋಗ ಕೂಡ ಮಾಡಲು ಅವಕಾಶ ಇಲ್ಲ. ಹೀಗಾಗಿ ವೆಸ್ಟ್ ವಿಂಡೀಸ್ ಟೂರ್ನಿಗೆ ಯಾರೆಲ್ಲ ಆಯ್ಕೆ ಆಗುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಜೂನ್ 27 ರಂದು ಕುತೂಹಲಕ್ಕೆ ತೆರೆ ಬೀಳಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಏಕದಿನ ವಿಶ್ವಕಪ್ ಎದುರು ನೋಡ್ತಿರುವ ಭಾರತ ತಂಡಕ್ಕೆ ಇದೆ ಬಿಗ್ ಸವಾಲ್​.. ಅವುಗಳ ವಿವರ ಇಲ್ಲಿದೆ

https://newsfirstlive.com/wp-content/uploads/2023/06/TEAM_INDIA-3.jpg

Load More