newsfirstkannada.com

ಮೋದಿ ವೇಗ ಕಟ್ಟಿಹಾಕಲು ವಿಪಕ್ಷಗಳ ‘ಇಂಡಿಯಾ’ ಅಸ್ತ್ರ; ‘ನ್ಯೂ ಇಂಡಿಯಾ’ ಮೂಲಕ ಪ್ರತ್ಯಸ್ತ್ರ ಸಾರಿದ ನಮೋ​

Share :

19-07-2023

    ಮೈತ್ರಿ ಕೂಟಕ್ಕೆ ಇಂಡಿಯಾ ಅಂತಾ ಹಸರಿಟ್ಟ ವಿಪಕ್ಷಗಳು

    38 ಪಕ್ಷಗಳು ಸೇರಿಸಿಕೊಂಡು ಒಗ್ಗಟ್ಟು ಪ್ರದರ್ಶನ

    I-N-D-I-A ಅಸ್ತ್ರಕ್ಕೆ ನ್ಯೂ ಇಂಡಿಯಾ ಎಂಬ ಪ್ರತ್ಯಸ್ತ್ರ

ನರೇಂದ್ರ ಮೋದಿ ಎಂಬ ಗೂಳಿಗೆ ಮೂಗುದಾರ ಹಾಕೋಕೆ ದೇಶದ ವಿಪಕ್ಷಗಳೆಲ್ಲಾ ಇಂಡಿಯಾ ಅಸ್ತ್ರ ಬಳಸಿವೆ. ತಮ್ಮ ಮೈತ್ರಿ ಕೂಟಕ್ಕೆ ‘ಇಂಡಿಯಾ’ ಅಂತಾ ಹಸರಿಟ್ಟು ಲೋಕಾ ಸಮರಕ್ಕೆ ನಾವ್​ ರೆಡಿ ಅಂತಾ ತೊಡೆ ತಟ್ಟಿದ್ದಾರೆ. ಆದ್ರೆ ವಿಪಕ್ಷಗಳ ಇಂಡಿಯಾ ಅಸ್ತ್ರಕ್ಕೆ ನಮೋ ‘ನ್ಯೂ ಇಂಡಿಯಾ’ ಎಂಬ ಪ್ರತ್ಯಸ್ತ್ರ ಹೂಡಿದ್ದಾರೆ.

‘ಲೋಕ’ ಕದನಕ್ಕೆ ‘ವಿಪಕ್ಷಗಳು ಸಮರಾಭ್ಯಸವನ್ನ ಬಿರುಸುಗೊಳಿಸಿವೆ. ಬೆಂಗಳೂರಲ್ಲಿ ಒಂದೇ ವೇದಿಯಲ್ಲಿ ಶಕ್ತಿ ಪ್ರದರ್ಶನ ಮಾಡಿವೆ. ಮೋದಿ ಸೋಲಿಸಲು ದೇಶದ ಘಟಾನುಘಟಿ ನಾಯಕರು ರಣ ಕಹಳೆ ಮೊಳಗಿಸಿದ್ದಾರೆ. ಜಯದ ದಾಖಲೆ ಬರೆಯಲು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಅಂತಾ ನಾಮಕರಣ ಮಾಡಿದ್ದಾರೆ. ಇಂಡಿಯನ್ ನ್ಯಾಷನಲ್ ಡೆವೆಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್‌ ಅಂತಾ ಹೆಸರಿಟ್ಟು ಲೋಕ ಸಮರಕ್ಕೆ ತೊಡೆ ತಟ್ಟಿದ್ದಾರೆ.

ವಿಪಕ್ಷಗಳ I-N-D-I-A ಅಸ್ತ್ರಕ್ಕೆ ನಮೋ ಪ್ರತ್ಯಸ್ತ್ರ

ವಿಪಕ್ಷಗಳ ಶಕ್ತಿ ಪ್ರದರ್ಶನ ಬೆನ್ನಲ್ಲೇ ಬಿಜೆಪಿ ಕೂಡ ಎದುರಾಳಿಗಳ ವಿರುದ್ಧ ಪ್ರತಿತಂತ್ರ ಹೆಣೆದಿದೆ. ಮಿತ್ರಪಕ್ಷಗಳ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ನಿನ್ನೆ ದೆಹಲಿಯಲ್ಲಿ ಎನ್​ಡಿಎ ಸಭೆ ನಡೆಸಿದೆ. 38 ರಾಜಕೀಯ ಪಕ್ಷಗಳು ಸೇರಿ ಒಗ್ಗಟ್ಟು ಪ್ರದರ್ಶಿಸಿವೆ. ಸಭೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ ವಿಪಕ್ಷಗಳ I-N-D-I-A ಅಸ್ತ್ರಕ್ಕೆ ನ್ಯೂ ಇಂಡಿಯಾ ಎಂಬ ಪ್ರತ್ಯಸ್ತ್ರವನ್ನ ಹೂಡಿದ್ದಾರೆ.

ಅತ್ತ ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಅಂತಾ ವಿಪಕ್ಷಗಳು ನಾಮಕರಣ ಮಾಡಿದ್ರೆ. ಇತ್ತ ಪ್ರಧಾನಿ ಮೋದಿ ಇದಕ್ಕೆ ಕೌಂಟರ್ ರೀತಿಯಲ್ಲಿ ಎನ್​​ಡಿಎ ಅಂದ್ರೆ ನ್ಯೂ ಇಂಡಿಯಾ ಅಂತಾ ಬಣ್ಣಿಸಿದ್ದಾರೆ. ಎನ್​ಡಿಎ ಮಿತ್ರಪಕ್ಷಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ನಮೋ ಎನ್​ಡಿಎ ಅಂದ್ರೆ ಮೂರು ಶಕ್ತಿ ಇದ್ದಂತೆ. ​ಎನ್​​ ಅಂದ್ರೆ ನ್ಯೂ ಇಂಡಿಯಾ, ಡಿ ಅಂದ್ರೆ ಡೆವಲಪ್​ಮೆಂಟ್​, ಎ ಅಂದ್ರೆ ಆಸ್ಪಿರೇಷನ್​ ಅಂತಾ ವಿಶ್ಲೇಶಿಸಿ ವಿಪಕ್ಷಗಳಿಗೆ ಕೌಂಟರ್​ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ವ್ಯಂಗ್ಯ

ಇದಿಷ್ಟೇ ಅಲ್ಲ. ನಿನ್ನೆ ಬೆಂಗಳೂರಲ್ಲಿ ಶಕ್ತಿ ಪ್ರದರ್ಶನ ಮಾಡಲು ದಂಡೆತ್ತಿ ಬಂದಿದ್ದ ಘಟಾನುಘಟಿ ನಾಯಕರ ಬಗ್ಗೆಯೂ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ರಾಜಕೀಯಕ್ಕಾಗಿ ಇವರೆಲ್ಲೂ ಹತ್ತಿರ ಬಂದಿರಬಹುದು. ಆದ್ರೆ ಇವರು ಎಂದಿಗೂ ಒಟ್ಟಿಗೆ ಇರೋಕೆ ಸಾಧ್ಯವಿಲ್ಲ ಅಂತಾ ಗುಡುಗಿದ್ದಾರೆ.

ಪ್ರಧಾನಿ ಮೋದಿ ವಿಶ್ವಾಸ

ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಎನ್​ಡಿಎ ಗೆಲುವು ಸಾಧಿಸಲಿದೆ ಅಂತಾ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಾರಿ ಎನ್​ಡಿಎ ವೋಟ್​ ಶೇರ್​ ಮತ್ತಷ್ಟು ಜಾಸ್ತಿಯಾಗಲಿದೆ ಅಂತಾ ತಿಳಿಸಿದ್ದಾರೆ. ಈ ಬಾರಿ ಎನ್​ಡಿಎಗೆ 50% ವೋಟ್​ ಶೇರ್​ ಸಿಗಲಿದೆ ಅಂತಾ ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಪ್ರಧಾನಿ ಮೋದಿ ಬಳಿಕ ರೋಷಾವೇಶದ ಮಾತುಗಳನ್ನಾಡಿದ್ರು. ನನ್ನ ದೇಹದ ಪ್ರತಿ ಕಣ ದೇಶಕ್ಕಾಗಿ, ಪ್ರತಿ ಸಮಯವೂ ಈ ದೇಶಕ್ಕಾಗಿಯೇ ಸಮರ್ಪಿಸಿದ್ದೇನೆ ಅಂತಾ ಗುಡುಗಿದ್ರು.

ಒಟ್ಟಿನಲ್ಲಿ ಲೋಕಾ ಸಮರ ಗೆಲ್ಲಲು ಕಮಲ ಪಡೆ ಜಿದ್ದಿಗೆ ಬಿದ್ದಿದೆ. ಎನ್​ಡಿಎ ಮೈತ್ರಿಕೂಟದ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ಕೂಡ ಪಣ ತೊಟ್ಟಿದೆ. ವಿಪಕ್ಷಗಳು ಅಸ್ತ್ರಗಳಿಗೆ ಪ್ರತ್ಯಾಸ್ತ್ರಗಳನ್ನ ಹೂಡ್ತಿದೆ. ಆದ್ರೆ ಲೋಕಾಯುದ್ಧಕ್ಕೆ ಯಾರ ಅಸ್ತ್ರ ವರ್ಕ್​ಔಟ್​ ಆಗುತ್ತೆ ಅನ್ನೋದೆ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ವೇಗ ಕಟ್ಟಿಹಾಕಲು ವಿಪಕ್ಷಗಳ ‘ಇಂಡಿಯಾ’ ಅಸ್ತ್ರ; ‘ನ್ಯೂ ಇಂಡಿಯಾ’ ಮೂಲಕ ಪ್ರತ್ಯಸ್ತ್ರ ಸಾರಿದ ನಮೋ​

https://newsfirstlive.com/wp-content/uploads/2023/07/Modi-1-3.jpg

Load More