newsfirstkannada.com

ನಾಳೆಯಿಂದ 2 ದಿನ INDIA ಒಕ್ಕೂಟ ಮೆಗಾ ಸಮಾವೇಶ; ಲೋಗೋ ಅನಾವರಣ, ಸೀಟ್ ಹಂಚಿಕೆ ಅನೌನ್ಸ್ ಸಾಧ್ಯತೆ

Share :

30-08-2023

    ಆಗಸ್ಟ್ 31 ರಿಂದ ಸೆಪ್ಟೆಂಬರ್ 1ರವರೆಗೆ ಸಮಾವೇಶ

    27 ಪಕ್ಷಗಳ 62 ಗಣ್ಯರು ಸಮಾವೇಶದಲ್ಲಿ ಭಾಗಿ

    NDA ಒಕ್ಕೂಟ ಮಣಿಸಲು ಇಂಡಿಯಾ ರಣತಂತ್ರ

ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ INDIA ಒಕ್ಕೂಟ ನಾಳೆಯಿಂದ ಮುಂಬೈನಲ್ಲಿ ಸಮಾವೇಶ ನಡೆಸಲಿದೆ. ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದ ಬಳಿಕ ದೊಡ್ಡ, ದೊಡ್ಡ ಘೋಷಣೆಗಳು ಹೊರ ಬೀಳುವ ಸಾಧ್ಯತೆ ಇದೆ.

ಆಗಸ್ಟ್ 31 ರಿಂದ ಸೆಪ್ಟೆಂಬರ್ 1ರವರೆಗೆ ಸಮಾವೇಶ ನಡೆಯಲಿದೆ. ಈ ಸಂದರ್ಭದಲ್ಲಿ ಚುನಾವಣೆ ಪ್ರಣಾಳಿಕೆ ಸಂಬಂಧ ಚರ್ಚೆ ನಡೆಯಲಿದೆ. ಯಾವೆಲ್ಲ ವಿಚಾರಗಳನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಳ್ಳಬೇಕು? ಯಾವ್ಯಾವ ಕಾರ್ಯಕ್ರಮಗಳನ್ನು ಜನರ ಮುಂದೆ ಇಟ್ಟು ಚುನಾವಣೆ ಎದುರಿಸಬೇಕು ಹಾಗೂ 27 ಪಕ್ಷಗಳಿಗೆ ಅನ್ಯಾಯ ಆಗದಂತೆ ಸೀಟ್ ಶೇರಿಂಗ್ ಹೇಗೆ ಇರಬೇಕು ಅನ್ನೋದ್ರ ಬಗ್ಗೆ ಚರ್ಚೆ ನಡೆಯಲಿದೆ.

ವರದಿಗಳ ಪ್ರಕಾರ, ಮುಂಬೈ ಸಭೆಯಲ್ಲಿ ಇಂಡಿಯಾ ಒಕ್ಕೂಟ ಲೋಗೋ ಅನಾವರಣಗೊಳ್ಳಲಿದೆ. ಜೊತೆಗೆ ಶೀಟ್​ ಹಂಚಿಕೆ ಸಂಬಂಧ ಚರ್ಚೆ ನಡೆಸಿ ಫೈನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರ್​ಜೆಡಿ ನಾಯಕ ಮನೋಜ್ ತಿವಾರಿ ಮಾಧ್ಯಮಗಳಿಗೆ ತಿಳಿಸಿರುವಂತೆ, ಮುಂಬೈ ಮೀಟಿಂಗ್​ನಲ್ಲಿ ಇಂಡಿಯಾ ಒಕ್ಕೂಟದ ಎಲ್ಲಾ ನಾಯಕರು ಬರಲಿದ್ದಾರೆ. ಪ್ರಸ್ತುತ ಆಡಳಿತದಲ್ಲಿರುವ ಮೋದಿ ಸರ್ಕಾರವನ್ನು ಎದುರಿಸಲು ಮದ್ದರೆಯಲು ಸರಿಯಾದ ರೋಡ್​-ಮ್ಯಾಪ್ ಮಾಡಲಿದ್ದೇವೆ ಎಂದರು.

27 ಪಕ್ಷಗಳ 62 ಪ್ರಮುಖರು ನಾಳೆಯಿಂದ ಆರಂಭವಾಗುವ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಯಾರೆಲ್ಲ ಭಾಗಿಯಾಗುತ್ತಿದ್ದಾರೆ ಅಂತಾ ನೋಡೋದಾದ್ರೆ.. ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವತ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಮಮತಾ ಬ್ಯಾನರ್ಜಿ, ಡೆರೆಕ್ ಒಬಿರೇನ್, ಅಭಿಷೇಕ್ ಬ್ಯಾನರ್ಜಿ, ಎಂಕೆ ಸ್ಟಾಲೀನ್, ಟಿಆರ್​ ಬಾಲು, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ನಿತೀಶ್ ಕುಮಾರ್, ಲಾಲನ್ ಸಿಂಗ್, ಸಂಜಯ್ ಕುಮಾರ್ ಸಿಂಗ್, ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಮನೋಜ್ ಝಾ, ಸಂಜಯ್ ಯಾದವ್, ಹೇಮಂತ್ ಸೊರೆನ್, ಅಭಿಷೇಕ್ ಪ್ರಸಾದ್, ಸುನಿಲ್ ಕುಮಾರ್ ಶ್ರೀವಸ್ತವ, ಶರದ್ ಪವಾರ್, ಸುಪ್ರಿಯಾ ಸುಲೆ, ಜಯಂತ್ ಪಾಟೀಲ್, ಅಭಿಷೇಕ್ ಯಾದವ್, ರಾಮ್​ಗೋಪಾಲ್ ಯಾದವ್, ಕಿರೋಮಣಿ ನಂದ, ಅಭಿ ಅಜ್ಮಿ, ಜಯಂತ್ ಸಿಂಗ್, ಶಾಹಿದ್ ಸಿದ್ದಕಿ, ಕೃಷ್ಣ ಪಟೇಲ್, ಪಂಕಜ್ ನಿರಂಜನ್, ಫಾರೂಕ್ ಅಬ್ದುಲ್ಲಾ ಸೇರಿಂದತೆ ಒಟ್ಟು 60 ಗಣ್ಯರು ಆಗಮಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆಯಿಂದ 2 ದಿನ INDIA ಒಕ್ಕೂಟ ಮೆಗಾ ಸಮಾವೇಶ; ಲೋಗೋ ಅನಾವರಣ, ಸೀಟ್ ಹಂಚಿಕೆ ಅನೌನ್ಸ್ ಸಾಧ್ಯತೆ

https://newsfirstlive.com/wp-content/uploads/2023/08/INDIA.jpg

Load More