newsfirstkannada.com

WTC Final: ಬೌಲರ್ಸ್ ಸ್ಟ್ರಾಂಗ್ ಕಂಬ್ಯಾಕ್.. ಆದರೂ ಭಾರತಕ್ಕೆ ‘ವಿಶ್ವ ಟೆಸ್ಟ್​ ಕಿರೀಟ’ ಸುಲಭದ ತುತ್ತಲ್ಲ..!​

Share :

10-06-2023

  ಅಜಿಂಕ್ಯಾ ರಹಾನೆ 89​, ಶಾರ್ದುಲ್ 51 ರನ್

  ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 296 ರನ್​ಗೆ ಆಲೌಟ್

  ಫಾಲೋ-ಆನ್​ನಿಂದ ಭಾರತ ಪಾರು, ಆದರೆ..

ಫಾಲೋ-ಆನ್​ ನಿಂದ ಟೀಮ್ ಇಂಡಿಯಾ ಪಾರಾಯ್ತು. ಆದ್ರೀಗ ರೋಹಿತ್ ಪಡೆಗೆ, ಸೋಲಿನ ಭೀತಿ ಎದುರಾಗಿದೆ. ಟೀಮ್ ಇಂಡಿಯಾ ಈ ಪಂದ್ಯವನ್ನ ಗೆಲ್ಲೋ ಮಾತಿರಲಿ, ಅಟ್ಲೀಸ್ಟ್ ಡ್ರಾ ಮಾಡಿಕೊಂಡ್ರೆ ಅದೇ ದೊಡ್ಡ ಸಾಧನೆ. ನಾಲ್ಕನೇ ದಿನವಾದ ಇಂದು, ರೋಹಿತ್ ಬಾಯ್ಸ್ ಹೋರಾಟ ಮಾಡ್ತಾರಾ? ಇಲ್ಲ ಆಸಿಸ್​​ಗೆ ಶರಣಾಗ್ತಾರಾ ಅನ್ನೂ ಕುತೂಹಲ ಹೆಚ್ಚಾಗಿದೆ.

151 ರನ್​ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಟೀಮ್ಇಂಡಿಯಾಗೆ ಆರಂಭದಲ್ಲೇ ಆಸ್ಟ್ರೇಲಿಯಾ ಶಾಕ್ ನೀಡ್ತು. 2ನೇ ಎಸೆತದಲ್ಲೇ ಕೆ.ಎಸ್.ಭರತ್, ವೇಗಿ ಸ್ಕಾಟ್ ಬೊಲೆಂಡ್ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. 7ನೇ ವಿಕೆಟ್​ಗೆ ಅಜಿಂಕ್ಯಾ ರಹಾನೆ ಜೊತೆಯಾದ ಶಾರ್ದುಲ್ ಠಾಕೂರ್, ಸಾಲಿಡ್ ಇನ್ನಿಂಗ್ಸ್​ ಆಡಿದರು. ಸಿಕ್ಕ ಜೀವದಾನಗಳನ್ನು ಬಳಸಿಕೊಂಡ ರಹಾನೆ ಮತ್ತು ಠಾಕೂರ್ ಶತಕದ ಜೊತೆಯಾಟವಾಡಿದರು.

ಶತಕದತ್ತ ಮುನ್ನುಗ್ಗುತ್ತಿದ್ದ ರಹಾನೆ 89 ರನ್​ಗಳಿಸಿ, ಗಲ್ಲಿಯಲ್ಲಿ ಗ್ರೀನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಉಮೇಶ್ ಯಾದವ್, ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ನಲ್ಲಿ ಬೋಲ್ಡ್ ಆದ್ರು. ಮತ್ತೊಂದೆಡೆ ಶಾರ್ದುಲ್ ಠಾಕೂರ್, ದ ಓವಲ್ ಮೈದಾನದಲ್ಲಿ ವಂಡರ್ ಫುಲ್ ಇನ್ನಿಂಗ್ಸ್ ಆಡಿ, ತಂಡದ ಆಪತ್ಭಾಂಧವರಾದ್ರು.
109 ಎಸೆಗಳಲ್ಲಿ 51 ರನ್ ಕಲೆಹಾಕಿದ ಶಾರ್ದುಲ್, ಗ್ರೀನ್ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿದರು. ಅಂತಿಮವಾಗಿ ಟೀಮ್ ಇಂಡಿಯಾ 296 ರನ್ ಗಳಿಸಿ ಆಲೌಟ್ ಆಯ್ತು. ಫಾಲೋ ಆನ್​ನಿಂದ ಪಾರಾದ ಭಾರತ, 173 ರನ್ ಗಳ ಹಿನ್ನಡೆ ಅನುಭವಿಸಿತು.

ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಆರಂಭದಲ್ಲೇ 2 ಪ್ರಮುಖ ವಿಕೆಟ್ ಕಳೆದುಕೊಂಡಿತು. ವಾರ್ನರ್ 1 ಮತ್ತು ಉಸ್ಮಾನ್ ಖ್ವಾಜ, 13 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. 3ನೇ ವಿಕೆಟ್​​ಗೆ ಲಬುಶೇನ್ ಮತ್ತು ಸ್ಟೀವ್ ಸ್ಮಿತ್, 62 ರನ್​ಗಳ ಕಾಣಿಕೆ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ನಡುವೆ 34 ರನ್​ಗಳಿಸಿ ಕ್ರೀಸ್​​ನಲ್ಲಿ ಸೆಟ್​​ ಆಗಿದ್ದ ಸ್ಮಿತ್​​ ಹಾಗೂ ಟ್ರಾವಿಸ್ ಹೆಡ್​​, ಜಡೇಜಾ ಪೆವಿಲಿಯನ್ ದಾರಿ ತೋರಿಸಿದರು.

ಅಂತಿಮವಾಗಿ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್​ಗಳಿಸಿರೋ ಆಸ್ಟ್ರೇಲಿಯಾ, 296 ರನ್​​ಗಳ ಮುನ್ನಡೆ ಕಾಯ್ದುಕೊಂಡಿದ್ದು, ಇಂದು ಟೀಮ್ ಇಂಡಿಯಾಕ್ಕೆ ಬಿಗ್ ಟಾರ್ಗೆಟ್ ಸೆಟ್ ಮಾಡೋ ಲೆಕ್ಕಾಚಾರದಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

WTC Final: ಬೌಲರ್ಸ್ ಸ್ಟ್ರಾಂಗ್ ಕಂಬ್ಯಾಕ್.. ಆದರೂ ಭಾರತಕ್ಕೆ ‘ವಿಶ್ವ ಟೆಸ್ಟ್​ ಕಿರೀಟ’ ಸುಲಭದ ತುತ್ತಲ್ಲ..!​

https://newsfirstlive.com/wp-content/uploads/2023/06/TEAMINDIA10062023.jpg

Load More