ಜಪಾನ್ ಜೊತೆ ಚಂದ್ರಯಾನ- 4ಕ್ಕೆ ಇಸ್ರೋ ಪ್ಲಾನ್!
2025ರಲ್ಲಿ ಉಡಾವಣೆ ಮಾಡಲು ಸಜ್ಜಾಗಿರುವ ಭಾರತ-ಜಪಾನ್
ಚಂದ್ರನಲ್ಲಿ ಎಷ್ಟು ನೀರಿದೆ, ಗುಣಮಟ್ಟದ ಬಗ್ಗೆ ಅಧ್ಯಯನ
ಇಸ್ರೋದ ಚಂದ್ರಯಾನ-3 ಶಶಿಯ ಅಂಗಳದಲ್ಲಿ ಸಾಫ್ಟ್ ಆಗಿ ಲ್ಯಾಂಡ್ ಆಗಿದ್ದು ಕೆಲಸ ಮುಂದುವರಿಸಿದೆ. ಅವಿಸ್ಮರಣೀಯ ಗೆಲುವಿನ ಬಳಿಕ ಇಸ್ರೋದ ಕೀರ್ತಿ ವಿಶ್ವದಾದ್ಯಂತ ಪಸರಿಸಿದೆ. ಉಪಗ್ರಹಗಳ ಉಡಾವಣೆಗೆ ಒಂದು ಕಾಲದಲ್ಲಿ ರಷ್ಯಾ, ಜಪಾನ್ ದೇಶಗಳ ನೆರವು ಪಡೆಯುತ್ತಿದ್ದ ಭಾರತ ಇವತ್ತು ತನ್ನ ಕಾಲ ಮೇಲೆ ತಾನೇ ನಿಂತಿದೆ. ಚಂದ್ರಯಾನ-3ರ ಯಶಸ್ಸಿನ ಬಳಿಕ ಜಪಾನ್ ಜೊತೆಗೂಡಿ ಮತ್ತೊಂದು ಚಂದ್ರಯಾನ ಪ್ರಯತ್ನಕ್ಕೆ ಕೈ ಹಾಕಿದೆ.
ಚಂದ್ರಯಾನ-3 ಬಳಿಕ ಮತ್ತೊಂದು ಮಿಷನ್ಗೆ ಸಜ್ಜು!
1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತ ತಾಂತ್ರಿಕತೆಯಲ್ಲಿ ಬಹಳ ಹಿಂದುಳಿದಿತ್ತು. ಹೀಗಾಗಿ ರಷ್ಯಾ, ಜಪಾನ್ ಸೇರಿ ಹಲವು ರಾಷ್ಟ್ರಗಳೊಂದಿಗೆ ಸ್ನೇಹಸಂಬಂಧ ಬೆಸೆದಿತ್ತು. ರಷ್ಯಾದ ನೆರವು ಪಡೆದು ಭಾರತ 1975ರಲ್ಲಿ ದೇಶದ ಮೊದಲ ಉಪಗ್ರಹ ಆರ್ಯಭಟನನ್ನು ಉಡಾವಣೆ ಮಾಡಿತ್ತು. ಇದಾದ ಬಳಿಕ ರಷ್ಯಾ ಭಾರತಕ್ಕೆ ಮಿಲಿಟರಿ, ಕೈಗಾರಿಕಾ ಕ್ಷೇತ್ರಕ್ಕೆ ಹಲವು ಸಹಕಾರಗಳನ್ನು ನೀಡಿತ್ತು. ಆದ್ರೆ ಭಾರತ ಈಗ ಸ್ವಂತ ಶಕ್ತಿಯ ಮೇಲೆ ಹಲವು ನಿಂತಿದ್ದು ಹೊಸ ಆವಿಷ್ಕಾರಗಳ ಮೂಲಕ ಗಮನ ಸೆಳೆಯುತ್ತಿದೆ. ಚಂದ್ರಯಾನ-3 ಸಕ್ಸಸ್ ಬಳಿಕ ಜಪಾನ್ ಬಾಹ್ಯಾಕಾಶ ಕೇಂದ್ರ ಜಾಕ್ಸಾ ಸಹಯೋಗದೊಂದಿಗೆ ಚಂದ್ರಯಾನ-4ಕ್ಕೆ ಕೈ ಹಾಕಿದೆ ನಮ್ಮ ಹೆಮ್ಮೆಯ ಇಸ್ರೋ.
ಚಂದ್ರಯಾನ-3 ರ ಐತಿಹಾಸಿಕ ಯಶಸ್ಸಿನೊಂದಿಗೆ ಭಾರತವು ಜಾಗತಿಕ ಬಾಹ್ಯಾಕಾಶ ಪರಿಶೋಧನೆಗಾಗಿ ಹೊಸ ಗಡಿಗಳನ್ನು ತೆರೆದಂತಾಗಿದೆ. ಮುಂದಿನ ಚಂದ್ರನ ಕಾರ್ಯಾಚರಣೆಗಳಿಗೆ ವೇದಿಕೆ ಸಿದ್ಧವಾಗ್ತಿದೆ.
ಕಡಿಮೆ ಗುರುತ್ವಾಕರ್ಷಣೆಯ ಆಕಾಶಕಾಯಗಳ ಪರಿಶೋಧನೆ
ಜಪಾನ್ನ ಜಾಕ್ಸಾದೊಂದಿಗೆ ಭಾರತ ಮತ್ತೊಂದು ಚಂದ್ರಯಾನ ಕೈಗೊಳ್ಳಲಿದೆ. ಲೂನಾರ್ ಪೋಲಾರ್ ಎಕ್ಸ್ಪ್ಲೋರೇಷನ್ ಮಿಷನ್ಗೆ ಲೂಪೆಕ್ಸ್ಗೆ ಸಜ್ಜಾಗಿದೆ. 2025ರಲ್ಲಿ ಲೂಪೆಕ್ಸ್ ಉಡಾವಣೆ ಮಾಡಲು ಭಾರತ-ಜಪಾನ್ ಪ್ಲಾನ್ ಮಾಡಿವೆ. ಚಂದ್ರನ ವಾತಾವರಣದಲ್ಲಿ ನೀರು ಇರುವ ಬಗ್ಗೆ ಅಧ್ಯಯನ ಜೊತೆಗೆ ನೀರಿನ ಗಡ್ಡೆ ಅಥವಾ ಜಲಮೂಲಗಳನ್ನು ಹುಡುಕುವ ಕಾರ್ಯ ಮಾಡಲಿದೆ. ಚಂದ್ರನಲ್ಲಿ ಎಷ್ಟು ನೀರಿದೆ, ಗುಣಮಟ್ಟದ ಬಗ್ಗೆ ಅಧ್ಯಯನ ಮಾಡಲಿದೆ. ಈ ನೀರನ್ನು ಆಕ್ಸಿಜನ್, ಇಂಧನವಾಗಿ ಬದಲಾಯಿಸಬಹುದಾ ಇದೂ ಅಲ್ಲದೇ ಕಡಿಮೆ ಗುರುತ್ವಾಕರ್ಷಣೆಯ ಇತರೆ ಆಕಾಶಕಾಯಗಳ ಬಗ್ಗೆಯೂ ಪರಿಶೋಧನೆ ನಡೆಸಲಿದೆ.
ಇನ್ನು ಲೂಪೆಕ್ಸ್ ಚಂದ್ರನಲ್ಲಿ ರೋವರ್‌ಗಳು ಹೇಗೆ ಚಲಿಸುತ್ತವೆ, ಕತ್ತಲೆಯ ಸಮಯದಲ್ಲಿ ಅವುಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದು ಮತ್ತು ಚಂದ್ರನಲ್ಲಿರುವ ಖನಿಜಗಳನ್ನು ಗಣಿಗಾರಿಕೆ ಮಾಡುವುದು ಹೇಗೆ ಅನ್ನೋದನ್ನ ಅಧ್ಯಯನ ನಡೆಸಲಿದೆ.
2017ರಲ್ಲಿ ಜಪಾನ್ ಇಂತಹ ಯತ್ನ ನಡೆಸಿ ವಿಫಲವಾಗಿತ್ತು. ಈಗ ಇಸ್ರೋ ಕಳುಹಿಸಿರುವ ಚಂದ್ರಯಾನ-3 ಮಿಷನ್ ಕಳುಹಿಸುವ ಮಾಹಿತಿ ಇಂಡೋ-ಜಪಾನ್ ಚಂದ್ರಯಾನ-4ರ ಸಾಹಸಕ್ಕೆ ಹೇಗೆ ಸಹಾಯ ಮಾಡುತ್ತೆ ಅನ್ನೋದು ಕುತೂಹಲಕಾರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ